• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ODI, ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಸ್ಟಾರ್‌ ಕ್ರಿಕೆಟರ್‌.. ಈ ಬೆಸ್ಟ್‌ ಪ್ಲೇಯರ್‌ಗೆ ಏನಾಗಿದೆ ಗೊತ್ತಾ?

ODI, ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಸ್ಟಾರ್‌ ಕ್ರಿಕೆಟರ್‌.. ಈ ಬೆಸ್ಟ್‌ ಪ್ಲೇಯರ್‌ಗೆ ಏನಾಗಿದೆ ಗೊತ್ತಾ?

Written ByBhimappa
Published: Sep 22, 2026, 09:04 PM IST|Updated: Sep 22, 2026, 09:11 PM IST
joinshare
ಮಾರ್ಕ್‌ ವುಡ್‌ ಅವರು 2015 ಇಂಗ್ಲೆಂಡ್‌ ತಂಡದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದರು. ಕೊನೆಯದಾಗಿ ಕಳೆದ ವರ್ಷ ಮಾರ್ಕ್‌ ವುಡ್‌ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಶಸ್‌ ಟೆಸ್ಟ್‌ ಸರಣಿಯನ್ನು ಆಡಿದ್ದರು.

Mark Wood retires from ODI and Test cricket: ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಮಾರ್ಕ್‌ ವುಡ್‌ Mark Wood ಅವರು ತಮ್ಮ 36ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವೇಗದ ಬೌಲರ್‌ ಮಾರ್ಕ್‌ ವುಡ್‌ ವಿದಾಯ ತಕ್ಷಣದಿಂದಲೇ ಜಾರಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಮಾರ್ಕ್‌ ವುಡ್‌ ಅವರು ಗಾಯಗಳಿಂದ ಬಳಲುತ್ತಿದ್ದರು. ಎಷ್ಟೇ ಪ್ರಯತ್ನ ಮಾಡಿದರೂ ಅವರು ತಂಡಕ್ಕೆ ಮರಳಲು ಆಗಲಿಲ್ಲ. ಇದರಿಂದ ಮಾರ್ಕ್‌ ವುಡ್‌ ಅವರು ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. 
 

Mark Wood retires 1/6

ಮಾರ್ಕ್‌ ವುಡ್‌ ವಿದಾಯ

ಇದುವರೆಗೆ ಮಾರ್ಕ್‌ ವುಡ್‌ ಅವರು 38 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಇದರಲ್ಲಿ ಒಟ್ಟು 119 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅವರೇಜ್‌ 30.79 ಇದ್ದು ಐದು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದು ಸಾಧನೆ ಮಾಡಿದ್ದಾರೆ. ಅದರಂತೆ ಟೆಸ್ಟ್‌ನಲ್ಲಿ ಮೂರು ಸಲ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ. ಏಕದಿನ ಪಂದ್ಯದಲ್ಲಿ 70 ಪಂದ್ಯಗಳನ್ನು ಆಡಿರುವ ಮಾರ್ಕ್‌ ವುಡ್‌ ಅವರು 80 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 38 T20 ಪಂದ್ಯಗಳಲ್ಲಿ 54 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
Mark Wood retires 2/6

ಮಾರ್ಕ್‌ ವುಡ್‌ ವಿದಾಯ

ಮಾರ್ಕ್‌ ವುಡ್‌ ಅವರು 2015 ಇಂಗ್ಲೆಂಡ್‌ ತಂಡದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದರು. ಕೊನೆಯದಾಗಿ ಕಳೆದ ವರ್ಷ ಮಾರ್ಕ್‌ ವುಡ್‌ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಶಸ್‌ ಟೆಸ್ಟ್‌ ಸರಣಿಯನ್ನು ಆಡಿದ್ದರು. ಇದೇ ಟೆಸ್ಟ್‌ ಸರಣಿಯಲ್ಲಿ ಗಾಯಗೊಂಡವರು ಮತ್ತೆ ಮೈದಾನಕ್ಕೆ ಇಳಿಯಲೇ ಇಲ್ಲ.
Mark Wood retires 3/6

ಮಾರ್ಕ್‌ ವುಡ್‌ ವಿದಾಯ

ಗಾಯದಿಂದ ನಾನು ಯಾವಾಗಲೂ ಚೇತರಿಸಿಕೊಳ್ಳು ಪ್ರಯತ್ನ ಪಟ್ಟೆ. ಗಾಯದಿಂದ ಹೊರ ಬಂದು ನಾನು ಏನು ಎಂಬುದನ್ನು ಸಾಬೀತು ಮಾಡಬೇಕು ಎಂದುಕೊಂಡಿದ್ದೆ. ಆದರೆ ಅದು ಆಗಲಿಲ್ಲ. ಟೆಸ್ಟ್‌ ಮತ್ತು ಏಕದಿನ ಕ್ರಿಕೆಟ್‌ ಆಡಲು ನಿಮಗೆ ಆಗುವುದಿಲ್ಲ ಎಂದು ವೈದ್ಯಕೀಯ ತಂಡ ಹೇಳಿತು. ಇದಾದ ಮೇಲೆ ಕಳೆದ ವರ್ಷದಿಂದ ಇಂಗ್ಲೆಂಡ್‌ ತಂಡದಲ್ಲಿ ಆಡುವ ನನ್ನ ಕನಸು ನಿಧಾನವಾಗಿ ನನ್ನಿಂದ ದೂರವಾಗಿದೆ ಎಂದು ಮಾರ್ಕ್‌ ವುಡ್‌ ಭಾವುಕರಾಗಿದ್ದಾರೆ.
Mark Wood retires 4/6

ಮಾರ್ಕ್‌ ವುಡ್‌ ವಿದಾಯ

ಮಾರ್ಕ್‌ ವುಡ್‌ ಅವರು ಇವತ್ತು ಅಂದರೆ ಸೆಪ್ಟೆಂಬರ್‌ 22 ರಂದು ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವುದನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಘೋಷಣೆ ಆಚ್ಚರಿಯಲ್ಲ, ಗಾಯದ ಕಾರಣದಿಂದ ನಾನು ಈ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಿಂದ ದೂರ ಉಳಿಯುವಂತೆ ವೈದ್ಯಕೀಯ ಟೀಮ್‌ ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
Mark Wood retires 5/6

ಮಾರ್ಕ್‌ ವುಡ್‌ ವಿದಾಯ

ಮಾರ್ಕ್‌ ವುಡ್‌ ಅವರು ಕೊನೆಯದಾಗಿ 2025-26ರಲ್ಲಿ ಪರ್ತ್‌ ಮೈದಾನದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಆಶಸ್‌ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಂಡಿದ್ದರು. ಇದೇ ಸರಣಿಯಲ್ಲಿ ಮಾರ್ಕ್‌ ವುಡ್‌ ಅವರು ಕ್ನೀ ಇಂಜುರಿ knee injuryಗೆ ಒಳಗಾಗಿ ಸರಣಿಯಿಂದ ಹೊರಗುಳಿದಿದ್ದರು. ಅಂದಿನಿಂದ ಇಂದಿನವರೆಗೂ ಮಾರ್ಕ್‌ ವುಡ್‌ ಮತ್ತೆ ಕ್ರಿಕೆಟ್‌ ಆಡಲು ಸಾಧ್ಯವಾಗದ ರೀತಿ ಗಾಯವಾಗಿತ್ತು. ಆದ್ದರಿಂದ ತಂಡಕ್ಕೆ ವಾಪಸ್‌ ಆಗಲು ಆಗಿರಲಿಲ್ಲ.
Mark Wood retires 6/6

ಮಾರ್ಕ್‌ ವುಡ್‌ ವಿದಾಯ

36 ವರ್ಷದ ಮಾರ್ಕ್‌ ವುಡ್‌ ಅವರು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಗಾಯದಿಂದ ಬಳಲುತ್ತಿದ್ದರು. ಇದರಿಂದ ಇಂಗ್ಲೆಂಡ್‌ ತಂಡದಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದರಿಂದ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯ ಒಪ್ಪಂದದ ಕೊನೆಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ. ಅದರಂತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್‌ ತಂಡಕ್ಕೆ ಅಪಾರ ಕೊಡುಗೆ ಕೂಡ ಇವರು ನೀಡಿದ್ದಾರೆ.
TAGS:
Cricket

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.