• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಹೇರ್‌ ಫಾಲ್‌ ಸಮಸ್ಯೆಯೇ? ಚಿಂತೆಬಿಡಿ.. ಈ ಮನೆಮದ್ದುಗಳನ್ನು ಬಳಸಿ ಕೂದಲು ಉದುರುವಿಕೆಗೆ ಹೇಳಿ ಗುಡ್‌ ಬೈ

ಹೇರ್‌ ಫಾಲ್‌ ಸಮಸ್ಯೆಯೇ? ಚಿಂತೆಬಿಡಿ.. ಈ ಮನೆಮದ್ದುಗಳನ್ನು ಬಳಸಿ ಕೂದಲು ಉದುರುವಿಕೆಗೆ ಹೇಳಿ ಗುಡ್‌ ಬೈ

Written ByYashaswini V
Published: Oct 09, 2026, 01:36 PM IST|Updated: Oct 09, 2026, 01:39 PM IST
joinshare
ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಸುಲಭ ಪರಿಹಾರ

ಬದಲಾದ ಜೀವನ ಶೈಲಿಯಲ್ಲಿ ಹೇರ್‌ ಫಾಲ್‌ ಸಮಸ್ಯೆ ತುಂಬಾ ಕಾಮನ್‌ ಆಗಿದೆ. ಆದರೆ, ನೀವು ಹೇರ್‌ ಫಾಲ್‌ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು. 

Hair Fall Treatment at Home1/6

ಹೇರ್‌ ಫಾಲ್‌ ಸಮಸ್ಯೆಗೆ ಮನೆಮದ್ದು

ನೀವು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಕೂದಲು ಉದುರುವಿಕೆ ಅಥವಾ ಹೇರ್‌ ಫಾಲ್‌ ಸಮಸ್ಯೆಗೆ ನಿಮ್ಮ ಮನೆಯಲ್ಲಿರುವ ವಸ್ತುಗಳಿಂದಲೇ ಸುಲಭ ಪರಿಹಾರವನ್ನು ಪಡೆಯಬಹುದು. ಯಾವೆಲ್ಲಾ ಮನೆಮದ್ದುಗಳನ್ನು ಬಳಸಿ ಹೇರ್‌ ಫಾಲ್‌ ಸಮಸ್ಯೆಗೆ ಪರಿಹಾರ ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ...
Hair Fall Treatment at Home2/6

ಹುಳಿ ಮೊಸರು

ಮನೆಯಲ್ಲಿ ಮೊಸರು ಹುಳಿಯಾಗುವುದು ಸರ್ವೇ ಸಾಮಾನ್ಯ. ಹುಳಿ ಮೊಸರನ್ನು ಚೆಲ್ಲದೆ ಅರಲ್ಲಿ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹೇರ್‌ ಪ್ಯಾಕ್‌ ರೀತಿ ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Hair Fall Treatment at Home3/6

ಅಲೋವೆರಾ

ಮನೆಯಲ್ಲಿ ಹೂ ಕುಂಡದಲ್ಲಿ ಸುಲಭವಾಗಿ ಬೆಳೆಯಬಹುದಾದ ಅಲೋವೆರಾ ದಿಂದಲೂ ಕೂದಲುದುರುವ ಸಮಸ್ಯೆ ನಿವಾರಿಸಬಹುದು. ಇದಕ್ಕಾಗಿ ಒಂದು ಅಲೋವೆರಾ ಎಲೆಯನ್ನು ಕಿತ್ತು, ಅದರ ಬದಿಯಲ್ಲಿರುವ ಮುಳ್ಳಿನ ಭಾಗವನ್ನು ತೆಗೆಯಿರಿ. ಬಳಿಕ ಎಲೆಯ ಮಧ್ಯ ಭಾಗದಲ್ಲಿರುವ ಲೋಳೆಯಂತಹ ಭಾಗವನ್ನು ಕೂದಲಿನ ಬುಡಕ್ಕೆ ಲೇಪಿಸಿ ಮಸಾಜ್‌ ಮಾಡಿ. ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡುವುದರಿಂದ ಹೇರ್‌ ಫಾಲ್‌ ಕಡಿಮೆ ಆಗಿ ಕೂದಲು ಸೋಂಪಾಗಿ ಕಾಂತಿಯುತವಾಗಿ ಬೆಳೆಯುತ್ತದೆ.
Hair Fall Treatment at Home4/6

ಬೆಟ್ಟದ ನೆಲ್ಲಿಕಾಯಿ

ಬೆಟ್ಟದ ನೆಲ್ಲಿಕಾಯಿಯನ್ನು ಒಣಗಿಸಿ, ಸ್ವಲ್ಪ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಅದನ್ನು ಕಿವುಚಿ ರಸ ತೆಗೆಯಿರಿ. ಬಳಿಕ ಆ ರಸವನ್ನು ಕೂದಲಿನ ಬುಡಕ್ಕೆ ಲೇಪಿಸಿ ಲಘುವಾಗಿ ಮಸಾಜ್‌ ಮಾಡಿ. ಒಂದೆರಡು ಗಂಟೆಗಳ ಬಳಿಕ ಹೇರ್‌ ವಾಶ್‌ ಮಾಡಿ. ನಿಯಮಿತವಾಗಿ ಇದನ್ನು ಮಾಡುತ್ತಾ ಬಂದರೆ ಹೇರ್‌ ಫಾಲ್‌ ಸಮಸ್ಯೆ ಕಡಿಮೆ ಆಗುವುದಷ್ಟೇ ಅಲ್ಲ ಬಿಳಿ ಕೂದಲಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
Hair Fall Treatment at Home5/6

ಕೊಬ್ಬರಿ ಎಣ್ಣೆ

ರಾತ್ರಿ ವೇಳೆ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗಾಗುವವರೆಗೆ ಕಾಯಿಸಿ ಬಳಿಕ ಅದರಲ್ಲಿ ವಿಟಮಿನ್‌ ಇ ಕ್ಯಾಪ್ಸುಲ್‌ ಹಾಕಿ ಮಿಶ್ರಣ ಮಾಡಿ ಅದನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಲಘುವಾಗಿ ಮಸಾಜ್‌ ಮಾಡಿ. ಮರು ದಿನ ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಹೇರ್‌ ವಾಶ್‌ ಮಾಡಿ. ಎರಡು ದಿನಕ್ಕೆ ಒಮ್ಮೆ ಹೀಗೆ ಮಾಡುವುದರಿಂದ ಹೇರ್‌ ಫಾಲ್‌ ಕಡಿಮೆ ಆಗುತ್ತದೆ.
Hair Fall Treatment at Home6/6

ಕರಿಬೇವಿನ ಸೊಪ್ಪು

ಒಂದು ಗಾಜಿನ ಬಾಟಲಿಯಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ತಾಜಾ ಕರಿಬೇವಿನ ಸೊಪ್ಪನ್ನು ಹಾಕಿಟ್ಟು ನಿಯಮಿತವಾಗಿ ಈ ಎಣ್ಣೆಯನ್ನು ಬಳಸುವುದರಿಂದಲೂ ಹೇರ್‌ ಫಾಲ್‌ ಸಮಸ್ಯೆ ಕಡಿಮೆ ಆಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
TAGS:
Home Remedies

Trending

  • News
  • Photos
  • Videos
ಮಂಜನಾಡಿ ಭೂಕುಸಿತ ದುರಂತ: ಮೂವರ ಸಾವು, 18 ತಿಂಗಳಾದರೂ ಎಫ್‌ಐಆರ್ ಇಲ್ಲ!

ಮಂಜನಾಡಿ ಭೂಕುಸಿತ ದುರಂತ: ಮೂವರ ಸಾವು, 18 ತಿಂಗಳಾದರೂ ಎಫ್‌ಐಆರ್ ಇಲ್ಲ!

2

ODI ಸರಣಿಗೆ ಟೀಮ್‌ ಇಂಡಿಯಾ ಆಟಗಾರರ ಆಯ್ಕೆ ಯಾವಾಗ.. ಟೂರ್‌ಗೂ ಮೊದಲೇ ಸಸ್ಪೆನ್ಸ್

3

ಅಮೆರಿಕದ ವೀಸಾ ನಿರ್ಬಂಧಕ್ಕೆ ಪ್ರತೀಕಾರವಿಲ್ಲ! ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ

4

Dasara 2026: ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಗುಡ್‌ನ್ಯೂಸ್‌! 3,000 ಹೆಚ್ಚುವರಿ ಬಸ್‌ಗಳ ಸಂಚಾರ

5

ರಹಸ್ಯ ಹುಡುಕಾಟವೇ ಕಲುಷ ಮೂವಿ ಕಥೆ, ಟೀಸರ್‌ ಔಟ್..‌ ಹೊಸ ಪ್ರತಿಭೆಗಳಿಗೆ ಸಾಥ್‌ ಕೊಟ್ಟ D ಮ್ಯೂಸಿಕ್‌

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.