• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ : ರಾಜ್ಯದ ಹಲವು ಭಾಗಗಳಿಗೆ IMDಯಿಂದ ಹೆವಿ ರೈನ್ ಅಲರ್ಟ್

ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ : ರಾಜ್ಯದ ಹಲವು ಭಾಗಗಳಿಗೆ IMDಯಿಂದ ಹೆವಿ ರೈನ್ ಅಲರ್ಟ್

Karnataka Weather Report : ಉತ್ತರ ಥೈಲ್ಯಾಂಡ್‌ನ ವಾಯುಮಂಡಲದ ಚಕ್ರವಾತೀಯ ಪರಿಚಲನೆಯು ಅಂಡಮಾನ್ ಸಮುದ್ರದತ್ತ ಚಲಿಸುತ್ತಿದ್ದು, ಸೆಪ್ಟೆಂಬರ್ 19ರ ವೇಳೆಗೆ ವಾಯುಭಾರ ಕುಸಿತವಾಗಿ ಮಾರ್ಪಟ್ಟು ಒಡಿಶಾ-ಉತ್ತರ ಆಂಧ್ರ ಕರಾವಳಿಯತ್ತ ಸಾಗಲಿದೆ. ಇದರ ಪ್ರಭಾವದಿಂದ ಸೆಪ್ಟೆಂಬರ್ 20 ಮತ್ತು 21ರಂದು ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Sep 18, 2026, 10:02 PM IST|Updated: Sep 18, 2026, 10:07 PM IST
joinshare
ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ : ರಾಜ್ಯದ ಹಲವು ಭಾಗಗಳಿಗೆ IMDಯಿಂದ ಹೆವಿ ರೈನ್ ಅಲರ್ಟ್
Image Credit: IMD Reports

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Weather Reports Today : ಥೈಲ್ಯಾಂಡ್‌ನಿಂದ ಹೊರಟಿದೆ ಹೊಸ ಹವಾಮಾನ ವ್ಯವಸ್ಥೆ.. ಉತ್ತರ ಥೈಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿರೋ ವಾಯುಮಂಡಲದ ಚಕ್ರವಾತೀಯ ಪರಿಚಲನೆ ಈಗ ಉತ್ತರ ಅಂಡಮಾನ್ ಸಮುದ್ರದತ್ತ ಚಲಿಸುತ್ತಿದೆ. ಸೆಪ್ಟೆಂಬರ್ 19ರ ವೇಳೆಗೆ ಅಲ್ಲಿ ವಾಯುಭಾರ ಕುಸಿತ ರೂಪುಗೊಳ್ಳುವ ಸಾಧ್ಯತೆ ಇದ್ದು, ಮುಂದಿನ 3–4 ದಿನಗಳಲ್ಲಿ ದಕ್ಷಿಣ ಒಡಿಶಾ-ಉತ್ತರ ಆಂಧ್ರ ಕರಾವಳಿಯತ್ತ ಸಾಗುವ ಸಾಧ್ಯತೆ ಇದೆ. ಇದರ ಎಫೆಕ್ಟ್ ಕರ್ನಾಟಕದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಧಾರಾಕಾರ ಮಳೆ, ರಸ್ತೆಗಳು ಜಲಾವೃತವಾಗಿರೋ ಬೆನ್ನಲ್ಲೇ ಸೆಪ್ಟೆಂಬರ್ 20–21ರಂದು ಕರ್ನಾಟಕದ ಹಲವು ಭಾಗಗಳಲ್ಲಿ ಮತ್ತೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಥೈಲ್ಯಾಂಡ್‌ನಿಂದ ಶುರುವಾದ ಈ ಹವಾಮಾನ ಬದಲಾವಣೆ ಕರ್ನಾಟಕಕ್ಕೆ ಎಷ್ಟು ದೊಡ್ಡ ಮಳೆ ತರುತ್ತೆ..? ರಾಜ್ಯದಲ್ಲಿ ಪ್ರವಾಹನಾ..? ಬರನಾ..? ನೋಡೋಣ ಡಿಎನ್‌ಎ ನಾಲ್ಕನೇ ಸುದ್ದಿಯಲ್ಲಿ.

ಭಾರತದ ಪೂರ್ವ ಕರಾವಳಿಯತ್ತ ಮತ್ತೊಂದು ಹವಾಮಾನ ವ್ಯವಸ್ಥೆ ರೂಪುಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಉತ್ತರ ಥೈಲ್ಯಾಂಡ್‌ನ ಮೇಲೆ ಕಾಣಿಸಿಕೊಂಡಿರುವ ವಾಯುಮಂಡಲದ ಚಕ್ರವಾತೀಯ ಪರಿಚಲನೆ ಸೆಪ್ಟೆಂಬರ್ 18ರ ಸಂಜೆಯ ವೇಳೆಗೆ ಉತ್ತರ ಅಂಡಮಾನ್ ಸಮುದ್ರದತ್ತ ಪ್ರವೇಶಿಸುವ ಸಾಧ್ಯತೆ ಇದೆ. ಇದರ ಪರಿಣಾಮ ಸೆಪ್ಟೆಂಬರ್ 19ರ ವೇಳೆಗೆ ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಪ್ರದೇಶ ರೂಪುಗೊಳ್ಳಬಹುದು ಎಂದು IMD ಮುನ್ಸೂಚನೆ ನೀಡಿದೆ. ಬಳಿಕ ಈ ವ್ಯವಸ್ಥೆ ಮುಂದಿನ 3–4 ದಿನಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸಿ ದಕ್ಷಿಣ ಒಡಿಶಾ-ಉತ್ತರ ಆಂಧ್ರಪ್ರದೇಶ ಕರಾವಳಿಯತ್ತ ಸಾಗುವ ಸಾಧ್ಯತೆ ಇದೆ.

ಉತ್ತರ ಅಂಡಮಾನ್ ಸಮುದ್ರದಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದ ನಿಖರ ಚಲನೆ ಮತ್ತು ತೀವ್ರತೆಯನ್ನು IMD ಗಮನಿಸುತ್ತಿದೆ. ವ್ಯವಸ್ಥೆ ಬಲಗೊಂಡು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗಿದರೆ ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಕರಾವಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಬಹುದು. ಇದೇ ವೇಳೆ ಥೈಲ್ಯಾಂಡ್‌ನಲ್ಲೂ ಸೆಪ್ಟೆಂಬರ್ 20ರವರೆಗೆ ಹಲವು ಭಾಗಗಳಲ್ಲಿ ಭಾರೀ ಹಾಗೂ ಅತಿ ಭಾರೀ ಮಳೆಯ ಸಾಧ್ಯತೆಯನ್ನು ಅಲ್ಲಿನ ಹವಾಮಾನ ಇಲಾಖೆ ತಿಳಿಸಿದೆ.

ಇತ್ತ ಕರ್ನಾಟಕದಲ್ಲೂ ಮಳೆ ಚಟುವಟಿಕೆ ಮತ್ತೆ ಚುರುಕಾಗುವ ಮುನ್ಸೂಚನೆ ಇದೆ. IMDಯ ಸೆಪ್ಟೆಂಬರ್ 17ರ ಎಚ್ಚರಿಕೆಯ ಪ್ರಕಾರ ಸೆಪ್ಟೆಂಬರ್ 20 ಮತ್ತು 21ರಂದು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯ ಜೊತೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಾಧ್ಯತೆ ಇದೆ. ಕರಾವಳಿ ಕರ್ನಾಟಕಕ್ಕೆ ಸೆಪ್ಟೆಂಬರ್ 20–21ರಂದು ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಇದೇ ದಿನಗಳಲ್ಲಿ ಭಾರೀ ಮಳೆ ಹಾಗೂ ಗುಡುಗು-ಮಿಂಚಿನ ಎಚ್ಚರಿಕೆ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಮಳೆ ಅವಾಂತರ ಸೃಷ್ಟಿಸಿದೆ. ನಗರದ ಹಲವು ರಸ್ತೆಗಳು ಮತ್ತು ಅಂಡರ್‌ಪಾಸ್‌ಗಳು ಜಲಾವೃತವಾಗಿದ್ದು, ಸಂಚಾರ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ. ಸೆಪ್ಟೆಂಬರ್ 20 ಮತ್ತು 21ರಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯ ಸಾಧ್ಯತೆಯ ಜೊತೆಗೆ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನು IMD ಮುನ್ಸೂಚನೆ ನೀಡಿದೆ. ಹೀಗಾಗಿ ತಗ್ಗು ಪ್ರದೇಶಗಳು, ಅಂಡರ್‌ಪಾಸ್‌ಗಳು ಮತ್ತು ದುರ್ಬಲ ಮರ-ಕಟ್ಟಡಗಳಿರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಅಗತ್ಯವಾಗಿದೆ.

ಕರ್ನಾಟಕದಲ್ಲಿ ಈಗ ಕಾಣಿಸುತ್ತಿರುವ ಹವಾಮಾನದ ಪ್ರಮುಖ ಲಕ್ಷಣವೇ ಮಳೆಯ ಅಸಮ ಹಂಚಿಕೆ. ಕೆಲವೇ ಗಂಟೆಗಳಲ್ಲಿ ಭಾರೀ ಮಳೆ ಸುರಿದು ನಗರ ಪ್ರದೇಶಗಳಲ್ಲಿ ಜಲಾವೃತ ಸೃಷ್ಟಿಯಾಗುತ್ತಿದ್ದರೆ, ಮತ್ತೊಂದೆಡೆ ಕೆಲವು ಪ್ರದೇಶಗಳಲ್ಲಿ ಮಳೆ ಕೊರತೆಯ ಆತಂಕ ಮುಂದುವರಿದಿದೆ. ಬೆಂಗಳೂರಿನ ಮಳೆಯ ಮುನ್ಸೂಚನೆಯಲ್ಲೂ ಸೆಪ್ಟೆಂಬರ್ 21ರವರೆಗೆ ಮಳೆ ಮತ್ತು ಗುಡುಗು-ಮಿಂಚಿನ ಚಟುವಟಿಕೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನಗಳಲ್ಲಿ ಹೊಸ ವಾಯುಭಾರ ಕುಸಿತದ ಚಲನೆ, ಮುಂಗಾರು ತೊಟ್ಟಿಲಿನ ಸ್ಥಾನ ಮತ್ತು ಸ್ಥಳೀಯ ಮಳೆ ಚಟುವಟಿಕೆಗಳ ಆಧಾರದ ಮೇಲೆ ರಾಜ್ಯದ ಮಳೆ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದೆ.

ಒಟ್ಟಾರೆಯಾಗಿ, ಥೈಲ್ಯಾಂಡ್‌ನಿಂದ ಆರಂಭವಾಗಿರೋ ಹವಾಮಾನ ಬದಲಾವಣೆಯ ಎಫೆಕ್ಟ್ ಈಗ ಬಂಗಾಳ ಕೊಲ್ಲಿಯ ಮೇಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೆಪ್ಟೆಂಬರ್ 19ರ ವೇಳೆಗೆ ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ರೂಪುಗೊಂಡು, ಮುಂದಿನ 3–4 ದಿನಗಳಲ್ಲಿ ಒಡಿಶಾ–ಆಂಧ್ರ ಕರಾವಳಿಯತ್ತ ಚಲಿಸುವ ಸಾಧ್ಯತೆ ಇದೆ. ಇತ್ತ ಕರ್ನಾಟಕದಲ್ಲೂ ಸೆಪ್ಟೆಂಬರ್ 20–21ರಂದು ಹಲವು ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ಇದೆ. ಬೆಂಗಳೂರಿನಲ್ಲೂ ಮಳೆ ಚಟುವಟಿಕೆ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ.. ಹೀಗಾಗಿ ರಾಜ್ಯದಲ್ಲಿ ಪ್ರವಾಹದ ಆತಂಕನಾ..? ಇಲ್ಲವೇ ಮಳೆ ಕೊರತೆ ಮುಂದುವರಿಯುತ್ತಾ..? ಅನ್ನೋದಕ್ಕೆ ಮುಂದಿನ ಕೆಲವು ದಿನಗಳ ಹವಾಮಾನವೇ ಉತ್ತರ ನೀಡಲಿದೆ.

Add Zee News as a Preferred Source
TAGS:
Weather Update