• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /100 ಶತಕ ಗಳಿಸಲು ವಿರಾಟ್‌ ಕೊಹ್ಲಿಗೆ ಇನ್ನೆಷ್ಟು ಸೆಂಚುರಿಗಳು ಬೇಕು.. ಈ ಕ್ರಿಕೆಟರ್ಸ್‌ ಹೇಳಿದ್ದು ಏನು?

100 ಶತಕ ಗಳಿಸಲು ವಿರಾಟ್‌ ಕೊಹ್ಲಿಗೆ ಇನ್ನೆಷ್ಟು ಸೆಂಚುರಿಗಳು ಬೇಕು.. ಈ ಕ್ರಿಕೆಟರ್ಸ್‌ ಹೇಳಿದ್ದು ಏನು?

Written ByBhimappa
Published: Sep 29, 2026, 02:41 PM IST|Updated: Sep 29, 2026, 02:49 PM IST
joinshare
ವಿರಾಟ್‌ ಕೊಹ್ಲಿ ಅವರು 100 ಶತಕಗಳ ಕುರಿತು ಯೋಚನೆ ಮಾಡಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಕೊಹ್ಲಿ ಅವರ ಬೆಸ್ಟ್‌ ಆಟಗಾರ ಎಂದರೆ ರೋಲ್‌ ಮಾಡೆಲ್‌ ಅಂದರೆ ಅದು ಸಚಿನ್‌ ತೆಂಡೂಲ್ಕರ್.‌

Virat Kohli will hits 100 centuries: ವೆಸ್ಟ್‌ ಇಂಡೀಸ್‌ ಮತ್ತು ಟೀಮ್‌ ಇಂಡಿಯಾ ನಡುವೆ ಎರಡನೇ ಏಕದಿನ ಪಂದ್ಯ ನಾಳೆ ಮಧ್ಯಾಹ್ನ ಆರಂಭವಾಗಲಿದೆ. ಈಗಾಗಲೇ ಎರಡು ಕಡೆಯ ಆಟಗಾರರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದರ ನಡುವೆ ವಿರಾಟ್‌ ಕೊಹ್ಲಿ ಅವರ ಸೆಂಚುರಿ ಹೆಚ್ಚು ಸೌಂಡ್‌ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಮತ್ತೊಂದು ಹೊಸ ಭರವಸೆಯನ್ನು ಮೂಡಿಸಿದೆ. ಅಂದರೆ ಸಚಿನ್‌ ತೆಂಡೂಲ್ಕರ್‌ ಅವರ 100 ಶತಕಗಳ ದಾಖಲೆಯನ್ನು ಬ್ರೇಕ್‌ ಮಾಡಲು ವಿರಾಟ್‌ ಕೊಹ್ಲಿಗೆ ಇನ್ನು 14 ಶತಕಗಳು ಬಾಕಿ ಇವೆ. ಇದು ಸಾಧ್ಯನಾ?. 
 

Virat Kohli 100 1/6

ವಿರಾಟ್‌ ಕೊಹ್ಲಿ 100

ಏಕೆಂದರೆ ವಿರಾಟ್‌ ಕೊಹ್ಲಿ ಅವರು ಈಗಾಗಲೇ 2027ರ ವಿಶ್ವಕಪ್‌ ಬಳಿಕ ನಿವೃತ್ತಿ ಘೋಷಣೆ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. 2027ರ ವಿಶ್ವಕಪ್‌ ಇನ್ನು ಕೆಲವು ತಿಂಗಳು ಮಾತ್ರ ಬಾಕಿ ಇರುವುದರಿಂದ ಅಷ್ಟರೊಳಗೆ ಈ ಸಾಧನೆ ಮಾಡಲು ಆಗುತ್ತಾ ಎನ್ನುವುದು ಪ್ರಮುಖವಾದ ಅಂಶವಾಗಿದೆ. ಇದಕ್ಕೆ ಟೀಮ್‌ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಏನು ಹೇಳಿದ್ದಾರೆ ಎಂದರೆ..
Virat Kohli 100 2/6

ವಿರಾಟ್‌ ಕೊಹ್ಲಿ 100

ವಿರಾಟ್‌ ಕೊಹ್ಲಿ ಅವರ ಅಮೋಘವಾದ ಶತಕವನ್ನು ಶ್ಲಾಘನೆ ಮಾಡಿದ ಅಜಿಂಕ್ಯ ರಹಾನೆ ಅವರು, ಸ್ವಲ್ಪ ಒತ್ತಡ ತೆಗೆದುಕೊಂಡು ವಿರಾಟ್‌ ಕೊಹ್ಲಿ ಅವರು ಆಡಿದರೆ, ಅವರ ಒಳಗಿನ ಮೃಗ ಹೊರ ಬರುತ್ತದೆ. ಆ ಸಮಯದಲ್ಲಿ ಕಿಂಗ್‌ ಕೊಹ್ಲಿ ಅಸಾಧಾರಣವಾದ ಇನ್ನಿಂಗ್ಸ್‌ ಆಡುತ್ತಾರೆ. ಆ ಅದ್ಭುತವಾದ ಬ್ಯಾಟಿಂಗ್‌ ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದ್ದಾರೆ.
Virat Kohli 100 3/6

ವಿರಾಟ್‌ ಕೊಹ್ಲಿ 100

ತಂಡದಲ್ಲಿ ಇದ್ದಾಗ ವಿರಾಟ್‌ ಕೊಹ್ಲಿಯ ಸ್ಪೆಷಲ್‌ ಏನೆಂದರೆ ತನ್ನ ಮೇಲೆ ತಾನು ಒತ್ತಡ ಏರಿಕೊಂಡಾಗ ಅತ್ಯುತ್ತಮ ಬ್ಯಾಟಿಂಗ್‌ ಪರ್ಫಾಮೆನ್ಸ್‌ ಹೊರ ಬರುತ್ತದೆ. ಪ್ರತಿ ಇನ್ನಿಂಗ್ಸ್‌ನಲ್ಲೂ ಇದನ್ನೇ ಅವರು ಮಾಡೋದು. ಇದರಿಂದ ಅವರಲ್ಲಿ ನಿರೀಕ್ಷೆಗಳು ಇದ್ದು ಅವುಗಳಲ್ಲಿ ಸಂಪೂರ್ಣವಾಗಿ ಯಶಸ್ಸು ಕಾಣುತ್ತಾರೆ. ಇದರಿಂದಲೇ ಇಷ್ಟು ವರ್ಷಗಳ ಕಾಲ ತಮ್ಮ ಬ್ಯಾಟಿಂಗ್‌ ಅನ್ನು ಸ್ಥಿರವಾಗಿ ಕಾದುಕೊಂಡಿದ್ದಾರೆ.
Virat Kohli 100 4/6

ವಿರಾಟ್‌ ಕೊಹ್ಲಿ 100

ವಿರಾಟ್‌ ಕೊಹ್ಲಿ ಅವರು 100 ಶತಕಗಳ ಕುರಿತು ಯೋಚನೆ ಮಾಡಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ. ಕೊಹ್ಲಿ ಅವರ ಬೆಸ್ಟ್‌ ಆಟಗಾರ ಎಂದರೆ ರೋಲ್‌ ಮಾಡೆಲ್‌ ಅಂದರೆ ಅದು ಸಚಿನ್‌ ತೆಂಡೂಲ್ಕರ್.‌ ಆದ್ದರಿಂದ 100 ಶತಕಗಳ ಬಗ್ಗೆ ಯೋಚನೆ ಅವರಿಗೆ ಇರುವುದು ಖಚಿತ. ಅದನ್ನು ಸಾಧನೆ ಮಾಡಬಹುದು ಎಂದು ಅಜಿಂಕ್ಯಾ ರಹಾನೆ ಹೇಳಿದ್ದಾರೆ.
Virat Kohli 100 5/6

ವಿರಾಟ್‌ ಕೊಹ್ಲಿ 100

ಇದೇ ವೇಳೆ ವಿರಾಟ್‌ ಕೊಹ್ಲಿ ಪ್ರದರ್ಶನದ ಬಗ್ಗೆ ಟೀಮ್‌ ಇಂಡಿಯಾದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಮಾತನಾಡಿ, ದೇಶಕ್ಕಾಗಿ ಅವರು ಆಡುವುದನ್ನು ಎಲ್ಲರೂ ಆನಂದಿಸುತ್ತಾರೆ. ಮೈದಾನದಲ್ಲಿ ವಿರಾಟ್‌ ಕೊಹ್ಲಿ ಇರುವಷ್ಟು ಕ್ಷಣಗಳನ್ನು ಆನಂದಿಸುವ ಅಭಿಮಾನಿಗಳು ಇದ್ದಾರೆ ಎಂದು ಹೇಳಿದ್ದಾರೆ.
Virat Kohli 100 6/6

ವಿರಾಟ್‌ ಕೊಹ್ಲಿ 100

ಕಳೆದ ಕೆಲವು ತಿಂಗಳುಗಳಿಂದ ಬ್ಯಾಟ್‌ ಮುಟ್ಟದ ವಿರಾಟ್‌ ಕೊಹ್ಲಿ ಅವರಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಪಂದ್ಯದಲ್ಲಿಯೇ ಸೆಂಚುರಿ ನಿರೀಕ್ಷೆ ಮಾಡುವುದು ಸಾಧ್ಯನಾ?. ಆದರೆ ಅದನ್ನು ವಿರಾಟ್‌ ಕೊಹ್ಲಿ ಅವರು ಮಾಡಿದರು. ಮುಂದಿನ ವರ್ಷ ಜುಲೈನಲ್ಲಿ ಕೊಹ್ಲಿಯ ಅಂತರಾಷ್ಟ್ರೀಯ ಬ್ಯಾಟಿಂಗ್‌ ಕೊನೆ ಆಗಬಹುದು. ಅಲ್ಲಿವರೆಗೆ ಅಭಿಮಾನಿಗಳು ಅವರ ಬ್ಯಾಟಿಂಗ್‌ ಅನ್ನು ಕಣ್ತುಂಬಿಕೊಳ್ಳಬಹುದು ಎಂದು ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.
TAGS:
Virat Kohli

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.