Sandalwood Richest Actress: ಕನ್ನಡದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿ, ಸಿನಿಮಾಗೆ ಪಡೆಯುವ ಸಂಭಾವನೆ ಹಾಗೂ ಆದಾಯದ ಮೂಲಗಳ ಸಂಪೂರ್ಣ ವಿವರ ಇಲ್ಲಿದೆ.
Actress Radhika Kumaraswamy Net worth : ಕನ್ನಡ ಸಿನಿಮಾ ರಂಗದ ಅತ್ಯಂತ ಶ್ರೀಮಂತ ನಟಿ ರಾಧಿಕಾ ಕುಮಾರಸ್ವಾಮಿ ಎಂದು ಹೇಳಲಾಗುತ್ತದೆ. ನೋಡಲು ಸೌಂದರ್ಯದ ಗಣಿಯಂತಿರುವ ರಾಧಿಕಾ ಕುಮಾರಸ್ವಾಮಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ? ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ
1/5
ರಾಧಿಕಾ ಕುಮಾರಸ್ವಾಮಿ
ಸ್ಯಾಂಡಲ್‌ವುಡ್‌ನ ಅಂದದ ಗೊಂಬೆ ನಟಿ ರಾಧಿಕಾ ಕುಮಾರಸ್ವಾಮಿ. ಇವರು ಮೂಲತಃ ಮಂಗಳೂರಿನವರು. ಕನ್ನಡ ಸಿನಿರಂಗದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸ್ಯಾಂಡಲ್‌ವುಡ್ ಸ್ವೀಟಿ ಎಂದೇ ಖ್ಯಾತರಾಗಿರುವ ನಟಿ ರಾಧಿಕಾ ಕುಮಾರಸ್ವಾಮಿ ಕನ್ನಡ ಚಿತ್ರರಂಗದ ಅತ್ಯಂತ ಸಿರಿವಂತ ನಟಿ ಕೂಡ ಹೌದು.
2/5
ರಾಧಿಕಾ ಕುಮಾರಸ್ವಾಮಿ ಆಸ್ತಿ
ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿಯಾಗಿಯೂ ರಾಧಿಕಾ ಕುಮಾರಸ್ವಾಮಿ ಕನ್ನಡ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿಯೂ ಮಿಂಚುತ್ತಿದ್ದಾರೆ. ತಮ್ಮದೇ ಬ್ಯಾನರ್ ಅಡಿ ಸಿನಿಮಾಗಳನ್ನ ನಿರ್ಮಿಸುತ್ತಿದ್ದಾರೆ.
3/5
ಸ್ಯಾಂಡಲ್‌ವುಡ್ ಸ್ವೀಟಿ
ನಟಿ ರಾಧಿಕಾ ಕುಮಾರಸ್ವಾಮಿ 2002 ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ರಾಧಿಕಾ ಕುಮಾರಸ್ವಾಮಿ ಇದು ವರೆಗೂ 34ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಅದ್ಭುತ ಅಭಿನಯ ಹಾಗೂ ಸೌಂದರ್ಯದಿಂದ ರಾಧಿಕಾ ಕುಮಾರಸ್ವಾಮಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
4/5
ರಾಧಿಕಾ ಕುಮಾರಸ್ವಾಮಿ
ನಿನಗಾಗಿ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ಚಿನ್ನಾರಿ ಮುತ್ತ ಚಿತ್ರದ ಮೂಲಕ ಹಿಟ್ ಪಡೆದು ಜನರ ಮನದಲ್ಲಿ ಸ್ಥಾನ ಗಳಿಸಿದರು. ಜೊತೆಗೆ ಅಣ್ಣ ತಂಗಿ, ಮಂಡ್ಯ, ತವರಿಗೆ ಬಾ ತಂಗಿ, ಆಟೋ ಶಂಕರ್ ಮುಂತಾದ ಸಿನಿಮಾಗಳಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದರು. ಶಿವರಾಜ್‌ಕುಮಾರ್ ಜೊತೆ ರಾಧಿಕಾ ಕುಮಾರಸ್ವಾಮಿ ಅವರ ತಂಗಿಯ ಪಾತ್ರ ಇಂದಿಗೂ ಜನರ ಫೆವರೇಟ್ ಲಿಸ್ಟ್‌ನಲ್ಲಿದೆ.
5/5
ನಟಿ ರಾಧಿಕಾ ಕುಮಾರಸ್ವಾಮಿ
ಸಿನಿಮಾ ಮಾತ್ರವಲ್ಲದೇ ರಾಧಿಕಾ ಕುಮಾರಸ್ವಾಮಿ ಬ್ಯುಸಿನೆಸ್‌ಗಳನ್ನು ಮಾಡುತ್ತಾರೆ. ರಾಧಿಕಾ ಕುಮಾರಸ್ವಾಮಿ ಅಪಾರ ಆಸ್ತಿಗೆ ಒಡತಿಯಾಗಿದ್ದಾರೆ. ಮೂಲಗಳ ಪ್ರಕಾರ ರಾಧಿಕಾ ಕುಮಾರಸ್ವಾಮಿ ಒಟ್ಟು ಆಸ್ತಿ 124 ಕೋಟಿ ರೂಪಾಯಿ ಎಂದು ವರದಿಯಾಗಿದೆ. ವಿಶೇಷವೆಂದರೇ ನಟಿ ರಾಧಿಕಾ ಕುಮಾರಸ್ವಾಮಿ ಕನ್ನಡದ ಶ್ರೀಮಂತ ನಟಿ ಆಗಿದ್ದಾರೆ.