• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /Zee News 'ಆಪರೇಷನ್ ಕಾಲಾ ಪಾನಿ' : ಸತ್ಯ ಬಾಯಿಬಿಟ್ಟಿದ್ದಕ್ಕಾಗಿ ಗ್ರಾಮಸ್ಥನಿಗೆ ಬೆದರಿಕೆ

Zee News 'ಆಪರೇಷನ್ ಕಾಲಾ ಪಾನಿ' : ಸತ್ಯ ಬಾಯಿಬಿಟ್ಟಿದ್ದಕ್ಕಾಗಿ ಗ್ರಾಮಸ್ಥನಿಗೆ ಬೆದರಿಕೆ

ಜೀ ನ್ಯೂಸ್‌ ನಡೆಸಿದ "ಆಪರೇಷನ್ ಕಲಾ ಪಾನಿ" ಪರಿಣಾಮ ಜುಬಿಲೆಂಟ್ ಇಂಗ್ರೆವಿಯಾ ಕಾರ್ಖಾನೆಯ ಮಾಲಿನ್ಯದ ಬಗ್ಗೆ ಸತ್ಯ ಬಯಲು ಮಾಡಿದ್ದಕ್ಕೆ ಸಂತ್ರಸ್ತ ಗ್ರಾಮಸ್ಥ ಅಜಯ್‌ಪಾಲ್ ಅವರನ್ನು ಕಾರ್ಖಾನೆಯೊಳಗೆ ಕರೆಸಿ ಬೆದರಿಕೆ ಹಾಕಲಾಗಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written ByKrishna NK
Published: Nov 14, 2026, 22:01 IST|Updated: Nov 14, 2026, 22:02 IST
joinshare
Zee News 'ಆಪರೇಷನ್ ಕಾಲಾ ಪಾನಿ' : ಸತ್ಯ ಬಾಯಿಬಿಟ್ಟಿದ್ದಕ್ಕಾಗಿ ಗ್ರಾಮಸ್ಥನಿಗೆ ಬೆದರಿಕೆ
Image Credit: Crime news

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಉತ್ತರ ಪ್ರದೇಶ: ಜೀ ಮೀಡಿಯಾದ ಸತ್ಯಶೋಧನಾ ವರದಿ 'ಆಪರೇಷನ್ ಕಲಾ ಪಾನಿ' (Operation Kala Pani) ಪ್ರಸಾರವಾದ ಬೆನ್ನಲ್ಲೇ ಉತ್ತರ ಪ್ರದೇಶದ ಗಜರೌಲಾದಲ್ಲಿರುವ ಜುಬಿಲೆಂಟ್ ಇಂಗ್ರೆವಿಯಾ (Jubilant Ingrevia) ಕಾರ್ಖಾನೆಯ ಆಡಳಿತ ಮಂಡಳಿಯ ಮುಖವಾಡ ಕಳಚಿದೆ. ಕಾರ್ಖಾನೆಯ ಮಾಲಿನ್ಯದ ಬಗ್ಗೆ ಸತ್ಯ ಮಾತನಾಡಿದ್ದಕ್ಕೆ ಸ್ಥಳೀಯ ಗ್ರಾಮಸ್ಥರೊಬ್ಬರಿಗೆ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ.

ಹೌದು.. ಜೀ ನ್ಯೂಸ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದ ಗ್ರಾಮಸ್ಥ ಅಜಯ್‌ಪಾಲ್ ಅವರನ್ನು ಕಾರ್ಖಾನೆಯೊಳಗೆ ಕರೆಸಿ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತೀವ್ರ ಮಾಲಿನ್ಯದಿಂದಾಗಿ ತಮ್ಮ ಕುಟುಂಬದಲ್ಲೇ ಕಳೆದ 7 ವರ್ಷಗಳಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ಸಂತ್ರಸ್ತ ಅಜಯ್‌ಪಾಲ್ ಆಘಾತಕಾರಿ ಮಾಹಿತಿ ನೀಡಿದ್ದರು.

ಆದರೆ, ಈ ಬೆದರಿಕೆ ಆರೋಪವನ್ನು ಕಾರ್ಖಾನೆಯ ಸಿಎಸ್‌ಆರ್ (CSR) ಅಧಿಕಾರಿ ಬೂಂದಿ ಅವರು ತಳ್ಳಿಹಾಕಲು ಯತ್ನಿಸಿದ್ದಾರೆ. ಬೆದರಿಕೆಗಳ ನಡುವೆಯೂ ತಾವು ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ ಎಂದು ಸಂತ್ರಸ್ತ ಅಜಯ್‌ಪಾಲ್ ಸ್ಪಷ್ಟಪಡಿಸಿದ್ದು, ಸಂತ್ರಸ್ತರ ಪರವಾಗಿ ಜೀ ನ್ಯೂಸ್ ತನ್ನ ಧ್ವನಿಯನ್ನು ಮುಂದುವರಿಸಲಿದೆ.

ವರದಿಯ ಹಿನ್ನೆಲೆ
ಜುಬಿಲೆಂಟ್ ಇಂಗ್ರೆವಿಯಾ ಕಾರ್ಖಾನೆಯಿಂದ ಹೊರಬರುತ್ತಿರುವ ಅಪಾಯಕಾರಿ ಮಾಲಿನ್ಯದ ಬಗ್ಗೆ 'ಝೀ ಮೀಡಿಯಾ' ಸತ್ಯವನ್ನು ಹೊರಹಾಕಿತ್ತು. ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಮಾರಣಾಂತಿಕ ಕಾಯಿಲೆಗಳು ಮತ್ತು ಸಾವುಗಳಿಗೆ ಈ ಕೆಮಿಕಲ್ ಕಾರ್ಖಾನೆಯೇ ಕಾರಣ ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದರು. ಆದರೆ, ಈ ವರದಿಯಿಂದ ಬೆಚ್ಚಿಬಿದ್ದ ಕಾರ್ಖಾನೆಯ ಅಧಿಕಾರಿಗಳು, ಸತ್ಯ ಬಾಯಿಬಿಟ್ಟ ಗ್ರಾಮಸ್ಥ ಅಜಯ್‌ಪಾಲ್ ಅವರನ್ನು ನೇರವಾಗಿ ಕಾರ್ಖಾನೆಯೊಳಗೆ ಕರೆಸಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಅಧಿಕಾರಿಗಳೊಂದಿಗೆ ಮುಖಾಮುಖಿ
ಜೀ ಮೀಡಿಯಾ ವರದಿಗಾರರು ಸಂತ್ರಸ್ತ ಅಜಯ್‌ಪಾಲ್ ಅವರ ಜೊತೆ ಕಾರ್ಖಾನೆಯ ಬಳಿಗೆ ತೆರಳಿ, ಸಿಎಸ್‌ಆರ್ ಅಧಿಕಾರಿ ಬೂಂದಿ ಅವರೊಂದಿಗೆ ಮಾತನಾಡಿಸಲು ಪ್ರಯತ್ನಿಸಿದರು. ಆದರೆ, ದೀರ್ಘಕಾಲ ಕಾದರೂ ಕಾರ್ಖಾನೆಯ ಭದ್ರತಾ ಸಿಬ್ಬಂದಿ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ.

ಮುಂದುವರಿಯುವ ತನಿಖೆ
ಎಲ್ಲವೂ ಸರಿಯಾಗಿದ್ದರೆ, ಜುಬಿಲೆಂಟ್ ಇಂಗ್ರೆವಿಯಾ ಅಧಿಕಾರಿಗಳು ಸ್ಥಳೀಯರ ಧ್ವನಿಯನ್ನು ಹತ್ತಿಕಲು ಏಕೆ ಪ್ರಯತ್ನಿಸುತ್ತಿದ್ದಾರೆ? ಏನು ಮುಚ್ಚಿಡಲು ಬಯಸುತ್ತಿದ್ದಾರೆ..? ಎಂಬ ಪ್ರಶ್ನೆಗಳು ಈಗ ಎದ್ದಿವೆ. ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರೇ ಈ ಪ್ರದೇಶದಲ್ಲಿ ಹರಡುತ್ತಿರುವ ಕಾಯಿಲೆಗಳಿಗೆ ಕಾರ್ಖಾನೆಯೇ ಮೂಲ ಕಾರಣ ಎಂದು ಒಪ್ಪಿಕೊಂಡಿರುವ ಪ್ರಮುಖ ಸಾಕ್ಷ್ಯಗಳನ್ನು ಜೀ ನ್ಯೂಸ್ ಶೀಘ್ರದಲ್ಲೇ ಪ್ರಸಾರ ಮಾಡಲಿದೆ..

Add Zee News as a Preferred Source
TAGS:
Kannada News