ಮೈಸೂರು ದಸರಾ ಮಹೋತ್ಸವ ಅಂದ್ರೆ ಕೇವಲ ಆಚರಣೆಯಷ್ಟೇ ಅಲ್ಲ, ಅದೊಂದು ಕಣ್ಣಿಗೆ ಹಬ್ಬ. ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಭಾಗವಹಿಸಿ ಸಂಭ್ರಮಿಸಿದ್ದರು. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನವರೇ ಆದ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಮಾತ್ರ ಈ ಬಾರಿ ಯಾವುದೇ ಅಧಿಕೃತ ಆಹ್ವಾನ ಸಿಕ್ಕಿರಲಿಲ್ಲ. ಈ ಬಗ್ಗೆ ಸ್ವತಃ ನಟಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮೈಸೂರು ದಸರಾ ಮಹೋತ್ಸವ ಅಂದ್ರೆ ಕೇವಲ ಆಚರಣೆಯಷ್ಟೇ ಅಲ್ಲ, ಅದೊಂದು ಕಣ್ಣಿಗೆ ಹಬ್ಬ. ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ಯಾಂಡಲ್‌ವುಡ್‌ನ ಹಲವು ತಾರೆಯರು ಭಾಗವಹಿಸಿ ಸಂಭ್ರಮಿಸಿದ್ದರು. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನವರೇ ಆದ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ಮಾತ್ರ ಈ ಬಾರಿ ಯಾವುದೇ ಅಧಿಕೃತ ಆಹ್ವಾನ ಸಿಕ್ಕಿರಲಿಲ್ಲ. ಈ ಬಗ್ಗೆ ಸ್ವತಃ ನಟಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
1/5
ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ
ಅಹಂಕಾರವಿಲ್ಲದೆ, ತಪ್ಪನ್ನು ಅಥವಾ ಕೊರತೆಯನ್ನು ಸ್ವತಃ ತಿದ್ದಿಕೊಂಡು ತಮ್ಮ ಕೆಲಸದ ಮೂಲಕವೇ ಉತ್ತರ ನೀಡಲು ಮುಂದಾಗಿರುವ ಅಮೃತಾ ಅಯ್ಯಂಗಾರ್ ಅವರ ಈ ಪ್ರಬುದ್ಧ ಹಾಗೂ ಸಕಾರಾತ್ಮಕ ನಿಲುವಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮತ್ತು ಸಿನಿಪ್ರಿಯರು ನಟಿಯ ಈ ಗುಣಕ್ಕೆ ಫಿದಾ ಆಗಿದ್ದಾರೆ.
2/5
ನೆಗೆಟಿವಿಟಿ ಬಿಟ್ಟು ಪಕ್ವ ಯೋಚನೆ ಮಾಡಿದ ಪ್ರಬುದ್ಧತೆ
ಬೇಸರವನ್ನು ಮನಸ್ಸಿನಲ್ಲಿಟ್ಟುಕೊಂಡು ಕುಗ್ಗದೆ ಅತ್ಯಂತ ಸಕಾರಾತ್ಮಕವಾಗಿ ಯೋಚಿಸಿರುವ ನಟಿ, "ಬಹುಶಃ ನನ್ನನ್ನು ಅಧಿಕೃತವಾಗಿ ಆಹ್ವಾನಿಸುವಷ್ಟು ದೊಡ್ಡ ಸಾಧನೆಯನ್ನು ನಾನು ಚಿತ್ರರಂಗದಲ್ಲಿ ಇನ್ನೂ ಮಾಡಿಲ್ಲವೇನೋ ಅನ್ನಿಸಿತು. ನನ್ನ ನಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು, ಮುಂದಿನ ದಿನಗಳಲ್ಲಿ ಅವರೇ ಗುರುತಿಸುವಂತೆ ಕಠಿಣ ಪರಿಶ್ರಮ ಪಡಬೇಕು" ಎಂದು ತಮ್ಮ ವಿನಮ್ರತೆಯನ್ನು ಮೆರೆದಿದ್ದಾರೆ.
3/5
ಬಾಲ್ಯದ ನೆನಪುಗಳಲ್ಲಿ ತೇಲಾಡಿದ ನಟಿ
ಮೂಲತಃ ಮೈಸೂರಿನವರೇ ಆಗಿರುವ ಅಮೃತಾ ಅಯ್ಯಂಗಾರ್ ಅವರ ಬಾಲ್ಯ, ವಿದ್ಯಾಭ್ಯಾಸ ಎಲ್ಲವೂ ಸಾಂಸ್ಕೃತಿಕ ನಗರಿಯಲ್ಲೇ ಸಾಗಿದೆ. ಚಿಕ್ಕಂದಿನಲ್ಲಿ ಸಾಮಾನ್ಯರಂತೆ ರಸ್ತೆ ಬದಿಯಲ್ಲಿ ನಿಂತು ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡು ಬೆಳೆದ ದಿನಗಳನ್ನು ನೆನಪಿಸಿಕೊಂಡು ಅವರು ಭಾವುಕರಾಗುತ್ತಾರೆ.
4/5
ತಾಯಿ ಚಾಮುಂಡೇಶ್ವರಿಯೇ ದಾರಿ ತೋರಿಸಲಿ
"ಅಧಿಕೃತ ಕರೆಯೋಲೆ ಯಾಕೆ ಬರಲಿಲ್ಲ ಅಂತ ನನಗೂ ಗೊತ್ತಿಲ್ಲ. ಬಹುಶಃ ನನ್ನ ಹೆಸರು ಮರೆತುಹೋಯಿತೋ ಅಥವಾ ಎಲ್ಲೋ ಏನೋ ಮಿಸ್ ಆಯ್ತೋ..." ಎಂದು ಮುಗ್ಧವಾಗಿ ಹೇಳಿಕೊಂಡಿರುವ ಅಮೃತಾ, ಮುಂಬರುವ ದಿನಗಳಲ್ಲಿ ತಾವೇ ಕರೆದು ಗೌರವಿಸುವ ಮಟ್ಟಿಗೆ ಬೆಳೆಯಲು ತಾಯಿ ಚಾಮುಂಡೇಶ್ವರಿ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
5/5
ಸ್ವಂತೂರಿನ ಹಬ್ಬದಲ್ಲೇ ಮಿಸ್ ಆಯ್ತು ಕರೆಯೋಲೆ
'ಪಾಪ್‌ಕಾರ್ನ್ ಮಂಕಿ ಟೈಗರ್', 'ಬಡವ ರಾಸ್ಕಲ್' ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ಮೈಸೂರಿನ ಹೆಮ್ಮೆಯ ಹುಡುಗಿ ಅಮೃತಾ ಅಯ್ಯಂಗಾರ್, ಈ ಬಾರಿಯ ದಸರಾಗೆ ಆಹ್ವಾನ ಬಾರದ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. "ನಮ್ಮೂರಿನ ಅತ್ಯಂತ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳಲು ಸ್ವಂತ ಊರಿನಿಂದಲೇ ಕರೆಯೋಲೆ ಬರಲಿಲ್ಲವಲ್ಲ ಅಂತ ಆರಂಭದಲ್ಲಿ ಮನಸ್ಸಿಗೆ ತುಸು ನೋವಾಯಿತು, ಬೇಜಾರಾಯಿತು" ಎಂದು ಭಾವುಕರಾಗಿ ನುಡಿದಿದ್ದಾರೆ.