• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /'ನನ್ನ ಕ್ಷಮಿಸಿ ಬಿಡಿ ಅಮ್ಮಾ.. ನಿಮ್ಮ ಮಾತು ಕೇಳಬೇಕಿತ್ತು': ನಭಾ ನಟೇಶ್ ಸಂಚಲನಕಾರಿ ಪೋಸ್ಟ್‌

'ನನ್ನ ಕ್ಷಮಿಸಿ ಬಿಡಿ ಅಮ್ಮಾ.. ನಿಮ್ಮ ಮಾತು ಕೇಳಬೇಕಿತ್ತು': ನಭಾ ನಟೇಶ್ ಸಂಚಲನಕಾರಿ ಪೋಸ್ಟ್‌

Written ByKrishna NK
Published: Nov 22, 2026, 21:22 IST|Updated: Nov 22, 2026, 21:57 IST
joinshare

Nabha Natesh post on mother : ಸಿನಿಮಾ ರಂಗದಲ್ಲಿ ತಮ್ಮ ನಟನೆ ಮತ್ತು ಗ್ಲಾಮರ್ ಮೂಲಕ ಗಮನ ಸೆಳೆದಿರುವ ನಟಿ ನಭಾ ನಟೇಶ್, ಇದೀಗ ತಮ್ಮ ತಾಯಿಯನ್ನು ಉದ್ದೇಶಿಸಿ ಬರೆದಿರುವ ಪೋಸ್ಟ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. ಸಿನಿಮಾ ಸುದ್ದಿಗಳು, ಫೋಟೋಶೂಟ್‌ಗಳ ನಡುವೆ ಅವರು ಹಂಚಿಕೊಂಡಿರುವ ಈ ತಮಾಷೆ ಹಾಗೂ ಭಾವುಕ ಬರಹಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Nabha Natesh1/6

ತಾಯಿಯ ಅನುಭವಕ್ಕೆ ಸಾಟಿಯಿಲ್ಲ

ನಭಾ ನಟೇಶ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಮತ್ತು ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ತಾಯಿಯ ಪ್ರೀತಿ, ಕಾಳಜಿ ಮತ್ತು ಜೀವನಾನುಭವದ ಮುಂದೆ ಗೂಗಲ್ ಅಥವಾ ಸೋಷಿಯಲ್ ಮೀಡಿಯಾದಂತಹ ಯಾವುದೇ ತಂತ್ರಜ್ಞಾನವೂ ಸರಿಸಾಟಿಯಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ತಾಯಿ-ಮಗಳ ನಡುವಿನ ಈ ಆತ್ಮೀಯ ಬಾಂಧವ್ಯದ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
Nabha Natesh2/6

ನಾನು ಮೊದಲೇ ಹೇಳಿದ್ದೆ ಅಲ್ವಾ

ತಮ್ಮ ಪೋಸ್ಟ್‌ನಲ್ಲಿ ನಭಾ ಬಳಸಿರುವ ಹಾಸ್ಯಭರಿತ ಸಾಲುಗಳು ಓದುಗರಲ್ಲಿ ನಗು ತರಿಸುವಂತಿವೆ. ಅಮ್ಮ ಮತ್ತೆ ‘ನಾನು ಮೊದಲೇ ಹೇಳಿದ್ದೆ ಅಲ್ವಾ!’ ಎಂದು ಹೇಳುವ ಮೊದಲೇ ಕ್ಷಮೆ ಕೇಳುತ್ತಿದ್ದೇನೆ ಎಂದು ಅವರು ತಮಾಷೆಯ ಧಾಟಿಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ‘ಅಮ್ಮನಿಗೆ ಎಲ್ಲವೂ ಗೊತ್ತು’ ಮತ್ತು ‘ಕ್ಷಮಿಸು ಅಮ್ಮಾ’ ಎಂಬ ಅರ್ಥ ಬರುವ ಹ್ಯಾಷ್‌ಟ್ಯಾಗ್‌ಗಳನ್ನೂ ಸೇರಿಸಿದ್ದಾರೆ. ಈ ಬರಹಕ್ಕೆ ‘ಅಧಿಕೃತ ಪ್ರಕಟಣೆ’ ಎಂಬ ಶೀರ್ಷಿಕೆ ನೀಡಿರುವುದು ಮತ್ತೊಂದು ವಿಶೇಷವಾಗಿದೆ.
Nabha Natesh3/6

ಅಮ್ಮ ಹೇಳಿದ್ದೇಲ್ಲವೂ ಸರಿಯೇ

ಅಮ್ಮ ಹೇಳಿದ್ದೇ ಸರಿ ಎಂದು ಎಲ್ಲರ ಎದುರು ಒಪ್ಪಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲ. ಆದರೂ ಈ ಬಾರಿ ಮಾತ್ರ ಆ ಸತ್ಯವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಅಮ್ಮನ ಮಾತು ಕೇಳದೆ ತಪ್ಪು ಮಾಡಿದ್ದೇನೆ, ದಯವಿಟ್ಟು ಕ್ಷಮಿಸು ಎಂದು ನಭಾ ಬಹಿರಂಗವಾಗಿಯೇ ಕ್ಷಮೆ ಕೋರಿದ್ದಾರೆ.
Nabha Natesh4/6

ಕೊನೆಗೆ ಅಮ್ಮನ ಬಳಿಯೇ ಬಂದು ನಿಂತೆ

ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಆದಾಗ ತಕ್ಷಣ ತಾಯಿಯನ್ನು ಕೇಳುವ ಬದಲು ಮೊದಲು ಗೂಗಲ್‌ನಲ್ಲಿ ಹುಡುಕುವುದು, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ನೋಡುವುದು, ಸ್ನೇಹಿತರಲ್ಲಿ ವಿಚಾರಿಸುವುದು ಮತ್ತು ಬೇರೆ ಬೇರೆ ಟಿಪ್ಸ್‌ಗಳನ್ನು ಪ್ರಯತ್ನಿಸುವ ಅಭ್ಯಾಸ ತಮಗಿದೆ ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ. ಆದರೆ ಇಷ್ಟೆಲ್ಲ ಮಾಡಿದ ಮೇಲೂ ಕೊನೆಗೆ ಸಲಹೆಗಾಗಿ ಅಮ್ಮನ ಬಳಿಯೇ ಬಂದು ನಿಲ್ಲುತ್ತೇನೆ ಎಂದು ನಟಿ ಬರೆದುಕೊಂಡಿದ್ದಾರೆ.
Nabha Natesh5/6

ಅಮ್ಮನ ಕಿವಿಮಾತು ನಿರ್ಲಕ್ಷಿಸಿದೆ

ಮುಖ್ಯವಾಗಿ ಆರೋಗ್ಯದ ವಿಚಾರದಲ್ಲಿ ತಾಯಿ ನೀಡುತ್ತಿದ್ದ ಕಿವಿಮಾತುಗಳನ್ನು ನಿರ್ಲಕ್ಷಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಏನು ತಿನ್ನಬೇಕು, ಯಾವಾಗ ಮಲಗಬೇಕು, ಅತಿಯಾಗಿ ಯೋಚಿಸುವುದನ್ನು ಯಾವಾಗ ಬಿಡಬೇಕು ಮತ್ತು ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಂಡಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಾಯಿಗೆ ಸಾಕಷ್ಟು ಅನುಭವ ಮತ್ತು ತಿಳಿವಳಿಕೆ ಇದೆ ಎಂದು ನಭಾ ತಿಳಿಸಿದ್ದಾರೆ.
Nabha Natesh6/6

ಎಲ್ಲವೂ ಗೊತ್ತು ಅಂತ ವರ್ತಿಸುತ್ತಿದ್ದೆ

ತಮ್ಮ ತಾಯಿಗೆ ಬರೆದ ಪೋಸ್ಟ್‌ನಲ್ಲಿ ನಭಾ ನಟೇಶ್ ಹಿಂದೆ ತಾವು ನಡೆದುಕೊಂಡ ರೀತಿಯನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಮ್ಮ ಹೇಳುತ್ತಿದ್ದ ಮಾತುಗಳನ್ನು ಮೊದಮೊದಲು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳದೆ, ತನಗೆ ಎಲ್ಲವೂ ಗೊತ್ತು ಎಂಬಂತೆ ವರ್ತಿಸುತ್ತಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ ಈಗ ಕಾಲ ಕಳೆದಂತೆ ಅಮ್ಮ ಹೇಳುತ್ತಿದ್ದ ಮಾತುಗಳ ಹಿಂದಿನ ಸತ್ಯ ಮತ್ತು ಅನುಭವ ಅರ್ಥವಾಗುತ್ತಿದೆ ಎಂದು ಬರೆದಿದ್ದಾರೆ.
TAGS:
Cinema

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಬರದ ತಾಂಡವದ ನಡುವೆ ಅಧಿಕಾರಿಗಳ ಮೋಜು-ಮಸ್ತಿ : ‘ನಾ ಡ್ರೈವರ್’ ಹಾಡಿಗೆ ಹೆಜ್ಜೆ ಹಾಕಿದ ಗದಗ ಡಿಸಿ

ಬರದ ತಾಂಡವದ ನಡುವೆ ಅಧಿಕಾರಿಗಳ ಮೋಜು-ಮಸ್ತಿ : ‘ನಾ ಡ್ರೈವರ್’ ಹಾಡಿಗೆ ಹೆಜ್ಜೆ ಹಾಕಿದ ಗದಗ ಡಿಸಿ

2

ಹಳೆಯ ಲ್ಯಾಪ್‌ಟಾಪ್ ಮಾರುವ ಮುನ್ನ ಎಚ್ಚರ! ಖಾಸಗಿ ಡೇಟಾ ಸೋರಿಕೆ ತಪ್ಪಿಸಲು ತಕ್ಷಣ ಹೀಗೆ ಮಾಡಿ

3

Ind vs Pak: ವೈಭವ್ ಸೂರ್ಯವಂಶಿ ತಲೆಗೆ ಬಡಿದ ವಿಪ್ರಜ್ ನಿಗಮ್ ಕಾಲು! ವಿಡಿಯೋ ನೋಡಿ

4

ಭಾರತದ ಆರ್ಥಿಕತೆಗೆ ಟ್ರಂಪ್ ಫಿದಾ! 7% ಜಿಡಿಪಿ ಬೆಳವಣಿಗೆ ಉಲ್ಲೇಖಿಸಿ ಅಮೆರಿಕದ ಫೆಡ್‌ಗೆ ಖಡಕ್ ಸಂದೇಶ

5

ಹಿರಿಯ ನಾಗರಿಕರಿಗೆ ಎಲ್ಲಿ ಹೆಚ್ಚು ಬಡ್ಡಿ ಆದಾಯ? SBI FD ಅಥವಾ SCSS; ₹10, ₹20, ₹30 ಲಕ್ಷಕ್ಕೆ ಇಲ್ಲಿದೆ ಲೆಕ್ಕಾಚಾರ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.