Rachitha ram Darshan: ಡಿಂಪಲ್ ಕ್ವೀನ್ ರಚಿತಾ ರಾಮ್ ಬರ್ತ್‌ಡೇ ಸೆಲೆಬ್ರೇಷನ್ ಜೋರಾಗಿದೆ. ದರ್ಶನ್‌ರನ್ನು ಭೇಟಿ ಮಾಡಲು ರಚಿತಾ ರಾಮ್ ಹೋಗಿದ್ದೇಕೆ? ಅಲ್ಲಿ ಏನಾಯ್ತು? ಈ ಸ್ಟೋರಿ ನೋಡಿ..
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.ಗುಳಿಕೆನ್ನೆಯ ಚೆಲುವೆಯ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಆರ್.ಆರ್. ನಗರದ ನಿವಾಸದ ಬಳಿ ರಚಿತಾ ರಾಮ್ ಬೃಹತ್ ಕಟೌಟ್‌ಗಳು ರಾರಾಜಿಸಿದ್ದು, ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ನಟಿ ದರ್ಶನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ದರ್ಶನ್‌ರನ್ನು ಭೇಟಿ ಮಾಡಲು ರಚಿತಾ ರಾಮ್ ಹೋಗಿದ್ದೇಕೆ? ಅಲ್ಲಿ ಏನಾಯ್ತು? ಈ ಸ್ಟೋರಿ ನೋಡಿ..
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ರಚಿತಾ ರಾಮ್, ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ನಟಿ ವಿಶೇಷವಾಗಿ ಸಮಯ ಕಳೆದಿದ್ದಾರೆ.ಹಿಂದಿನ ದಿನವೇ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೇಷನ್ ಮಾಡಿಕೊಂಡ ರಚಿತಾ ರಾಮ್, ಪ್ರತಿಯೊಬ್ಬ ಅಭಿಮಾನಿಗೂ ಫೋಟೋಗೆ ಪೋಸ್ ನೀಡಿ ಖುಷಿಪಡಿಸಿದ್ದಾರೆ.
2/8
ಆರ್.ಆರ್.ನಗರದಲ್ಲಿ ರಚಿತಾ ರಾಮ್ ಕಟೌಟ್ ಹವಾ..
ಬೆಂಗಳೂರಿನ ಆರ್.ಆರ್.ನಗರದ ಮುಖ್ಯದ್ವಾರದ ಬಳಿ ರಚಿತಾ ರಾಮ್ ಅವರ ಬೃಹತ್ ಕಟೌಟ್ ನಿಲ್ಲಿಸಲಾಗಿದೆ. ಕಟೌಟ್‌ಗೆ ಅಭಿಮಾನಿಗಳು ಸಾಲು ಸಾಲು ಹಾರಗಳನ್ನು ಹಾಕಿ ಅಭಿಮಾನ ಮೆರೆದಿದ್ದಾರೆ. ಇಷ್ಟೇ ಅಲ್ಲ.. ರಚಿತಾ ರಾಮ್ ಅವರ ಕಟೌಟ್‌ಗೆ ಅಭಿಮಾನಿಗಳು ಕುಂಬಳಕಾಯಿ ಒಡೆದು ದೃಷ್ಟಿ ತೆಗೆದಿದ್ದಾರೆ. ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದಾರೆ.
3/8
ರಾತ್ರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಡಿಂಪಲ್ ಕ್ವೀನ್..
ಆರ್.ಆರ್.ನಗರದ ನಿವಾಸದಲ್ಲಿ ರಚಿತಾ ರಾಮ್ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು. ರಾತ್ರಿ ಕೇಕ್ ಕತ್ತರಿಸಿ ನಟಿ ತಮ್ಮ ಬರ್ತ್‌ಡೇಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಸುಮಾರು 14 ವರ್ಷಗಳಿಂದ ಚಿತ್ರರಂಗದಲ್ಲಿರುವ ರಚಿತಾ ರಾಮ್, ಹಲವು ಸಿನಿಮಾಗಳ ಮೂಲಕ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
4/8
ಬರ್ತ್‌ಡೇ ವೇಳೆ ದರ್ಶನ್‌ರನ್ನು ನೆನಪಿಸಿಕೊಂಡ ರಚಿತಾ ರಾಮ್..
ಇನ್ನು ಹುಟ್ಟುಹಬ್ಬದ ಸಂಭ್ರಮದ ವೇಳೆ ನಟ ದರ್ಶನ್ ಅವರನ್ನು ರಚಿತಾ ರಾಮ್ ನೆನಪಿಸಿಕೊಂಡಿದ್ದಾರೆ.ದರ್ಶನ್ ಅವರ ಆಶೀರ್ವಾದ ಪಡೆಯಲು ತಾವು ಮೊನ್ನೆ ಹೋಗಿದ್ದಾಗಿ ಹೇಳಿರುವ ರಚಿತಾ ರಾಮ್, ಆದರೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ವಾರದಲ್ಲಿ ಕೇವಲ ಎರಡು ದಿನ ಮಾತ್ರ ಭೇಟಿಗೆ ಅವಕಾಶವಿದೆ. ಕುಟುಂಬದವರನ್ನು ಭೇಟಿಯಾಗಲು ಅವಕಾಶವಿದ್ದ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಸಾಧ್ಯವಾಗಲಿಲ್ಲ. ಸುಮಾರು ಎರಡೂವರೆ ಗಂಟೆ ಕಾದು ವಾಪಸ್ ಬಂದೆ. ಆದರೂ ಅವರ ಆಶೀರ್ವಾದ ನನ್ನ ಮೇಲಿದೆ. ಮತ್ತೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ರಚಿತಾ ರಾಮ್ ಹೇಳಿದ್ದಾರೆ.
5/8
ಡಿ ಬಾಸ್ ರ ಆಶೀರ್ವಾದ ಪಡೆಯಲು ಹೋಗಿದ್ದೆ
“ಮೊನ್ನೆ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಆದರೆ ಭೇಟಿಯಾಗಲು ಆಗಲಿಲ್ಲ. ಎರಡೂವರೆ ಗಂಟೆ ಕಾದು ವಾಪಸ್ ಬಂದೆ. ಅವರ ಆಶೀರ್ವಾದ ನನ್ನ ಮೇಲೆ ಇದೆ. ಮತ್ತೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ.”
6/8
ಅಭಿಮಾನಿಗಳಿಗೆ ರಚಿತಾ ರಾಮ್ ಕಿವಿಮಾತು..
ತಮ್ಮ ಹುಟ್ಟುಹಬ್ಬಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ರಚಿತಾ ರಾಮ್ ವಿಶೇಷ ಸಂದೇಶ ನೀಡಿದ್ದಾರೆ.ಯಾರಿಗೂ ಕೆಟ್ಟದ್ದನ್ನು ಮಾಡಬೇಡಿ.. ಜೀವನ ಒಂದೇ ಬಾರಿ ಸಿಗುತ್ತದೆ, ಚೆನ್ನಾಗಿ ಎಂಜಾಯ್ ಮಾಡಿ. ಒಳ್ಳೆಯತನದಿಂದ ದುಡ್ಡು ಮಾಡಿ, ಕೈಲಾದಷ್ಟು ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
7/8
ಚೆನ್ನಾಗಿ ಎಂಜಾಯ್ ಮಾಡಿ
“ಇಷ್ಟೊಂದು ಅಭಿಮಾನಿಗಳು ಬಂದಿದ್ದೀರಿ. ಎಲ್ಲರೂ ಒಳ್ಳೆಯದನ್ನೇ ಮಾಡಿ. ಯಾರು ಯಾರಿಗೂ ಕೆಟ್ಟದ್ದನ್ನು ಮಾಡಬೇಡಿ. ಇರೋದು ಒಂದು ಜೀವನ. ಚೆನ್ನಾಗಿ ಎಂಜಾಯ್ ಮಾಡಿ. ಒಳ್ಳೆಯತನದಲ್ಲಿ ದುಡ್ಡು ಮಾಡಿ, ಕೈಲಾದ ಸಹಾಯ ಮಾಡಿ.”
8/8
ಅಭಿಮಾನಿಗಳಿಗೆ ಹಬ್ಬ
ಒಟ್ಟಿನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹುಟ್ಟುಹಬ್ಬ ಅಭಿಮಾನಿಗಳಿಗೆ ಹಬ್ಬದಂತಾಗಿತ್ತು. ಬೃಹತ್ ಕಟೌಟ್, ಹಾರಗಳ ಅಲಂಕಾರ, ಕೇಕ್ ಕಟಿಂಗ್ ಜೊತೆಗೆ ನೆಚ್ಚಿನ ನಟಿಯ ದರ್ಶನ ಪಡೆದು ಅಭಿಮಾನಿಗಳು ಸಂಭ್ರಮಿಸಿದರು.ಇದೇ ವೇಳೆ ದರ್ಶನ್‌ರನ್ನು ನೆನಪಿಸಿಕೊಂಡ ರಚಿತಾ ರಾಮ್, ಅವರ ಆಶೀರ್ವಾದ ಪಡೆಯುವ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.