Anjana Sarja marriage : ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಅಂಜನಾ ಸರ್ಜಾ ಮದುವೆ ಫೋಟೋಸ್ ನೋಡಿ ಅವರ ಅಭಿಮಾನಿ ಫುಲ್ ಖುಷ್ ಆಗಿದ್ದು, ವಿಶ್ ಮಾಡ್ತೀದ್ದಾರೆ.. ಆದರೆ, ಈ ಜೋಡಿಯ 14 ವರ್ಷದ ಸುದೀರ್ಘ ಪ್ರೀತಿಯ ಕಥೆ.. ಹೆಚ್ಚಿನ ಜನರಿಗೆ ಗೊತ್ತಿಲ್ಲ.. ಬನ್ನಿ ಮ್ಯಾರೇಜ್ ಫೋಟೋಸ್ ಜೊತೆ ಲವ್ ಸ್ಟೋರಿನೂ ತಿಳ್ಕೊಂಡು ಬಿಡೋಣ..
Anjana Sarja marriage : ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಅಂಜನಾ ಸರ್ಜಾ ಮದುವೆ ಫೋಟೋಸ್ ನೋಡಿ ಅವರ ಅಭಿಮಾನಿ ಫುಲ್ ಖುಷ್ ಆಗಿದ್ದು, ವಿಶ್ ಮಾಡ್ತೀದ್ದಾರೆ.. ಆದರೆ, ಈ ಜೋಡಿಯ 14 ವರ್ಷದ ಸುದೀರ್ಘ ಪ್ರೀತಿಯ ಕಥೆ.. ಹೆಚ್ಚಿನ ಜನರಿಗೆ ಗೊತ್ತಿಲ್ಲ.. ಬನ್ನಿ ಮ್ಯಾರೇಜ್ ಫೋಟೋಸ್ ಜೊತೆ ಲವ್ ಸ್ಟೋರಿನೂ ತಿಳ್ಕೊಂಡು ಬಿಡೋಣ..
1/5
ಅಂಜನಾ ನಡೆಗೆ ಮೆಚ್ಚುಗೆ
ಒಟ್ಟಾರೆಯಾಗಿ, ಸಿನಿಮಾರಂಗದ ದೊಡ್ಡ ಕುಟುಂಬದಿಂದ ಬಂದಿದ್ದರೂ, ತನ್ನದೇ ಆದ ಸ್ಟಾರ್ಟ್‌ಅಪ್ ಮೂಲಕ ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ಅಂಜನಾ ಅವರ ಈ ಹೊಸ ಜೀವನದ ಹೆಜ್ಜೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಿರಿಯ ಮಗಳು ಐಶ್ವರ್ಯಾ ಅವರ ಮದುವೆಯ ಖುಷಿಯ ಬೆನ್ನಲ್ಲೇ, ಅಂಜನಾ ಅವರ ಮದುವೆಯೂ ನೆರವೇರಿರುವುದು ಆಕ್ಷನ್ ಕಿಂಗ್ ಅರ್ಜುನ್ ಕುಟುಂಬದಲ್ಲಿ ಡಬಲ್ ಸಂಭ್ರಮ ತಂದಿದೆ.
2/5
ಸರ್ಜಾ ಕುಟುಂಬದಲ್ಲಿ ಹಬ್ಬದ ವಾತಾವರಣ
ಅರ್ಜುನ್ ಸರ್ಜಾ ಅವರ ಹಿರಿಯ ಮಗಳು ಐಶ್ವರ್ಯಾ ಈಗಾಗಲೇ ಉಮಾಪತಿ ರಾಮಯ್ಯ ಅವರ ಜೊತೆ ಮದುವೆಯಾಗಿ ಖುಷಿಯಾಗಿದ್ದಾರೆ. ಈಗ ಕಿರಿಯ ಮಗಳು ಅಂಜನಾ ಕೂಡ ಮದುವೆ ಆಗಿರೋದರಿಂದ ಆಕ್ಷನ್ ಕಿಂಗ್ ಕುಟುಂಬದಲ್ಲಿ ಫುಲ್ ಡಬಲ್ ಖುಷಿ ಮನೆ ಮಾಡಿದೆ. ಅಭಿಮಾನಿಗಳು ಕೂಡ ಕಾಮೆಂಟ್ ಬಾಕ್ಸ್‌ನಲ್ಲಿ "ಕಂಗ್ರಾಟ್ಸ್ ಸರ್, ದಂಪತಿಗಳು ನೂರೆಂಟು ಕಾಲ ಚೆನ್ನಾಗಿರಲಿ" ಅಂತ ಹಾರೈಸುತ್ತಿದ್ದಾರೆ.
3/5
ಬ್ಯುಸಿನೆಸ್ ವುಮೆನ್ ಟು ಬ್ರೈಡ್
ಅಂದಹಾಗೆ, ನಮ್ಮ ಅಂಜನಾ ಕೇವಲ ಸಿನಿಮಾದವರ ಮಗಳು ಮಾತ್ರ ಅಲ್ಲ, ತಾವೇ ಸ್ವತಃ 'ಅಂಜನಾ ಸರ್ಜಾ ವರ್ಲ್ಡ್' ಎಂಬ ಸ್ಟಾರ್ಟ್‌ಅಪ್ ಆರಂಭಿಸಿ ಬ್ಯುಸಿನೆಸ್ ಕ್ಷೇತ್ರದಲ್ಲೂ ಯಶಸ್ಸು ಕಂಡವರು. ಸಿನಿ ಜಗತ್ತಿನಿಂದ ಸ್ವಲ್ಪ ದೂರ ಉಳಿದು ತನ್ನದೇ ಆದ ಹಾದಿ ಹಿಡಿದಿರುವ ಈ ಚೆಲುವೆ, ಈಗ ದಾಂಪತ್ಯ ಜೀವನದಲ್ಲೂ ಹೊಸ ಹೆಜ್ಜೆ ಇಟ್ಟಿದ್ದಾರೆ.
4/5
ನವ ಜೋಡಿಯ ಕ್ಯೂಟ್ ಲುಕ್ಸ್
ವಿದೇಶದಲ್ಲಿ ನಡೆದ ಈ ಮದುವೆಯಲ್ಲಿ ಅಂಜನಾ ಸರ್ಜಾ ಮತ್ತು ಇಸೈ ನಟ್ಟರ್ (Isai Nutter) ಜೋಡಿ ಒಟ್ಟಿಗೆ ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿರೋ ಆ ಮದುವೆಯ ಕಳೆ, ಪ್ರೀತಿಯ ಆ ಹೊಳಪು ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಿಸ್ತಿದೆ. ನೆಟಿಜನ್‌ಗಳಂತೂ ಈ ಜೋಡಿಗೆ "ಮೇಡ್ ಫಾರ್ ಈಚ್ ಅದರ್" ಅಂತ ಹಾಡಿ ಹೊಗಳ್ತಿದ್ದಾರೆ.
5/5
14 ವರ್ಷದ ಲವ್ ಸ್ಟೋರಿ ಮದುವೆಯಲ್ಲಿ ಅಂತ್ಯ
ಅಮೆರಿಕದಲ್ಲಿ ಓದುವಾಗ ಶುರುವಾದ ಪರಿಚಯ, ನೋಡನೋಡ್ತಿದ್ದಂಗೆ ಲವ್.. ಹೌದು.. ಸುಮಾರು 14 ವರ್ಷಗಳ ಕಾಲ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಫೈನಲ್ ಆಗಿ ತಮ್ಮ ಬಾಳ ಸಂಗಾತಿಯನ್ನಾಗಿ ಆರಿಸಿಕೊಂಡಿದ್ದಾರೆ. ವಿದೇಶದಲ್ಲಿ ತುಂಬಾನೇ ಸಿಂಪಲ್ ಹಾಗೂ ಗ್ರಾಂಡ್ ಆಗಿ ಇವರ ಮದುವೆ ನಡೆದಿದ್ದು, ಫೋಟೋಗಳು ನೋಡೋಕೆ ಎರಡು ಕಣ್ಣು ಸಾಲದು ಅಷ್ಟು ಚಂದವಾಗಿವೆ