• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಅದೃಷ್ಟವೋ ಅದೃಷ್ಟ.. ಟೀಮ್‌ ಇಂಡಿಯಾ ಕ್ಯಾಪ್ಟನ್‌ಗೆ 1 ಕೋಟಿ ರೂಪಾಯಿ ಬಹುಮಾನ..

ಅದೃಷ್ಟವೋ ಅದೃಷ್ಟ.. ಟೀಮ್‌ ಇಂಡಿಯಾ ಕ್ಯಾಪ್ಟನ್‌ಗೆ 1 ಕೋಟಿ ರೂಪಾಯಿ ಬಹುಮಾನ..

Written ByBhimappa
Published: Sep 23, 2026, 04:33 PM IST|Updated: Sep 23, 2026, 04:40 PM IST
joinshare
ಇದು ದೇಶದ ಹೆಮ್ಮೆ ಆಗಿದೆ. ತಂಡದಲ್ಲಿ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ರಿಚಾ ಘೋಷ್‌ ಸೇರಿದಂತೆ ಎಲ್ಲರೂ ತಂಡಕ್ಕೆ ಕೊಡುಗೆ ನೀಡಿದರು.

Bhagwant Mann announces Rs. 1 Crore cash prize: 2026ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ವಿಭಾಗದಲ್ಲಿ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಭರ್ಜರಿ ವಿಜಯ ಸಾಧಿಸಿದ ಟೀಮ್‌ ಇಂಡಿಯಾ ವುಮೆನ್ಸ್‌ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು. ಇದರ ವಿಶೇಷ ಎಂದರೆ, ಈ ಬಾರಿಯ 2026ರ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕವನ್ನು ತಂದು ಕೊಟ್ಟಿರುವುದು ವುಮೆನ್ಸ್‌ ಕ್ರಿಕೆಟ್‌ ತಂಡ. ಸದ್ಯ ಈ ವುಮೆನ್ಸ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌ಗೆ ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಲಾಗಿದೆ.   
 

Team India womens 1/6

ಭಾರತದ ಮಹಿಳಾ ತಂಡ

ಹರ್ಮನ್‌ ಪ್ರೀತ್‌ ಕೌರ್‌ ನೇತೃತ್ವದ ಟೀಮ್‌ ಇಂಡಿಯಾ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬೃಹತ್‌ ಗೆಲುವು ಸಾಧಿಸಿತು. 147 ರನ್‌ಗಳ ದೊಡ್ಡ ಗೆಲುವನ್ನು ಪಡೆದ ಭಾರತವು ಚಿನ್ನದ ಪದಕಕ್ಕೆ ಕೊರೊಳೊಡ್ಡಿತು. ರನ್ನರ್‌ ಅಪ್‌ ಆಗಿರುವ ಶ್ರೀಲಂಕಾ ತಂಡವೂ ಸಿಲ್ವರ್‌ ಪದಕವನ್ನು ಪಡೆದರೆ ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತು.
Team India womens 2/6

ಭಾರತದ ಮಹಿಳಾ ತಂಡ

ಇಡೀ ಏಷ್ಯನ್‌ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಈ ಬಾರಿ ಮೊದಲ ಬಂಗಾರದ ಪದಕ ಗೆದ್ದು ಕೊಟ್ಟಿದೆ. ಇದು ದೇಶದ ಹೆಮ್ಮೆ ಆಗಿದೆ. ತಂಡದಲ್ಲಿ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ರಿಚಾ ಘೋಷ್‌ ಸೇರಿದಂತೆ ಎಲ್ಲರೂ ತಂಡಕ್ಕೆ ಕೊಡುಗೆ ನೀಡಿದರು. ಟೀಮ್‌ ಇಂಡಿಯಾ ಏಷ್ಯಾನ್‌ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಗೋಲ್ಡ್‌ ಮೆಡೆಲ್‌ ಗೆದ್ದಿದೆ. 2023ರಲ್ಲೂ ಭಾರತ ತಂಡ ಚಿನ್ನ ಗೆದ್ದಿತ್ತು.
Team India womens 3/6

ಭಾರತದ ಮಹಿಳಾ ತಂಡ

ಭಾರತ ತಂಡದ ಕ್ಯಾಪ್ಟನ್‌ ಆಗಿ ಹರ್ಮನ್‌ಪ್ರೀತ್‌ ಕೌರ್‌ ಅವರು ಎಲ್ಲ ರೀತಿಯಿಂದಲೂ ಸಕ್ಸಸ್‌ ಕಾಣುತ್ತಿದ್ದಾರೆ. ಆದರೆ ಆಟಗಾರರ ಆಗಿ, ಬ್ಯಾಟ್ಸಮನ್‌ ಆಗಿ ದೊಡ್ಡ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಏಷ್ಯನ್‌ ಗೇಮ್ಸ್‌ನಲ್ಲಿಯೂ ಕ್ಯಾಪ್ಟನ್‌ ಹರ್ಮನ್‌ ಅಂತಹ ಪ್ರದರ್ಶನ ಏನು ನೀಡಲಿಲ್ಲ. ಶ್ರೀಲಂಕಾ ವಿರುದ್ಧ 19 ರನ್‌ ಬಾರಿಸಿದರೆ, ಬಾಂಗ್ಲಾದೇಶದ ವಿರುದ್ಧ 40 ರನ್‌ ಗಳಿಸಿದ್ದರು.
Team India womens 4/6

ಭಾರತದ ಮಹಿಳಾ ತಂಡ

ಬಹುಮಾನ ಘೋಷಣೆ ಮಾಡಿ ಮಾತನಾಡಿದ ಸಿಎಂ ಭಗವಂತ್ ಮಾನ್‌ ಅವರು, ಇಡೀ ಮಹಿಳಾ ಕ್ರಿಕೆಟ್‌ ತಂಡವನ್ನು ಅಭಿನಂದಿಸಿದ್ದಾರೆ. ತಂಡದ ಈ ಸಾಧನೆಯೂ ಪಂಜಾಬ್‌ ಮತ್ತು ಭಾರತದ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಮ್ಮ ರಾಜ್ಯದ ಮಗಳು ಹರ್ಮನ್‌ಪ್ರೀತ್‌ ಕೌರ್‌ ಸಾಧನೆಗೆ ನಮಗೆಲ್ಲರಿಗೂ ವಿಶೇಷವಾದ ಗೌರವ ಇದೆ. ಇದರಿಂದ ಇಡೀ ಭಾರತ ತಂಡವನ್ನು ಅವರು ಅಭಿನಂದಿಸಿದ್ದಾರೆ.
Team India womens 5/6

ಭಾರತದ ಮಹಿಳಾ ತಂಡ

ಟೀಮ್‌ ಇಂಡಿಯಾ ವುಮೆನ್ಸ್‌ ಚಿನ್ನಕ್ಕೆ ಮುತ್ತಿಡುತ್ತಿದ್ದಂತೆ ಆಟಗಾರ್ತಿ ಜಿ ಕಮಲಿನಿ ಅವರಿಗೆ ತಮಿಳುನಾಡು ಸಿಎಂ‌ ಜೋಸೆಫ್ ವಿಜಯ್‌ ಅವರು 75 ಲಕ್ಷ ರೂಪಾಯಿಗಳ ಬಹುಮಾನ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಕೂಡ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ಗೆ 1 ಕೋಟಿ ರೂಪಾಯಿ ಘೋಷಿಸಿದ್ದಾರೆ.
Team India womens 6/6

ಭಾರತದ ಮಹಿಳಾ ತಂಡ

ಪಂಜಾಬ್‌ ರಾಜ್ಯದ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಭಾರತದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರಿಗೆ 1 ಕೋಟಿ ರೂಪಾಯಿಗಳ ಬಹುಮಾನವನ್ನ ಘೋಷಣೆ ಮಾಡಿದ್ದಾರೆ. 2026ರ ಏಷ್ಯನ್‌ ಗೇಮ್ಸ್‌ನಲ್ಲಿ ಕ್ರಿಕೆಟ್‌ ವಿಭಾಗದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಜಯ ಸಾಧಿಸಿದ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ರಾಜ್ಯದ ಆಟಗಾರ್ತಿಗೆ ಭಾರೀ ಬಹುಮಾನವನ್ನು ಸಿಎಂ ಅನೌನ್ಸ್‌ ಮಾಡಿದ್ದಾರೆ.
TAGS:
Asian Games

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.