CWP Conference 2026: ಮಹಿಳೆಯರಿಗೆ ಕೇವಲ ಸ್ಥಾನಮಾನ ನೀಡುವುದಷ್ಟೇ ಸಾಕಾಗುವುದಿಲ್ಲ, ಆಡಳಿತ ಮತ್ತು ಅಧಿಕಾರದಲ್ಲಿ ಸಮಾನ ಅವಕಾಶ ಕಲ್ಪಿಸುವ ಜವಾಬ್ದಾರಿಯನ್ನೂ ಹಂಚಿಕೊಳ್ಳಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ಸಿಡಬ್ಲ್ಯುಪಿ (CWP) ಸಮ್ಮೇಳನ 2026ರಲ್ಲಿ ಮಾತನಾಡಿದ ಅವರು, ಮಹಿಳೆಯರ ರಾಜಕೀಯ ಭಾಗವಹಿಸುವಿಕೆ, ನಾಯಕತ್ವ, ಡಿಜಿಟಲ್ ಸುರಕ್ಷತೆ ಮತ್ತು ಸಾಂಸ್ಥಿಕ ಬೆಂಬಲದ ಮಹತ್ವವನ್ನ ಒತ್ತಿಹೇಳಿದ್ದಾರೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಮಹಿಳಾ ಸಮ್ಮೇಳನಕ್ಕೆ ದೇಶದ ವಿವಿಧ ಭಾಗಗಳಿಂದ ಮಹಿಳಾ ಸಂಸದರು ಮತ್ತು ಶಾಸಕರು ಆಗಮಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಹಾಗೂ ರಾಜ್ಯಸಭೆಯ ಉಪಸಭಾಪತಿಗಳು ಸೇರಿದಂತೆ ಹಲವು ಗಣ್ಯರು ಒಂದೇ ವೇದಿಕೆಯಲ್ಲಿ ಭಾಗವಹಿಸಿರುವುದನ್ನ ಓಂ ಬಿರ್ಲಾ ಸ್ವಾಗತಿಸಿ ಅಭಿನಂದಿಸಿದರು. ಸಮ್ಮೇಳನದಲ್ಲಿ ಪಾಲ್ಗೊಂಡ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ಮಹಿಳೆಯರೊಂದಿಗೆ ಅಧಿಕಾರ ಹಂಚಿಕೊಳ್ಳಲು ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು ಸಾಕಷ್ಟು ಧೈರ್ಯ ತೋರಿಸುತ್ತಿವೆಯೇ ಎಂಬ ಪ್ರಶ್ನೆಯನ್ನ ಮುಂದಿಟ್ಟ ಓಂ ಬಿರ್ಲಾ, ಸಂಸತ್ತಿನ ನೈಜ ಮೌಲ್ಯವನ್ನ ಮಹಿಳೆಯರ ಬಗ್ಗೆ ಮಾತನಾಡುವ ರೀತಿಯಿಂದ ಅಳೆಯಬಾರದು. ಬದಲಾಗಿ ಮಹಿಳೆಯರೊಂದಿಗೆ ಎಷ್ಟು ಜವಾಬ್ದಾರಿ ಮತ್ತು ಅಧಿಕಾರವನ್ನ ಹಂಚಿಕೊಳ್ಳಲಾಗುತ್ತಿದೆ ಎಂಬುದೇ ಮುಖ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಅನುಭವ ಮಂಟಪದ ಪರಂಪರೆ ಸ್ಮರಿಸಿದ ಓಂ ಬಿರ್ಲಾ
बेंगलुरु के विधान सौध में आयोजित First Commonwealth Women Parliamentarians Conference के उद्घाटन सत्र को संबोधित किया। इस अवसर पर Commonwealth Countries की महिला सांसदों एवं विभिन्न राज्यों एवं केंद्र शासित प्रदेशों से आए विधायकों और जनप्रतिनिधियों के साथ महिला नेतृत्व और लोकतांत्रिक संस्थाओं में उनकी प्रभावी भागीदारी पर विचार साझा किए। भगवान बसवेश्वर के ‘अनुभव मंडपम’ की गौरवशाली लोकतांत्रिक परंपरा और कित्तूर की रानी चेन्नम्मा के अदम्य शौर्य की साक्षी कर्नाटक की यह धरती ज्ञान, नवाचार और प्रगतिशील चेतना की विशिष्ट पहचान रखती है। भारत के स्वतंत्रता संग्राम, संविधान निर्माण और राष्ट्र के नवनिर्माण में महिलाओं का योगदान अविस्मरणीय रहा है। आज वे शिक्षा, विज्ञान, प्रौद्योगिकी, खेल, अंतरिक्ष, रक्षा और राजनीति सहित प्रत्येक क्षेत्र में अपनी प्रतिभा एवं नेतृत्व से नए प्रतिमान स्थापित कर रही हैं। वर्तमान समय में AI और डिजिटल माध्यमों का उत्तरदायी एवं नैतिक उपयोग नीति निर्माण, विधायी कार्यवाही, जनसंवाद और सुशासन को अधिक प्रभावी बना सकता है। ऐसे में, technology और AI के इस युग में महिलाओं का Digital Empowerment तथा उनके लिए सुरक्षित Cyber Space सुनिश्चित करना हमारी सामूहिक जिम्मेदारी है। महिला सांसद केवल जनप्रतिनिधि ही नहीं हैं बल्कि स्वयं में institution हैं। अनुभवी महिला जनप्रतिनिधियों की Mentorship, निरंतर संवाद और Capacity Building के माध्यम से नई पीढ़ी के नेतृत्व को दिशा एवं सामर्थ्य प्रदान किया जाना चाहिए। मेरा दृढ़ विश्वास है कि जब महिलाओं को पंचायत से पार्लियामेंट तक समान अवसर, सुरक्षित वातावरण और निर्णय प्रक्रिया में प्रभावी भागीदारी मिलेगी, तब लोकतंत्र की जड़ें और अधिक गहरी होंगी। महिला नेतृत्व की शक्ति, संवेदनशीलता और उत्तरदायित्व से भारत का लोकतंत्र अधिक समावेशी, पारदर्शी, जवाबदेह और सशक्त बनेगा। यही सामर्थ्य विकसित भारत 2047 की संकल्पना को साकार करने का आधार बनेगा। #CWPIndia #WomenInParliament
— Om Birla (@ombirlakota) November 17, 2026
ಕರ್ನಾಟಕದ ಐತಿಹಾಸಿಕ ಪರಂಪರೆಯನ್ನ ಉಲ್ಲೇಖಿಸಿದ ಓಂ ಬಿರ್ಲಾ, 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿಯವರು ಸ್ಥಾಪಿಸಿದ ಅನುಭವ ಮಂಟಪದ ಮಹತ್ವವನ್ನ ಸ್ಮರಿಸಿದರು. ಅನುಭವ ಮಂಟಪವನ್ನ ವಿಶ್ವದ ಪ್ರಾಚೀನ ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಪ್ರಜಾಪ್ರಭುತ್ವ ವೇದಿಕೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಎಂದು ಹೇಳಿದರು.
ಕಾಯಕಕ್ಕೆ ಗೌರವ ನೀಡುವುದು, ಸಂಪತ್ತನ್ನ ಹಂಚಿಕೊಳ್ಳುವುದು ಮತ್ತು ಚರ್ಚೆಯ ವೇದಿಕೆಯಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ ಕಲ್ಪಿಸುವುದು ಅನುಭವ ಮಂಟಪದ ಪ್ರಮುಖ ಆಶಯಗಳಾಗಿದ್ದವು. ಮಹಿಳೆಯರು ಪುರುಷರೊಂದಿಗೆ ಸಮಾನವಾಗಿ ಕುಳಿತು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಅವಕಾಶ ಅಂದಿನ ವ್ಯವಸ್ಥೆಯಲ್ಲಿತ್ತು. ಶತಮಾನಗಳ ಹಿಂದಿನ ಈ ಪರಂಪರೆಯ ಸ್ಫೂರ್ತಿಯನ್ನ ಇಂದಿನ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲೂ ಅಳವಡಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಭಾರತ
ಭಾರತದ ಪ್ರಜಾಪ್ರಭುತ್ವದ ಬೆಳವಣಿಗೆಯನ್ನ ಪ್ರಸ್ತಾಪಿಸಿದ ಓಂ ಬಿರ್ಲಾ, ದೇಶವು ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಇಷ್ಟು ದೊಡ್ಡ ಮತ್ತು ವೈವಿಧ್ಯಮಯ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಬಹುದೇ ಎಂಬ ಅನುಮಾನ ಜಗತ್ತಿನಲ್ಲಿತ್ತು ಎಂದು ಹೇಳಿದರು. ಆದರೆ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ಮೇಲೆ ನಂಬಿಕೆ ಇಟ್ಟು ಭಾರತ ತನ್ನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಬಲಪಡಿಸಿತು. ಸಂವಿಧಾನದ 326ನೇ ವಿಧಿಯು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಎಲ್ಲಾ ವಯಸ್ಕ ನಾಗರಿಕರಿಗೂ ಮತದಾನದ ಹಕ್ಕನ್ನ ಒದಗಿಸಿದೆ ಎಂದು ವಿವರಿಸಿದರು.
ಭಾರತವು ಮಹಿಳಾ ಅಭಿವೃದ್ಧಿಯ ಹಂತದಿಂದ ಮಹಿಳಾ ನೇತೃತ್ವದ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಘನತೆ, ಸಾಧನೆ ಹಾಗೂ ಸ್ವಾವಲಂಬನೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ 'ನಾರಿ ಶಕ್ತಿ ವಂದನ್ ಅಧಿನಿಯಮ' ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಉಲ್ಲೇಖಿಸಿದರು.
ಸೇನೆ, ಶಿಕ್ಷಣ ಮತ್ತು ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಾಧನೆ
ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಪ್ರಗತಿಯ ಅಂಕಿಅಂಶಗಳನ್ನ ಹಂಚಿಕೊಂಡ ಓಂ ಬಿರ್ಲಾ, ವಿಶೇಷವಾಗಿ 2014ರ ನಂತರ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂದರು. ಭಾರತೀಯ ವಾಯುಪಡೆಯಲ್ಲಿ ಸುಮಾರು ಶೇ.14ರಷ್ಟು, ನೌಕಾಪಡೆಯಲ್ಲಿ ಶೇ.6ರಷ್ಟು ಮತ್ತು ಭೂಸೇನೆಯಲ್ಲಿ ಸುಮಾರು ಶೇ.4ರಷ್ಟು ಮಹಿಳಾ ಅಧಿಕಾರಿಗಳಿದ್ದಾರೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಸಂಖ್ಯೆ 2025ರಲ್ಲಿ 49,992ಕ್ಕೆ ತಲುಪಿದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆ ಗಮನಾರ್ಹವಾಗಿದೆ. ಭಾರತದ ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಮಹಿಳೆಯರ ಪಾಲು ಶೇ.55ರಷ್ಟಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಬೆಳವಣಿಗೆ ಪುರುಷರಿಗಿಂತಲೂ ವೇಗವಾಗಿ ಸಾಗಿದೆ ಎಂದು ಹೇಳಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಮಹಿಳೆಯರು ಸ್ಥಳೀಯ ಆಡಳಿತದಲ್ಲಿ ಬಲಿಷ್ಠ ನಾಯಕತ್ವ ಪ್ರದರ್ಶಿಸುತ್ತಿದ್ದಾರೆ. ದೇಶದ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಸುಮಾರು 14.15 ಲಕ್ಷ ಮಹಿಳಾ ಪ್ರತಿನಿಧಿಗಳಿದ್ದು, ಒಟ್ಟು ಜನಪ್ರತಿನಿಧಿಗಳಲ್ಲಿ ಅವರ ಪಾಲು ಶೇ.46ರಷ್ಟಿದೆ ಎಂದು ಮಾಹಿತಿ ನೀಡಿದರು.
ಮಹಿಳೆಯರ ಡಿಜಿಟಲ್ ಸಬಲೀಕರಣಕ್ಕೆ ಒತ್ತು
ಎರಡು ದಿನಗಳ ಸಮ್ಮೇಳನವು ಆಡಳಿತದ ಎರಡು ಪ್ರಮುಖ ಆಯಾಮಗಳ ಮೇಲೆ ಗಮನಹರಿಸಿದೆ. "ಬಲಿಷ್ಠ ಅಡಿಪಾಯ, ಗಟ್ಟಿಯಾದ ಧ್ವನಿ: ಹೊಸ ಮಹಿಳಾ ಶಾಸಕರಿಗಾಗಿ ಒಳಗೊಳ್ಳುವ ಸೈಬರ್‌ಸ್ಪೇಸ್ ಮತ್ತು ಮಾರ್ಗದರ್ಶನದ ಹಾದಿಗಳು" (Strong Foundations, Stronger Voices: Inclusive Cyberspace and Mentorship Pathways for New Women Legislators) ಎಂಬ ಧ್ಯೇಯವಾಕ್ಯದಡಿ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ "ಮಹಿಳೆಯರ ಡಿಜಿಟಲ್ ಸಬಲೀಕರಣ: ಸುರಕ್ಷಿತ ಸೈಬರ್‌ಸ್ಪೇಸ್, ಜಾಣ್ಮೆಯ ಆಯ್ಕೆಗಳು" (Empowering Women Digitally: Safe Cyberspace, Smart Choices) ಎಂಬ ವಿಷಯವೂ ಸಮ್ಮೇಳನದ ಪ್ರಮುಖ ಆದ್ಯತೆಯಾಗಿದೆ. ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಮಹಿಳೆಯರಿಗೆ ಸ್ಥಾನಮಾನದ ಜೊತೆಗೆ ಸಾಂಸ್ಥಿಕ ಬೆಂಬಲ, ತಂತ್ರಜ್ಞಾನದ ಅವಕಾಶ ಮತ್ತು ಸೂಕ್ತ ಮಾರ್ಗದರ್ಶನ ದೊರೆಯಬೇಕು ಎಂದು ಓಂ ಬಿರ್ಲಾ ಹೇಳಿದರು.
ಈ ಎರಡು ದಿನಗಳ ಸಮ್ಮೇಳನದಲ್ಲಿ ನಡೆಯುವ ಚರ್ಚೆಗಳು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಉತ್ತಮ ಸಂದೇಶ ನೀಡಲಿವೆ ಎಂಬ ವಿಶ್ವಾಸವನ್ನ ಅವರು ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದ ಬಲ, ದೇಶದ ಭವ್ಯ ಇತಿಹಾಸ ಮತ್ತು ಮಹಿಳೆಯರ ನಾಯಕತ್ವದ ಮೂಲಕ ಹೊಸ ದಿಕ್ಕಿನ ನಿರ್ಧಾರಗಳನ್ನ ಕೈಗೊಳ್ಳುವ ಸಾಮರ್ಥ್ಯವನ್ನ ಜಗತ್ತಿಗೆ ತೋರಿಸಬೇಕಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.