• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಒಂದಲ್ಲ.. ಎರಡಲ್ಲ.. ಮೂರು ಮದುವೆ! ಪವನ್ ಕಲ್ಯಾಣ್ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ? ವಿಚ್ಛೇದನಕ್ಕೆ ಅಸಲಿ ಕಾರಣವೇನು?

ಒಂದಲ್ಲ.. ಎರಡಲ್ಲ.. ಮೂರು ಮದುವೆ! ಪವನ್ ಕಲ್ಯಾಣ್ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ? ವಿಚ್ಛೇದನಕ್ಕೆ ಅಸಲಿ ಕಾರಣವೇನು?

Written ByRamya. R. Gowda
Published: Nov 10, 2026, 10:41 IST|Updated: Nov 10, 2026, 10:59 IST
joinshare
ಟಾಲಿವುಡ್‌ನ ಸೂಪರ್‌ ಸ್ಟಾರ್‌ ಹಾಗೂ ಆಂಧ್ರದ ಉಪಮುಖ್ಯಮಂತ್ರಿ ದಾಂಪತ್ಯದಲ್ಲಿ ಒಂದಲ್ಲ ಎರಡಲ್ಲ ಮೂರು ಬಾರಿ ಬಿರುಗಾಳಿ ಎದಿದ್ದೆ. ತನ್ನ ಮೂರನೇ ಹಂಡ್ತಿಯಿಂದಲೂ ಪವನ್‌ ಕಲ್ಯಾಣ್‌ ದೂರವಾಗಿದ್ದಾರೆ.

ಟಾಲಿವುಡ್‌ನ ಸೂಪರ್‌ ಸ್ಟಾರ್‌ ಹಾಗೂ ಆಂಧ್ರದ ಉಪಮುಖ್ಯಮಂತ್ರಿ ದಾಂಪತ್ಯದಲ್ಲಿ ಒಂದಲ್ಲ ಎರಡಲ್ಲ ಮೂರು ಬಾರಿ ಬಿರುಗಾಳಿ ಎದಿದ್ದೆ. ತನ್ನ ಮೂರನೇ ಹಂಡ್ತಿಯಿಂದಲೂ ಪವನ್‌ ಕಲ್ಯಾಣ್‌ ದೂರವಾಗಿದ್ದಾರೆ. ಈ ಮೂವರು ಪತ್ನಿಯರು ಯಾರೂ ವಿಚ್ಚೇದನಕ್ಕೆ ಮೂಲ ಕಾರಣವೇನು ಎಂದು ತಿಳಿಯಲು ಈ ಸ್ಟೋರಿ ಓದಿ. 
 

pavan kalyan divorce1/7

ಪವನ್ ಕಲ್ಯಾಣ್ ಮತ್ತು ನಂದಿನಿ ಅವರ ಪ್ರೇಮ ಜೀವನ ಹೆಚ್ಚು ಕಾಲ ಉಳಿಯಲಿಲ್ಲ.

ಪವನ್ ಕಲ್ಯಾಣ್ ಅವರು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸತ್ಯಾನಂದ್ ನಟನಾ ಶಾಲೆಯಲ್ಲಿ ನಟನೆ ತರಬೇತಿ ಪಡೆದಿದ್ದರು. ಅದೇ ಶಾಲೆಯಲ್ಲಿ ನಂದಿನಿ ಎಂಬ ಯುವತಿಯೂ ವಿದ್ಯಾರ್ಥಿನಿಯಾಗಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದ್ದು, 1997ರಲ್ಲಿ ವಿವಾಹವಾದರು. ವಿಶಾಖಪಟ್ಟಣದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿತ್ತು. ನಂದಿನಿ ಕೂಡ ಶ್ರೀಮಂತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದರು. ಆದರೆ, ಆರಂಭದಲ್ಲಿ ಸುಂದರವಾಗಿದ್ದ ಪವನ್ ಕಲ್ಯಾಣ್ ಮತ್ತು ನಂದಿನಿ ಅವರ ಪ್ರೇಮ ಜೀವನ ಹೆಚ್ಚು ಕಾಲ ಉಳಿಯಲಿಲ್ಲ.
‌pawan kalyan2/7

ಪವನ್ ಕಲ್ಯಾಣ್

ಪವನ್ ಕಲ್ಯಾಣ್ ದೊಡ್ಡ ಸ್ಟಾರ್ ನಟನಾಗಿ ಬೆಳೆಯುತ್ತಿದ್ದ ಸಮಯದಲ್ಲೇ, 2001ರಲ್ಲಿ ನಟಿ ರೇಣು ದೇಸಾಯಿ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದರು. ಇಬ್ಬರೂ ಪ್ರೀತಿಸುತ್ತಾ ಒಟ್ಟಿಗೆ ಜೀವನ ನಡೆಸುತ್ತಿದ್ದರು. 2004ರಲ್ಲಿ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ದಂಪತಿಗೆ ಮೊದಲ ಮಗ ಅಕಿರಾ ಜನಿಸಿದ. ಇದೇ ಸಮಯದಲ್ಲಿ ಪವನ್ ಕಲ್ಯಾಣ್ ಅವರ ಮೊದಲ ಪತ್ನಿ ನಂದಿನಿ, ಪವನ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
pavan kalyan divorce3/7

ಮೊದಲ ಪತ್ನಿಗೆ ವಿಚ್ಛೇದನ ನೀಡದೆಯೇ ಎರಡನೇ ಮದುವೆ

ಮೊದಲ ಪತ್ನಿಗೆ ವಿಚ್ಛೇದನ ನೀಡದೆಯೇ ಎರಡನೇ ಮದುವೆಯಾಗಿದ್ದಾರೆ ಎಂದು ನಂದಿನಿ ಆರೋಪಿಸಿದ್ದರು. ಈ ಸಂಬಂಧ ವಿಶಾಖಪಟ್ಟಣಂ ಕೌಟುಂಬಿಕ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ಪವನ್ ಕಲ್ಯಾಣ್, ತಾವು ರೇಣು ದೇಸಾಯಿಯನ್ನು ವಿವಾಹವಾಗಿಲ್ಲ ಎಂದು ತಿಳಿಸಿದ್ದರು. ಬಳಿಕ ನಂದಿನಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ ಪವನ್ ಕಲ್ಯಾಣ್, 2008ರಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಜೀವನಾಂಶ ನೀಡಿ ವಿಚ್ಛೇದನ ಪಡೆದುಕೊಂಡಿದ್ದರು. ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದ ಬಳಿಕ ನಂದಿನಿ ತಮ್ಮ ಹೆಸರನ್ನು ಜಾನ್ಹವಿ ಎಂದು ಬದಲಾಯಿಸಿಕೊಂಡು, ಡಾ. ಕಲ್ಯಾಣ್ ಎಂಬುವವರನ್ನು ವಿವಾಹವಾದರು ಎನ್ನಲಾಗಿದೆ. ಬಳಿಕ ವಿದೇಶದಲ್ಲಿ ನೆಲೆಸಿದ ಅವರು, ಅಲ್ಲಿ ಆಸ್ಪತ್ರೆಗಳ ಸರಣಿಯನ್ನು (Hospital Chain) ಆರಂಭಿಸಿ, ಸುಮಾರು 400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ ಎಂಬ ವರದಿಗಳಿವೆ
pavan kalyan divorce4/7

ಪವನ್‌ ಕಲ್ಯಾಣ್

2001ರಿಂದ ರೇಣು ದೇಸಾಯಿ ಅವರೊಂದಿಗೆ ಪ್ರೀತಿಯಲ್ಲಿದ್ದ ಪವನ್ ಕಲ್ಯಾಣ್, 2009ರಲ್ಲಿ ಅವರನ್ನು ಅಧಿಕೃತವಾಗಿ ವಿವಾಹವಾದರು. ಈ ದಂಪತಿಗೆ 2010ರಲ್ಲಿ ಹೆಣ್ಣು ಮಗು ಜನಿಸಿತು. ಆದರೆ, ಕಾಲಕ್ರಮೇಣ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತು. ಅಂತಿಮವಾಗಿ 2012ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರವಾದರು. ವಿಚ್ಛೇದನದ ಬಳಿಕವೂ ಪವನ್ ಕಲ್ಯಾಣ್ ಅವರು ತಮ್ಮ ಇಬ್ಬರು ಮಕ್ಕಳು ಹಾಗೂ ರೇಣು ದೇಸಾಯಿ ಅವರಿಗೆ ಜೀವನಾಂಶ ನೀಡುತ್ತಿದ್ದಾರೆ.
Pawan kalyan5/7

“ವಿಚ್ಛೇದನಕ್ಕೆ ನನಗೆ ಒಪ್ಪಿಗೆಯಿರಲಿಲ್ಲ

2018ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೇಣು ದೇಸಾಯಿ, “ವಿಚ್ಛೇದನಕ್ಕೆ ನನಗೆ ಒಪ್ಪಿಗೆಯಿರಲಿಲ್ಲ. ಹಲವು ಬಾರಿ ಬೇಡವೆಂದು ಹೇಳಿದರೂ ಪವನ್ ಕಲ್ಯಾಣ್ ವಿಚ್ಛೇದನ ಪಡೆಯುವಂತೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಇಬ್ಬರೂ ವಿಚ್ಛೇದನ ಪಡೆದಿರುವ ವಿಷಯವನ್ನು ಬಹಿರಂಗಪಡಿಸಬಾರದು ಎಂದೂ ಷರತ್ತು ವಿಧಿಸಿದ್ದರು” ಎಂದು ಹೇಳಿಕೊಂಡಿದ್ದರು.
pavan kalyan divorce6/7

ರೇಣು ದೇಸಾಯಿ ಜೊತೆ ಇದ್ದಾಗಲೇ ಅನ್ನಾ ಪರಿಚಯ

2010ರಲ್ಲಿ ಎರಡನೇ ಪತ್ನಿ ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆಯುವ ಮೊದಲೇ ಪವನ್ ಕಲ್ಯಾಣ್ ‘ತೀನ್ ಮಾರ್’ ಸಿನಿಮಾದ ಚಿತ್ರೀಕರಣಕ್ಕಾಗಿ ರಷ್ಯಾಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಮಾಡೆಲ್ ಅನ್ನಾ ಲೆಜ್ನೋವಾ ಪರಿಚಯವಾಗಿದ್ದರು. ಬಳಿಕ 2012ರಲ್ಲಿ ರೇಣು ದೇಸಾಯಿ ಅವರಿಂದ ವಿಚ್ಛೇದನ ಪಡೆದ ಪವನ್ ಕಲ್ಯಾಣ್, 2013ರಲ್ಲಿ ವಿಶೇಷ ವಿವಾಹ ಕಾಯ್ದೆಯಡಿ (Special Marriage Act) ಅನ್ನಾ ಲೆಜ್ನೋವಾ ಅವರನ್ನು ವಿವಾಹವಾದರು. ಇದೀಗ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯ ಜೀವನವೂ ಮುರಿದುಬಿದ್ದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
pavan kalyan divorce7/7

13 ವರ್ಷಗಳ ದಾಂಪತ್ಯ ಜೀವನಕ್ಕೆ ಪವನ್ ಕಲ್ಯಾಣ್ ಅಂತ್ಯ

ಅನ್ನಾ ಲೆಜ್ನೋವಾ ಹಾಗೂ ಪವನ್ ಕಲ್ಯಾಣ್‌ಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗುತ್ತಿರುವುದಾಗಿ ಪತ್ರದ ಮೂಲಕ ಘೋಷಿಸಿದ್ದಾರೆ. ಈ ಮೂಲಕ 13 ವರ್ಷಗಳ ದಾಂಪತ್ಯ ಜೀವನಕ್ಕೆ ಪವನ್ ಕಲ್ಯಾಣ್ ಅಂತ್ಯ ಹಾಡಿದ್ದಾರೆ. ಆದರೆ, ಪ್ರತ್ಯೇಕತೆಗೆ ನಿಖರವಾದ ಕಾರಣವೇನು ಎಂಬುದನ್ನು ಇಬ್ಬರೂ ಬಹಿರಂಗಪಡಿಸಿಲ್ಲ.
TAGS:
Sandalwood

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.