ಭಾರತದ ಮಹಿಳಾ ಕಬಡ್ಡಿ ತಂಡವೂ 2026ರ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಇರಾನ್ ಮಹಿಳಾ ತಂಡವನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.
Indian womens, mens kabaddi teams gold hunt: 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಕಬ್ಬಡ್ಡಿ ತಂಡಗಳು ಗೋಲ್ಡ್ ಮೆಡೆಲ್‌ಗೆ ಮುತ್ತಿಟ್ಟಿವೆ. ಫೈನಲ್ ಪಂದ್ಯಗಳಲ್ಲಿ ಅಮೋಘವಾದ ಪ್ರದರ್ಶನ ನೀಡಿದ ಆಟಗಾರರು ಕೊನೆಗೆ ಜಯಭೇರಿ ಬಾರಿಸುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈ ಪುರುಷ ಮತ್ತು ಮಹಿಳಾ ಕಬಡ್ಡಿ ತಂಡಗಳ ಮತ್ತೊಂದು ವಿಶೇಷ ಎಂದರೆ ಫೈನಲ್ ಪಂದ್ಯದಲ್ಲಿ ಎರಡು ಪಂದ್ಯಗಳು ಇರಾನ್ ದೇಶದ ತಂಡಗಳನ್ನೇ ಸೋಲಿಸಿ ಚಿನ್ನಕ್ಕೆ ಕೊರೊಳೊಡ್ಡಿವೆ.
1/6
ಏಷ್ಯನ್ ಗೇಮ್ಸ್ ಕಬಡ್ಡಿ
ಜಪಾನ್‌ನಲ್ಲಿ ಏಷ್ಯನ್ ಗೇಮ್ಸ್ ಆಡುತ್ತಿರುವ ಭಾರತೀಯ ಆಟಗಾರರು ಇದುವರೆಗೆ ಕೇವಲ 4 ಬಂಗಾರದ ಪದಕ ಗೆದ್ದುಕೊಂಡಿದೆ. ಇದರಲ್ಲಿ ಟೀಮ್ ಇಂಡಿಯಾ ಕ್ರಿಕೆಟ್ 1 ಚಿನ್ನದ ಪದಕ, ಕಬಡ್ಡಿ 2 ಗೋಲ್ಡ್ ಮೆಡೆಲ್ ಮತ್ತು ಶೂಟಿಂಗ್‌ನಲ್ಲಿ 1 ಚಿನ್ನದ ಪದಕ ಒಲಿದು ಬಂದಿದೆ. ಉಳಿದವುಗಳು ಸಿಲ್ವರ್, ಕಂಚಿನ ಪದಕಗಳು ಆಗಿವೆ.
2/6
ಏಷ್ಯನ್ ಗೇಮ್ಸ್ ಕಬಡ್ಡಿ
ಇವತ್ತು ಏಷ್ಯನ್ ಗೇಮ್ಸ್‌ನಲ್ಲಿ ಇಡೀ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಕಬಡ್ಡಿ, ಸ್ವ್ಕಾಷ್ ಮತ್ತು ಅಥ್ಲಿಟಿಕ್ಸ್‌ನಲ್ಲಿ ಅದ್ಭುತವಾದ ಪರ್ಫಾಮೆನ್ಸ್ ನೀಡಿದ ಭಾರತದ ಕಬಡ್ಡಿ ತಂಡ ಪ್ರಸ್ತುತ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೆ 4 ಗೋಲ್ಡ್ ಮೆಡೆಲ್, 11 ಸಿಲ್ವರ್ ಮೆಡೆಲ್‌ಗಳು ಮತ್ತು 13 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಒಟ್ಟು 28 ಪದಕಗಳನ್ನು ಭಾರತ ತನ್ನದಾಗಿಸಿಕೊಂಡಿದೆ.
3/6
ಏಷ್ಯನ್ ಗೇಮ್ಸ್ ಕಬಡ್ಡಿ
ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಫೈನಲ್ ಪಂದ್ಯವು ಟೋಕೈ ಸಿಟಿಜನ್ಸ್ ಜಿಮ್ನಾಷಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಇರಾನ್ ಮಹಿಳಾ ತಂಡವನ್ನು 37- 34 ಪಾಯಿಂಟ್‌ಗಳಿಂದ ಸೋಲಿಸುವ ಮೂಲಕ ಭಾರತದ ಮಹಿಳಾ ಕಬಡ್ಡಿ ತಂಡ ಚಿನ್ನದ ಪದಕಕ್ಕೆ ಕೊರೊಳೊಡ್ಡಿತು. ಮೊದಲ ಭಾಗದಲ್ಲಿ ಪ್ರದರ್ಶನ ನೀಡದ ಭಾರತ ತಂಡ, ಎರಡನೇ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿದು ಇರಾನ್‌ಗೆ ಸೋಲುಣಿಸಿತು.
4/6
ಏಷ್ಯನ್ ಗೇಮ್ಸ್ ಕಬಡ್ಡಿ
ಇನ್ನು ಭಾರತದ ಮಹಿಳಾ ಕಬಡ್ಡಿ ತಂಡವೂ 2026ರ ಏಷ್ಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಇರಾನ್ ಮಹಿಳಾ ತಂಡವನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಭಾರತ ಮಹಿಳಾ ತಂಡ ಗೆಲುವು ಪಡೆದ ಬೆನ್ನಲ್ಲೇ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಭಾರತದ ಮಹಿಳಾ ಕಬಡ್ಡಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
5/6
ಏಷ್ಯನ್ ಗೇಮ್ಸ್ ಕಬಡ್ಡಿ
ಇದುವರೆಗೆ ನಡೆದಿರುವ 10 ಏಷ್ಯನ್ ಕ್ರೀಡಾಕೂಟದ ಪುರುಷರ ಕಬಡ್ಡಿ ಪ್ರಶಸ್ತಿಗಳಲ್ಲಿ ಇದುವರೆಗೆ ಭಾರತ ತಂಡ 9 ಪ್ರಶಸ್ತಿಗಳಿಗೆ ಕೊರೊಳೊಡ್ಡಿದೆ. 2018 ರಲಿ ಜಕಾರ್ತಾ ಪ್ರಶಸ್ತಿಯನ್ನು ಇರಾನ್ ಪಾಲು ಆಯಿತು. ಇದು ಬಿಟ್ಟರೇ ಉಳಿದ ಪ್ರಶಸ್ತಿಗಳನ್ನು ಭಾರತ ಪಡೆದುಕೊಂಡಿದೆ.
6/6
ಏಷ್ಯನ್ ಗೇಮ್ಸ್ ಕಬಡ್ಡಿ
ಜಪಾನ್‌ನ ಐಚಿಯ ಟೋಕೈ ಸಿಟಿಜನ್ ಜಿಮ್ನಾಷಿಯಂನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ತಂಡವೂ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ತಂಡವನ್ನು ಮಣಿಸಿತು. 40- 34 ಪಾಯಿಂಟ್‌ಗಳೊಂದಿಗೆ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಕಬಡ್ಡಿ ತಂಡವೂ 9ನೇ ಸಲ ಖಂಡಾಂತರ ಕಿರೀಟವನ್ನು ಗೆದ್ದು ಸಂಭ್ರಮಿಸಿತು.