ಟೀಮ್ ಇಂಡಿಯಾದ ನಾಯಕ ಶುಭ್‌ಮನ್ ಗಿಲ್ ಅವರು ಸದ್ಯ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 816 ಪಾಯಿಂಟ್‌ಗಳನ್ನು ಪಡೆದುಕೊಂಡು
Virat Kohli Rankings: ವೆಸ್ಟ್ ಇಂಡೀಸ್ ವಿರುದ್ಧ ಸದ್ಯ 2ನೇ ಏಕದಿನ ಪಂದ್ಯ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಇದರಿಂದ ಐಸಿಸಿ ಏಕದಿನ ಶ್ರೇಯಾಂಕ Rankings ದಲ್ಲಿ ವಿರಾಟ್ ಕೊಹ್ಲಿ ಅವರು ಭಾರೀ ಏರಿಕೆ ಕಂಡಿದ್ದು ಟಾಪ್ 2 ಸ್ಥಾನ ಪಡೆದಿದ್ದಾರೆ.
1/6
ವಿರಾಟ್ ಕೊಹ್ಲಿ ಪಾಯಿಂಟ್ಸ್
ವಿರಾಟ್ ಕೊಹ್ಲಿ ಅವರು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಸೆಂಚುರಿ ಬಾರಿಸಿದ್ದರು. ಕೇವಲ 88 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ 10 ಬೌಂಡರಿಗಳು ಮತ್ತು 9 ಬಿಗ್ ಸಿಕ್ಸರ್‌ಗಳ ಮೂಲಕ 139 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಅಲ್ಲದೇ ಟೀಮ್ ಇಂಡಿಯಾವನ್ನು ಗೆಲ್ಲಿಸಿದ್ದರು.
2/6
ವಿರಾಟ್ ಕೊಹ್ಲಿ ಪಾಯಿಂಟ್ಸ್
ವಿರಾಟ್ ಕೊಹ್ಲಿ ಶತಕ ಬಾರಿಸಿದ ಬೆನ್ನಲ್ಲೇ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಡ್ಯಾರಿಲ್ ಮಿಚೆಲ್ 2ನೇ ಸ್ಥಾನದಲ್ಲಿದ್ದಾರೆ.
3/6
ವಿರಾಟ್ ಕೊಹ್ಲಿ ಪಾಯಿಂಟ್ಸ್
ಟೀಮ್ ಇಂಡಿಯಾದ ನಾಯಕ ಶುಭ್‌ಮನ್ ಗಿಲ್ ಅವರು ಸದ್ಯ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 816 ಪಾಯಿಂಟ್‌ಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿಗಿಂತ ಶುಭ್‌ಮನ್ ಗಿಲ್ ಅವರು 18 ಅಂಕಗಳು ಹೆಚ್ಚು ಪಡೆದುಕೊಂಡಿದ್ದಾರೆ.
4/6
ವಿರಾಟ್ ಕೊಹ್ಲಿ ಪಾಯಿಂಟ್ಸ್
ವೆಸ್ಟ್ ಇಂಡೀಸ್ ವಿರುದ್ಧ 88 ಎಸೆತಗಳಲ್ಲಿ ಔಟಾಗದೇ 139 ರನ್ ಗಳಿಸಿ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ಇದರಿಂದ ವಿರಾಟ್ ಕೊಹ್ಲಿ ಅವರು ರೇಟಿಂಗ್ ಪಾಯಿಂಟ್‌ಗಳು 796ಕ್ಕೆ ಏರಿಕೆ ಆಗಿದೆ. ವಿರಾಟ್ ಕೊಹ್ಲಿ ಅವರು 2022 ಜುಲೈ ನಂತರ ಇಷ್ಟೊಂದು ಅಂಕಗಳನ್ನು ತಲುಪಿರುವುದು ಇದೇ ಮೊದಲು.
5/6
ವಿರಾಟ್ ಕೊಹ್ಲಿ ಪಾಯಿಂಟ್ಸ್
ಕ್ಯಾಪ್ಟನ್ ಶುಭ್‌ಮನ್ ಗಿಲ್ ಅವರು 816 ಪಾಯಿಂಟ್‌ಗಳೊಂದಿಗೆ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಶುಭ್‌ಮನ್ ಗಿಲ್ ಅವರು 110 ರನ್‌ಗಳನ್ನು ಗಳಿಸಿದ್ದರು. ಇದರಿಂದ ಗಿಲ್ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.
6/6
ವಿರಾಟ್ ಕೊಹ್ಲಿ ಪಾಯಿಂಟ್ಸ್
ಟೀಮ್ ಇಂಡಿಯಾದ ಚೈನಾಮನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರು ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದ ಬೌಲಿಂಗ್ ವಿಭಾಗದಲ್ಲಿ ಏರಿಕೆ ಕಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡು ಸ್ಥಾನಗಳನ್ನು ಏರಿಕೆ ಕಂಡಿದ್ದಾರೆ.