ನ್ಯೂಜಿಲೆಂಡ್ ವಿರುದ್ಧದ ಈ ಸೋಲನ್ನು ಅರಗಿಸಿಕೊಳ್ಳದ ಇಂಗ್ಲೆಂಡ್ ಆಟಗಾರರು ತೀವ್ರ ಹತಾಶೆ ವ್ಯಕ್ತಪಡಿಸಿದ್ದರು. ಏಕೆಂದರೆ ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿ ಸೋಲು ಅಂದ್ರೆ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್‌ಗೆ ಒತ್ತಡಗಳು ಹೆಚ್ಚುತ್ತವೆ.
ಯಾವುದೇ ಆಟ ಎಂದ ಮೇಲೆ ಸೋಲು-ಗೆಲುವುಗಳು ಸಾಮಾನ್ಯವಾಗಿರುತ್ತವೆ. ಆದರೆ ನಿರಂತರ ಸೋಲು ಎಂದರೆ ತಂಡದ ಕ್ಯಾಪ್ಟನ್, ವೈಸ್‌ಕ್ಯಾಪ್ಟನ್ ಮೇಲೆ ಒತ್ತಡ ಜಾಸ್ತಿ ಆಗುತ್ತದೆ. ಪಂದ್ಯದ ವೇಳೆ ಅಥವಾ ಮ್ಯಾಚ್ ಮುಗಿದ ನಂತರ ಎಷ್ಟೇ ಒತ್ತಡ ಬಂದರೂ ಕೂಲ್ ಮನಸ್ಸಿನಿಂದ ನಿಭಾಯಿಸೋದು ಕೆಲ ಆಟಗಾರರ ಸ್ವಭಾವ ಆಗಿರುತ್ತದೆ. ಏನೇ ಆದರೂ ದುಡುಕಿ ನಿರ್ಧಾರ ತೆಗೆದುಕೊಳ್ಳುವುದು ಕ್ರಿಕೆಟ್ ವೃತ್ತಿ ಜೀವನಕ್ಕೆ ಬಹುದೊಡ್ಡ ಪೆಟ್ಟು ಕೊಡುತ್ತದೆ. ಇದೇ ರೀತಿ ಪಂದ್ಯ ಸೋತಾಗ ಮಾಡಿದ ಘನಂದಾರಿ ಕೆಲಸಕ್ಕೆ ತನ್ನ ಮಹತ್ವದ ಸ್ಥಾನ ಕಳೆದುಕೊಂಡಿದ್ದರು. ಹಾಗಾದರೆ ಆ ಕ್ರಿಕೆಟರ್ ಯಾರು ಗೊತ್ತಾ?.
1/6
ಆಂಡ್ರ್ಯೂ ಫ್ಲಿಂಟಾಫ್ ವಿಶ್ವಕಪ್
ಕ್ರಿಕೆಟ್‌ನ 3 ಸ್ವರೂಪಗಳಲ್ಲೂ ಫ್ಲಿಂಟಾಫ್ 227 ಅಂತರಾಷ್ಟ್ರೀಯ ಪಂದ್ಯ ಆಡಿದ್ದು 7,315 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲೂ 400 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತೀಯರಿಗೆ ಈ ಆಂಡ್ರ್ಯೂ ಫ್ಲಿಂಟಾಫ್ ಸರಿಯಾಗಿ ನೆನಪಲ್ಲಿ ಇದ್ದೇ ಇರುತ್ತಾನೆ. ಏಕೆಂದರೆ T20 ಪಂದ್ಯವೊಂದರಲ್ಲಿ ಯುವರಾಜ್ ಸಿಂಗ್ ಅವರನ್ನು ಆಂಡ್ರ್ಯೂ ಫ್ಲಿಂಟಾಫ್ ಕೆಣಕ್ಕಿರುತ್ತಾರೆ. ಆಗ ಕೋಪಗೊಂಡಿದ್ದ ಯುವರಾಜ್ ಅದೇ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್‌ಗೆ 6 ಬಾಲ್‌ಗೆ 6 ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ಬರೆದಿದ್ದರು.
2/6
ಆಂಡ್ರ್ಯೂ ಫ್ಲಿಂಟಾಫ್ ವಿಶ್ವಕಪ್
ಮರುದಿನ ಎಚ್ಚರಗೊಂಡಿದ್ದ ಫ್ಲಿಂಟಾಫ್ ತನ್ನ ತಪ್ಪಿಗೆ ಎಲ್ಲರಿಗೂ ಕ್ಷಮೆ ಕೇಳಿದ್ದರು. ಈ ವಿಶ್ವಕಪ್ ಪಂದ್ಯಕ್ಕೂ ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಫ್ಲಿಂಟಾಫ್ ನಾಯಕತ್ವದಲ್ಲಿ ಇಂಗ್ಲೆಂಡ್ ಟೀಮ್ ಹೀನಾಯ ಸೋಲು ಕಂಡಿತ್ತು. ಸರಣಿಯ 5 ಪಂದ್ಯಗಳಲ್ಲೂ ಮುಗ್ಗರಿಸಿದ್ದರಿಂದ ನಾಯಕ ಫ್ಲಿಂಟಾಫ್ ತಪ್ಪುಗಳನ್ನು ಮಾಡಿದ್ದರು. ಆಗ ಕೂಡ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಾರ್ನಿಂಗ್ ಮಾಡಿತ್ತು. ಇದರ ಬೆನ್ನಲ್ಲೇ ವಿಶ್ವಕಪ್ ಪಂದ್ಯದ ಸೋಲಿನ ಬಳಿಕ ಸಮುದ್ರಕ್ಕೆ ಹಾರಿದ್ದರು.
3/6
ಆಂಡ್ರ್ಯೂ ಫ್ಲಿಂಟಾಫ್ ವಿಶ್ವಕಪ್
ಇದರಲ್ಲಿ ಸಮುದ್ರಕ್ಕೆ ಹೋಗಿದ್ದ ಫ್ಲಿಂಟಾಫ್ ಅವರು ನೋಡ್ ನೋಡ್ತಿದ್ದಂತೆ ಸಮುದ್ರದ ನೀರಿಗೆ ಹಾರಿ ಬಿಟ್ಟಿದ್ದರು. ಮೊದಲೇ ಸಮುದ್ರದ ಅಲೆಗಳು ದೊಡ್ಡ ಮಟ್ಟದಲ್ಲಿ ಇರುತ್ತವೆ. ಆದರೆ ಕುಡಿದ ಮತ್ತಿನಲ್ಲಿದ್ದ ಫ್ಲಿಂಟಾಫ್ ಅವರು ಏನನ್ನು ಯೋಚನೆ ಮಾಡದೇ ವಿಶ್ವಕಪ್ ಸೋಲಿನ ಬಗ್ಗೆ ಹತಾಶೆಗೊಂಡು ಸಮುದ್ರಕ್ಕೆ ಹಾರಿದ್ದರು. ಈ ವೇಳೆ ಹೋಟೆಲ್ ಸಿಬ್ಬಂದಿ ಸಹಾಯ ಪಡೆದ ಆಟಗಾರರು ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ರಕ್ಷಣೆ ಮಾಡಿದ್ದರು. ಆವತ್ತು ಸಹ ಆಟಗಾರರು, ಸಿಬ್ಬಂದಿ, ಸಹಾಯಕರು ಎಲ್ಲ ತೀವ್ರ ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
4/6
ಆಂಡ್ರ್ಯೂ ಫ್ಲಿಂಟಾಫ್ ವಿಶ್ವಕಪ್
ಪಂದ್ಯ ಮುಗಿದ ಮೇಲೆ ಎಂದಿನಂತೆ ಪಾರ್ಟಿ ಮಾಡಲು ಎಂದು ಆಟಗಾರರು ಸೇಂಟ್ ಲೂಸಿಯಾದಲ್ಲಿರುವ ಐಷಾರಾಮಿ ಹೋಟೆಲ್‌ಗೆ ಹೋಗಿದ್ದರು. ಈ ಪಾರ್ಟಿಯಲ್ಲಿ ಸುಮಾರು 8 ಗಂಟೆಗಳ ಕಾಲ ಮದ್ಯಪಾನ ಮಾಡಿದ್ದ ಉಪನಾಯಕ ಫ್ಲಿಂಟಾಫ್ ಹೋಟೆಲ್‌ನಲ್ಲಿ ತನಗೆ ಇಷ್ಟಬಂದಂತೆ ವರ್ತಿಸಿದ್ದರು. ಇದು ಕೆಲವರಿಗೆ ಬೇಸರ ಕೂಡ ತರಿಸಿತ್ತು. ಪೆಡಲೋ ಬೋಟ್‌ನಲ್ಲಿ ಸಮುದ್ರಕ್ಕೆ ಹೋಗಿದ್ದರು. ಪೆಡಲೋ ಬೋಟ್ ಎಂದರೆ ಪೆಡಲ್‌ನಿಂದ ಚಲಿಸುವ ಸಣ್ಣ ದೋಣಿ ಆಗಿರುತ್ತದೆ.
5/6
ಆಂಡ್ರ್ಯೂ ಫ್ಲಿಂಟಾಫ್ ವಿಶ್ವಕಪ್
ವೆಸ್ಟ್ ಇಂಡೀಸ್‌ನಲ್ಲಿ ನಡೆದ 2007ರ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಇಂಗ್ಲೆಂಡ್ ತಂಡವೂ ಪಂದ್ಯಗಳಲ್ಲಿ ತನ್ನ ಮೊದಲ ಸೋಲು ಕಂಡಿತು. ನ್ಯೂಜಿಲೆಂಡ್ ವಿರುದ್ಧದ ಈ ಸೋಲನ್ನು ಅರಗಿಸಿಕೊಳ್ಳದ ಇಂಗ್ಲೆಂಡ್ ಆಟಗಾರರು ತೀವ್ರ ಹತಾಶೆ ವ್ಯಕ್ತಪಡಿಸಿದ್ದರು. ಏಕೆಂದರೆ ವಿಶ್ವಕಪ್‌ನಲ್ಲಿ ಒಂದು ಪಂದ್ಯದಲ್ಲಿ ಸೋಲು ಅಂದ್ರೆ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್‌ಗೆ ಒತ್ತಡಗಳು ಹೆಚ್ಚುತ್ತವೆ. ಹೀಗಾಗಿಯೇ ಇಂಗ್ಲೆಂಡ್ ಆಟಗಾರರು ಅಂದು ಟೂರ್ನಮೆಂಟ್‌ನಲ್ಲಿ ಮೊದಲ ಸೋಲು ಕಂಡು ಹತಾಶೆಗೆ ಒಳಗಾಗಿದ್ದರು.
6/6
ಆಂಡ್ರ್ಯೂ ಫ್ಲಿಂಟಾಫ್ ವಿಶ್ವಕಪ್
ಇಂಗ್ಲೆಂಡ್‌ನ ಆಗಿನ ಸ್ಟಾರ್ ಪ್ಲೇಯರ್‌ಗಳಲ್ಲಿ ಒಬ್ಬರಾಗಿದ್ದ ಆಂಡ್ರ್ಯೂ ಫ್ಲಿಂಟಾಫ್ ತಂಡಕ್ಕೆ ಉಪನಾಯಕ ಆಗಿದ್ದರು. ಆಲ್‌ರೌಂಡರ್ ಆಗಿದ್ದ ಆಂಡ್ರ್ಯೂ ಫ್ಲಿಂಟಾಫ್ ಇಂಗ್ಲೆಂಡ್ ತಂಡದಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದರು. ಆದರೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ಸಹ ಆಟಗಾರರೊಂದಿಗೆ ಕಂಟ ಪೂರ್ತಿ ಮದ್ಯ ಸೇವನೆ ಮಾಡಿದ್ದ ಆಂಡ್ರ್ಯೂ ಫ್ಲಿಂಟಾಫ್ ಸಮುದ್ರದಲ್ಲಿ ಬೋಟಿಂಗ್ ಹೋಗಿದ್ದರು. ಒಂದೇ ಒಂದು ತಂಡದ ಸೋಲು ತನ್ನ ಭಾವನೆಗೆ ತೆಗೆದುಕೊಂಡು ಉಪನಾಯಕ ಭಾರೀ ನಿರ್ಧಾರ ಮಾಡಿದ್ದರು. ಆದರೆ ಭಾರೀ ಟೀಕೆಗಳಿಗೆ ಕಾರಣವಾಗಿತ್ತು.