Radhika Kumaraswamy daughter Shamika: ನಟಿ ರಾಧಿಕಾ ಕುಮಾರಸ್ವಾಮಿ ಅವರ ಮಗಳ ಹೆಸರು ಶಮಿಕಾ. ಸದ್ಯ ಅವರು ಬೆಂಗಳೂರಿನಲ್ಲಿ ತಾಯಿಯೊಂದಿಗೆ ವಾಸವಿದ್ದು, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಚಾರದಿಂದ ದೂರವಿದ್ದಾರೆ.
1/6
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ
ಶಮಿಕಾ ಸದ್ಯ ತಮ್ಮ ಶಾಲಾ ಶಿಕ್ಷಣದತ್ತ (ಪ್ರೌಢಶಾಲೆ) ಸಂಪೂರ್ಣ ಗಮನ ಹರಿಸಿದ್ದಾರೆ. ಮಗಳ ಓದಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾಧಿಕಾ ಅವರು ಶಮಿಕಾರನ್ನು ಸಾರ್ವಜನಿಕವಾಗಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ.
2/6
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ
ಶಮಿಕಾ ಉತ್ತಮ ಟೆನ್ನಿಸ್ ಆಟಗಾರ್ತಿಯಾಗಬೇಕು ಎಂಬುದು ಅವರ ಕನಸಾಗಿದೆ. ಟೆನ್ನಿಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಶಮಿಕಾ ನಿಯಮಿತವಾಗಿ ಟೆನ್ನಿಸ್ ಕಲಿಯುತ್ತಿದ್ದಾರೆ.
3/6
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ
ನಟಿ ರಾಧಿಕಾ ಕುಮಾರಸ್ವಾಮಿ ಅವರು ಖಾಸಗಿ ವಾಹಿನಿಗೆ ಹಿಂದೊಮ್ಮೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವಂತೆ, ಶಮಿಕಾ ಡ್ಯಾನ್ಸ್ ಮತ್ತು ನಟನೆಯಲ್ಲಿ ತಾಯಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ.
4/6
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ
ರಾಧಿಕಾ ನಿರ್ಮಾಣದ 'ಭೈರಾದೇವಿ' ಚಿತ್ರದಲ್ಲಿ ಶಮಿಕಾ ನಟಿಸಬೇಕಿತ್ತು. ಆದರೆ ನಟನೆಯ ಕಡೆಗೆ ಗಮನ ಹೋದರೆ ಓದು ಹಾಳಾಗಬಹುದು ಎಂದು ಭಾವಿಸಿದ ರಾಧಿಕಾ, ಸದ್ಯಕ್ಕೆ ಸಿನಿಮಾ ಬೇಡ ಎಂದು ನಿರ್ಧರಿಸಿದರು.
5/6
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ
ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ತಮ್ಮ ತಾಯಿಯ ಫಿಟ್‌ನೆಸ್, ಡ್ರೆಸ್ಸಿಂಗ್ ಮತ್ತು ಸಿನಿಮಾ ನಟನೆಯ ಬಗ್ಗೆಯೂ ಸಲಹೆಗಳನ್ನು ನೀಡುತ್ತಾರಂತೆ. ವಯಸ್ಸಿನಲ್ಲಿ ಚಿಕ್ಕವರಾದರೂ ಅಮ್ಮನಿಗೆ ತಾಯಿಯಂತೆ ಕಾಳಜಿ ತೋರಿಸುತ್ತಾರೆ ಎಂದು ರಾಧಿಕಾ ಹಂಚಿಕೊಂಡಿದ್ದರು.
6/6
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ
ಶಿಕ್ಷಣ ಪೂರ್ಣಗೊಂಡ ಬಳಿಕ ಶಮಿಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಬಗ್ಗೆ ರಾಧಿಕಾ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.