• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಭಾರತ vs ವೆಸ್ಟ್‌ ಇಂಡೀಸ್‌ ಸರಣಿ ಯಾವಾಗ.. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಮೇಲೆ ಎಲ್ಲರ ಕಣ್ಣು!

ಭಾರತ vs ವೆಸ್ಟ್‌ ಇಂಡೀಸ್‌ ಸರಣಿ ಯಾವಾಗ.. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಮೇಲೆ ಎಲ್ಲರ ಕಣ್ಣು!

Written ByBhimappa
Published: Sep 25, 2026, 09:04 AM IST|Updated: Sep 25, 2026, 09:17 AM IST
joinshare
ವಿಶ್ವಕಪ್‌ ದೃಷ್ಟಿಯಿಂದ ಹಿಟ್‌ಮ್ಯಾನ್‌ ರೋಹಿಟ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ಈ ಸರಣಿಯೂ ಮಹತ್ವದ್ದು ಆಗಿದೆ. ಈ ಹಿಂದೆ ಇಂಗ್ಲೆಂಡ್‌ ಪ್ರವಾಸದ ಸಮದಯಲ್ಲಿ ರೋಹಿತ್‌ ಶರ್ಮಾ ಅವರ ನಿವೃತ್ತಿ ವದಂತೆ ಎಲ್ಲೆಡೆ ಸುದ್ದಿಯಾಗಿತ್ತು.

Team India vs West Indies: ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ಮಹತ್ವದ ಎರಡು ಸರಣಿಗಳು ಇದೇ ಸೆಪ್ಟೆಂಬರ್ ‌27 ರಿಂದ ಅಕ್ಟೋಬರ್‌ 17ರ ವರೆಗೆ ನಡೆಯಲಿದೆ. ತವರಿನಲ್ಲಿ ಈ ಸರಣಿ ನಡೆಯುತ್ತಿರುವುದರಿಂದ ಟೀಮ್‌ ಇಂಡಿಯಾ ಗೆಲ್ಲುವ ಫೆವರಿಟ್‌ ತಂಡ ಎನಿಸಿದೆ. ಈ ಸರಣಿಯಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಒಟ್ಟು 8 ಪಂದ್ಯಗಳನ್ನು ಆಡಲಿವೆ. ಈ ಮಹತ್ವದ ಸೀರಿಸ್‌ನಲ್ಲಿ 3 ODI ಪಂದ್ಯಗಳ ಸರಣಿ ಮತ್ತು 5 ಪಂದ್ಯಗಳ T20 ಸೀರಿಸ್‌ ನಡೆಯಲಿದೆ.    
 

Rohit Kohli 1/6

ರೋಹಿತ್‌ ಕೊಹ್ಲಿ

ಸದ್ಯ ಟೀಮ್‌ ಇಂಡಿಯಾ ಉತ್ತಮ ಫಾರ್ಮ್‌ನಲ್ಲಿದ್ದು ಈಗಾಗಲೇ ಅಪ್ಘಾನಿಸ್ತಾನ ವಿರುದ್ಧದ T20 ಸರಣಿ ಗೆದ್ದುಕೊಂಡಿದೆ. ಆದರೆ ಜಪಾನ್‌ ತಂಡದ ವಿರುದ್ಧ ನಡೆದ ಏಕೈಕ T20 ಪಂದ್ಯದಲ್ಲಿ ಟೀಮ್‌ ಇಂಡಿಯಾ ಆಟಗಾರರು ನೀಡಿದ ಪ್ರದರ್ಶನ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಭಿಷೇಕ್‌ ಶರ್ಮಾರಂತಹ ಹಿಟ್‌ ಬ್ಯಾಟರ್‌ಗಳು ಡಕೌಟ್‌ ಆಗಿರುವುದು ಅಭಿಮಾನಿಗಳಿಗೂ ಬೇಸರ ತರಿಸಿತ್ತು. ಇದೇ ವೆಸ್ಟ್‌ ಇಂಡೀಸ್‌ ವಿರುದ್ಧ ಮರುಕಳಿಸಬಾರದು.
Rohit Kohli 2/6

ರೋಹಿತ್‌ ಕೊಹ್ಲಿ

4 ವರ್ಷಗಳ ಬಳಿಕ ವೆಸ್ಟ್‌ ಇಂಡೀಸ್‌ ಭಾರತಕ್ಕೆ ಕ್ರಿಕೆಟ್‌ ಆಡಲು ಆಗಮಿಸುತ್ತಿದೆ. ಕೆರಿಬಿಯನ್‌ ಪಡೆ ಈ ಹಿಂದೆ ಅಂದರೆ 2022 ರಲ್ಲಿ ಭಾರತಕ್ಕೆ ಬಂದು ಸೀಮಿತ ಓವರ್‌ಗಳ ಸರಣಿ ಆಡಿತ್ತು. ಇದಾದ ಮೇಲೆ ಈ ತಿಂಗಳಲ್ಲಿ ವೆಸ್ಟ್‌ ಇಂಡೀಸ್‌ ಬರುತ್ತಿದೆ. ಈ ಪ್ರವಾಸದಲ್ಲಿ ವೆಸ್ಟ್‌ ಇಂಡೀಸ್‌ ಮೂರು ಏಕದಿನ ಪಂದ್ಯಗಳ ಸರಣಿ ಮತ್ತು ಐದು T20 ಪಂದ್ಯಗಳ ಸರಣಿ ಆಡಲಿದೆ. ಯಾರು ಗೆಲ್ಲುತ್ತಾರೋ ಅವರಿಗೆ ಸರಣಿ ಕೈವಶ ಆಗಲಿವೆ.
Rohit Kohli 3/6

ರೋಹಿತ್‌ ಕೊಹ್ಲಿ

ನ್ಯೂಜಿಲೆಂಡ್‌ ವಿರುದ್ಧ ಟೀಮ್‌ ಇಂಡಿಯಾ ಎರಡು ಟೆಸ್ಟ್‌ ಪಂದ್ಯಗಳ ಸರಣಿ, 5 ಏಕದಿನ ಪಂದ್ಯಗಳ ಸರಣಿ ಮತ್ತು 5 T20 ಪಂದ್ಯಗಳ ಸರಣಿ ನಡೆಯಲಿದೆ. ಐಸಿಸಿ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ದೃಷ್ಟಿಯಿಂದ ಟೀಮ್‌ ಇಂಡಿಯಾ ಎರಡು ಟೆಸ್ಟ್‌ ಪಂದ್ಯಗಳನ್ನು ನ್ಯೂಜಿಲೆಂಡ್‌ ವಿರುದ್ಧ ಗೆಲ್ಲಲೇಬೇಕು. ಟೆಸ್ಟ್‌ ಮತ್ತು ಏಕದಿನ ಸರಣಿಯ ನಡುವೆ ಸಮಯದ ಅಭಾವ ಇರುವುದರಿಂದ ಆಟಗಾರರ ಅಭ್ಯಾಸದ ಮೇಲೆ ಪರಿಣಾಮ ಬೀರಲಿದೆ.
Rohit Kohli 4/6

ರೋಹಿತ್‌ ಕೊಹ್ಲಿ

ವೆಸ್ಟ್‌ ಇಂಡೀಸ್‌ ವಿರುದ್ಧ ಅಕ್ಟೋಬರ್‌ 17 ರಂದು ಟೀಮ್‌ ಇಂಡಿಯಾ ಸರಣಿಯ ಕೊನೆಯ T20 ಪಂದ್ಯ ಆಡಲಿದೆ. ಇದಾದ ಮೇಲೆ ಶುಭ್‌ಮನ್‌ ಗಿಲ್‌ ನೇತೃತ್ವದ ಭಾರತ ತಂಡ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿಯೂ ವಿರಾಟ್‌ ಕೊಹ್ಲಿ ಮತ್ತು ವಿರಾಟ್‌ ಕೊಹ್ಲಿ ಇಬ್ಬರು ಪಾಲ್ಗೊಳ್ಳಲಿದೆ. ಅನುಭವಿ ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣು ಇಡಲಿದೆ.
Rohit Kohli 5/6

ರೋಹಿತ್‌ ಕೊಹ್ಲಿ

ಇಂಗ್ಲೆಂಡ್‌ ಸರಣಿಯ ಬಳಿಕ ಇದೀಗ ಸ್ಟಾರ್‌ ಆಟಗಾರರು ಆದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅಖಾಡಕ್ಕೆ ಇಳಿಯುತ್ತಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧದ ಈ ಸರಣಿಗಳಲ್ಲಿ ಕೇವಲ ಏಕದಿನ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಆಡಲಿದ್ದಾರೆ. ಏಕೆಂದರೆ ಈಗಾಗಲೇ ಇಬ್ಬರು T20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಏನೇ ಹೇಳಲಿ 2027 ವಿಶ್ವಕಪ್‌ ದೃಷ್ಟಿಯಿಂದ ಈ ಸರಣಿ ಇಬ್ಬರಿಗೂ ಬಹುಮುಖ್ಯವಾಗಿದೆ.
Rohit Kohli 6/6

ರೋಹಿತ್‌ ಕೊಹ್ಲಿ

ಮುಂದಿನ ವರ್ಷದ ವಿಶ್ವಕಪ್‌ ದೃಷ್ಟಿಯಿಂದ ಹಿಟ್‌ಮ್ಯಾನ್‌ ರೋಹಿಟ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ಈ ಸರಣಿಯೂ ಮಹತ್ವದ್ದು ಆಗಿದೆ. ಈ ಹಿಂದೆ ಇಂಗ್ಲೆಂಡ್‌ ಪ್ರವಾಸದ ಸಮದಯಲ್ಲಿ ರೋಹಿತ್‌ ಶರ್ಮಾ ಅವರ ನಿವೃತ್ತಿ ವದಂತೆ ಎಲ್ಲೆಡೆ ಸುದ್ದಿಯಾಗಿತ್ತು. ಇದಕ್ಕೆ ರೋಹಿತ್‌ ಶರ್ಮಾ ತಮ್ಮ ಬ್ಯಾಟ್‌ ಮೂಲಕ ಬಲವಾದ ಪ್ರತಿಕ್ರಿಯೆ ನೀಡಿ ಟೀಕೆಗಳಿಗೆ ಉತ್ತರಸಿದ್ದರು. ಇನ್ನು ವಿರಾಟ್‌ ಕೊಹ್ಲಿ ಅವರ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ.
TAGS:
Cricket

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.