• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಮಂಗಳೂರಿನ MRPL ನಲ್ಲಿ ಭೀಕರವಾದ ಸ್ಫೋ*ಟ.. ಅಲುಗಾಡಿದ ಮನೆಗಳು, ಕಟ್ಟಡಗಳು

ಮಂಗಳೂರಿನ MRPL ನಲ್ಲಿ ಭೀಕರವಾದ ಸ್ಫೋ*ಟ.. ಅಲುಗಾಡಿದ ಮನೆಗಳು, ಕಟ್ಟಡಗಳು

Written ByBhimappa
Published: Sep 30, 2026, 02:23 PM IST|Updated: Sep 30, 2026, 02:27 PM IST
joinshare
ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಂಆರ್‌ಪಿಎಲ್‌ನ ಆಂತರಿಕ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ.

​​Mangaluru MRPL area: ಮಂಗಳೂರಿನ ಜೋ ಕಟೆ ಬಳಿ ಭಾರೀ ಸ್ಫೋಟ ಸಂಭವಿಸಿದ್ದು ಅದರ ತೀವ್ರತೆಗೆ ಸಮೀಪದ ಮಂಗಳೂರು ಅಂತಾರಾಷ್ಟ್ರೀ ವಿಮಾನ ನಿಲ್ದಾಣದ ಆಡಳಿತ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮನೆ, ಕಟ್ಟಡಗಳು ನಡುಗಿವೆ. ಮಂಗಳೂರಿನ ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ ಆವರಣದಲ್ಲಿ ಈ ಭೀಕರವಾದ ಸ್ಫೋಟ ಸಂಭವಿಸಿದೆ. ಭಯಾನಕವಾದ ಸ್ಫೋಟದ ಶಬ್ಧಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 
 

​​Mangaluru MRPL 1/6

ಮಂಗಳೂರು ಎಂಆರ್‌ಪಿಎಲ್

ಮಂಗಳೂರಿನ ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ ಆವರಣದಲ್ಲಿ ನಡೆದ ಸ್ಫೋಟದ ತೀವ್ರತೆಯ ಪರಿಣಾಮ ವಿಮಾನ ನಿಲ್ದಾಣಕ್ಕೂ ತಟ್ಟಿದೆ. ಸ್ಫೋಟದ ತೀವ್ರತೆಗೆ ಬಜ್ಪೆ ಸಮೀಪದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿಯ ಕಿಟಕಿಗಳು ಶೇಕ್‌ ಆಗೋಗಿವೆ. ಇದು ಸಿಬ್ಬಂದಿ ಮತ್ತು ಪ್ರಯಾಣಿಕರಲ್ಲಿ ಕೆಲ ಸಮಯ ತೀವ್ರ ಆತಂಕವನ್ನು ಸೃಷ್ಟಿ ಮಾಡಿತ್ತು.
​​Mangaluru MRPL 2/6

ಮಂಗಳೂರು ಎಂಆರ್‌ಪಿಎಲ್

ಮಂಗಳೂರಿನ ಆಸುಪಾಸಿನಲ್ಲಿ ಇರುವ ಎಲ್ಲ ಅಗ್ನಿ ಶಾಮಕ ಘಟಕಗಳು ಎಂಆರ್‌ಪಿಎಲ್‌ಗೆ ದೌಡಾಯಿಸಿವೆ. ಸುರಕ್ಷಾ ಕ್ರಮದ ವ್ಯವಸ್ಥೆ ಪರಿಶೀಲನೆ ಮಾಡಲಾಗುತ್ತಿದೆ. ಎಂಆರ್‌ಪಿಎಲ್‌ ಮೂರನೇ ಹಂತದ ಸ್ಥಾನರದಲ್ಲಿ ಬಾಯ್ಲರ್‌ ಸ್ಫೋಟ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಶಬೃ ಜೋರಾಗಿ ಬಂದ ಬೆನ್ನಲ್ಲೇ ದಟ್ಟ ಹೊಗೆ ಕಾಣಿಸಿಕೊಂಡಿರುವುದು ಆತಂಕ ತರಿಸಿತ್ತು.
​​Mangaluru MRPL 3/6

ಮಂಗಳೂರು ಎಂಆರ್‌ಪಿಎಲ್

ಎಂಆರ್‌ಪಿಎಲ್‌ನಲ್ಲಿನ ಹೊಗೆಯು ಜೋಕಟ್ಟೆ ಮತ್ತು ಸುರತ್ಕಲ್‌ ಪ್ರದೇಶಗಳವರೆಗೆ ಆವರಿಸಿತ್ತು. ಏಕಾಏಕಿ ಭಯಾನಕವಾದ ದೊಡ್ಡ ಸ್ಫೋಟದ ಶಬ್ಧದಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಗೊಂಡಿದ್ದಾರೆ. ಈ ಘಟನೆಗೆ ನಿಖರವಾದ ಕಾರಣ ಏನು, ಅನಾಹುತಾ ಪ್ರಮಾಣ ಎಷ್ಟು ಇದೆ, ಏನಾದರೂ ಜೀವ ಹಾನಿಯಾಗಿದೆ ಎಂಬುದರ ಕುರಿತು ಅಧಿಕೃತವಾದ ಮಾಹಿತಿ ಹೊರ ಬರಬೇಕಿದೆ.
​​Mangaluru MRPL4/6

ಮಂಗಳೂರು ಎಂಆರ್‌ಪಿಎಲ್

ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಜೋಕಟ್ಟೆ ಗ್ರಾಮ ಪಂಚಾಯತ್‌ ಕಟ್ಟಡ ಮತ್ತು ಅದರ ಸುತ್ತಮುತ್ತಲಿನ ಮನೆಗಳ ಬಾಗಿಲುಗಳು- ಕಿಟಕಿಗಳು ಅಲುಗಾಡಿವೆ. ಇದರಿಂದ ಮನೆಯಲ್ಲಿದ್ದವರು ಆತಂಕದಿಂದ ಹೊರ ಬಂದಿದ್ದಾರೆ. ಹಲವೆಡೆ ಜೋಡಿಸಿದಂತಹ ಗಾಜುಗಳು ಒಡೆದು ಹೋಗಿ ಕೆಳಗೆ ಬಿದ್ದಿವೆ. ಇದು ಗ್ರಾಮಸ್ಥರಲ್ಲಿ ಭಯ ತರಿಸಿದೆ.
​​Mangaluru MRPL 5/6

ಮಂಗಳೂರು ಎಂಆರ್‌ಪಿಎಲ್

ಸ್ಫೋಟ ಸಂಭವಿಸಿದ ಬೆನ್ನಲ್ಲೇ ಎಂಆರ್‌ಪಿಎಲ್‌ ಘಟಕದಿಂದ ಆಕಾಶದ ಕಡೆಗೆ ದಟ್ಟ ಕಪ್ಪು ಹೊಗೆ ಆವರಿಸಿತ್ತು. ಸುತ್ತಮುತ್ತಲಿನ ಗ್ರಾಮಗಳವರೆಗೆ ಈ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಎಲ್ಲಿ ಏನಾಗಿದೆ ಎಂದು ಜನರು ಆತಂಕಗೊಂಡಿದ್ದಾರೆ. ಕೆಲ ಕಿಲೋ ಮೀಟರ್‌ವರೆಗೆ ಹೊಗೆ ಆವರಿಸಿತ್ತು.
​​Mangaluru MRPL 6/6

ಮಂಗಳೂರು ಎಂಆರ್‌ಪಿಎಲ್

ಇನ್ನು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಂಆರ್‌ಪಿಎಲ್‌ನ ಆಂತರಿಕ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸುರಕ್ಷತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಸ್ಫೋಟದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬರಬೇಕಿದೆ.
TAGS:
Kannada News

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.