• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಮುಖ್ಯಮಂತ್ರಿ ಮಗನ ಮೊದಲ ಸಿನಿಮಾ.. ತಂದೆಯ ಪ್ರತಿಕ್ರಿಯೆ ಏನು, CM ವಿಜಯ್‌ ಪುತ್ರ ಜೇಸನ್ ಹೇಳಿದ್ದೇನು?

ಮುಖ್ಯಮಂತ್ರಿ ಮಗನ ಮೊದಲ ಸಿನಿಮಾ.. ತಂದೆಯ ಪ್ರತಿಕ್ರಿಯೆ ಏನು, CM ವಿಜಯ್‌ ಪುತ್ರ ಜೇಸನ್ ಹೇಳಿದ್ದೇನು?

Reported ByBhimappaEdited ByBhimappa
Published: Sep 17, 2026, 01:45 PM IST|Updated: Sep 17, 2026, 01:55 PM IST
joinshare
ಅಪ್ಪ ಮಹತ್ವದ ಹುದ್ದೆಯಲ್ಲಿ ಇರುವುದರಿಂದ ಸಾಕಷ್ಟು ಕೆಲಸಗಳು ಇವೆ. ಅವರಿಗೆ ಈಗ ಇಡೀ ರಾಜ್ಯದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರವರ ಕೆಲಸದಲ್ಲಿ ಸಿಎಂ ವಿಜಯ್‌ ಅವರು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

CM Vijay, Jason Sanjay; ಸಿಗ್ಮಾ ಸಿನಿಮಾ ಬಿಡುಗಡೆಗೆ ರೆಡಿಯಾಗುತ್ತಿದ್ದು ಇದು ನಿರ್ದೇಶಕ ಜೇಸನ್‌ ಸಂಜಯ್‌ ಅವರ ಚೊಚ್ಚಲ ನಿರ್ದೇಶನವಾಗಿದೆ. ಹೀಗಾಗಿ ಸಿನಿಮಾ ಮೇಲೆ ಜೇಸನ್‌ ಸಂಜಯ್‌ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಯಶಸ್ಸು ಗಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಇಷ್ಟದಿಂದ ಸಿಗ್ಮಾ ಸಿನಿಮಾ ಮಾಡಲಾಗಿದೆಯಂತೆ. ತಮಿಳುನಾಡು ಸಿಎಂ ನಟ ವಿಜಯ್ ಅವರು ಮಗ ಜೇಸನ್‌ ಸಂಜಯ್‌ ಅವರು ಸಿಗ್ಮಾ ಸಿನಿಮಾವನ್ನು ಯಾವ ರೀತಿ ಮಾಡಿದ್ದಾರೆ ಎಂದು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ ಅಂತೆ. ಇದನ್ನು ಸ್ವತಹ ವಿಜಯ್‌ ಮಗ ಜೇಸನ್ ಸಂಜಯ್ ಅವರೇ ರಿವೀಲ್‌ ಮಾಡಿದ್ದಾರೆ.      
 

CM Vijay, Jason Sanjay 1/6

ಸಿಎಂ ವಿಜಯ್‌, ಜೇಸನ್‌ ಸಂಜಯ್

ಸಿನಿಮಾ ನಿರ್ದೇಶನಕ್ಕೆ ಇಳಿಯುವ ಮೊದಲು ನನ್ನ ತಂದೆ, ತಾಯಿ, ಸಹೋದರಿ ಮತ್ತು ಸ್ನೇಹಿತರೊಂದಿಗೆ ಈ ಬಗ್ಗೆ ಚರ್ಚೆ ಮಾಡಿದ್ದೆ. ಎಲ್ಲರೂ ಸಕಾರಾತ್ಕವಾಗಿ ಪ್ರತಿಕ್ರಿಯಿಸಿದರು. ಅವರು ಸಾಕಷ್ಟು ಶಕ್ತಿ ಕೂಡ ಕೊಟ್ಟರು. ಇವರಿಗೆಲ್ಲ ನನ್ನ ಮೇಲೆ ಬಹಳಷ್ಟಿ ನಂಬಿಕೆ ಇತ್ತು. ಸಿಗ್ಮಾ ಶೂಟಿಂಗ್ ಪ್ರಾರಂಭವಾದಾಗ ನಟ ವಿಜಯ್ ಸೇತುಪತಿ ಸರ್, ಸೂರಿ ಸರ್ ಮತ್ತು ಇತರರು ನನಗೆ ಶುಭ ಹಾರೈಸಿದರು. ನನ್ನ ಮೇಲೆ ಅನೇಕ ಜನರ ಆಶೀರ್ವಾದವೂ ಇದೆ ಎಂದು ಸಿಎಂ ವಿಜಯ್‌ ಅವರ ಪುತ್ರ ಜೇಸನ್‌ ಸಂಜಯ್‌ ಅವರು ಹೇಳಿದ್ದಾರೆ.
CM Vijay, Jason Sanjay 2/6

ಸಿಎಂ ವಿಜಯ್‌, ಜೇಸನ್‌ ಸಂಜಯ್

ಕಾಲಿವುಡ್‌ನ ಖ್ಯಾತ ನಟರಾಗಿದ್ದವರು ಈಗ ತಮಿಳುನಾಡಿನ ಮುಖ್ಯಮಂತ್ರಿ ಆದಾಗ ನಿಮ್ಮ ಪ್ರತಿಕ್ರಿಯೆ ಏನು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರ ಕೊಟ್ಟ ಜೇಸನ್‌ ಸಂಜಯ್‌ ಅವರು, ಅಪ್ಪ ಸಿಎಂ ಎಂದರೆ ಯಾರಿಗೆ ಖುಷಿ ಇರಲ್ಲ ಹೇಳಿ. ನನಗೆ ತುಂಬಾ ಸಂತೋಷವಾಯಿತು. ಅದೊಂದು ಅದ್ಭುತವಾದ ಕ್ಷಣವಾಗಿತ್ತು. ಚೊಚ್ಚಲ ಪ್ರಯತ್ನದಲ್ಲಿಯೇ ಯಶಸ್ಸು ಗಳಿಸುವುದು ಸಾಮಾನ್ಯವಲ್ಲ. ನನಗೆ ಒಬ್ಬನಿಗೆ ಅಲ್ಲ, ವಿಜಯ್‌ ಸುತ್ತಮುತ್ತಲಿನ ಎಲ್ಲರಿಗೂ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
CM Vijay, Jason Sanjay 3/6

ಸಿಎಂ ವಿಜಯ್‌, ಜೇಸನ್‌ ಸಂಜಯ್

ಸಿಗ್ಮಾ ಸಿನಿಮಾ ಕುರಿತು ವಿಜಯ್‌ ಅವರು ಸಾಕಷ್ಟು ಕುತೂಹಲದಿಂದ ಇದ್ದಾರೆ. ನಾನು ಮೊದಲ ಸಿನಿಮಾ ಹೇಗೆ ಮಾಡಿದ್ದೇನೆ ಎಂದು ನೋಡಲು ಕಾಯುತ್ತಿದ್ದಾರೆ. ಸದ್ಯ ಸಿಗ್ಮಾ ಸಿನಿಮಾದ ಪ್ರಚಾರ ಕಾರ್ಯಕ್ರಮಗಳು ನಡೆಯುತ್ತಿವೆ. ಬಿಡುಗಡೆಯಾದ ಮೇಲೆ ನನ್ನ ಬಳಿ ಏನು ಹೇಳಿದರು ಎಂದು ನಾನು ನಿಮಗೆ ವಿವರಿಸುತ್ತೇನೆ ಎಂದಿದ್ದಾರೆ.
CM Vijay, Jason Sanjay 4/6

ಸಿಎಂ ವಿಜಯ್‌, ಜೇಸನ್‌ ಸಂಜಯ್

ಸಿನಿಮಾದ ಪ್ರಚಾರ ಸಂಪೂರ್ಣವಾಗಿ ನಾನೇ ಮಾಡಲು ಬಯಸುತ್ತಿದ್ದೇನೆ. ಅಪ್ಪ ಮಹತ್ವದ ಹುದ್ದೆಯಲ್ಲಿ ಇರುವುದರಿಂದ ಸಾಕಷ್ಟು ಕೆಲಸಗಳು ಇವೆ. ಅವರಿಗೆ ಈಗ ಇಡೀ ರಾಜ್ಯದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರವರ ಕೆಲಸದಲ್ಲಿ ಸಿಎಂ ವಿಜಯ್‌ ಅವರು ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
CM Vijay, Jason Sanjay 5/6

ಸಿಎಂ ವಿಜಯ್‌, ಜೇಸನ್‌ ಸಂಜಯ್

ಸಿಗ್ಮಾ ಸಿನಿಮಾದ ಪ್ರಚಾರದಲ್ಲಿ ಸಿಎಂ ವಿಜಯ್‌ ಅವರು ಭಾಗಿಯಾಗುತ್ತಾರಾ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರ ನೀಡಿದ ಜೇಸನ್‌ ಸಂಜಯ್‌ ಅವರು, ಅಪ್ಪ ವಿಜಯ್ ಅವರು ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲ. ಎಲ್ಲಾ ಪ್ರಚಾರಗಳಿಂದ ತಂದೆಯನ್ನು ದೂರವಿಡಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.
CM Vijay, Jason Sanjay 6/6

ಸಿಎಂ ವಿಜಯ್‌, ಜೇಸನ್‌ ಸಂಜಯ್

ಸಂದರ್ಶನವೊಂದರಲ್ಲಿ ಮಾತನಾಡಿರುವ ತಮಿಳುನಾಡು ಸಿಎಂ ವಿಜಯ್ ಅವರ ಮಗ ಜೇಸನ್‌ ಸಂಜಯ್‌ ಅವರು, ಸಿನಿಮಾದಲ್ಲಿ ಯಾವುದೇ ರೀತಿಯಲ್ಲೂ ತಂದೆ ವಿಜಯ್‌ ಅವರು ಪಾಲ್ಗೊಂಡಿಲ್ಲ. ಆದರೆ ನಾನು ಮಾಡಿದ ಸಿನಿಮಾ ಹೇಗಿದೆ ಎಂದು ನೋಡಲು ಕಾತುರದಿಂದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆ ಬಳಿಕ ಏನು ಹೇಳಲಿದ್ದಾರೆ ಅಂತ ಗೊತ್ತಾಗಲಿದೆ ಎಂದು ಜೇಸನ್‌ ಸಂಜಯ್‌ ಅವರು ಹೇಳಿದ್ದಾರೆ.
TAGS:
Cinema

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.