SOCIAL MEDIA

Newsletter

PARTNER SITES
Select Language Select State

WION ಐಕಾನಿಕ್‌ ಪ್ರವಾಸೋದ್ಯಮ ಶೃಂಗಸಭೆ; 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ- ಗಜೇಂದ್ರ ಶೇಖಾವತ್

WION ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಭಾರತದ ಮೊದಲ ತ್ರೈಮಾಸಿಕದ ಬೆಳವಣಿಗೆ ಜಗತ್ತನ್ನು ಬೆರಗುಗೊಳಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

Written By Bhimappa
Published: Sep 23, 2026, 01:57 PM IST | Updated: Sep 23, 2026, 02:02 PM IST
Image Credit: Gajendra_Shekhawat
Join

WION Iconic Tourism Summit: ಜಾಗತಿಕ ಮಟ್ಟದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಆರ್ಥಿಕ ಅಸ್ಥಿರತೆಗಳು ಮುಂದುವರಿದಿರುವ ಹೊರತಾಗಿಯೂ ಭಾರತವು ಅಭಿವೃದ್ಧಿಯ ಹಾದಿಯಲ್ಲಿ ದೃಢವಾಗಿ ಮುನ್ನಡೆಯುತ್ತಿದೆ. 2047ರ ವೇಳೆಗೆ ಭಾರತವೂ ಅಭಿವೃದ್ಧಿ ಹೊಂದಿದ ದೇಶವಾಗಲಿದೆ. ಜಾಗತಿಕವಾಗಿ ಏರಿಳಿತಗಳಿದ್ದರೂ ಭಾರತದ ಆರ್ಥಿಕತೆ ಇನ್ನಷ್ಟು ಬಲವಾಗಲಿದೆ. ನಮ್ಮ ಪ್ರಾಚೀನ ವೇದಗಳ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿ ಸಂಸ್ಕೃತದ 'ಚರೈವೇತಿ, ಚರೈವೇತಿ' ಅಂದರೆ ಚಲಿಸುತ್ತಲೇ ಇರಿ, ಮುಂದುವರಿಯಿರಿ ಎನ್ನುವ ಮಂತ್ರವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಪಠಣೆ ಮಾಡಿದರು.  

ನವದೆಹಲಿಯ ಐಟಿಸಿ ಮೌರ್ಯದಲ್ಲಿ ಆಯೋಜಿಸಲಾಗಿರುವ WION ನ ಐಕಾನಿಕ್ ಪ್ರವಾಸೋದ್ಯಮ ಶೃಂಗಸಭೆ ಮತ್ತು ಪ್ರಶಸ್ತಿಗಳು 2026 ಕಾರ್ಯಕ್ರಮದಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಭಾಗವಹಿಸಿ ಮಾತನಾಡಿದರು. ವಿಶ್ವಾಸಾರ್ಹ ತಂತ್ರಜ್ಞಾನ ಸೇವಾ ಸಂಸ್ಥೆಯಾದ VFS ಗ್ಲೋಬಲ್ ಪ್ರಸ್ತುತಪಡಿಸುತ್ತಿರುವ ಮತ್ತು ರೆಡ್ ಹ್ಯಾಟ್ ಕಮ್ಯುನಿಕೇಷನ್ಸ್ ಸಹಯೋಗದೊಂದಿಗೆ ನಡೆಯುತ್ತಿರುವ ಈ ಪ್ರತಿಷ್ಠಿತ ಶೃಂಗಸಭೆಯು, ದೇಶದ ಪ್ರವಾಸೋದ್ಯಮ ಹಾಗೂ ಆರ್ಥಿಕ ಭವಿಷ್ಯದ ಕುರಿತು ಮಹತ್ವದ ಚರ್ಚೆಗಳಿಗೆ ವೇದಿಕೆಯಾಗಿದೆ.

2047ರ ವೇಳೆಗೆ 'ವಿಕ್ಷಿತ್ ಭಾರತ' ಗುರಿ ಮತ್ತು ಚರೈವೇತಿ ಸಂದೇಶ
WION ನ ಐಕಾನಿಕ್ ಪ್ರವಾಸೋದ್ಯಮ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಭಾರತದ ಮೊದಲ ತ್ರೈಮಾಸಿಕದ ಬೆಳವಣಿಗೆ ಜಗತ್ತನ್ನು ಬೆರಗುಗೊಳಿಸಿದೆ ಎಂದು ಹೆಮ್ಮೆಯಿಂದ ತಿಳಿಸಿದರು. ಜಾಗತಿಕವಾಗಿ ಏರಿಳಿತಗಳಿದ್ದರೂ ಭಾರತೀಯ ಆರ್ಥಿಕತೆ ಮತ್ತು ಸಾಂಸ್ಕೃತಿಕ ಬೇರುಗಳು ಅಚಲವಾಗಿವೆ ಎಂದು ಹೇಳಿದ್ದರು.

ನಮ್ಮ ಪ್ರಾಚೀನ ವೇದಗಳ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ ಗಜೇಂದ್ರ ಸಿಂಗ್ ಶೇಖಾವತ್ ಅವರು, ಸಂಸ್ಕೃತದ 'ಚರೈವೇತಿ, ಚರೈವೇತಿ' (ಚಲಿಸುತ್ತಲೇ ಇರಿ, ಮುಂದುವರಿಯಿರಿ) ಮಂತ್ರವನ್ನು ಪಠಣೆ ಮಾಡಿದರು. ನಮ್ಮ ಋಷಿಗಳು ಜ್ಞಾನ ಮತ್ತು ಹೊಸ ಅವಕಾಶಗಳ ಅನ್ವೇಷಣೆಯಲ್ಲಿ ಸದಾ ಚಲಿಸುವ ಬುದ್ಧಿವಂತಿಕೆಯನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ಬದಲಾವಣೆ ಶಾಶ್ವತವಾಗಿದ್ದು, ಆಧುನಿಕ ಯುಗದಲ್ಲಿ ಪರಿವರ್ತನೆಯ ವೇಗವು ಅತ್ಯಂತ ತೀವ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮಾರ್ಗಸೂಚಿಯಂತೆ, ದೇಶವು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ 'ವಿಕ್ಷಿತ್ ಭಾರತ'ದ ಗುರಿಯತ್ತ ವೇಗವಾಗಿ ದಾಪುಗಾಲು ಹಾಕುತ್ತಿದೆ ಎಂದು ಹೇಳಿದರು.

ಜಾಗತಿಕ ಚಲನಶೀಲತೆ ಮತ್ತು ಶೃಂಗಸಭೆಯ ಪ್ರಮುಖ ಉದ್ದೇಶಗಳು
ಈ ಬೃಹತ್ ಶೃಂಗಸಭೆಯು ಕೇವಲ ಪ್ರವಾಸೋದ್ಯಮಕ್ಕೆ ಮಾತ್ರ ಸೀಮಿತವಾಗದೆ, ವೀಸಾ ನೀತಿ, ಗಡಿ ನಿರ್ವಹಣೆ, ಬಯೋಮೆಟ್ರಿಕ್ ಪ್ರಯಾಣ, ಡಿಜಿಟಲ್ ರೂಪಾಂತರ ಮತ್ತು ಪ್ರಯಾಣಿಕರ ಅನುಭವಗಳನ್ನು ಹೆಚ್ಚಿಸುವಲ್ಲಿ ಕೃತಕ ಬುದ್ಧಿಮತ್ತೆ AI ಯ ಪಾತ್ರದಂತಹ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲಿದೆ. ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ VFS ಗ್ಲೋಬಲ್ ಸಂಸ್ಥೆಯು ಕಳೆದ 25 ವರ್ಷಗಳಿಂದ ಸಲ್ಲಿಸುತ್ತಿರುವ ನಿರಂತರ ಸೇವೆಗಳು ಈ ಸಂದರ್ಭದಲ್ಲಿ ಸ್ಮರಣೀಯವಾಗಿವೆ.

ಈ ಕಾರ್ಯಕ್ರಮಕ್ಕೆ ಸುಮಾರು 20 ದೇಶಗಳ ರಾಜತಾಂತ್ರಿಕರು ಮತ್ತು ಗಣ್ಯರು ಸಾಕ್ಷಿಯಾಗಿದ್ದರು. ಅರ್ಜೆಂಟೀನಾ, ಗ್ರೀಸ್, ಸುರಿನಾಮ್, ಐರ್ಲೆಂಡ್, ಸ್ಲೋವಾಕಿಯಾ, ಸೈಪ್ರಸ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಸೀಶೆಲ್ಸ್ ದೇಶಗಳ ರಾಯಭಾರಿಗಳು ಹಾಗೂ ಪ್ರವಾಸೋದ್ಯಮ, ವಾಯುಯಾನ ಮತ್ತು ಆತಿಥ್ಯ ಕ್ಷೇತ್ರಗಳ ದಿಗ್ಗಜರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದು ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಮತ್ತಷ್ಟು ಬಲ ತುಂಬಲಿದೆ.

ಐಕಾನಿಕ್ ಪ್ರಶಸ್ತಿಗಳು 2026; ಪ್ರವಾಸೋದ್ಯಮ ಮತ್ತು ಆತಿಥ್ಯ ರಂಗದಲ್ಲಿ ಅಸಾಧಾರಣ ಸಾಧನೆಗೈದ ಹಾಗೂ ಉದ್ಯಮದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ ಅತ್ಯುತ್ತಮ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ 'ಐಕಾನಿಕ್ ಪ್ರಶಸ್ತಿಗಳು 2026' ಪ್ರದಾನದೊಂದಿಗೆ ಈ ಶೃಂಗಸಭೆಯು ಸಮಾರೋಪಗೊಳ್ಳಲಿದೆ. ಈ ಸಮಾರಂಭವು ಭಾರತವನ್ನು ಜಾಗತಿಕ ಪ್ರವಾಸೋದ್ಯಮದ ನಕ್ಷೆಯಲ್ಲಿ ಅಗ್ರಸ್ಥಾನದಲ್ಲಿರಿಸಲು ಮತ್ತು ಭವಿಷ್ಯದ ಹಾದಿಯನ್ನು ರೂಪಿಸಲು ಒಂದು ಸುವರ್ಣ ಅವಕಾಶವಾಗಿದೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES