SOCIAL MEDIA

Newsletter

PARTNER SITES
Select Language Select State

ನವೆಂಬರ್ 27ರಿಂದ ಸತತ 3 ದಿನ ಬ್ಯಾಂಕ್ ಬಂದ್‌.. ಹಣಕಾಸಿನ ಕೆಲಸವಿದ್ರೆ ಇಂದೇ ಮುಗಿಸಿಕೊಳ್ಳಿ!

ನವೆಂಬರ್ 27 ರಂದು ಬ್ಯಾಂಕ್ ರಜೆ: ಸಾಮಾನ್ಯವಾಗಿ, ಪ್ರತಿ ಭಾನುವಾರ ಯಾವುದೇ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಇದರ ಜೊತೆಗೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ. ನವೆಂಬರ್ 27 ರ ಶುಕ್ರವಾರವೂ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

Written By Ramya. R. Gowda
Published: Nov 26, 2026, 10:21 IST | Updated: Nov 26, 2026, 10:25 IST
Join

ನವೆಂಬರ್ 27 ರಂದು ಬ್ಯಾಂಕ್ ರಜೆ: ಸಾಮಾನ್ಯವಾಗಿ, ಪ್ರತಿ ಭಾನುವಾರ ಯಾವುದೇ ಬ್ಯಾಂಕ್ ಕಾರ್ಯನಿರ್ವಹಿಸುವುದಿಲ್ಲ. ಇದರ ಜೊತೆಗೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳು ಸಹ ಮುಚ್ಚಲ್ಪಡುತ್ತವೆ. ನವೆಂಬರ್ 27 ರ ಶುಕ್ರವಾರವೂ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.


ಬೆಂಗಳೂರು: ಬ್ಯಾಂಕ್‌ನಲ್ಲಿ ಹಣಕಾಸಿನ ವ್ಯವಹಾರಗಳಿವೆಯೇ? ಚೆಕ್ ಕ್ಲಿಯರೆನ್ಸ್, ಹಣ ಠೇವಣಿ ಸೇರಿದಂತೆ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ನವೆಂಬರ್ 27ರಿಂದ ಕರ್ನಾಟಕದಲ್ಲಿ ಸತತ ಮೂರು ದಿನ ಬ್ಯಾಂಕುಗಳು ಮುಚ್ಚಿರಲಿವೆ. ಹೀಗಾಗಿ ಬ್ಯಾಂಕ್ ಗ್ರಾಹಕರು ತಮ್ಮ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವುದು ಉತ್ತಮ. ಹೌದು, ನವೆಂಬರ್ 27ರಂದು ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಕವಿ, ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾದ ಶ್ರೀ ಕನಕದಾಸರ ಜಯಂತಿಯನ್ನು ಪ್ರತಿವರ್ಷ ನವೆಂಬರ್ 27ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.

ಇನ್ನು ನವೆಂಬರ್ 28ರಂದು ನಾಲ್ಕನೇ ಶನಿವಾರವಾಗಿರುವುದರಿಂದ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದರ ಬೆನ್ನಲ್ಲೇ ನವೆಂಬರ್ 29ರಂದು ಭಾನುವಾರವೂ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಸತತ ಮೂರು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಬಂದ್ ಆಗಲಿವೆ.

ಎಟಿಎಂ, ಆನ್‌ಲೈನ್ ಸೇವೆ ಲಭ್ಯ!
ಬ್ಯಾಂಕ್‌ಗಳು ಮುಚ್ಚಿದ್ದರೂ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಈ ಮೂರು ದಿನಗಳ ಅವಧಿಯಲ್ಲಿ ಎಟಿಎಂ ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಹಣ ಪಡೆಯುವುದು ಸೇರಿದಂತೆ ಅಗತ್ಯ ಬ್ಯಾಂಕಿಂಗ್ ವ್ಯವಹಾರಗಳನ್ನು ಎಟಿಎಂಗಳ ಮೂಲಕ ಮಾಡಿಕೊಳ್ಳಬಹುದು. ಅಲ್ಲದೆ, ಯುಪಿಐ, ಗೂಗಲ್ ಪೇ, ಫೋನ್ ಪೇ, ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹಣ ವರ್ಗಾವಣೆ, ಬಿಲ್ ಪಾವತಿ ಹಾಗೂ ಆನ್‌ಲೈನ್ ವಹಿವಾಟುಗಳನ್ನು ಯಾವುದೇ ತೊಂದರೆಯಿಲ್ಲದೆ ನಡೆಸಬಹುದು.

ಆದರೆ, ಬ್ಯಾಂಕ್ ಶಾಖೆಗಳಿಗೆ ನೇರವಾಗಿ ಭೇಟಿ ನೀಡಿ ಮಾಡಬೇಕಾದ ಚೆಕ್ ಕ್ಲಿಯರೆನ್ಸ್, ನಗದು ಠೇವಣಿ ಹಾಗೂ ಇತರ ಕೌಂಟರ್ ಸೇವೆಗಳಿಗೆ ರಜೆ ಕಾರಣದಿಂದ ತೊಂದರೆಯಾಗಬಹುದು.

ಇತರ ರಾಜ್ಯಗಳಲ್ಲಿ ರಜೆ ಇದೆಯೇ?
ನವೆಂಬರ್ 27ರ ಕನಕದಾಸರ ಜಯಂತಿ ರಜೆ ಕರ್ನಾಟಕಕ್ಕೆ ಮಾತ್ರ ಅನ್ವಯವಾಗಲಿದೆ. ಇತರ ರಾಜ್ಯಗಳಲ್ಲಿ ಸ್ಥಳೀಯ ರಜೆ ಅಥವಾ ಸಾಮಾನ್ಯ ಬ್ಯಾಂಕ್ ರಜೆ ಇಲ್ಲದಿದ್ದರೆ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ ನವೆಂಬರ್ 28ರ ನಾಲ್ಕನೇ ಶನಿವಾರ ಮತ್ತು ನವೆಂಬರ್ 29ರ ಭಾನುವಾರದ ರಜೆ ದೇಶಾದ್ಯಂತ ಅನ್ವಯವಾಗಲಿದೆ.


ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಇಂದು ರಜಾದಿನವಾಗಿದೆ. ಕನಕದಾಸರ ಜಯಂತಿಯಂದು ಕರ್ನಾಟಕದ ಎಲ್ಲಾ ಬ್ಯಾಂಕುಗಳು ಇಂದು ಮುಚ್ಚಲ್ಪಡುತ್ತವೆ. ಇದು ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳೆರಡಕ್ಕೂ ಅನ್ವಯಿಸುತ್ತದೆ.ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಶ್ರೀ ಕನಕದಾಸರ ಜಯಂತಿಯನ್ನು ನವೆಂಬರ್ 27, ಶುಕ್ರವಾರ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಇದರಿಂದಾಗಿ ಬ್ಯಾಂಕುಗಳು ಸತತ ಮೂರು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಆದಾಗ್ಯೂ, ಇತರ ರಾಜ್ಯಗಳಲ್ಲಿನ ಬ್ಯಾಂಕುಗಳು ಎಂದಿನಂತೆ ತೆರೆದಿರುತ್ತವೆ. ಈ ಬ್ಯಾಂಕ್ ಸ್ಥಗಿತದ ಸಮಯದಲ್ಲಿ ಎಟಿಎಂ ಸೇವೆಗಳು 24 ಗಂಟೆಗಳ ಕಾಲ ತೆರೆದಿರುತ್ತವೆ.

ಡಿಜಿಟಲ್ ಪಾವತಿಗಳು
ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿಗಳನ್ನು ಮಾಡಬಹುದು. ಆದಾಗ್ಯೂ, ಚೆಕ್ ಕ್ಲಿಯರೆನ್ಸ್ ಕೆಲಸಕ್ಕಾಗಿ, ನೀವು ಬ್ಯಾಂಕ್ ಶಾಖೆಗಳಿಗೆ ಹೋಗಬೇಕಾಗುತ್ತದೆ. ದೊಡ್ಡ ಪ್ರಮಾಣದ ಠೇವಣಿಗಳಿಗೆ ಬ್ಯಾಂಕುಗಳು ಸಹ ಮುಕ್ತವಾಗಿರಬೇಕು.

ಹೀಗಾಗಿ ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳಿದ್ದರೆ ಕೊನೆಯ ಕ್ಷಣದವರೆಗೆ ಕಾಯದೆ ಇಂದೇ ಪೂರ್ಣಗೊಳಿಸಿಕೊಳ್ಳಿ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES