• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /Ind vs Wi; ಶತಕ ಜಸ್ಟ್‌ ಮಿಸ್‌, ಓಪನರ್‌ ರೋಹಿತ್‌ ಶರ್ಮಾ ಮತ್ತೊಂದು ಮಹತ್ವದ ಮೈಲಿಗಲ್ಲು

Ind vs Wi; ಶತಕ ಜಸ್ಟ್‌ ಮಿಸ್‌, ಓಪನರ್‌ ರೋಹಿತ್‌ ಶರ್ಮಾ ಮತ್ತೊಂದು ಮಹತ್ವದ ಮೈಲಿಗಲ್ಲು

Written ByBhimappa
Published: Oct 03, 2026, 04:52 PM IST|Updated: Oct 03, 2026, 04:57 PM IST
joinshare
ವೆಸ್ಟ್‌ ಇಂಡೀಸ್‌ ಮತ್ತು ಟೀಮ್‌ ಇಂಡಿಯಾ ನಡುವೆ ಪಿಸಿಎ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಈ ಸಾಧನೆ ಮಾಡಿದ್ದಾರೆ.

opener Rohit Sharma reached another significant milestone: ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವೆ ಸರಣಿಯ ಕೊನೆಯ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯುತ್ತಿದ್ದು ರೋಹಿತ್‌ ಶರ್ಮಾ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಓಪನರ್‌ ಬ್ಯಾಟರ್‌ ಆಗಿ 10,000 ರನ್‌ಗಳನ್ನು ಪೂರೈಸಿದ ಭಾರತದ 2ನೇ ಬ್ಯಾಟರ್‌ ಮತ್ತು ವಿಶ್ವದ 4ನೇ ಬ್ಯಾಟರ್‌ ಎನ್ನುವ ಹೆಗ್ಗಳಿಕೆಗೆ ರೋಹಿತ್‌ ಶರ್ಮಾ ಪಾತ್ರರಾಗಿದ್ದಾರೆ. 
 

Rohit Sharma 1/6

ರೋಹಿತ್‌ ಶರ್ಮಾ

ವೆಸ್ಟ್‌ ಇಂಡೀಸ್‌ ಮತ್ತು ಟೀಮ್‌ ಇಂಡಿಯಾ ನಡುವೆ ಪಿಸಿಎ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಈ ಸಾಧನೆ ಮಾಡಿದ್ದಾರೆ. ಈ ಮಹತ್ವದ ದಾಖಲೆ ಮಾಡಲು ರೋಹಿತ್‌ ಶರ್ಮಾಗೆ ಕೇವಲ ಎರಡು ರನ್‌ಗಳು ಮಾತ್ರ ಅವಶ್ಯಕತೆ ಇತ್ತು. ಅದರಂತೆ ರೋಹಿತ್‌ ಶರ್ಮಾ 10,000 ರನ್‌ಗಳನ್ನು ಪೂರೈಸಿದ್ದಾರೆ.
Rohit Sharma 2/6

ರೋಹಿತ್‌ ಶರ್ಮಾ

ರೋಹಿತ್‌ ಶರ್ಮಾ ಅವರು ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಒಡಿಐ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇದರಿಂದ ಓಪನರ್‌ ಆಗಿ ಒಟ್ಟು 203 ಪಂದ್ಯಗಳಿಂದ 201 ಇನ್ನಿಂಗ್ಸ್‌ಗಳಲ್ಲಿ 9,998 ರನ್‌ ಗಳಿಸಿದ್ದರು. ಹತ್ತು ಸಾವಿರ ರನ್‌ಗಳಿಗೆ 2 ರನ್‌ ಬೇಕಿದ್ದವು ಅಷ್ಟೇ. ಅದರಂತೆ ಇಂದು ವೆಸ್ಟ್‌ ಇಂಡೀಸ್‌ ವಿರುದ್ಧ ಭರ್ಜರಿ ಹೊಡಿ ಬಡಿ ಬ್ಯಾಟಿಂಗ್‌ ಮಾಡಿ 92 ರನ್‌ ಗಳಿಸಿ ಔಟಾದರು.
Rohit Sharma 3/6

ರೋಹಿತ್‌ ಶರ್ಮಾ

ಕ್ರಿಕೆಟ್‌ ದೇವ್ರು ಸಚಿನ್‌ ತೆಂಡೂಲ್ಕರ್‌, ಸನತ್‌ ಜಯಸೂರ್ಯ ಮತ್ತು ವೆಸ್ಟ್‌ ಇಂಡೀಸ್‌ ಸ್ಟಾರ್‌ ಕ್ರಿಸ್‌ ಗೇಲ್‌ ಅವರ ಸಾಲಿಗೆ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಅವರು ಸೇರಿಕೊಂಡಿದ್ದಾರೆ. ಈ ಎಲ್ಲ ಕ್ರಿಕೆಟರ್ಸ್‌ ಓಪನರ್‌ ಆಗಿ ಕ್ರೀಸ್‌ಗೆ ಆಗಮಿಸಿ 10,000 ಸಾವಿರ ರನ್‌ಗಳನ್ನು ಪೂರೈಸಿದ ಬ್ಯಾಟ್ಸ್‌ಮನ್‌ಗಳು ಆಗಿದ್ದಾರೆ.
Rohit Sharma 4/6

ರೋಹಿತ್‌ ಶರ್ಮಾ

ಸಚಿನ್‌ ತೆಂಡೂಲ್ಕರ್‌ ಅವರು ಓಪನರ್‌ ಆಗಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. 1994- 2012ರವರೆಗೆ 344 ಒಡಿಐ ಇನ್ನಿಂಗ್ಸ್‌ಗಳಿಂದ 15,310 ರನ್‌ಗಳನ್ನು ಗಳಿಸಿದ್ದಾರೆ. ಇದರ ನಂತರ ಶ್ರೀಲಂಕಾದ ಲೆಜೆಂಡ್‌ ಸನತ್‌ ಜಯಸೂರ್ಯ ಇದ್ದು 383 ಇನ್ನಿಂಗ್ಸ್‌ಗಳಿಂದ 12,740 ರನ್‌ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿ ಕ್ರಿಸ್‌ ಗೇಲ್‌ ಇದ್ದು 274 ಇನ್ನಿಂಗ್ಸ್‌ನಿಂದ 10,179 ರನ್‌ಗಳನ್ನು ಗಳಿಸಿದ್ದಾರೆ.
Rohit Sharma 5/6

ರೋಹಿತ್‌ ಶರ್ಮಾ

ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್‌ ಮಾಡುವ ಮೂಲಕ ಅಬ್ಬರಿಸಿದ್ದಾರೆ. ಪಂದ್ಯದಲ್ಲಿ 85 ಎಸೆತಗಳನ್ನು ಎದುರಿಸಿದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ 10 ಸೊಗಸಾಗ ಬೌಂಡರಿಗಳು ಮತ್ತು 3 ಸಿಕ್ಸರ್‌ಗಳಿಂದ 92 ರನ್‌ಗಳನ್ನ ಗಳಿಸಿದ್ದರು. ಸೆಂಚುರಿ ಹತ್ತಿರ ಇರುವಾಗಲೇ ಕೀಮೊ ಪಾಲ್ ಬೌಲಿಂಗ್‌ನಲ್ಲಿ ಕ್ಯಾಚ್‌ ಕೊಟ್ಟು ಹೊರ ನಡೆದರು.
Rohit Sharma 6/6

ರೋಹಿತ್‌ ಶರ್ಮಾ

ಇನ್ನು ಕಳೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಮತ್ತು ಶುಭ್‌ಮನ್‌ ಗಿಲ್‌ ದೊಡ್ಡ ಪಾರ್ಟನರ್‌ಶಿಪ್‌ನಲ್ಲಿ ಬ್ಯಾಟಿಂಗ್‌ ಮಾಡಿ ತಂಡವನ್ನು ಗೆಲ್ಲಿಸಿದ್ದರು. ಕಳೆದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಕೇವಲ 75 ಎಸೆತಗಳಲ್ಲಿ 101 ರನ್‌ ಗಳಿಸಿದ್ದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್‌ ಶರ್ಮಾ ಅವರು ವೆಸ್ಟ್‌ ಇಂಡೀಸ್‌ ವಿರುದ್ಧ 12,000 ಒಡಿಐ ರನ್‌ಗಳನ್ನು ಪೂರೈಸಿದ್ದರು. ಈ ಸಾಧನೆಯನ್ನು ಮಾಡಿದ ವಿಶ್ವದ 7ನೇ ಬ್ಯಾಟರ್‌ ಆಗಿದ್ದು ಭಾರತದ 3ನೇ ಬ್ಯಾಟ್ಸ್‌ಮನ್‌ ಆಗಿದ್ದಾರೆ.
TAGS:
Cricket

Trending

  • News
  • Photos
  • Videos
ಹಸಿ ಬಾಳೆಹಣ್ಣುಗಳು ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ನೀವು ತಿಳಿದುಕೊಳ್ಳಲೇಬೇಕಾದ ಅದ್ಭುತ ವಿಷಯಗಳು!

ಹಸಿ ಬಾಳೆಹಣ್ಣುಗಳು ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ನೀವು ತಿಳಿದುಕೊಳ್ಳಲೇಬೇಕಾದ ಅದ್ಭುತ ವಿಷಯಗಳು!

2

ಮೈಸೂರು ದಸರಾ ವೈಭವದಂತೆ ಸಿಲಿಕಾನ್‌ ಸಿಟಿಯಲ್ಲೂ ಬೆಂಗಳೂರು ಜಾತ್ರೆ.. 10 ದಿನ ಹಬ್ಬವೋ ಹಬ್ಬ

3

ಫಸ್ಟ್‌ ಇಯರ್ B.Com ವಿದ್ಯಾರ್ಥಿಗೆ ಚಾಕು ಇರಿದು ಕೊ*ಲೆ.. ಈ ಘಟನೆಗೆ ಹುಡುಗಿ ಕಾರಣನಾ?

4

ಲಕ್ಷ್ಮೀದೇವಿಯ ಕೃಪೆ ಬೇಕಾ? ಸಂಜೆ ಹೊಸ್ತಿಲ ಬಳಿ ಈ ಒಂದು ವಸ್ತು ಇಡಿ, ಮನೆಯಲ್ಲಿ ಸುಖ ಸಮೃದ್ಧಿ ಜೊತೆ ಸಂಪತ್ತು ಹರಿದುಬರುತ್ತದೆ

5

"ನಾನು ಮದುವೆಯಾಗಿದ್ದರೂ, ನನ್ನ ಗಂಡನಿಂದ ದೂರವಿದ್ದೇನೆ"

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.