ರಶ್ಮಿಕಾ ಮಂದಣ್ಣ ಅವರು ನಟನೆ ಮಾಡುತ್ತಿರುವುದು ಕೇವಲ ಒಬ್ಬ ಗಾಯಕಿಯ ಕಥೆಯಲ್ಲ ಎಂದು ಮೊದಲು ಗಮನಿಸಬೇಕು. ಸಂಗೀತವನ್ನು ಭಕ್ತಿಯನ್ನಾಗಿಸಿ, ಭಕ್ತಿಯನ್ನು ಭಾವನೆಯನ್ನಾಗಿಸಿ ಬದಲಾವಣೆ ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಮಹಾನ್ ಚೇತನ
ಕರ್ನಾಟಕ ಶಾಸ್ತ್ರಿಯ ಸಂಗೀತ ಗಾಯಕಿ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಭಕ್ತಿ, ಭಾವನೆಗಳಿಂದ ತುಂಬಿದ ಧ್ವನಿಯು ಇಡೀ ಭಾರತದ ಸಾಂಸ್ಕೃತಿಕ ಲೋಕವೂ ಎಂದಿಗೂ ಮರೆಯುವುದಿಲ್ಲ. ಭಾರತ ರತ್ನ ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಸಂಗೀತವು ಎಲ್ಲಾ ಗಡಿಗಳು, ಭಾಷೆ, ಮತ್ತು ತಲೆಮಾರುಗಳನ್ನು ಮೀರಿತ್ತು. ಕೋಟಿ ಕೋಟಿ ಜನರ ಹೃದಯಗಳನ್ನು ಮಿಡಿದಿತ್ತು. ಅವರು ನಿಧನದ ಹಲವು ವರ್ಷಗಳ ನಂತರವೂ ಅವರ ಸಂಗೀತವು ಮನೆ, ದೇವಾಲಯ ಮತ್ತು ಸಂಗೀತ ಸಭಾಂಗಣಗಳಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಜೀನನಧಾರಿತ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
1/6
ಎಂ.ಎಸ್ ಸುಬ್ಬುಲಕ್ಷ್ಮಿಯಾದ ರಶ್ಮಿಕಾ
ಈ ಸಿನಿಮಾವನ್ನು ತಾವೇ ಅಭಿನಯ ಮಾಡುತ್ತಿರುವುದಾಗಿ ರಶ್ಮಿಕಾ ಮಂದಣ್ಣ ಅವರು ಅಧಿಕೃತವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಈ ಮಹಾನ್ ಸಂಗಿತಜ್ಞೆಯ ಪಾತ್ರಕ್ಕೆ ಹಲವಾರು ನಟಿಯರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ರಶ್ಮಿಕಾ ಮಂದಣ್ಣ ಅವರ ಹೆಸರು ಘೋಷಣೆ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಹೆಚ್ಚು ನಿರೀಕ್ಷೆಗಳನ್ನು ಮೂಡಿಸಲಿದೆ. ಜೆರ್ಸಿ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೂರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
2/6
ಎಂ.ಎಸ್ ಸುಬ್ಬುಲಕ್ಷ್ಮಿಯಾದ ರಶ್ಮಿಕಾ
ರಶ್ಮಿಕಾ ಮಂದಣ್ಣ ಅವರು ನಟನೆ ಮಾಡುತ್ತಿರುವುದು ಕೇವಲ ಒಬ್ಬ ಗಾಯಕಿಯ ಕಥೆಯಲ್ಲ ಎಂದು ಮೊದಲು ಗಮನಿಸಬೇಕು. ಸಂಗೀತವನ್ನು ಭಕ್ತಿಯನ್ನಾಗಿಸಿ, ಭಕ್ತಿಯನ್ನು ಭಾವನೆಯನ್ನಾಗಿಸಿ ಬದಲಾವಣೆ ಮಾಡಿ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ ಮಹಾನ್ ಚೇತನದ ಸಂಗೀತ ಪ್ರಯಾಣವಾಗಿದೆ. ವಿಶ್ವದ ವೇದಿಕೆಗಳಲ್ಲಿ ಪ್ರತಿಧ್ವನಿಸಿದ್ದ ಆ ಸುಮಧುರ ಧ್ವನಿ ಈಗ ಸ್ಕ್ರೀನ್ ಮೇಲೆ ಇನ್ನೊಂದು ಜನರೇಷನ್ ಅನ್ನು ತಲುಪಲಿದೆ. ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನದಂದು ಹೊಸ ಅಧ್ಯಾಯ ಆರಂಭವಾಗುತ್ತಿದೆ. ಈ ಸಿನಿಮಾದ ಘೋಷಣೆಯು ಹೆಚ್ಚಿನ ಮಹತ್ವವನ್ನು ಪಡೆಯುತ್ತಿದೆ.
3/6
ಎಂ.ಎಸ್ ಸುಬ್ಬುಲಕ್ಷ್ಮಿಯಾದ ರಶ್ಮಿಕಾ
ಈ ಸಿನಿಮಾವನ್ನು ಭಾವನಾತ್ಮಕ ಕಥಾಹಂದರಕ್ಕೆ ಹೆಸರಾದ ಗೌತಮ್ ತಿನ್ನನೂರಿ ನರ್ದೇಶನ ಮಾಡುತ್ತಿದ್ದಾರೆ. ಭಾರತೀಯ ಸಿನಿಮಾ ಕ್ಷೇತ್ರದ ಪ್ರಮುಖ ನಿರ್ಮಾಪಕರು ಆದಂತಹ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್, ಬನ್ನಿ ವಾಸು ಅವರು ಜಂಟಿಯಾಗಿ ಈ ದೊಡ್ಡ ಸಿನಿಮಾಗೆ ಹಣ ಹೂಡಿಕೆ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಅಭಿನಯದಿಂದ ಜಗತ್ತಿಗೆ ತಿಳಿದಿರುವ ಪ್ರಸಿದ್ಧ ಧ್ವನಿಯ ಹಿಂದಿನ ಮಹಿಳೆಯ ಭಾವನೆಗಳು, ಆಸೆಗಳು, ಹೋರಾಟಗಳು, ಶಕ್ತಿ ಮತ್ತು ಆಧ್ಯಾತ್ಮಿಕ ಪ್ರಯಾಣವನ್ನು ಹೊಸ ಪೀಳಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತದೆ.
4/6
ಎಂ.ಎಸ್ ಸುಬ್ಬುಲಕ್ಷ್ಮಿಯಾದ ರಶ್ಮಿಕಾ
ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ಅಭಿನಯ ಮಾಡಲಿದ್ದು ಈ ಸಿನಿಮಾಗೆ ಇಂದಿನ ಯುವ ಪೀಳಿಗೆಯ ನೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನುವುದು ವಿಶೇಷ. ಕಾಲತೀತವಾದ ಶಾಸ್ತ್ರೀಯ ರಾಗಗಗಳು ಹಾಗೂ ಇಂದಿನ ಯುವ ಪೀಳಿಗೆ ನಡುವೆ ಅಮೋಘವಾದ ಸಂಗೀತ ಸೇತುವೆಯನ್ನು ಅನಿರುದ್ಧ್ ರವಿಚಂದರ್ ನಿರ್ಮಾಣ ಮಾಡಲಿದ್ದಾರೆ.
5/6
ಎಂ.ಎಸ್ ಸುಬ್ಬುಲಕ್ಷ್ಮಿಯಾದ ರಶ್ಮಿಕಾ
ಎಂ.ಎಸ್ ಸುಬ್ಬುಲಕ್ಷ್ಮಿಅಂತಹ ಮಹಾನ್ ವ್ಯಕ್ತಿಯ ಜೀವನವನ್ನು ಪರದೆಯ ಮೇಲೆ ತರುವುದು ಅಷ್ಟು ಸಾಮಾನ್ಯವಲ್ಲ. ಏಕೆಂದರೆ ಅವರ ಜೀವನವನ್ನು ಸತ್ಯವಾಗಿ ಮತ್ತು ಗೌರವಯುತವಾಗಿ ಜನರಿಗೆ ತೋರಿಸಬೇಕು. ಇದಕ್ಕೆ ಬೇಕಾದಂತಹ ಅಗತ್ಯವಾದ ಹಕ್ಕುಗಳು, ಅನುಮತಿಗಳು, ಸಾಹಿತ್ಯಿಕ ಮೂಲಗಳು ಮತ್ತು ಕುಟುಂಬದೊಂದಿಗೆ ಸಂಪರ್ಕಗಳನ್ನು ಪಡೆದು ಮಾಹಿತಿ ಸಂಗ್ರಹಿಸಿ ಮಾಡುವುದು ದೊಡ್ಡ ಸಾಧನೆಯೇ ಸರಿ ಎನ್ನಬಹುದು. ರಶ್ಮಿಕಾ ಮಂದಣ್ಣ ಅವರ ನಟನೆ ಎಲ್ಲರ ಗಮನ ಸೆಳೆಯಲಿದೆ.
6/6
ಎಂ.ಎಸ್ ಸುಬ್ಬುಲಕ್ಷ್ಮಿಯಾದ ರಶ್ಮಿಕಾ
ಎಂ.ಎಸ್ ಸುಬ್ಬುಲಕ್ಷ್ಮಿ ಅವರ 110ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನವನ್ನು ಆಧರಿಸಿದ ಭವ್ಯ ಜೀವನ ಚರಿತ್ರೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಚೆನ್ನೈನ ದಿ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಜಯಂತಿಯ ಶುಭ ಸಂದರ್ಭದಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಲಾಗಿದೆ. ಎಂ.ಎಸ್ ಸುಬ್ಬುಲಕ್ಷ್ಮಿ ಅವರ ಶ್ರದ್ಧೆ, ಭಕ್ತಿ, ಮತ್ತು ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಅವರು ನೀಡಿದ ಕೊಡುಗೆಯನ್ನು ಮುಂದಿನ ಜನರೇಷನ್‌ಗೆ ತಲುಪಿಸುವ ಉದ್ದೇಶದಿಂದ ಈ ಬಯೋಪಿಕ್ ಅನ್ನು ನಿರ್ಮಿಸಲಾಗುತ್ತಿದೆ.