ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ ಪಟ್ಟಿಯಲ್ಲಿ ಈಗ ವೆಸ್ಟ್ ಇಂಡೀಸ್ 3ನೇ ಸ್ಥಾನ ಪಡೆದುಕೊಂಡಿದೆ. 2019 ರಲ್ಲಿ ಆಸ್ಟ್ರೇಲಿಯಾವೂ ಭಾರತ ನೀಡಿದ 359 ರನ್‌ಗಳ ಗುರಿ ಮುಟ್ಟಿತ್ತು.
India vs West Indies ODI match, Several records: ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಗೆದ್ದುಕೊಂಡರೂ ಕೊನೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಜಯಭೇರಿ ಬಾರಿಸಿ ದಾಖಲೆಯನ್ನು ಮಾಡಿದೆ. ಬರೋಬ್ಬರಿ 352 ರನ್‌ಗಳ ಬಿಗ್ ಟಾರ್ಗೆಟ್ ಅನ್ನು ಚೇಸ್ ಮಾಡಿದ ವೆಸ್ಟ್ ಇಂಡೀಸ್ ಇನ್ನು 8 ಬಾಲ್ ಬಾಕಿ ಇರುವಾಗಲೇ ವಿಜಯದ ನಗೆ ಬೀರಿತು. ಕ್ಯಾಪ್ಟನ್ ಸಾಯಿ ಹೋಪ್ ಅವರ ಅಜೇಯ 162 ರನ್‌ಗಳು ಈ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವು. ಸದ್ಯ ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯದಲ್ಲಿ ಮೂಡಿ ಬಂದ ಕೆಲವು ದಾಖಲೆಗಳು ಇಲ್ಲಿವೆ.
1/6
ಕೆಎಲ್ ರಾಹುಲ್ ಸಾಯಿ ಹೋಪ್
ಕ್ಯಾಪ್ಟನ್ ಶುಭ್‌ಮನ್ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 334 ರನ್ ಗಳಿಸಿ 7ನೇ ಸಲ ಪ್ಲೇಯರ್ ಆಫ್ ದೀ ಸೀರೀಸ್ ಪ್ರಶಸ್ತಿಗೆ ಭಾಜನರಾದರು. ಇದರಿಂದ ಧೋನಿ, ಸೌರವ್ ಗಂಗೂಲಿ, ಯುವರಾಜ್ ಸಿಂಗ್ ಅವರ ಸಾಲಿಗೆ ಶುಭ್‌ಮನ್ ಗಿಲ್ ಸೇರ್ಪಡೆ ಆಗಿದ್ದಾರೆ. ಸಚಿನ್ 15, ಕೊಹ್ಲಿ 11 ಸಲ ಪ್ಲೇಯರ್ ಆಫ್ ದೀ ಸೀರೀಸ್ ಪ್ರಶಸ್ತಿ ಪಡೆದು ಮೊದಲ ಎರಡು ಸ್ಥಾನ ಪಡೆದುಕೊಂಡಿದ್ದಾರೆ.
2/6
ಕೆಎಲ್ ರಾಹುಲ್ ಸಾಯಿ ಹೋಪ್
ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಅತ್ಯಂತ ಯಶಸ್ವಿಯಾದ ಚೇಸಿಂಗ್ ದಾಖಲೆ ಇದಾಗಿದೆ. ವೆಸ್ಟ್ ಇಂಡೀಸ್ ಕಳೆದ 50 ವರ್ಷಗಳಿಂದ ಒಂದು ಬಾರಿಯೂ 350ಕ್ಕಿಂತ ಹೆಚ್ಚಿನ ರನ್‌ಗಳ ಟಾರ್ಗೆಟ್ ಮಾಡಿರಲಿಲ್ಲ. ಆದರೆ ಭಾರತದ ನೆಲದಲ್ಲಿಯೇ ಟೀಮ್ ಇಂಡಿಯಾವನ್ನು 352 ರನ್‌ಗಳ ಬಿಗ್ ಟಾರ್ಗೆಟ್ ಮಾಡಿ ಸೋಲಿಸಿ ಐತಿಹಾಸಿಕ ದಾಖಲೆಗೆ ಕಾರಣವಾಗಿದೆ.
3/6
ಕೆಎಲ್ ರಾಹುಲ್ ಸಾಯಿ ಹೋಪ್
ಟೀಮ್ ಇಂಡಿಯಾ ವಿರುದ್ಧ ಅತಿ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದ ಪಟ್ಟಿಯಲ್ಲಿ ಈಗ ವೆಸ್ಟ್ ಇಂಡೀಸ್ 3ನೇ ಸ್ಥಾನ ಪಡೆದುಕೊಂಡಿದೆ. 2019 ರಲ್ಲಿ ಆಸ್ಟ್ರೇಲಿಯಾವೂ ಭಾರತ ನೀಡಿದ 359 ರನ್‌ಗಳ ಗುರಿ ಮುಟ್ಟಿತ್ತು. ಅದರಂತೆ 2025 ರಲ್ಲಿ ದಕ್ಷಿಣ ಆಫ್ರಿಕಾ ಕೂಡ 359 ರನ್‌ಗಳ ಗುರಿ ಮುಟ್ಟಿ ದಾಖಲೆ ಬರೆದಿತ್ತು. ಇದೀಗ ವೆಸ್ಟ್ ಇಂಡೀಸ್ ಬೃಹತ್ ಸ್ಕೋರ್ ಅನ್ನ ತಲುಪಿದೆ.
4/6
ಕೆಎಲ್ ರಾಹುಲ್ ಸಾಯಿ ಹೋಪ್
ಬೃಹತ್ ಸ್ಕೋರ್ ಅನ್ನು ಚೇಸ್ ಮಾಡುವಾಗ ವೆಸ್ಟ್ ಇಂಡೀಸ್ ಪರವಾಗಿ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ ಕ್ಯಾಪ್ಟನ್ ವೆಸ್ಟ್ ಇಂಡೀಸ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಸಾಯಿ ಹೋಪ್ ನಿನ್ನೆ 162 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದಕ್ಕಿಂತ ಮೊದಲು 2019ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ರಿಸ್ ಗೇಲ್ ಅವರು 162 ರನ್ ಗಳಿಸಿ ಮೊದಲಿಗರು ಆಗಿದ್ದರು. 1993 ರಲ್ಲಿ ಪಾಕ್ ವಿರುದ್ಧ ಬ್ರಯನ್ ಲಾರಾ 153 ರನ್ ಗಳಿಸಿದ್ದರು.
5/6
ಕೆಎಲ್ ರಾಹುಲ್ ಸಾಯಿ ಹೋಪ್
ಇನ್ನು ಭಾರತದ ವಿರುದ್ಧ ಒಡಿಐ ಕ್ರಿಕೆಟ್‌ನಲ್ಲಿ ರನ್ ಚೇಸ್ ಮಾಡುವಾಗ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು ಎಂದರೆ, ಸಾಯಿ ಹೋಪ್ 162 ರನ್, ಶ್ರೀಲಂಕಾದ ತಿಲಕ್‌ರತ್ನೆ ದಿಲ್ಶಾನ್ ರಾಜ್‌ಕೋಟ್‌ನಲ್ಲಿ 2009ರಲ್ಲಿ 160 ರನ್ ಗಳಿಸಿದ್ದರು. 2011 ರಲ್ಲಿ ಆಂಡ್ರೆ ಸ್ಟ್ರಾಸ್ ಬೆಂಗಳೂರಿನಲ್ಲಿ 158 ರನ್ ಗಳಿಸಿದ್ದರು.
6/6
ಕೆಎಲ್ ರಾಹುಲ್ ಸಾಯಿ ಹೋಪ್
ಏಕದಿನ ಕ್ರಿಕೆಟ್‌ನಲ್ಲಿ ಒಂದು ಪಂದ್ಯದಲ್ಲಿ ಎರಡು ತಂಡಗಳ ವಿಕೆಟ್ ಕೀಪರ್‌ಗಳು ಶತಕ ಬಾರಿಸಿರುವುದು ಇದು 8ನೇ ಬಾರಿ ಆಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಸಾಯಿ ಹೋಪ್ ಶತಕ ಬಾರಿಸಿದ್ದರು. ಇತ್ತೀಚೆಗೆ ಅಂದರೆ 2023 ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಇಬ್ಬರು ವಿಕೆಟ್ ಕೀಪರ್ ಶತಕ ಬಾರಿಸಿದ್ದರು.