ಭಾರತದ ಕ್ರೀಡಾಪಟುಗಳು ಆರು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 4 ಬೆಳ್ಳಿ ಪದಕಗಳು, 2 ಕಂಚಿನ ಪದಕಗಳು ಭಾರತಕ್ಕೆ ಒಲಿದು ಬಂದಿವೆ. ಆದರೆ ಏಷ್ಯನ್ ಗೇಮ್ಸ್ ಆರಂಭವಾಗಿ ಎರಡು ದಿನಗಳು ಆದರೂ ಚಿನ್ನದ ಪದಕ ಮಾತ್ರ ಭಾರತಕ್ಕೆ ಇನ್ನು ಬಂದಿಲ್ಲ.
China tops medal tally, India 12th: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಕ್ರೀಡಾಪಟುಗಳು ಅಮೋಘವಾದ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಪದಕ ಗೆಲ್ಲುವ ಕಡೆಗೆ ಗಮನ ಹರಿಸುತ್ತಿದ್ದಾರೆ. ಜಪಾನ್‌ನ ಐಚಿ ನಗೋಯ್ ನಗರದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಎರಡು ದಿನಗಳಿಂದ ಭಾರದ ಕ್ರೀಡಾಪಟುಗಳು ಗಮನ ಸೆಳೆಯುತ್ತಿದ್ದು ಈಗಾಗಲೇ 6 ಪದಕಗಳನ್ನು ಜಯಿಸಿದ್ದಾರೆ. ಆದರೆ ಇದುವರೆಗೂ ಚಿನ್ನದ ಪದಕ ಒಲಿದೇ ಇಲ್ಲದೇ ಇರುವುದು ಬೇಸರದ ಸಂಗತಿ ಎನ್ನಬಹುದು.
1/6
ಭಾರತಕ್ಕೆ ಪದಕಗಳ ಸಂಖ್ಯೆ
2026ರ ಏಷ್ಯನ್ ಗೇಮ್ಸ್‌ನಲ್ಲಿ ಸದ್ಯ ಪದಕಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪೀಪಲ್ ರಿಪಬ್ಲಿಕ್ ಆಫ್ ಚೀನಾ ಇದ್ದು ಒಟ್ಟು 38 ಗೋಲ್ಡ್ ಮೆಡೆಲ್‌ಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 23 ಚಿನ್ನದ ಪದಕ, 10 ಸಿಲ್ವರ್ ಮೆಡೆಲ್ ಮತ್ತು 5 ಬ್ರೋಂಜ್ ಪದಕಗಳನ್ನು ಗೆದ್ದುಕೊಂಡಿದೆ. ಚೀನಾದ ನಂತರ 2ನೇ ಸ್ಥಾನದಲ್ಲಿ ಜಪಾನ್ ಇದ್ದು 8 ಚಿನ್ನ, 12 ಬೆಳ್ಳಿ, 12 ಕಂಚು ಸೇರಿ ಒಟ್ಟು 32 ಪದಕಗಳನ್ನು ಗೆದ್ದಿದೆ. ಮೂರನೇ ಸ್ಥಾನದಲ್ಲಿ ರಿಪಬ್ಲಿಕ್ ಆಫ್ ಕೊರಿಯಾ ಇದ್ದು 23 ಪದಕ ಗೆದ್ದಿದ್ದು 5 ಚಿನ್ನಗಳನ್ನು ಬೇಟೆಯಾಡಿದೆ. ಭಾರತ 12ನೇ ಸ್ಥಾನದಲ್ಲಿದೆ.
2/6
ಭಾರತಕ್ಕೆ ಪದಕಗಳ ಸಂಖ್ಯೆ
ಭಾರತೀಯ ಕ್ರೀಡಾಪಟುಗಳು ಚಿನ್ನದ ಪದಕದ ಅಕೌಂಟ್ ಅನ್ನು ತೆರೆಯಬೇಕಾಗಿದೆ. ಭಾರತೀಯ ಕ್ರೀಡಾಪಟುಗಳ ಈ ಆರಂಭಿಕ ಉತ್ಸಾಹವು ದೇಶದ ಕ್ರೀಡಾಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಉಂಟು ಮಾಡಿದೆ. ಈ ಏಷ್ಯನ್ ಗೇಮ್ಸ್‌ನ ಮುಂದಿನ ಕ್ರೀಡೆಗಳಲ್ಲಿ ಚಿನ್ನದ ಪದಕಗಳು ಭಾರತಕ್ಕೆ ಒಲಿದು ಬರಲಿವೆ. ಕ್ರಿಕೆಟ್, ಹಾಕಿ, ಕಬ್ಬಡ್ಡಿ, ಅಥ್ಲೆಟಿಕ್ಸ್ ಮತ್ತು ಬ್ಯಾಡ್ಮಿಂಟನಂತಹ ಮುಖ್ಯವಾದ ಕ್ರೀಡೆಗಳಲ್ಲಿ ಗೋಲ್ಡ್ ಸಿಗುವ ನಿರೀಕ್ಷೆಗಳು ಇವೆ. ಇದರಿಂದ ಪದಕ ಪಟ್ಟಿಯಲ್ಲಿ ಭಾರತ ಮತ್ತಷ್ಟು ಸ್ಥಾನಗಳನ್ನು ಮೇಲಕ್ಕೆ ಏರಲಿದೆ.
3/6
ಭಾರತಕ್ಕೆ ಪದಕಗಳ ಸಂಖ್ಯೆ
ಸುಚಿಕಾ ತರಿಯಾಲ್ ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಮಿಶ್ರ ಸಮರ ಕಲೆಗಳಲ್ಲಿ ಸುಚಿಕಾ ತರಿಯಾಲ್ ಮಹಿಳೆಯರ ವಿಭಾಗದಲ್ಲಿ ಸಿಂಗಾಪುರದ ವಿಕ್ಟೋರಿಯಾ ಟಿಯೊ ವಿರುದ್ಧ ಸೆಮಿಫೈನಲ್‌ನಲ್ಲಿ ಸೋಲಿನ ನಂತರ ಕಂಚಿನ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಭಾರತೀಯರಿಗೆ ಹೆಮ್ಮೆ ತಂದರು.
4/6
ಭಾರತಕ್ಕೆ ಪದಕಗಳ ಸಂಖ್ಯೆ
ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡದ ಇಲಾವೆನಿಲ್ ವಲರಿವನ್, ವಿದರ್ಸಾ ಕೆ ವಿನೋದ್ ಮತ್ತು ಸೋನಮ್ ಒಳಗೊಂಡ ಭಾರತ ತಂಡವು ಅದ್ಭುತವಾದ ಪ್ರದರ್ಶನ ನೀಡಿತು. ಅದರಂತೆ ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಟ್ಟು ಸಂತಸ ವ್ಯಕ್ತಪಡಿಸಿದೆ. ಪಂದ್ಯದಲ್ಲಿ ತೀವ್ರವಾದ ಪೈಪೋಟಿ ಇತ್ತು. ಆದರೆ ಇಲಾವೆನಿಲ್ ವಲರಿವನ್ ವೈಯಕ್ತಿಕ ವಿಭಾಗದಲ್ಲೂ ಸಿಲ್ವರ್ ಪದಕಕ್ಕೆ ಮುತ್ತಿಟ್ಟರು.
5/6
ಭಾರತಕ್ಕೆ ಪದಕಗಳ ಸಂಖ್ಯೆ
ಸದ್ಯ ಭಾರತದ ಕ್ರೀಡಾಪಟುಗಳು ಆರು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 4 ಬೆಳ್ಳಿ ಪದಕಗಳು, 2 ಕಂಚಿನ ಪದಕಗಳು ಭಾರತಕ್ಕೆ ಒಲಿದು ಬಂದಿವೆ. ಆದರೆ ಏಷ್ಯನ್ ಗೇಮ್ಸ್ ಆರಂಭವಾಗಿ ಎರಡು ದಿನಗಳು ಆದರೂ ಚಿನ್ನದ ಪದಕ ಮಾತ್ರ ಭಾರತಕ್ಕೆ ಇನ್ನು ಬಂದಿಲ್ಲ. ಶೂಟಿಂಗ್ ಅಥವಾ ರೈಫಲ್ಸ್ ವಿಭಾಗವೂ ಪದಕ ಗೆಲ್ಲುವಲ್ಲಿ ಭದ್ರ ಬುನಾದಿ ಹಾಕಿದೆ ಎನ್ನಬಹುದು. ಏಕೆಂದರೆ ಭಾರತಕ್ಕೆ ಬಂದ 6 ಪದಕಗಳ ಪೈಕಿ 5 ಪದಕಗಳು ಶೂಟಿಂಗ್‌ನಿಂದಲೇ ಬಂದಿವೆ.
6/6
ಭಾರತಕ್ಕೆ ಪದಕಗಳ ಸಂಖ್ಯೆ
ಜಪಾನ್‌ನ ಐಚಿ- ನಗೋಯಾದಲ್ಲಿ ನಡೆದ 2026 ರ ಏಷ್ಯನ್ ಗೇಮ್ಸ್‌ನ 2ನೇ ದಿನದಂದು ಭಾರತ ತಂಡವು ಶೂಟಿಂಗ್‌ನಲ್ಲಿ 3 ಪದಕ ಗೆದ್ದುಕೊಂಡಿದೆ. ಇದರ ಜೊತೆಗೆ ಎಂಎಂಎ ಕಂಚಿನ ಪದಕವನ್ನೂ ಗೆದ್ದಿತು. ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಹಿಮಾಂಶು ಧಿಲ್ಲೋನ್ ಮತ್ತು ರುದ್ರಾಂಕ್ಷ್ ಪಾಟೀಲ್ ಕ್ರಮವಾಗಿ ವೈಯಕ್ತಿಕವಾಗಿ ಬೆಳ್ಳಿ, ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇದಕ್ಕೂ ಮೊದಲು ಪಾರ್ಥ್ ಮಾನೆ ಜೊತೆಗೂಡಿ ತಂಡ ಸಿಲ್ವರ್ ಅನ್ನು ಗೆದ್ದರು.