• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /RCB ಎಷ್ಟು ಆಟಗಾರರನ್ನ ರಿಟೈನ್‌, ರಿಲೀಸ್‌ ಮಾಡಿದೆ.. ಪರ್ಸ್‌ ಅಲ್ಲಿ ಎಷ್ಟು ಕೋಟಿ ದುಡ್ಡು ಇದೆ?

RCB ಎಷ್ಟು ಆಟಗಾರರನ್ನ ರಿಟೈನ್‌, ರಿಲೀಸ್‌ ಮಾಡಿದೆ.. ಪರ್ಸ್‌ ಅಲ್ಲಿ ಎಷ್ಟು ಕೋಟಿ ದುಡ್ಡು ಇದೆ?

Written ByBhimappa
Published: Sep 28, 2026, 06:38 PM IST|Updated: Sep 28, 2026, 06:47 PM IST
joinshare
RCB ಬಿಡುಗಡೆ ಮಾಡಿದ ನಾಲ್ವರು ಆಟಗಾರ್ತಿಯರು ಎಂದರೆ ಗ್ರೇಸ್‌ ಹ್ಯಾರೀಸ್‌, ವಿದೇಶಿ ಆಟಗಾರ್ತಿ ಲಿನ್ಸೆ ಸ್ಮಿತ್‌, ಡಿ ಹೇಮಲತಾ ಮತ್ತು ಗೌತಮಿ ನಾಯಕ್‌ ಅವರನ್ನು ಬಿಡುಗಡೆ ಮಾಡಲಾಗಿದೆ.

RCB Womens Team Retain, Release Full Details: ವುಮೆನ್ಸ್‌ ಪ್ರೀಮಿಯರ್‌ ಲೀಗ್‌ ಡಬ್ಲುಪಿಎಲ್‌ನ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯೂ ಗ್ರೇಸ್‌ ಹ್ಯಾರೀಸ್‌ ಸೇರಿ ನಾಲ್ವರು ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ. ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್‌, ಪ್ರೇಮಾ ರಾವತ ಸೇರಿದಂತೆ ಆರ್‌ಸಿಬಿ ಒಟ್ಟು 12 ಆಟಗಾರರನ್ನು ಉಳಿಸಿಕೊಂಡಿದೆ. ಅಂದರೆ ರಿಟೈನ್‌ ಮಾಡಿಕೊಂಡಿದೆ. ನಾಲ್ವರು ಆಟಗಾರರನ್ನು ಬಿಡುಗಡೆ ಮಾಡಿದ ಆರ್‌ಸಿಬಿ ಮಹಿಳಾ ತಂಡದಲ್ಲಿ ಸದ್ಯ 5 ಸ್ಥಾನಗಳು ಖಾಲಿ ಇವೆ. 
 

RCB Womens Team 1/6

ಆರ್‌ಸಿಬಿ ಮಹಿಳಾ ತಂಡ

ಆರ್‌ಸಿಬಿ ಮಹಿಳಾ ತಂಡವು 12 ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಇದರ ಜೊತೆಗೆ ನಾಲ್ವರು ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ನಾಲ್ವರು ಆಟಗಾರ್ತಿಯರು ಎಂದರೆ ಗ್ರೇಸ್‌ ಹ್ಯಾರೀಸ್‌, ವಿದೇಶಿ ಆಟಗಾರ್ತಿ ಲಿನ್ಸೆ ಸ್ಮಿತ್‌, ಡಿ ಹೇಮಲತಾ ಮತ್ತು ಗೌತಮಿ ನಾಯಕ್‌ ಅವರನ್ನು ಬಿಡುಗಡೆ ಮಾಡಲಾಗಿದೆ. 2027 ಡಬ್ಲುಪಿಎಲ್‌ ಸೀಸನ್‌ನ ಆಕ್ಷನ್‌ಗೂ ಮೊದಲೇ ಈ ನಾಲ್ವರನ್ನು ತಂಡದಿಂದ ರಿಲೀಸ್‌ ಮಾಡಲಾಗಿದೆ.
RCB Womens Team 2/6

ಆರ್‌ಸಿಬಿ ಮಹಿಳಾ ತಂಡ

ಸದ್ಯ ನಾಲ್ವರು ಪ್ಲೇಯರ್ಸ್‌ ಅನ್ನು ರಿಲೀಸ್‌ ಮಾಡಿರುವ ಆರ್‌ಸಿಬಿ ಪರ್ಸ್‌ನಲ್ಲಿ ಕೇವಲ 1.15 ಕೋಟಿ ರೂಪಾಯಿಗಳು ಮಾತ್ರ ಇವೆ. ಇದೇ ಹಣದಲ್ಲಿ ಇನ್ನು ಐದು ಆಟಗಾರ್ತಿಯರನ್ನು ತಂಡಕ್ಕೆ ಹೊಸದಾಗಿ ಸೇರಿಸಿಕೊಳ್ಳಬೇಕಿದೆ. ಇದರಲ್ಲಿ ಐದು ಇಲ್ಲದಿದ್ದರೂ ನಾಲ್ವರು ಪ್ಲೇಯರ್ಸ್‌ ಅನ್ನು ಮಿನಿ ಆಕ್ಷನ್‌ನಲ್ಲಿ ಖರೀದಿ ಮಾಡಲಿದೆ. ತಂಡಕ್ಕೆ ಯಾವ್ಯಾವ ಆಟಗಾರ್ತಿಯರು ಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
RCB Womens Team 3/6

ಆರ್‌ಸಿಬಿ ಮಹಿಳಾ ತಂಡ

ಆರ್‌ಸಿಬಿ ಮಹಿಳಾ ತಂಡದಲ್ಲಿ ಒಟ್ಟು 5 ಸ್ಥಾನಗಳು ಖಾಲಿ ಇದ್ದು ಇದರಲ್ಲಿ 2 ಸ್ಥಾನಗಳು ವಿದೇಶಿ ಪ್ಲೇಯರ್‌ಗಳಿಗೆ ಮೀಸಲಿವೆ. ಅಂದರೆ ಉಳಿದ 3 ಸ್ಥಾನಗಳು ದೇಶಿಯ ಆಟಗಾರ್ತಿಯರಿಗೆ ಮೀಸಲಿವೆ. ಇನ್ನು ಆರ್‌ಸಿಬಿ ಮಹಿಳಾ ತಂಡ, ನಾಯಕಿ ಸ್ಮೃತಿ ಮಂಧಾನ, ರಿಚಾ ಘೋಷ್‌, ಪ್ರೇಮಾ ರಾವತ್ ಸೇರಿದಂತೆ ಒಟ್ಟು 12 ಆಟಗಾರರನ್ನು ಉಳಿಸಿಕೊಂಡಿದೆ. ‌
RCB Womens Team 4/6

ಆರ್‌ಸಿಬಿ ಮಹಿಳಾ ತಂಡ

ಆರ್‌ಸಿಬಿ ಮಹಿಳಾ ತಂಡದಲ್ಲಿ ಉಳಿದುಕೊಂಡ ಆಟಗಾರ್ತಿಯರು ಎಂದರೆ, ಕ್ಯಾಪ್ಟನ್‌ ಸ್ಮೃತಿ ಮಂಧಾನ, ರಿಚಾ ಘೋಷ್‌, ಪ್ರೇಮಾ ರಾವತ್, ಅರುಂಧತಿ ರೆಡ್ಡಿ, ಪ್ರತ್ಯೂಷ ಕುಮಾರ್, ಸಯಾಲಿ ಸತ್ಘರೆ, ಪೂಜಾ ವಸ್ತ್ರಾಕಾರ್‌, ರಾಧ ಯಾದವ್‌ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್‌ ರಿಟೈನ್‌ ಆಗಿದ್ದಾರೆ. ಉಳಿದುಕೊಂಡ ವಿದೇಶಿ ಆಟಗಾರ್ತಿಯರು ಎಂದರೆ, ಲೌರೆನ್ ಬೆಲ್‌, ಎಲ್ಲೀಸ್‌ ಪೆರ್ರಿ, ನಾಡಿನ್ ಡಿ ಕ್ಲರ್ಕ್, ಜಾರ್ಜಿಯಾ ವೋಲ್.
RCB Womens Team 5/6

ಆರ್‌ಸಿಬಿ ಮಹಿಳಾ ತಂಡ

ಇನ್ನು ಮುಂಬೈ ಇಂಡಿಯನ್ಸ್‌ ತಂಡವೂ 11 ಆಟಗಾರ್ತಿಯರನ್ನು ರಿಟೈನ್‌ ಮಾಡಿಕೊಂಡಿದ್ದು ಈ ಸಲ 6 ಪ್ಲೇಯರ್ಸ್‌ ಅನ್ನು ಕೈ ಬಿಟ್ಟಿದೆ. ಪರ್ಸ್‌ನಲ್ಲಿ 1 ಕೋಟಿ ರೂಪಾಯಿಗಳ ಮೊತ್ತ ಇದ್ದು ಇದರಲ್ಲಿ ಏಳು ಆಟಗಾರ್ತಿಯರನ್ನು ಖರೀದಿ ಮಾಡಬೇಕಿದೆ. ವಿದೇಶಿ ಪ್ಲೇಯರ್‌ಗೆ ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ. ರಿಟೈನ್‌ ಆದ ಪ್ಲೇಯರ್ಸ್ ಅಮನ್ಜೋತ್ ಕೌರ್, ಹರ್ಮನ್‌ಪ್ರೀತ್‌ ಕೌರ್, ರಾಹಿಲಾ ಫಿರ್ದೌಸ್, ಎಸ್ ಸಜನಾ, ಸಂಸ್ಕೃತಿ ಗುಪ್ತಾ, ವೈಷ್ಣವಿ ಶರ್ಮಾ.
RCB Womens Team 6/6

ಆರ್‌ಸಿಬಿ ಮಹಿಳಾ ತಂಡ

4 ಬಾರಿ ಫೈನಲ್‌ಗೆ ಹೋದರೂ ಟ್ರೋಫಿ ಗೆಲ್ಲದ ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡ 13 ಪ್ಲೇಯರ್ಸ್‌ ಅನ್ನು ಉಳಿಸಿಕೊಂಡಿದೆ. ಇದರ ಜೊತೆಗೆ 6 ಆಟಗಾರ್ತಿಯರನ್ನು ಕೈ ಬಿಟ್ಟಿದೆ. 1.1 ಕೋಟಿ ರೂಪಾಯಿಗಳು ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡದ ಪರ್ಸ್‌ನಲ್ಲಿದೆ. ತಂಡದಲ್ಲಿ ಐದು ಸ್ಥಾನಗಳು ಖಾಲಿ ಉಳಿದಿವೆ. ಇದರಲ್ಲಿ ಒಂದು ಸ್ಥಾನ ವಿದೇಶಿ ಪ್ಲೇಯರ್‌ಗೆ ಇದೆ.
TAGS:
RCB

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.