SOCIAL MEDIA

Newsletter

PARTNER SITES
Select Language Select State

ಮನವೊಲಿಕೆ ವಿಶ್ವಾದಲ್ಲಿದ್ದ ಕಾಂಗ್ರೆಸ್‌ಗೆ ಮಿತ್ರಪಕ್ಷದಿಂದಲೇ ಭಾರೀ ಮುಖಭಂಗ

Major embarrassment for Congress from its own ally: ಸೋಮವಾರ ನಡೆಯಲಿರುವ ವಿಶೇಷ ಅಧಿಮಂಡನೆಯಾಗಲಿದೆ.. ಆದ್ರೆ ಹೇಗಾದ್ರೂ ಮಾಡಿ ಮಸೂದೆ ಜಾರಿಯಾಗದಂತೆ ಮಾಡಲು ಇಂಡಿಯಾ ಒಕ್ಕೂಟ ಶತಪ್ರಯತ್ನ ಮಾಡ್ತಿದೆ.. ಅದ್ರಂತೆ ಭಾನುವಾರ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್‌ ಅವರನ್ನು ಕಾಂಗ್ರೆಸ್‌ ನಿಯೋಗ ಭೇಟಿಯಾಗಿತ್ತು..

Written By Ramya. R. Gowda
Published: Nov 29, 2026, 21:01 IST | Updated: Nov 29, 2026, 21:12 IST
Join


congress leaders meet mk stalin dmk delimitation bill : ಸೋಮವಾರ ನಡೆಯಲಿರುವ ವಿಶೇಷ ಅಧಿಮಂಡನೆಯಾಗಲಿದೆ.. ಆದ್ರೆ ಹೇಗಾದ್ರೂ ಮಾಡಿ ಮಸೂದೆ ಜಾರಿಯಾಗದಂತೆ ಮಾಡಲು ಇಂಡಿಯಾ ಒಕ್ಕೂಟ ಶತಪ್ರಯತ್ನ ಮಾಡ್ತಿದೆ.. ಅದ್ರಂತೆ ಭಾನುವಾರ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್‌ ಅವರನ್ನು ಕಾಂಗ್ರೆಸ್‌ ನಿಯೋಗ ಭೇಟಿಯಾಗಿತ್ತು.. ಕ್ಷೇತ್ರ ವಿಂಗಡಣೆ ಮಸೂದೆಗೆ ಒಪ್ಪಿಗೆ ನೀಡದಂತೆ ಮನವೊಲಿಸಲು ಪ್ರಯತ್ನಿಸಿತು.. ಆದ್ರೆ ಅಲ್ಲಿ ಆಗಿದ್ದೂ ಮಾತ್ರ ಮುಖಭಂಗ.. ಅಷ್ಟಕ್ಕೂ ಇಂಡಿಯಾ ಒಕ್ಕೂಟದ ಪ್ರಯತ್ನದ ಫಲವೇನು..? ಇಲ್ಲಿದೆ ನೋಡಿ..

ಕೇಂದ್ರ ಸರ್ಕಾರದ ಎರಡು ಮಹತ್ವದ ಮಸೂದೆಗಳಿಗೆ ಇಂಡಿಯಾ ಮೈತ್ರಕೂಟದ ಮಿತ್ರ ಪಕ್ಷಗಳು ಕೂಡ ಬೆಂಬಲ ಸೂಚಿಸಿದೆ.. ಅದ್ರಲ್ಲೂ ಡಿಎಂಕೆ, ಎನ್‌ಸಿಪಿ ಹಾಗೂ ವೈಎಸ್‌ಆರ್‌ಸಿಪಿ ಪಕ್ಷಗಳು ಬೆಂಬಲ ಸೂಚಿಸಿರುವುದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ.. ಹೀಗಾಗಿ ಭಾನುವಾರ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಅವರನ್ನು ಕಾಂಗ್ರೆಸ್‌ ನಾಯಕರು ಭೇಟಿಯಾಗಿದ್ದಾರೆ..

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಕರ್ನಾಟಕದ ಸಿಎಂ ಡಿ.ಕೆ.ಶಿವಕುಮಾರ್‌  ಸೇರಿದಂತೆ ಪಕ್ಷದ ಉನ್ನತ ನಾಯಕರ ನಿಯೋಗ ಚೆನ್ನೈನ ಸ್ಟಾಲಿನ್ ನಿವಾಸದಲ್ಲಿ ಸಭೆ ಸೇರಿತ್ತು... ಕಾಂಗ್ರೆಸ್‌ ನಾಯಕರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ಟಾಲಿನ್‌, ರಾಹುಲ್ ಮನವಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.. ಇದ್ರಿಂದ ಮನವೊಲಿಕೆ ವಿಶ್ವಾದಲ್ಲಿದ್ದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.. ಕಾಂಗ್ರೆಸ್‌ ಮನವಿಗೆ ಒಪ್ಪದ ಎಂ.ಕೆ ಸ್ಟಾಲಿನ್‌ ಕ್ಷೇತ್ರ ಮರುವಿಂಗಡಣೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.. ಇನ್ನು ಸೋಮವಾರ ಮತ್ತೆ ಇಂಡಿಯಾ ಒಕ್ಕೂಟ ಸಭೆ ನಡೆಸಲಿದೆ.. ಕಾಂಗ್ರೆಸ್‌ ನಾಯಕರು NCP ಮುಖ್ಯಸ್ಥ ಶರದ್‌ ಪವರ್‌ ಅವರ ಮನವೊಲಿಕೆಗೂ ಮುಂದಾಗಿದ್ದಾರೆ..

ಇನ್ನು ಸ್ಟಾಲಿನ್‌ ಅವರೊಂದಿಗಿನ ಸಭೆ ಬಳಿಕ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾತನಾಡಿದ್ದಾರೆ. ನಾವು ಏನು ಚರ್ಚಿಸಿದ್ದೇವೆ ಮತ್ತು ಸಹೋದರ ಸ್ಟಾಲಿನ್ ಅವರಿಗೆ ಏನು ಹೇಳಿದ್ದೇವೆ ಎಂಬುದನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಇದು ತಮಿಳು ಸಂಸ್ಕೃತಿಗೆ, ತಮಿಳು ಭಾಷೆಗೆ, ತಮಿಳು ಜನರಿಗೆ, ಭಾರತೀಯ ಒಕ್ಕೂಟಕ್ಕೆ ಮತ್ತು ಭಾರತಕ್ಕೆ ಬೆದರಿಕೆ. ಎಲ್ಲಾ ದೇಶಭಕ್ತ ಜನರಂತೆ ಸಹೋದರ ಸ್ಟಾಲಿನ್ ಕೂಡ ಈ ಬೆದರಿಕೆಯ ವಿರುದ್ಧ ನಿಲ್ಲಬೇಕು" ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್‌ ನಾಯಕರ ಭೇಟಿ ಬೆನ್ನಲ್ಲೇ, ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ..ನಮಗೆ ಯಾವಾಗಲೂ ತಮಿಳುನಾಡಿನ ಹಿತವೇ ಮುಖ್ಯ.ತಮಿಳರ ಹಿತಾಸಕ್ತಿಗಾಗಿಯೇ ಈ ನಿರ್ಧಾರ ಕೈಗೊಂಡಿದ್ದೇವೆ.ಇತಿಹಾಸ ನಮ್ಮನ್ನು ಹೋರಾಟಗಾರರ ರೀತಿ ಗುರುತಿಸುತ್ತದೆ.. ತಮಿಳುನಾಡಿನ ಹಕ್ಕುಗಳಿಗಾಗಿ ಹೋರಾಡೋಣ! ಗೆಲುವು ಸಾಧಿಸೋಣ! ಅಂತ ಪೋಸ್ಟ್‌ಮಾಡಿದ್ದಾರೆ..

ಇತ್ತ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ.. ಹೇಮಂತ್ ಸೊರೇನ್ ನೇತೃತ್ವದ JMM ಸರ್ಕಾರ ಕೂಡ ಕೇಂದ್ರ ಸರ್ಕಾರಕ್ಕೆ ಬೆಂಬಲಿಸುವ  ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಜೆಎಂಎಂ  ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಕುರಿತು ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಸ್ತಾಪಿತ ಮಸೂದೆಯನ್ನು ಪರಿಶೀಲಿಸಿ, ಜಾರ್ಖಂಡ್‌ನ ಮೇಲೆ ಅದು ಬೀರಬಹುದಾದ ಪರಿಣಾಮಗಳನ್ನು ಮೌಲ್ಯಮಾಪನ ಮಾಡಿದ ನಂತರ, ಒಂದೆರಡು ದಿನಗಳಲ್ಲಿ ತಮ್ಮ ನಿಲುವನ್ನು ಪ್ರಕಟಿಸುವುದಾಗಿ ಪಕ್ಷ ಶನಿವಾರ ತಿಳಿಸಿತ್ತು. ಅದ್ರಂತೆ  JMM ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ ಅಂತ ಮೂಲಗಳು ತಿಳಿಸಿದೆ...

ಒಟ್ಟಲ್ನಿ ಇಂಡಿಯಾ ಒಕ್ಕೂಟದಲ್ಲೇ ಜಟಾಪಟಿ ಮುಂದುವರೆದಿದೆ. ಇದರೊಟ್ಟಿಗೆ ಕಾಂಗ್ರೆಸ್‌ನ ಪ್ರಯತ್ನಕ್ಕೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಇಂಡಿಯಾ ಒಕ್ಕೂಟದ ಒಡಕಿಗೆ ಈಗಿನ ಬೆಳಕಿಗೆ ಕನ್ನಡಿ ಹಿಡಿದಂತಿದೆ..

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES