SOCIAL MEDIA

Newsletter

PARTNER SITES
Select Language Select State

ಆರು ಪ್ರಮುಖ ಸಮುದಾಯಗಳ ವಧುಗಳಿಗಾಗಿ ರಿವಾಹ್ ಬೈ ತನಿಷ್ಕ್ ಸಂಸ್ಥೆಯಿಂದ ವಿವಾಹ ಒಡವೆಗಳ ಸಂಗ್ರಹ ವೆಡ್ಡಿಂಗ್ ಸಿಗ್ನೇಚರ್ಸ್ ಬಿಡುಗಡೆ

ಇಂದಿನ ಆಧುನಿಕ ವಧು ತನ್ನ ಮದುವೆಯನ್ನು ಯೋಜಿಸುವ ವಿಶಿಷ್ಟ ಶೈಲಿಯನ್ನು ಆಧರಿಸಿ, ಪ್ರತಿ ಕ್ಷಣ ಮತ್ತು ಸಂಭ್ರಮಾಚರಣೆಗೂ ಹೊಂದುವಂತೆ ವಿನ್ಯಾಸಗೊಳಿಸಲಾದ ಒಡವೆಗಳು ಈ ಸಂಗ್ರಹದಲ್ಲಿದ್ದು, ಇದು ವಿಶಾಲವಾದ ವಿವಾಹ ಪರಿಸರ ವ್ಯವಸ್ಥೆಯ ಮೂಲಕ ಜೀವಂತಿಕೆ ಪಡೆದ ಸಂಗ್ರಹವಾಗಿದೆ

Reported By Manjunath Naragund Written By Manjunath Naragund
Published: Sep 18, 2026, 08:20 PM IST | Updated: Sep 19, 2026, 10:11 AM IST
Image Credit: Gold
Join

ಬೆಂಗಳೂರು, ಸೆಪ್ಟೆಂಬರ್ 11, 2026: ಟಾಟಾ ಸಮೂಹದ ತನಿಷ್ಕ ಸಂಸ್ಥೆಯ ವಿವಾಹ ಆಭರಣಗಳ ವಿಶೇಷ ಬ್ರಾಂಡ್ ರಿವಾಹ್ ಬೈ ತನಿಷ್ಕ್ ಇಂದಿನ ಆಧುನಿಕ ಭಾರತೀಯ ವಧು ತನ್ನ ವಿವಾಹವನ್ನು ಅತ್ಯಂತ ವಿಶಿಷ್ಟವಾಗಿ ರೂಪಿಸಿಕೊಳ್ಳುವ ಆಶಯಕ್ಕೆ ತಕ್ಕಂತೆ, ಭಾರತದ ಆರು ವಿಭಿನ್ನ ವಧು ಸಮುದಾಯಗಳ ಸಾಂಪ್ರದಾಯಿಕ ವೈಭವವನ್ನು ಸಾರುವ ಸಂಪೂರ್ಣ ಆಭರಣಗಳ ಸಂಗ್ರಹವಾದ ವೆಡ್ಡಿಂಗ್ ಸಿಗ್ನೇಚರ್ಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸಂಗ್ರಹವು ತಮಿಳು, ತೆಲುಗು, ರಾಜಸ್ಥಾನಿ/ ಮಾರ್ವಾಡಿ, ಗುಜರಾತಿ, ಮರಾಠಿ ಹಾಗೂ ಪ್ಯಾನ್ ಇಂಡಿಯಾ/ ಮೆಟ್ರೋ ಸಮುದಾಯಗಳ ವಧುಗಳ ಸಂಸ್ಕೃತಿ ಮತ್ತು ವಿಶಿಷ್ಟ ಆಭರಣ ಪರಂಪರೆಯನ್ನು ಒಳಗೊಂಡಿದೆ. ಇಂದಿನ ಆಧುನಿಕ ಯುವ ವಧು ತನ್ನ ಸಾಂಸ್ಕೃತಿಕ ಬೇರುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಲೇ, ತನ್ನದೇ ಆದ ವೈಯಕ್ತಿಕ ಶೈಲಿಯಲ್ಲಿ ಮದುವೆಯನ್ನು ಸಂಭ್ರಮಿಸಲು ಬಯಸುತ್ತಾಳೆ ಎಂಬ ವಾಸ್ತವ ಒಳನೋಟದ ಆಧಾರದ ಮೇಲೆ ಈ ನೂತನ ಸಂಗ್ರಹವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ.

ಸಾಮಾನ್ಯವಾಗಿ ಒಂದು ಮದುವೆಯ ಸಿದ್ಧತೆಗಾಗಿ ಸುಮಾರು 8 ರಿಂದ 12 ತಿಂಗಳುಗಳ ಸುದೀರ್ಘ ಸಮಯ ತೆಗೆದುಕೊಳ್ಳುವ ವಧು, ವಿವಾಹ ನಡೆಯುವ ಡೆಸ್ಟಿನೇಷನ್, ಕಲ್ಯಾಣ ಮಂಟಪ, ವಿವಿಧ ಧಾರ್ಮಿಕ ಸಮಾರಂಭಗಳು, ವಸ್ತ್ರವಿನ್ಯಾಸ, ಛಾಯಾಗ್ರಹಣ, ಅಲಂಕಾರ, ಸೌಂದರ್ಯವರ್ಧನೆ ಮತ್ತು ಆಭರಣಗಳ ಆಯ್ಕೆಯವರೆಗೆ ಪ್ರತಿಯೊಂದನ್ನೂ ಅತ್ಯಂತ ಕಾಳಜಿಯಿಂದ ಸ್ವತಃ ನಿರ್ಧರಿಸುತ್ತಾಳೆ. ಈ ಬದಲಾದ ಧೋರಣೆಯು ವಧುವಿನ ಆಭರಣಗಳ ಆಯ್ಕೆಯ ವಿಧಾನವನ್ನೂ ಸಂಪೂರ್ಣವಾಗಿ ಬದಲಿಸಿದೆ. ಇಡೀ ಮದುವೆಗೆ ಕೇವಲ ಒಂದೇ ಒಂದು ಆಭರಣದ ಸೆಟ್ ಬಳಸುವ ಹಳೆಯ ಪದ್ಧತಿಯ ಬದಲಿಗೆ, ಪ್ರತಿಯೊಂದು ಸಮಾರಂಭಕ್ಕೂ ಪ್ರತ್ಯೇಕವಾಗಿ ಹೊಂದಿಕೆಯಾಗುವ ಆಭರಣಗಳನ್ನು ಆರಿಸಿಕೊಳ್ಳುವ ನವನವೀನ ಪ್ರವೃತ್ತಿ ಈಗ ಹೆಚ್ಚಾಗಿದೆ. ವಧುಗಳ ಈ ಬೇಡಿಕೆಗೆ ತಕ್ಕಂತೆ ಸ್ಪಂದಿಸಿರುವ ವೆಡ್ಡಿಂಗ್ ಸಿಗ್ನೇಚರ್ಸ್, ಮದುವೆಯ ವಿವಿಧ ಹಂತಗಳ ಆಚರಣೆಗಳು ಮತ್ತು ಸಮಾರಂಭಗಳಿಗೆ ಅಗತ್ಯವಿರುವ ಪರಿಪೂರ್ಣ ಆಭರಣಗಳ ವಾರ್ಡ್ ರೋಬ್ ಅನ್ನು ಪರಿಚಯಿಸಿದೆ.

ಪ್ರತಿಯೊಂದು ಸಮುದಾಯದ ವಧುವಿನ ಅಲಂಕಾರವನ್ನು ಆಯಾ ಪ್ರಾಂತ್ಯದ ವಿಶಿಷ್ಟ ಸಾಂಪ್ರದಾಯಿಕ ಆಭರಣ ಶೈಲಿಗೆ ಅನುಗುಣವಾಗಿ ರೂಪಿಸಲಾಗಿದೆ. ಮರಾಠಿ ವಧುವಿನ ಸಂಗ್ರಹವು ಸಾಂಪ್ರದಾಯಿಕ ವಾಟಿ ಮಂಗಳಸೂತ್ರ, ತುಷಿ ಹಾರ ಮತ್ತು ವಜ್ರ ಟೀಕ್ ಚೋಕರ್‌ನಂತಹ ಪ್ರಮುಖ ಆಭರಣಗಳನ್ನು ಒಳಗೊಂಡಿದೆ. ರಾಜಸ್ಥಾನಿ/ಮಾರ್ವಾಡಿ ಸಂಗ್ರಹದಲ್ಲಿ ಸುಂದರ ಬೋರ್ಲಾ, ತೇವ್ತಾ, ಆದ್ ಮತ್ತು ಪಂಚ್‌ಲಡಾ ಹಾರ್‌ಗಳಿವೆ. ಗುಜರಾತಿ ಶೈಲಿಯು ಚಂದನ್ ಹಾರ್, ದೊಡಿ, ನವಿಲು ಹಾಗೂ ಮಾವಿನಕಾಯಿ ವಿನ್ಯಾಸದ ಮೋರ್ ಮತ್ತು ಕೇರಿ ಒಡವೆಗಳನ್ನು ಒಳಗೊಂಡಿದೆ. ತಮಿಳು ಮತ್ತು ತೆಲುಗು ವಧುಗಳ ಸಂಗ್ರಹವು ದಕ್ಷಿಣ ಭಾರತದ ಹೆಮ್ಮೆಯ ದೇವಾಲಯ ಕೆತ್ತನೆಯಿಂದ ಪ್ರೇರಿತವಾದ ಅದ್ಭುತ ಆಭರಣಗಳನ್ನು ಹೊಂದಿದೆ.ಇನ್ನು ಪ್ಯಾನ್ ಇಂಡಿಯಾ/ಮೆಟ್ರೋ ಸಂಗ್ರಹವು ವಿವಿಧ ಸಂಸ್ಕೃತಿಗಳಿಂದ ಪ್ರೇರಿತರಾದ ಇಂದಿನ ಮಹಾನಗರಗಳ ವಧುಗಳಿಗೆ ಸೂಕ್ತವಾದ ಸಮಕಾಲೀನ ವಿನ್ಯಾಸಗಳನ್ನು ಒಳಗೊಂಡಿದೆ. ಇದರ ಜೊತೆಗೆ ಕಲೀರಾ, ಮಾಥಾ ಪಟ್ಟಿ, ವಂಕಿ, ಸೂರ್ಯ-ಚಂದ್ರ, ನೆತ್ತಿ ಚುಟ್ಟಿ ಮತ್ತು ಮಟ್ಟಲ್ ಮುಂತಾದ ಪ್ರಾದೇಶಿಕ ಆಭರಣ ಸಂಪ್ರದಾಯಗಳಿಗೆ ಆಧುನಿಕ ರೂಪ ನೀಡುವ ಮೂಲಕ ರಿವಾಹ್ ತನ್ನ ವಿನ್ಯಾಸದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ತನಿಷ್ಕ್ ನ ಡಿಸೈನ್ ಎಕ್ಸಲೆನ್ಸ್ ಸೆಂಟರ್ (ಡಿಇಸಿ) ಈ ವೆಡ್ಡಿಂಗ್ ಸಿಗ್ನೇಚರ್ಸ್ ಸಂಗ್ರಹವನ್ನು ಅಭಿವೃದ್ಧಿಪಡಿಸಿದ್ದು, ಇದು ಆರು ವಿಶಿಷ್ಟ ವಧು ಪ್ರಪಂಚಗಳ ಪ್ರಾದೇಶಿಕ ಸೂಕ್ಷ್ಮತೆ, ವಿನ್ಯಾಸ ಪರಿಣತಿ ಮತ್ತು ನುರಿತ ಕುಶಲಕರ್ಮಿಗಳ ಅದ್ಭುತ ಕರಕುಶಲತೆಯನ್ನು ಅತ್ಯಂತ ಸೊಗಸಾಗಿ ಒಟ್ಟುಗೂಡಿಸಿದೆ.

ಈ ಆಭರಣ ಸಂಗ್ರಹವನ್ನು "ಒಂದು ಮದುವೆ. ಹಲವು ಕಥೆಗಳು." ಎಂಬ ವಿನೂತನ ಪ್ರಚಾರಾಭಿಯಾನದ ಮೂಲಕ ಅನಾವರಣಗೊಳಿಸಲಾಗಿದ್ದು, ಡೆಸ್ಟಿನೇಷನ್, ಛಾಯಾಗ್ರಹಣ ಮತ್ತು ಸಿನಿಮಾ ಮಾಧ್ಯಮಗಳ ಮೂಲಕ ಈ ಕಲ್ಪನೆಯನ್ನು ವಿಶಾಲವಾದ ವಿವಾಹ ಪರಿಸರಕ್ಕೆ ವಿಸ್ತರಿಸಲಾಗಿದೆ. ಜೈಪುರದ ಸುಪ್ರಸಿದ್ಧ ತಾಜ್ ಜೈ ಮಹಲ್ ಅರಮನೆಯಲ್ಲಿ ಖ್ಯಾತ ವೆಡ್ಡಿಂಗ್ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ಆಯ್ದ ವಧುಗಳ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇನ್ನೊಂದೆಡೆ ಹೆಸರಾಂತ ಚಲನಚಿತ್ರ ನಿರ್ದೇಶಕ ಶೂಜಿತ್ ಸರ್ಕಾರ್ ಪ್ರಾದೇಶಿಕ ಕಿರುಚಿತ್ರಗಳ ಸರಣಿಯ ಮೂಲಕ ಈ ವಿವಾಹ ಕಥೆಗಳಿಗೆ ಕಲಾತ್ಮಕ ಜೀವ ತುಂಬಿದ್ದಾರೆ. ದಕ್ಷಿಣ ಭಾರತದ ಮಾರುಕಟ್ಟೆಗಾಗಿ ಜನಪ್ರಿಯ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ರಿವಾಹ್ ನ ರಾಯಭಾರಿಯಾಗಿದ್ದು, ಈ ಭಾಗದ ಯುವ ವಧುಗಳಿಗೆ ಅಭಿಯಾನವನ್ನು ತಲುಪಿಸುವ ಜವಾಬ್ದಾರಿ ಹೊತ್ತಿದ್ದಾರೆ. ಮದುವೆಯ ಸಂಭ್ರಮದ ನೈಜ ವಾತಾವರಣ ಮತ್ತು ಕಥಾವೃಂದದ ಭಾಗವಾಗಿಯೇ ಆಭರಣಗಳನ್ನು ಪ್ರಸ್ತುತಪಡಿಸುವ ಮೂಲಕ, ಇಡೀ ಆಚರಣೆಗೆ ಒಂದು ಆಪ್ತ ಹಾಗೂ ಭಾವನಾತ್ಮಕ ಸಂಪರ್ಕವನ್ನು ಕಲ್ಪಿಸಲಾಗಿದೆ.

ಈ ನೂತನ ಸಂಗ್ರಹದ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ತನಿಷ್ಕ್ ನ ಮುಖ್ಯ ಮಾರುಕಟ್ಟೆ ಅಧಿಕಾರಿ (ಸಿಎಂಒ) ಪೆಲ್ಕಿ ಶೆರಿಂಗ್‌ ಅವರು, 'ಪ್ರತಿಯೊಬ್ಬ ವಧುವೂ ತನ್ನ ವಿವಾಹವನ್ನು ಅತ್ಯಂತ ವಿಶಿಷ್ಟವಾಗಿ ಮತ್ತು ತನ್ನದೇ ಆದ ಕನಸುಗಳೊಂದಿಗೆ ರೂಪಿಸಿಕೊಳ್ಳುತ್ತಾಳೆ ಎಂದು ರಿವಾಹ್ ನಂಬುತ್ತದೆ. ಇಂದಿನ ವಧುಗಳು ತಮ್ಮ ಮದುವೆಯನ್ನು ಅತ್ಯಂತ ಯೋಜನಾಬದ್ಧವಾಗಿ ನಿರ್ಧರಿಸುತ್ತಿದ್ದು, ವಿವಾಹ ತಾಣ ಮತ್ತು ಆಚರಣೆಗಳಿಂದ ಹಿಡಿದು ವಸ್ತ್ರವಿನ್ಯಾಸ, ಛಾಯಾಗ್ರಹಣ ಹಾಗೂ ಒಡವೆಗಳವರೆಗೆ ಪ್ರತಿಯೊಂದು ಆಯ್ಕೆಯೂ ಅವರು ಬಯಸಿದ ಅಂತಿಮ ಅನುಭವವನ್ನು ಸಾಕಾರಗೊಳಿಸಲು ನೆರವಾಗುತ್ತದೆ. ವಧುವಿನ ಆಭರಣಗಳ ವಿಷಯದಲ್ಲೂ ಇದೇ ಆಧುನಿಕ ಆಲೋಚನೆಯನ್ನು ತರಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ವೆಡ್ಡಿಂಗ್ ಸಿಗ್ನೇಚರ್ಸ್ ಭಾರತದ ಆರು ವಿಶಿಷ್ಟ ವಧೂ ಸಮುದಾಯಗಳ ಸಂಪೂರ್ಣ ಆಭರಣ ವಾರ್ಡ್ ರೋಬ್ ಅನ್ನು ಸೃಷ್ಟಿಸಿದ್ದು, ಮದುವೆಯ ಸುದೀರ್ಘ ಪಯಣದ ಪ್ರತಿಯೊಂದು ಕ್ಷಣಕ್ಕೂ ತಕ್ಕಂತೆ ಒಡವೆಗಳನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಮದುವೆ. ಹಲವು ಕಥೆಗಳು. ಅಭಿಯಾನದ ಮೂಲಕ ನಾವು ಈ ಆಭರಣಗಳನ್ನು ಡೆಸ್ಟಿನೇಷನ್, ಛಾಯಾಗ್ರಹಣ ಮತ್ತು ಸಿನೆಮಾದ ವಿಶಾಲ ಜಗತ್ತಿಗೆ ವಿಸ್ತರಿಸಿ, ವಧುವಿನ ಮದುವೆಗೆ ಸಮಗ್ರ ಸಾಂಸ್ಕೃತಿಕ ಆಯಾಮ ನೀಡುತ್ತಿದ್ದೇವೆ" ಎಂದು ವಿವರಿಸಿದರು.

ರಿವಾಹ್ ಬೈ ತನಿಷ್ಕ್ ನ ನೂತನ ವೆಡ್ಡಿಂಗ್ ಸಿಗ್ನಚರ್ಸ್ ಸಂಗ್ರಹವು ದೇಶಾದ್ಯಂತ ಇರುವ ಎಲ್ಲಾ ತನಿಷ್ಕ್ ಮಳಿಗೆಗಳಲ್ಲಿ ಹಾಗೂ ಅಧಿಕೃತ ಆನ್‌ಲೈನ್ ಜಾಲತಾಣದಲ್ಲಿ ಗ್ರಾಹಕರ ವೀಕ್ಷಣೆ ಮತ್ತು ಖರೀದಿಗೆ ಲಭ್ಯವಿದೆ.

About Tanishq

Tanishq, Indias most loved jewellery brand from the TATA Group, has been synonymous with superior craftsmanship, exclusive designs and guaranteed product quality for over two decades. It has built for itself the envious reputation of being the only jewellery brand in the country that strives to understand the Indian woman and provide her with jewellery that meets her traditional and contemporary aspirations and desires. To stress on their commitment to offer the purest jewellery, all Tanishq stores are equipped with the Karatmeter which enables customers to check the purity of their gold in the most efficient manner. The Tanishq retail chain currently spreads across 500+ exclusive boutiques in more than 300 cities.

Add Zee News as a Preferred Source

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES