ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಮತ್ತು ನಮನ್ ಧೀರ್ ಈ ಇಬ್ಬರು ತಂಡದಲ್ಲಿ ಇದ್ದರೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಮುಂದಿನ ಪಂದ್ಯದಲ್ಲೂ ಇವರಿಗೆ ಅವಕಾಶ ನೀಡಲಾಗುತ್ತದೆ.
Team India playing 11 likely Significant change: ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಟೀಮ್ ಇಂಡಿಯಾ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 2ನೇ ಏಕದಿನ ಪಂದ್ಯ ಸೆಪ್ಟೆಂಬರ್ 30 ಅಂದರೆ ನಾಳೆ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆಯಲಿದೆ. ಶುಭ್‌ಮನ್ ಗಿಲ್ ನೇತೃತ್ವದ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲಾಗುತ್ತಿದ್ದು ಕನ್ನಡಿಗನಿಗೆ ಬಿಗ್ ಶಾಕ್ ಎದುರಾಗುತ್ತಿದೆ ಎನ್ನಲಾಗುತ್ತಿದೆ.
1/6
ಭಾರತ ತಂಡ 11
2ನೇ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಪ್ರಸ್ತುತ ಗುವಾಹಟಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಆಡಿದ ಕೆಲವು ಆಟಗಾರರನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ತಂಡದಲ್ಲಿ ಬದಲಾವಣೆಯ ಬಗ್ಗೆ ಊಹಾಪೋಹಗಳಿವೆ. ಓಪನರ್‌ಗಳಾದ ರೋಹಿತ್ ಶರ್ಮಾ, ಶುಭಮನ್ ಗಿಲ್ ತಮ್ಮ ಪ್ರಾಬಲ್ಯ ಮುಂದುವರಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ 32 ರನ್ ಗಳಿಸಿ ಔಟಾದರು.
2/6
ಭಾರತ ತಂಡ 11
ನಾಯಕ ಶುಭಮನ್ ಗಿಲ್ ತಮ್ಮ ಅಮೋಘವಾದ ಬ್ಯಾಟಿಂಗ್ ಮುಂದುವರೆಸಿ ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತವಾದ ಶತಕ ಸಿಡಿಸಿದರು. ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಕ್ರೀಸ್‌ಗೆ ಆಗಮಿಸಿ ಸೆಂಚುರಿ ಸಿಡಿಸಿ ದಾಖಲೆ ಬರೆದರು. ಇದರಿಂದ 2ನೇ ಪಂದ್ಯದಲ್ಲಿ ಈ ಇಬ್ಬರು ಅಖಾಡಕ್ಕೆ ಎಂಟ್ರಿ ಆಗುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್ ಮತ್ತು ನಮನ್ ಧೀರ್ ಇದ್ದಾರೆ.
3/6
ಭಾರತ ತಂಡ 11
ಮೊದಲ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಕೇವಲ 19 ಎಸೆತಗಳಲ್ಲಿ 13 ರನ್ ಗಳಿಸಿದರಷ್ಟೇ. ಒಂದೇ ಒಂದು ಬೌಂಡರಿ ಬಾರಿಸಲಿಲ್ಲ. ಎರಡನೇ ಪಂದ್ಯದಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವುದು ಅನಿವಾರ್ಯವಾಗಿದೆ. ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಮತ್ತು ನಮನ್ ಧೀರ್ ಈ ಇಬ್ಬರು ತಂಡದಲ್ಲಿ ಇದ್ದರೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಮುಂದಿನ ಪಂದ್ಯದಲ್ಲೂ ಇವರಿಗೆ ಅವಕಾಶ ನೀಡಲಾಗುತ್ತದೆ.
4/6
ಭಾರತ ತಂಡ 11
ಆಲ್‌ರೌಂಡರ್‌ಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ ಮತ್ತು ರವೀಂದ್ರ ಜಡೇಜಾ ಇಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಮೊದಲ ಪಂದ್ಯದಲ್ಲಿ ನಿತೀಶ್ ರೆಡ್ಡಿ ಬೌಲಿಂಗ್‌ನಲ್ಲಿ ನಿರೀಕ್ಷಿತ ಪರಿಣಾಮ ಬೀರಲಿಲ್ಲ. 9 ಎಕಾನಮಿಯಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರೂ, ಭಾರತ ತಂಡ ಆ ಪಂದ್ಯವನ್ನು ಸುಲಭವಾಗಿ ಗೆದ್ದಿತು. ಆದ್ದರಿಂದ ಅವರನ್ನು ತಕ್ಷಣವೇ ಕೈಬಿಡುವ ಸಾಧ್ಯತೆ ಕಡಿಮೆ.
5/6
ಭಾರತ ತಂಡ 11
ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಗುರ್ನೂರ್ ಬ್ರಾರ್ ಅವರಿಗೆ ಅವಕಾಶ ಸಿಗಬಹುದು. ಪ್ರಸಿದ್ಧ್ ಕೃಷ್ಣ ಅವರ ಸ್ಥಾನದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಇದೆ. ಮೊದಲ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಎದುರಾಳಿ ತಂಡದ ಬ್ಯಾಟಿಂಗ್ ಮೇಲೆ ಪ್ರಸಿದ್ಧ್ ಕೃಷ್ಣಗೆ ಒತ್ತಡ ಹೇರಲು ಆಗಲಿಲ್ಲ. ಇದೇ ಕಾರಣದಿಂದ 2ನೇ ಪಂದ್ಯದಲ್ಲಿ ಅವಕಾಶ ನೀಡಲ್ಲ ಎನ್ನಲಾಗ್ತಿದೆ.
6/6
ಭಾರತ ತಂಡ 11
ಪ್ರಸಿದ್ಧ್ ಕೃಷ್ಣ ಬೌಲಿಂಗ್ ಮಾಡುವಾಗ ವೆಸ್ಟ್ ಇಂಡೀಸ್ ತಂಡವು ಪವರ್‌ಪ್ಲೇ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ ರನ್ ಗಳಿಸಿತು. ಆದ್ದರಿಂದ, ತಂಡದ ಆಡಳಿತ ಮಂಡಳಿಯು ಎರಡನೇ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಬದಲಿಗೆ ಅನುಭವಿ ಮೊಹಮ್ಮದ್ ಸಿರಾಜ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.