• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಫೋಟೋಗ್ಯಾಲರಿ
  • /ಡ್ರೈ ಸ್ಕಿನ್‌ಗೆ ಯಾವ ಫೇಸ್‌ವಾಶ್‌ ಸೂಕ್ತ? ತಪ್ಪಾದ ಆಯ್ಕೆ ಸಮಸ್ಯೆ ಹೆಚ್ಚಿಸಬಹುದು ಎಚ್ಚರ!

ಡ್ರೈ ಸ್ಕಿನ್‌ಗೆ ಯಾವ ಫೇಸ್‌ವಾಶ್‌ ಸೂಕ್ತ? ತಪ್ಪಾದ ಆಯ್ಕೆ ಸಮಸ್ಯೆ ಹೆಚ್ಚಿಸಬಹುದು ಎಚ್ಚರ!

Written ByPuttaraj K Alur
Published: Sep 19, 2026, 07:35 PM IST|Updated: Sep 19, 2026, 07:40 PM IST
joinshare
ಚರ್ಮವನ್ನ ಆಳವಾಗಿ ಸ್ವಚ್ಛಗೊಳಿಸುವ ಉದ್ದೇಶದಿಂದ ಅತಿಯಾಗಿ ಸ್ಟ್ರಾಂಗ್ ಉತ್ಪನ್ನಗಳನ್ನ ಬಳಸುವುದು ಡ್ರೈ ಸ್ಕಿನ್‌ ಇರುವವರಿಗೆ ಯಾವಾಗಲೂ ಸೂಕ್ತವಾಗುವುದಿಲ್ಲ. ಕೆಲವು ಕ್ಲೆನ್ಸರ್‌ಗಳು ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನ ಹೆಚ್ಚು ತೆಗೆದುಹಾಕಬಹುದು.

Best Face Wash for Dry Skin: ಮುಖದ ಸ್ವಚ್ಛತೆಗಾಗಿ ಬಹುತೇಕರು ಪ್ರತಿದಿನ ಫೇಸ್‌ವಾಶ್ ಬಳಸುತ್ತಾರೆ. ಆದರೆ ಎಲ್ಲರ ಚರ್ಮದ ಸ್ವಭಾವ ಒಂದೇ ರೀತಿಯಾಗಿರುವುದಿಲ್ಲ. ವಿಶೇಷವಾಗಿ ಡ್ರೈ ಸ್ಕಿನ್‌ ಅಥವಾ ಒಣ ಚರ್ಮ ಇರುವವರು ಫೇಸ್‌ವಾಶ್ ಆಯ್ಕೆ ಮಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ತಪ್ಪಾದ ಉತ್ಪನ್ನ ಬಳಸಿದರೆ ಚರ್ಮದಲ್ಲಿರುವ ನೈಸರ್ಗಿಕ ತೇವಾಂಶ ಕಡಿಮೆಯಾಗಿ ಒಣತನ ಮತ್ತಷ್ಟು ಹೆಚ್ಚಾಗಬಹುದು ಎಂದು ಚರ್ಮರೋಗ ತಜ್ಞರು ಎಚ್ಚರಿಸುತ್ತಾರೆ. ಚರ್ಮದಲ್ಲಿ ತೇವಾಂಶದ ಕೊರತೆ ಉಂಟಾದಾಗ ಒಣತನ, ಚರ್ಮ ಬಿಗಿಯಾದಂತೆ ಅನಿಸುವುದು, ಸಣ್ಣ ಪ್ರಮಾಣದ ಉರಿ ಅಥವಾ ಚರ್ಮದ ಪದರಗಳು ಕಾಣಿಸಿಕೊಳ್ಳುವುದು ಮುಂತಾದ ಲಕ್ಷಣಗಳು ಕಂಡುಬರಬಹುದು. ಹವಾಮಾನ, ಅತಿಯಾದ ಮುಖ ತೊಳೆಯುವಿಕೆ, ಬಿಸಿ ನೀರಿನ ಬಳಕೆ ಹಾಗೂ ಸೂಕ್ತವಲ್ಲದ ಸ್ಕಿನ್‌ಕೇರ್ ಉತ್ಪನ್ನಗಳು ಕೂಡ ಚರ್ಮದ ಒಣತನಕ್ಕೆ ಕಾರಣವಾಗಬಹುದು. ಇಂತಹ ಸಂದರ್ಭದಲ್ಲಿ ಮುಖವನ್ನ ಸ್ವಚ್ಛಗೊಳಿಸುವುದರ ಜೊತೆಗೆ ಚರ್ಮದ ನೈಸರ್ಗಿಕ ತೇವಾಂಶವನನ್ನ ಕಾಪಾಡುವುದು ಮುಖ್ಯ.

Dry Skin Care Tips1/6

ಡ್ರೈ ಸ್ಕಿನ್‌ಗೆ ಫೇಸ್‌ವಾಶ್ ಆಯ್ಕೆ ಹೇಗೆ?

ಒಣ ಚರ್ಮ ಇರುವವರು ಯಾವುದೇ ಫೇಸ್‌ವಾಶ್ ಬಳಸುವ ಮೊದಲು ಅದರಲ್ಲಿರುವ ಪದಾರ್ಥಗಳ ಬಗ್ಗೆ ಗಮನಿಸುವುದು ಮುಖ್ಯ. ಚರ್ಮದ ನೈಸರ್ಗಿಕ ತೇವಾಂಶವನ್ನ ಕಾಪಾಡುವಂತಹ ಮೃದುವಾದ ಕ್ಲೆನ್ಸರ್‌ ಆಯ್ಕೆ ಮಾಡುವುದು ಸೂಕ್ತ.
Dry Skin Care Tips2/6

ಮೈಲ್ಡ್ ಕ್ಲೆನ್ಸರ್‌ಗೆ ಆದ್ಯತೆ ನೀಡಿ

ಡ್ರೈ ಸ್ಕಿನ್‌ ಇರುವವರಿಗೆ ಚರ್ಮವನ್ನ ಹೆಚ್ಚು ಒಣಗಿಸದ ಸೌಮ್ಯ ಫೇಸ್‌ವಾಶ್‌ ಉತ್ತಮ ಆಯ್ಕೆಯಾಗಬಹುದು. ಮುಖ ತೊಳೆದ ನಂತರ ಚರ್ಮ ಬಿಗಿಯಾಗುತ್ತಿರುವ ಅನುಭವವಾದರೆ ಬಳಸುತ್ತಿರುವ ಉತ್ಪನ್ನವನ್ನ ಮರುಪರಿಶೀಲಿಸುವುದು ಒಳ್ಳೆಯದು.
Dry Skin Care Tips3/6

ಹಾರ್ಷ್ ಕೆಮಿಕಲ್ಸ್‌ನಿಂದ ಎಚ್ಚರ

ತೀವ್ರವಾಗಿ ಕ್ಲೆನ್ಸಿಂಗ್ ಮಾಡುವ ಅಥವಾ ಚರ್ಮದ ನೈಸರ್ಗಿಕ ತೈಲವನ್ನ ಹೆಚ್ಚು ತೆಗೆದುಹಾಕುವ ಉತ್ಪನ್ನಗಳು ಒಣ ಚರ್ಮದ ಸಮಸ್ಯೆಯನ್ನ ಮತ್ತಷ್ಟು ಹೆಚ್ಚಿಸಬಹುದು. ಹಾಗಾಗಿ ಡ್ರೈ ಸ್ಕಿನ್‌ ಇರುವವರು ಉತ್ಪನ್ನದ ಲೇಬಲ್‌ ಪರಿಶೀಲಿಸುವುದು ಮುಖ್ಯ.
Dry Skin Care Tips4/6

ಫೇಸ್‌ವಾಶ್‌ ನಂತರ ಮಾಯಿಶ್ಚರೈಸರ್

ಮುಖ ತೊಳೆದ ಬಳಿಕ ಚರ್ಮದ ತೇವಾಂಶ ಉಳಿಸಿಕೊಳ್ಳಲು ಸೂಕ್ತ ಮಾಯಿಶ್ಚರೈಸರ್‌ ಬಳಸುವುದು ಸಹ ಮುಖ್ಯ. ವಿಶೇಷವಾಗಿ ಚರ್ಮ ಒಣಗುವ ಅಥವಾ ಎಳೆಯುವ ಅನುಭವವಿದ್ದರೆ ಸ್ಕಿನ್‌ಕೇರ್‌ ರೂಟೀನ್‌ನಲ್ಲಿ ಮಾಯಿಶ್ಚರೈಸರ್‌ಗೆ ಆದ್ಯತೆ ನೀಡಬಹುದು.
Dry Skin Care Tips5/6

ಬಿಸಿ ನೀರಿನಿಂದ ಮುಖ ತೊಳೆಯಬೇಡಿ

ತುಂಬಾ ಬಿಸಿ ನೀರಿನಿಂದ ಮುಖ ತೊಳೆಯುವುದರಿಂದ ಚರ್ಮದ ನೈಸರ್ಗಿಕ ತೇವಾಂಶ ಕಡಿಮೆಯಾಗಬಹುದು. ಡ್ರೈ ಸ್ಕಿನ್‌ ಇರುವವರು ಮುಖ ತೊಳೆಯುವಾಗ ಮೃದುವಾದ ನೀರನ್ನ ಬಳಸುವುದು ಮತ್ತು ಅತಿಯಾಗಿ ಮುಖ ತೊಳೆಯುವುದನ್ನ ತಪ್ಪಿಸುವುದು ಉತ್ತಮ.
Dry Skin Care Tips6/6

ಚರ್ಮದ ಸಮಸ್ಯೆ ಮುಂದುವರಿದರೆ ತಜ್ಞರ ಸಲಹೆ

ಮುಖದಲ್ಲಿ ನಿರಂತರ ಒಣತನ, ಕೆಂಪಾಗುವಿಕೆ, ತುರಿಕೆ ಅಥವಾ ಉರಿ ಕಂಡುಬಂದರೆ ಸ್ವಯಂವಾಗಿ ಹಲವು ಉತ್ಪನ್ನಗಳನ್ನ ಪ್ರಯೋಗಿಸುವ ಬದಲು ಚರ್ಮರೋಗ ತಜ್ಞರನ್ನ ಸಂಪರ್ಕಿಸುವುದು ಸೂಕ್ತ. ಪ್ರತಿಯೊಬ್ಬರ ಚರ್ಮದ ಸ್ವಭಾವ ವಿಭಿನ್ನವಾಗಿರುವುದರಿಂದ ಸ್ಕಿನ್‌ಕೇರ್‌ ಆಯ್ಕೆಯೂ ವೈಯಕ್ತಿಕವಾಗಿರಬೇಕು.
TAGS:
Kannada News

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.