• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ನೋಡ್‌ ನೋಡ್ತಿದ್ದಂತೆ ಬಸ್ಸಿನಿಂದ ಜಾರಿ ಬಿದ್ದ ರೋಹಿತ್‌ ಶರ್ಮಾ.. ವಿರಾಟ್‌ ಕೊಹ್ಲಿ ಫುಲ್‌ ಶಾಕ್‌

ನೋಡ್‌ ನೋಡ್ತಿದ್ದಂತೆ ಬಸ್ಸಿನಿಂದ ಜಾರಿ ಬಿದ್ದ ರೋಹಿತ್‌ ಶರ್ಮಾ.. ವಿರಾಟ್‌ ಕೊಹ್ಲಿ ಫುಲ್‌ ಶಾಕ್‌

Written ByBhimappa
Published: Sep 28, 2026, 07:34 PM IST|Updated: Sep 28, 2026, 07:41 PM IST
joinshare
ಆದರೆ ವಿರಾಟ್ ಕೊಹ್ಲಿಯ ಗಮನ ರೋಹಿತ್ ಶರ್ಮಾ ಕಡೆಗೆ ಇತ್ತು. ರೋಹಿತ್‌ ಶರ್ಮಾ ಬೀಳುವಾಗ ವಿರಾಟ್‌ ಕೊಹ್ಲಿ ಅವರು ನೋಡುತ್ತಿರುವ ಆಕ್ಷನ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Rohit Sharma slips falls team bus stairs: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದ ಬಳಿಕ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತಂಡದೊಂದಿಗೆ ಬಸ್‌ನಲ್ಲಿ ಹೋಟೆಲ್‌ವೊಂದಕ್ಕೆ ಆಗಮಿಸಿದ್ದರು. ಬಸ್‌ನಿಂದ ಇಳಿಯುವಾಗ ರೋಹಿತ್‌ ಶರ್ಮಾ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್, ರೋಹಿತ್‌ ಶರ್ಮಾ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆರೋಗ್ಯವಾಗಿದ್ದಾರೆ. ಮೊದಲೇ ಬಸ್‌ ಇಳಿದಿದ್ದ ವಿರಾಟ್ ಕೊಹ್ಲಿ ಅವರ ರಿಯಾಕ್ಷನ್‌ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗುತ್ತಿದೆ.
 

Rohit Sharma slips falls 1/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ಶುಭಮನ್ ಗಿಲ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಮತ್ತು ಶುಭಮನ್ ಗಿಲ್ ಶತಕ ಸಿಡಿಸಿದರೆ, ಕುಲದೀಪ್ ಯಾದವ್ 4 ವಿಕೆಟ್‌ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
Rohit Sharma slips falls 2/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ರೋಹಿತ್ ಶರ್ಮಾ ಬಸ್ಸಿನಿಂದ ಇಳಿಯುವಾಗ ಜಾರಿ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ರೋಹಿತ್ ಶರ್ಮಾ ಬಸ್ಸಿನಿಂದ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಸ್ಸಿನಿಂದ ಇಳಿಯುವಾಗ ಹಿಟ್‌ಮ್ಯಾನ್ ರೋಹಿತ್‌ ಮೆಟ್ಟಿಲುಗಳಿಂದ ಜಾರಿ ಕೆಳಗೆ ಬೀಳುವುದನ್ನು ಕಾಣಬಹುದು. ಸ್ಥಳದಲ್ಲಿದ್ದ ಪೊಲೀಸರು, ಕೆಲ ಸಿಬ್ಬಂದಿ ಕೂಡಲೇ ರೋಹಿತ್ ಶರ್ಮಾ ಅವರಿಗೆ ಎದ್ದು ನಿಲ್ಲಲು ಸಹಾಯ ಮಾಡಿದರು. ಅದೃಷ್ಟವಶಾತ್ ಏನು ಆಗಿಲ್ಲ.
Rohit Sharma slips falls 3/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ವಿರಾಟ್‌ ಕೊಹ್ಲಿ ಸೇರಿದಂತೆ ಬಸ್ಸಿನಿಂದ ಕೆಲವು ಆಟಗಾರರು ಆಗಲೇ ಕೆಳಗೆ ಇಳಿದಿದ್ದರು. ಹೋಟೆಲ್ ಸಿಬ್ಬಂದಿ ಭಾರತ ತಂಡದ ವಿಜಯವನ್ನು ಆಚರಿಸಲು ಹೊರಗೆ ನಿಂತಿದ್ದರು. ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದರು. ಆದರೆ ವಿರಾಟ್ ಕೊಹ್ಲಿಯ ಗಮನ ರೋಹಿತ್ ಶರ್ಮಾ ಕಡೆಗೆ ಇತ್ತು. ರೋಹಿತ್‌ ಶರ್ಮಾ ಬೀಳುವಾಗ ವಿರಾಟ್‌ ಕೊಹ್ಲಿ ಅವರು ನೋಡುತ್ತಿರುವ ಆಕ್ಷನ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Rohit Sharma slips falls 4/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 296 ರನ್‌ಗಳ ಗುರಿಯನ್ನು ಟೀಮ್‌ ಇಂಡಿಯಾಗೆ ನೀಡಿತ್ತು. ಈ ಬೃಹತ್‌ ಸ್ಕೋರ್ ಅನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿ 12 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 74 ರನ್‌ ಗಳಿಸಿತು.
Rohit Sharma slips falls 5/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ರೋಹಿತ್ ಶರ್ಮಾ ಉತ್ತಮ ಆರಂಭವನ್ನು ನೀಡಿ ಎರಡು ಬೌಂಡರಿ ಮತ್ತು ಮೂರು ಅಮೋಘ ಸಿಕ್ಸರ್‌ಗಳ ಸಹಾಯದಿಂದ 32 ರನ್ ಗಳಿಸಿದ್ದರು. ಆದರೆ ಈ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ರೋಹಿತ್‌ ಅವರಿಗೆ ಸಾಧ್ಯವಾಗಲಿಲ್ಲ. ಅಲ್ಜಾರಿ ಜೋಸೆಫ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ರೋಹಿತ್‌ ಔಟ್‌ ಆದ ಬಳಿಕ ಕ್ರೀಸ್‌ಗೆ ಆಗಮಿಸಿದ ವಿರಾಟ್ ಕೊಹ್ಲಿ, ನಾಯಕ ಶುಭಮನ್ ಗಿಲ್ ಅವರೊಂದಿಗೆ 151 ರನ್‌ಗಳ ಪಾರ್ಟನರ್‌ಶಿಪ್‌ನಲ್ಲಿ ಬ್ಯಾಟಿಂಗ್‌ ಮಾಡಿದರು. ಇದು ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು.
Rohit Sharma slips falls 6/6

ರೋಹಿತ್‌ ಶರ್ಮಾ ಜಾರಿ ಬಿದ್ದರು

ಪಂದ್ಯದಲ್ಲಿ ನಾಯಕ ಶುಭ್‌ಮನ್‌ ಗಿಲ್‌ ಮತ್ತು ವಿರಾಟ್‌ ಕೊಹ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳೂ ಶತಕ ಬಾರಿಸಿ ಶೈನ್‌ ಆದರು. ಶುಭ್‌ಮನ್‌ ಗಿಲ್ 110 ರನ್ ಗಳಿಸಿ ವಿಕೆಟ್‌ ಒಪ್ಪಿಸಿ ಹೊರ ನಡೆದರು. ಆದರೆ ವಿರಾಟ್‌ ಕೊಹ್ಲಿ ಅವರು 139 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಸೆಪ್ಟೆಂಬರ್ 30 ರಂದು ಬುಧವಾರ ಗುವಾಹಟಿಯಲ್ಲಿ ನಡೆಯಲಿದೆ.
TAGS:
Cricket

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.