• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /Ind vs Pak; ವೈಭವ್‌ ಸೂರ್ಯವಂಶಿ ಔಟಾಗ್ತಿದ್ದಂತೆ ಪಾಕ್‌ ವಿಚಿತ್ರ ವರ್ತನೆ.. ಉತ್ತರ ಕೊಟ್ಟ ಅಭಿಷೇಕ್‌ ಶರ್ಮಾ

Ind vs Pak; ವೈಭವ್‌ ಸೂರ್ಯವಂಶಿ ಔಟಾಗ್ತಿದ್ದಂತೆ ಪಾಕ್‌ ವಿಚಿತ್ರ ವರ್ತನೆ.. ಉತ್ತರ ಕೊಟ್ಟ ಅಭಿಷೇಕ್‌ ಶರ್ಮಾ

Written ByBhimappa
Published: Oct 03, 2026, 11:27 AM IST|Updated: Oct 03, 2026, 11:31 AM IST
joinshare
ವೈಭವ್‌ ಸೂರ್ಯವಂಶಿ ಅವರನ್ನ ಪಾಕಿಸ್ತಾನದ ಬೌಲರ್ ಸ್ಯಾಮ್ ಅಯೂಬ್ ಔಟ್ ಮಾಡ್ತಿದ್ದಂತೆ ವಿವಾದಾತ್ಮಕ ರೀತಿಯಲ್ಲಿ ಸಂಭ್ರಮಿಸಿದರು. ಸ್ಯಾಮ್ ಅಯೂಬ್ ಮಗುವನ್ನ ಎತ್ತುಕೊಂಡು ಲಾಲಿಸುವಂತೆ ಮೈದಾನದಲ್ಲಿ ಸೆಲೆಬ್ರೇಷನ್‌ ಮಾಡಿದರು. ಇದರಿಂದ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

vaibhav sooryavanshi saim ayub baby celebration: 2026 ಏಷ್ಯನ್ ಕ್ರೀಡಾಕೂಟದಲ್ಲಿ ಇವತ್ತು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್‌ ಮ್ಯಾಚ್‌ ನಡೆಯುತ್ತಿದೆ. ಎರಡೂ ತಂಡಗಳು ಚಿನ್ನದ ಪದಕಕ್ಕಾಗಿ ಅಖಾಡಕ್ಕೆ ಇಳಿದಿವೆ. ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟೀಮ್‌ ಇಂಡಿಯಾ ಪರ ಓಪನಿಂಗ್ ಆರಂಭಿಸಿದ್ದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ಪಡೆದಿದ್ದರು. ಈ ವೇಳೆ ವೈಭವ್ ಸೂರ್ಯವಂಶಿ ಬಿಗ್‌ ಶಾಟ್‌ಗೆ ಪ್ರಯತ್ನ ಮಾಡಿದಾಗ ಔಟ್‌ ಆದರು. ಈ ವೇಳೇ ಪಾಕಿಸ್ತಾನಿ ಬೌಲರ್‌ ವಿಚಿತ್ರವಾಗಿ ಸೆಲೆಬ್ರೇಷನ್‌ ಮಾಡಿದ್ದಾರೆ. 
 

vaibhav sooryavanshi 1/6

ವೈಭವ್‌ ಸೂರ್ಯವಂಶಿ

ವೈಭವ್‌ ಸೂರ್ಯವಂಶಿ ಕೇವಲ 9 ಎಸೆತಗಳಲ್ಲಿ 15 ರನ್ ಗಳಿಸಿ ಬ್ಯಾಟಿಂಗ್‌ ಮಾಡುತ್ತಿದ್ದರು. ಈ ವೇಳೆ ಕ್ರೀಸ್‌ನಲ್ಲಿ ವೈಭವ್‌ ಸೂರ್ಯವಂಶಿ ಕೀಪರ್‌ ಬ್ಯಾಕ್‌ ಸೈಡ್‌ ಗ್ಯಾಪ್‌ ನೋಡಿ ಶಾಟ್‌ ಮಾಡಲು ಹೋದರು. ಆದರೆ ಬಾಲ್‌ ಬ್ಯಾಟ್‌ಗೆ ಟಚ್‌ ಆಗಿ ಕೀಪರ್‌ ಕೈಗೆ ಹೋಯಿತು. ಕೀಪರ್‌ ಹರಸಾಹಸ ಪಟ್ಟ ಈ ಕ್ಯಾಚ್‌ ಹಿಡಿದರು ಎನ್ನಬಹುದು.
vaibhav sooryavanshi 2/6

ವೈಭವ್‌ ಸೂರ್ಯವಂಶಿ

ತಂಡದ ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಸ್ಯಾಮ್ ಅಯೂಬ್, ವೈಭವ್ ಸೂರ್ಯವಂಶಿಯ ಅವರ ವಿಕೆಟ್ ಪಡೆದರು. ವೈಭವ್‌ ಸೂರ್ಯವಂಶಿ ಅವರನ್ನ ಪಾಕಿಸ್ತಾನದ ಬೌಲರ್ ಸ್ಯಾಮ್ ಅಯೂಬ್ ಔಟ್ ಮಾಡ್ತಿದ್ದಂತೆ ವಿವಾದಾತ್ಮಕ ರೀತಿಯಲ್ಲಿ ಸಂಭ್ರಮಿಸಿದರು. ಸ್ಯಾಮ್ ಅಯೂಬ್ ಮಗುವನ್ನ ಎತ್ತುಕೊಂಡು ಲಾಲಿಸುವಂತೆ ಮೈದಾನದಲ್ಲಿ ಸೆಲೆಬ್ರೇಷನ್‌ ಮಾಡಿದರು. ಇದರಿಂದ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
vaibhav sooryavanshi 3/6

ವೈಭವ್‌ ಸೂರ್ಯವಂಶಿ

ಆದರೆ, ಓಪನರ್‌ ಅಭಿಷೇಕ್ ಶರ್ಮಾ ಈ ನಡೆಗೆ ತಮ್ಮ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ. ಸ್ಯಾಮ್ ಅಯೂಬ್ ಅದೇ ಓವರ್‌ನಲ್ಲಿ, ಅಭಿಷೇಕ್ ಶರ್ಮಾ ಆಕ್ರಮಣಕಾರಿ ಬ್ಯಾಟ್‌ ಬೀಸಿ ಒಂದು ಸಿಕ್ಸರ್, ಎರಡು ಬೌಂಡರಿಗಳನ್ನು ಬಾರಿಸಿ ಒಂದೇ ಓವರ್‌ನಲ್ಲಿ 15 ರನ್‌ ಬಾರಿಸಿದರು. ವೈಭವ್ ವಿಕೆಟ್ ಪಡೆದ ಬಳಿಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಪಾಕಿಸ್ತಾನಿ ಬೌಲಿಂಗ್ ಪಡೆ ಮೇಲೆ ದಾಳಿ ಮಾಡಿದರು.
vaibhav sooryavanshi 4/6

ವೈಭವ್‌ ಸೂರ್ಯವಂಶಿ

ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿಯಾದ ಬ್ಯಾಟಿಂಗ್‌ ಮಾಡಿದ ಅಭಿಷೇಕ್‌ ಶರ್ಮಾ ಅವರು ಬೌಲರ್‌ಗಳಿಗೆ ಮನಬಂದಂತೆ ಚಚ್ಚಿದರು. ಎಂದಿನಂತೆ ತಮ್ಮ ಹೊಡಿಬಡಿ ಬ್ಯಾಟಿಂಗ್‌ ಮಾಡಿದ ಬಿಗ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾ ಕೇವಲ 28 ಎಸೆತಗಳಲ್ಲಿ 3 ಸೊಗಸಾದ ಬೌಂಡರಿಗಳು ಮತ್ತು 7 ಬಿಗ್‌ ಸಿಕ್ಸರ್‌ಗಳಿಂದ 61 ರನ್‌ ಗಳಿಸಿ ಆಡುವಾಗ ಔಟಾದರು.
vaibhav sooryavanshi 5/6

ವೈಭವ್‌ ಸೂರ್ಯವಂಶಿ

ಟೀಮ್‌ ಇಂಡಿಯಾ ಮತ್ತು ಪಾಕಿಸ್ತಾನ ನಡುವೆ ಚಿನ್ನದ ಪದಕಕ್ಕಾಗಿ ನಡೆಯುತ್ತಿರುವ ಪೈಪೋಟಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿದೆ. ಟೀಮ್‌ ಇಂಡಿಯಾ ಈ ಹಿಂದೆ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದು, ಈ ಬಾರಿಯೂ ಪ್ರಶಸ್ತಿ ಉಳಿಸಿಕೊಳ್ಳಲು ಅಖಾಡಕ್ಕಿಳಿದಿದೆ. ಮತ್ತೊಂದೆಡೆ, ಏಷ್ಯನ್ ಕ್ರೀಡಾಕೂಟದಲ್ಲಿ ತನ್ನ ಮೊದಲ ಕ್ರಿಕೆಟ್ ಚಿನ್ನದ ಪದಕ ಗೆಲ್ಲುವ ಉದ್ದೇಶದಲ್ಲಿ ಪಾಕ್‌ ಇದೆ.
vaibhav sooryavanshi6/6

ವೈಭವ್‌ ಸೂರ್ಯವಂಶಿ

ಸದ್ಯ ಫೈನಲ್‌ ಪಂದ್ಯ ನಡೆಯುತ್ತಿದ್ದು ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಶ್ರೇಯಸ್‌ ಅಯ್ಯರ್‌ ನೇತೃತ್ವದ ಟೀಮ್‌ ಇಂಡಿಯಾ ಪ್ರಯತ್ನಿಸುತ್ತಿದೆ. ಈಗಾಗಲೇ ಭಾರತದ ವಿರುದ್ಧ ಎಲ್ಲ ಟ್ರೋಫಿಗಳಲ್ಲಿ ಪಾಕಿಸ್ತಾನ ಮಕಾಡೆ ಮಲಗಿದೆ. ಅದರಂತೆ ಇಲ್ಲಿಯೂ ಅವರು ಸೋಲು ಖಚಿತ ಎನ್ನಲಾಗುತ್ತಿದೆ. ಸದ್ಯ ಟೀಮ್‌ ಇಂಡಿಯಾ ಬ್ಯಾಟಿಂಗ್‌ ಮಾಡುತ್ತಿದ್ದು 15.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 139 ರನ್‌ ಗಳಿಸಿ ಆಡುತ್ತಿದೆ.
TAGS:
Asian Games

Trending

  • News
  • Photos
  • Videos
Ind vs Pak; ಪಾಕ್‌ ಪಕ್ಕೆಲುಬು ಮುರಿದ ಶ್ರೇಯಸ್‌ ಅಯ್ಯರ್‌ ಪಡೆ, Gold Medal.. ಅಭಿ, ತಿಲಕ್‌ ಮಿಂಚಿನ ಬ್ಯಾಟಿಂಗ್

Ind vs Pak; ಪಾಕ್‌ ಪಕ್ಕೆಲುಬು ಮುರಿದ ಶ್ರೇಯಸ್‌ ಅಯ್ಯರ್‌ ಪಡೆ, Gold Medal.. ಅಭಿ, ತಿಲಕ್‌ ಮಿಂಚಿನ ಬ್ಯಾಟಿಂಗ್

2

ಗಾಜಿನಂತೆ ಹೊಳೆಯುವ ಚರ್ಮ ಬೇಕಾ? ನೀವು ಪ್ರತಿದಿನ ಕುಡಿಯಬೇಕಾದ 5 ಶಕ್ತಿಶಾಲಿ ಪಾನೀಯಗಳು ಇಲ್ಲಿವೆ!

3

ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಬಸ್ ಹೆಡ್‌ಲೈಟ್ ಇಲ್ಲದೆ 60 ಕಿ.ಮೀ ಪ್ರಯಾಣಿಸಿದೆ ಎಂಬ ವರದಿಗೆ ಅಧಿಕಾರಿಗಳು ಯೂಟರ್ನ್‌

4

ಪಾಕ್‌ ವಿರುದ್ಧ ದಾಖಲೆಗಳನ್ನ ಬರೆದ ಬಿಗ್‌ ಹಿಟ್ಟರ್‌ ಅಭಿಷೇಕ್‌ ಶರ್ಮಾ.. ಗುರುವಿನ ರೆಕಾರ್ಡ್‌ ಸರಿಗಟ್ಟಿದ ಓಪನರ್!

5

ಮಣಿಪಾಲ: QR ಕೋಡ್ ಬದಲಿಸಿ 12 ಲಕ್ಷ ರೂಪಾಯಿ ವಂಚನೆ, ಆರು ಜನರ ವಿರುದ್ಧ ಪ್ರಕರಣ ದಾಖಲು

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.