• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಕೊನೆ ವಿಶ್ವಕಪ್‌.. ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಶಾಕಿಂಗ್‌ ಸ್ಟೇಟ್‌ಮೆಂಟ್‌!

ಕೊನೆ ವಿಶ್ವಕಪ್‌.. ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಶಾಕಿಂಗ್‌ ಸ್ಟೇಟ್‌ಮೆಂಟ್‌!

Written ByBhimappa
Published: Sep 26, 2026, 03:39 PM IST|Updated: Sep 26, 2026, 03:48 PM IST
joinshare
2027ರ ವಿಶ್ವಕಪ್‌ ಗೆಲ್ಲುವುದು ನಮ್ಮ ಮುಖ್ಯ ಗುರಿ ಆಗಿದೆ. ಅದಕ್ಕಾಗಿ ಏನು ಬೇಕಾದರೂ ಆಡಲು ನಾನು ಸಂಪೂರ್ಣವಾಗಿ ಸಿದ್ಧನಿದ್ದೇನೆ. ಇದೇ ವಿಶ್ವಕಪ್‌ ನನ್ನ ಕೊನೆ ವರ್ಲ್ಡ್‌ಕಪ್‌ ಆಗಲಿದೆ ಎಂದು ಹೇಳಿದ್ದಾರೆ.

Virat Kohli massive statement: ಟೀಮ್‌ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್‌ ನಡುವೆ 3 ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಆರಂಭವಾಗಲಿದೆ. ಇದಕ್ಕಿಂತ ಮೊದಲೇ ಭಾರತ ತಂಡದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಅವರು, ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಇದು ವಿರಾಟ್‌ ಕೊಹ್ಲಿ ಅವರ ಅಭಿಮಾನಿಗಳಿಗೆ ಬೇಸರ ತರಿಸೋ ನ್ಯೂಸ್‌ ಎಂದು ಹೇಳಬಹುದು. ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಗೂ ಒಂದಿನ ಮೊದಲೇ ವಿರಾಟ್‌ ಕೊಹ್ಲಿ ಅವರು ಮುಂದಿನ ವಿಶ್ವಕಪ್‌ ಟೂರ್ನಿಯೇ ಕೊನೆ ಎಂದು ಬಹಿರಂಗವಾಗಿ ಹೇಳಿದ್ದಾರೆ. 
 

Virat Kohli World Cup 1/6

ವಿರಾಟ್‌ ಕೊಹ್ಲಿ ವಿಶ್ವಕಪ್

ಇನ್ನು ನಾಳೆಯಿಂದ ನಡೆಯುವ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದನ ಸರಣಿ ಬಗ್ಗೆ ಹೇಳುವುದಾದರೆ, ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್‌ 27 ರಂದು ನಡೆಯಲಿದೆ. 2ನೇ ಪಂದ್ಯ ಸೆಪ್ಟೆಂಬರ್‌ 30 ರಂದು ಮತ್ತು ಕೊನೆಯ ಅಂತಿಮ ಏಕದಿನ ಪಂದ್ಯ ಅಕ್ಟೋಬರ್‌ 3 ರಂದು ನಡೆಯಲಿದೆ. ಈ ಸರಣಿಯಲ್ಲಿ ಟೀಮ್‌ ಇಂಡಿಯಾದ ಪ್ರದರ್ಶನದ ಮೇಲೆ ವಿಶ್ವದ ಗಮನ ನೆಟ್ಟಿದೆ. ಏಕೆಂದರೆ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಅವರು ಇದ್ದಾರೆ.
Virat Kohli World Cup 2/6

ವಿರಾಟ್‌ ಕೊಹ್ಲಿ ವಿಶ್ವಕಪ್

2027ರ ವಿಶ್ವಕಪ್‌ ಗೆಲ್ಲುವುದು ನಮ್ಮ ಮುಖ್ಯ ಗುರಿ ಆಗಿದೆ. ಅದಕ್ಕಾಗಿ ಏನು ಬೇಕಾದರೂ ಆಡಲು ನಾನು ಸಂಪೂರ್ಣವಾಗಿ ಸಿದ್ಧನಿದ್ದೇನೆ. ಇದೇ ವಿಶ್ವಕಪ್‌ ನನ್ನ ಕೊನೆ ವರ್ಲ್ಡ್‌ಕಪ್‌ ಆಗಲಿದೆ ಎಂದು ಹೇಳಿದ್ದಾರೆ. ಇನ್ನು ವಿರಾಟ್‌ ಕೊಹ್ಲಿ ಅವರು ಈಗಾಗಲೇ ಟೆಸ್ಟ್‌ ಕ್ರಿಕೆಟ್‌ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು ವರ್ಷಗಳು ಕಳೆಯುತ್ತಿವೆ. ಮುಂದಿನ ಒಡಿಐ ವಿಶ್ವಕಪ್‌ ಬಳಿಕ ವಿರಾಟ್‌ ಕೊಹ್ಲಿ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಇದರಿಂದ ಗೊತ್ತಾಗಲಿದೆ.
Virat Kohli World Cup 3/6

ವಿರಾಟ್‌ ಕೊಹ್ಲಿ ವಿಶ್ವಕಪ್

ವಿಶ್ವಕಪ್‌ ಟೂರ್ನಿ ವಿದೇಶಗಳಲ್ಲಿ ನಡೆಯುತ್ತಿದ್ದರಿಂದ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಶ್ರಮ ವಹಿಸಬೇಕು. ಅದರಂತೆ ನನ್ನ ಪಾಲಿಗೆ ಇದು ಭಾರತ ತಂಡದ ಪರವಾಗಿ ಆಡುವ ಕೊನೆಯ ವಿಶ್ವಕಪ್‌ ಆಗಲಿದೆ. ಇದೇ ನನಗೆ ದೊಡ್ಡ ಪ್ರೇರಣೆ ನೀಡಲಿದೆ. ಎಲ್ಲವನ್ನು ಬಿಟ್ಟು ಮೈದಾನದಲ್ಲಿ ಸಾಧ್ಯವಾದಷ್ಟು ಉತ್ತಮ ಪರ್ಫಾಮೆನ್ಸ್‌ ನೀಡುವ ಉದ್ದೇಶ ನನ್ನದು ಎಂದಿದ್ದಾರೆ.
Virat Kohli World Cup 4/6

ವಿರಾಟ್‌ ಕೊಹ್ಲಿ ವಿಶ್ವಕಪ್

ಏಕದಿನ ಅಥವಾ 50 ಓವರ್‌ಗಳ ವಿಶ್ವಕಪ್‌ ತೀವ್ರತೆ ಬೇರೆ ಯಾವುದಕ್ಕೆ ಹೋಲಿಕೆ ಮಾಡಲು ಆಗುವುದಿಲ್ಲ. ಏಕೆಂದರೆ ಈಗಿನ 10 ಪಂದ್ಯಗಳನ್ನು ಟಿ20 ಮಟ್ಟದ ಪಂದ್ಯದ ತೀವ್ರತೆಯಲ್ಲಿ ಆಡಬೇಕಾಗುತ್ತದೆ. ಒಂದೇ ದಿನದಲ್ಲಿ ಎರಡುವರೆ ಟಿ20 ಪಂದ್ಯಗಳನ್ನು ಆಡಿದಷ್ಟು ಒತ್ತಡ, ತೀವ್ರತೆ ಎದುರಿಸಬೇಕಾಗುತ್ತೆ. ವಿಶ್ವಕಪ್‌ನಲ್ಲಿ 10 ಪಂದ್ಯಗಳವರೆಗೆ ಒಂದೇ ರೀತಿಯ ತೀವ್ರತೆ ಕಾಪಾಡಿಕೊಳ್ಳುವುದು ಚಾಲೆಂಜ್‌ ಆಗಿದೆ.
Virat Kohli World Cup 5/6

ವಿರಾಟ್‌ ಕೊಹ್ಲಿ ವಿಶ್ವಕಪ್

ಈ ಮಹತ್ವದ ಪಂದ್ಯ ಆರಂಭಕ್ಕೂ ಒಂದಿನ ಮೊದಲೇ ಮಾತನಾಡಿದ ವಿರಾಟ್‌ ಕೊಹ್ಲಿ ಅವರು, ಮುಂದಿನ 2027ರ ವಿಶ್ವಕಪ್‌ ಟೂರ್ನಮೆಂಟ್‌ ನನ್ನ ಕೊನೆಯ ಟೂರ್ನಿ ಆಗಲಿದೆ. ಇನ್ನು ಮುಂದುವರೆದು ಮಾತನಾಡಿದ ವಿರಾಟ್‌ ಕೊಹ್ಲಿ ಅವರು ಏಕದಿನ ವಿಶ್ವಕಪ್‌ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹತ್ತು ಟಿ20 ಪಂದ್ಯಗಳಿಗಿಂತ ಒಂದು ಏಕದಿನ ಪಂದ್ಯ ಹೆಚ್ಚು ಒತ್ತಡದ ಇರುತ್ತದೆ ಎಂದಿದ್ದಾರೆ.
Virat Kohli World Cup 6/6

ವಿರಾಟ್‌ ಕೊಹ್ಲಿ ವಿಶ್ವಕಪ್

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್‌ 27 ಅಂದರೆ ನಾಳೆ ಮಧ್ಯಾಹ್ನ 2 ಗಂಟೆಯಿಂದ ಕೇರಳದ ತಿರುವನಂತಪುರದಲ್ಲಿ ಆರಂಭವಾಗಲಿದೆ. ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರು ತಂಡಕ್ಕೆ ಮರಳಿದ್ದರಿಂದ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಸರಣಿಯೂ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರಿಗೆ ಅತ್ಯಮೂಲ್ಯವಾಗಿದೆ.
TAGS:
Virat Kohli

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.