• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ವಿವಾಹಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತೆ? ಮೊತ್ತ ಕೇಳಿದ್ರೆ ಮತ್ತು ಬರುತ್ತೆ

ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ವಿವಾಹಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತೆ? ಮೊತ್ತ ಕೇಳಿದ್ರೆ ಮತ್ತು ಬರುತ್ತೆ

Written ByKrishna NK
Published: Nov 14, 2026, 16:45 IST|Updated: Nov 14, 2026, 16:49 IST
joinshare

Kavya Maran Anirudh Ravichander : ತಮಿಳು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಸಿಇಒ ಹಾಗೂ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರ ವಿವಾಹವು ಇತ್ತೀಚಿಗೆ ಗ್ರೀಸ್ ದೇಶದಲ್ಲಿ ಅತ್ಯಂತ ಅದ್ಧೂರಿಯಾಗಿ ಹಾಗೂ ಸರಳವಾಗಿ ನೆರವೇರಿದೆ. '3' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟು ರಾತ್ರೋರಾತ್ರಿಯೇ ಸ್ಟಾರ್‌ ಕಂಪೋಸರ್‌ ಆಗಿ ಹೊರಹೊಮ್ಮಿದ ಅನಿರುದ್ಧ್, ಇಂದು ದಕ್ಷಿಣ ಭಾರತದ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ.

Kavya Maran Anirudh Ravichande1/7

ಶುಭ ಕೋರಿದ ಅಭಿಮಾನಿಗಳು, ಸ್ನೇಹಿತರು

ಗ್ರೀಸ್‌ನಲ್ಲಿ ನಡೆದ ಈ ಸರಳ ಹಾಗೂ ಅದ್ಧೂರಿ ಮದುವೆಯ ಬೆನ್ನಲ್ಲೇ, ನವೆಂಬರ್ 21 ರಂದು ಚೆನ್ನೈನಲ್ಲಿ ಮತ್ತೊಮ್ಮೆ ಭವ್ಯವಾದ ವಿವಾಹ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ರಾಜಕೀಯ ರಂಗದ ದಿಗ್ಗಜರು ಭಾಗವಹಿಸಿ ನವ ಜೋಡಿಗೆ ಶುಭ ಹಾರೈಸಲಿದ್ದಾರೆ. ಸದ್ಯ ಇವರ ಮದುವೆಯ ಫೋಟೋಗಳು ಮತ್ತು ವೆಚ್ಚದ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
Kavya Maran Anirudh Ravichande2/7

ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದ ಮದುವೆ!

ಅನಿರುದ್ಧ್ ಮತ್ತು ಕಾವ್ಯ ಮಾರನ್ ಅವರ ಈ ಅದ್ಧೂರಿ ವಿವಾಹದ ಒಟ್ಟು ವೆಚ್ಚ ಸುಮಾರು 100 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಅಂದಾಜಿಸಲಾಗಿದೆ. ಈ ದೊಡ್ಡ ಮೊತ್ತದ ಹಣದ ಪೈಕಿ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಅತಿಥಿಗಳ ವಿಮಾನಯಾನ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಗಾಗಿ ಮಾತ್ರ ಖರ್ಚು ಮಾಡಲಾಗಿದೆ ಎನ್ನಲಾಗಿದೆ.
Kavya Maran Anirudh Ravichande3/7

ಐಷಾರಾಮಿ ಹೊಟೇಲ್‌ನಲ್ಲಿ ಅತಿಥಿಗಳಿಗೆ ರೂಮ್‌

ಅತಿಥಿಗಳ ಪ್ರಯಾಗಕ್ಕಾಗಿ ಮಾರನ್ ಕುಟುಂಬವು ಅದ್ಧೂರಿ ವ್ಯವಸ್ಥೆ ಮಾಡಿತ್ತು. ಚೆನ್ನೈನಿಂದ ಗ್ರೀಸ್‌ಗೆ ತೆರಳಲು ಬರೋಬ್ಬರಿ ನಾಲ್ಕು ಖಾಸಗಿ ವಿಮಾನಗಳನ್ನು (ಪ್ರೈವೇಟ್ ಜೆಟ್) ಕಾಯ್ದಿರಿಸಲಾಗಿತ್ತು. ಅತಿಥಿಗಳ ವಸತಿಗಾಗಿ ಗ್ರೀಸ್‌ನ ಅತ್ಯಂತ ಐಷಾರಾಮಿ ಬೀಚ್ ಹೋಟೆಲ್ ಅನ್ನು ಆಯ್ಕೆ ಮಾಡಲಾಗಿದ್ದು, ಅಲ್ಲಿ ಒಂದು ಕೋಣೆಯ ಒಂದು ರಾತ್ರಿಯ ಬಾಡಿಗೆ ಬರೋಬ್ಬರಿ 11 ಲಕ್ಷ ರೂಪಾಯಿಗಳಷ್ಟಿದೆ ಎಂದು ವರದಿಯಾಗಿದೆ.
Kavya Maran Anirudh Ravichande4/7

ಗಣ್ಯಾತಿಗಣ್ಯರ ಉಪಸ್ಥಿತಿ ಮತ್ತು ಖಾಸಗಿ ವಿಮಾನಗಳ ವ್ಯವಸ್ಥೆ

ಗ್ರೀಸ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಕೇವಲ ಅತಿ ಹತ್ತಿರದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಿದ್ದರು. ವರ ಅನಿರುದ್ಧ್ ಪರವಾಗಿ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಹಾಜರಿದ್ದು ನವ ದಂಪತಿಗಳನ್ನು ಹರಸಿದರು. ಹಾಗೆಯೇ ವಧು ಕಾವ್ಯ ಮಾರನ್ ಪರವಾಗಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಉಪಸ್ಥಿತರಿದ್ದು ಮದುವೆಗೆ ವಿಶೇಷ ಮೆರುಗು ತಂದರು.
Kavya Maran Anirudh Ravichande5/7

ಆರುಸುವಾಯಿ ಅರಸು ಕೈರುಚಿ

ತಮ್ಮ ಮದುವೆಯ ಅತಿಥಿಗಳಿಗೆ ಸಾಂಪ್ರದಾಯಿಕ ರುಚಿಯಾದ ತಮಿಳುನಾಡಿನ ಅಡುಗೆಯನ್ನು ಬಡಿಸಲು, ಚೆನ್ನೈನ ಪ್ರಸಿದ್ಧ ಅಡುಗೆಯವರಾದ 'ಆರುಸುವಾಯಿ ಅರಸು' ತಂಡವನ್ನು ಗ್ರೀಸ್‌ಗೆ ಕರೆಸಿಕೊಳ್ಳಲಾಗಿತ್ತು. ಕಳೆದ 70 ವರ್ಷಗಳಿಂದ ಸಾಂಪ್ರದಾಯಿಕ ಮದುವೆ ಔತಣಕೂಟಗಳಿಗೆ ಹೆಸರುವಾಸಿಯಾಗಿರುವ ಈ ಸಂಸ್ಥೆಯು ಅತಿಥಿಗಳಿಗೆ ಅತ್ಯಂತ ರುಚಿಕರವಾದ ದಕ್ಷಿಣ ಭಾರತದ ಸಾಂಪ್ರದಾಯಿಕ ಭೋಜನವನ್ನು ಸವಿಯಲು ಅವಕಾಶ ಮಾಡಿಕೊಟ್ಟಿತು.
Kavya Maran Anirudh Ravichande6/7

ಗ್ರೀಸ್‌ನಲ್ಲಿ ಮದುವೆ, ತಮಿಳುನಾಡು ಶೈಲಿ ಊಟ

ವಿವಾಹಕ್ಕೆ ವಿದೇಶಿ ನೆಲವನ್ನು ಆಯ್ಕೆ ಮಾಡಿಕೊಂಡಿದ್ದರೂ ಸಹ, ಆಹಾರದ ವಿಚಾರದಲ್ಲಿ ಈ ನವ ದಂಪತಿಗಳು ತಮ್ಮ ಸಂಪ್ರದಾಯವನ್ನು ಮರೆಯಲಿಲ್ಲ. ಗ್ರೀಸ್‌ನಲ್ಲಿ ನಡೆದ ಈ ಮದುವೆಯ ಮೆನು ಸಂಪೂರ್ಣವಾಗಿ ಅಪ್ಪಟ ತಮಿಳುನಾಡು ಶೈಲಿಯ ಸಸ್ಯಾಹಾರಿ ಊಟವಾಗಿತ್ತು ಎಂಬುದು ವಿಶೇಷ.
Kavya Maran Anirudh Ravichande7/7

ಗ್ರೀಸ್‌ನಲ್ಲಿ ಅದ್ಧೂರಿ ವಿವಾಹ

ಕೆಲವು ದಿನಗಳ ಹಿಂದೆ ಇವರ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ನವೆಂಬರ್ 11 ರಂದು ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಯುರೋಪಿಯನ್ ದೇಶವಾದ ಗ್ರೀಸ್‌ನಲ್ಲಿ ಈ ಜೋಡಿಯ ವಿವಾಹವು ಬಂಧನಕ್ಕೊಳಪಟ್ಟಿದೆ. ಸಮುದ್ರ ತೀರ ಹಾಗೂ ಸುಂದರವಾದ ಪ್ರಾಕೃತಿಕ ವಾತಾವರಣದ ಮಧ್ಯೆ ನಡೆದ ಈ ಮದುವೆಯು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
TAGS:
Cinema

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.