SOCIAL MEDIA

Newsletter

PARTNER SITES
Select Language Select State

UK ಜೊತೆ ಸಿಎಂ ವಿಜಯ್‌ ಬಿಗ್‌ ಡೀಲ್‌.. ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿಯ ಸ್ಪೆಷಲ್‌ ಪ್ಲಾನ್‌ಗಳು!

ಸಿಎಂ ವಿಜಯ್‌ ಅವರು ತಮಿಳುನಾಡಿನಲ್ಲಿ ಹೊಸ ವೈಭವವನ್ನು ತರಲು ಮುಂದಾಗಿದ್ದಾರೆ ಎನ್ನಬಹುದು. ರಾಜ್ಯದಲ್ಲಿ ಉತ್ಪಾದನೆ, ಆಟೋಮೊಬೈಲ್‌ಗಳು, ವಿದ್ಯುತ್ ವಾಹನಗಳು, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ.

Reported By Bhimappa Written By Bhimappa
Published: Sep 16, 2026, 04:25 PM IST | Updated: Sep 17, 2026, 02:28 PM IST
Image Credit: File Photo
Join

ತಮಿಳುನಾಡಿಗೆ ಜೋಸೆಫ್‌ ವಿಜಯ್‌ ಅವರು ಮುಖ್ಯಮಂತ್ರಿ ಆದ ಮೇಲೆ ಅಭಿವೃದ್ಧಿ ಕಡೆಗೆ ಹೆಚ್ಚಿನ ಹೊಲವು ತೋರುತ್ತಿದ್ದಾರೆ. ಈ ಹಿಂದಿ ನ ಸರ್ಕಾರಗಳಿಗಿಂತ ಸಿಎಂ ಜೋಸೆಫ್‌ ವಿಜಯ್‌ ಅವರು ಜನ ಮನ್ನಣೆ ಯೋಜನೆಗಳತ್ತ ಹೊತ್ತು ಕೊಡುತ್ತಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ನಟ ವಿಜಯ್‌ ಚೊಚ್ಚಲ ಪ್ರಯತ್ನದಲ್ಲೇ ಮುಖ್ಯಮಂತ್ರಿ ಗದ್ದುಗೆ ಏರಿ ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೇ ತಮ್ಮ ಪ್ರಣಾಳಿಕೆಯಲ್ಲಿದ್ದ ಯೋಜನೆಗಳನ್ನು ಒಂದೊಂದಾಗಿಯೇ ಜಾರಿ ಮಾಡುತ್ತಿದ್ದಾರೆ. ಸಿಎಂ ಜೋಸೆಫ್‌ ವಿಜಯ್‌ ಅವರ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಗಳು ಬರುತ್ತಿವೆ. ಇದರ ಬೆನ್ನಲ್ಲೇ ಇಂಗ್ಲೆಂಡ್‌ ಪ್ರವಾಸದಲ್ಲಿರುವ ಸಿಎಂ ವಿಜಯ್‌ ಅವರು ಬಹುದೊಡ್ಡ ಯೋಜನೆಗಳಿಗೆ ಸಹಿ ಹಾಕಿದ್ದು ಇದು ತಮಿಳುನಾಡಿನಲ್ಲಿ ಭಾರೀ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂದು ಹೇಳಲಾಗುತ್ತಿದೆ.  

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸೆಪ್ಟೆಂಬರ್ 14 ರಂದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 12,300 ಕೋಟಿ ರೂಪಾಯಿಗಳ ಮೌಲ್ಯದ ನಾಲ್ಕು ಬಹುದೊಡ್ಡ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ಹೂಡಿಕೆಯಿಂದ ತಮಿಳುನಾಡು ರಾಜ್ಯಕ್ಕೆ ಏನು ಪ್ರಯೋಜನಾ ಎಂದು ನಿಮ್ಮ ಪ್ರಶ್ನೆ ಆಗಬಹುದು. ಸಿಎಂ ವಿಜಯ್‌ ಅವರು ತಮ್ಮ ರಾಜ್ಯಕ್ಕೆ ಉಪಯೋಗ ಇಲ್ಲದೇ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಸಂಗತಿ. ತಮಿಳುನಾಡು ರಾಜ್ಯದ ಜನರಿಗೆ ಸಿಎಂ ಜೋಸೆಫ್‌ ವಿಜಯ್‌ ಅವರು ಗುಡ್‌ನ್ಯೂಸ್‌ ನೀಡಿದ್ದಾರೆ ಎಂದು ಹೇಳಬಹುದು.

ಸಿಎಂ ವಿಜಯ್‌ ಅವರು ಸುಮಾರು 12,300 ಕೋಟಿ ರೂಪಾಯಿಗಳ ಮೌಲ್ಯದ 4 ಬೃಹತ್‌ ಹೂಡಿಕೆಗಳಿಂದ ತಮಿಳುನಾಡಿನಲ್ಲಿ ಸುಮಾರು 9,000 ಉದ್ಯೋಗಗಳು ಸೃಷ್ಟಿ ಆಗುವ ಸಾಧ್ಯತೆಯಿದೆ. ತಮಿಳುನಾಡು ರಾಜ್ಯ ಸರ್ಕಾರವು ಸಂವರ್ಧನ ಮದರ್‌ಸನ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನೊಂದಿಗೆ 11,000 ಕೋಟಿ ರೂಪಾಯಿಗಳ ಹೂಡಿಕೆಗಾಗಿ ಅತಿದೊಡ್ಡ ಒಪ್ಪಂದವನ್ನು ಮಾಡಿಕೊಳ್ಳಲಿದೆ. ವಿನ್ಯಾಸ ಅಥವಾ ಡಿಸೈನ್‌, ಎಂಜಿನಿಯರಿಂಗ್, ಉತ್ಪಾದನೆ ಅಥವಾ ಮ್ಯಾನುಫಕ್ಚರ್, ಜೋಡಣೆ‌ ಅಥವಾ ಅಸೆಂಬೆಲ್ ಮತ್ತು ಲಾಜಿಸ್ಟಿಕ್ಸ್ ಸೌಲಭ್ಯಗಳಲ್ಲಿ ಸುಮಾರು 7,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.‌ ಇದರಿಂದ ರಾಜ್ಯಕ್ಕೆ ಹೆಚ್ಚು ಅನುಕೂಲವೇ ಆಗಲಿದೆ ಎಂದು ಹೇಳಲಾಗುತ್ತಿದೆ.

ಚೆನ್ನೈನಲ್ಲಿ ಗ್ಲೋಬಲ್ ಕೆಪಾಬಿಲಿಟಿ ಸೆಂಟರ್ ಅನ್ನು ಅಭಿವೃದ್ಧಿಪಡಿಸಲು, ಬ್ರಿಟಿಷ್ ಕಂಪನಿಯಾದ ಅರ್ನ್ಸ್ಟ್ ಆಂಡ್‌ ಯಂಗ್ ಕಂಪನಿ ಮೂಲಕ 1,000 ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಿಎಂ ವಿಜಯ್ ಅವರು ಸಹಿ ಹಾಕಿದ್ದಾರೆ. ಪ್ರಸ್ತಾವಿತ ಕೇಂದ್ರ (proposed centre) ವು ಮುಂಬರುವ ಜಿಸಿಸಿ ಕಾರಿಡಾರ್‌ನಲ್ಲಿ ಸುಮಾರು 2,000 ಉನ್ನತ-ಮೌಲ್ಯದ ಉದ್ಯೋಗಗಳನ್ನು ಅಥವಾ ಹೈ ಲೆವೆಲ್‌ ಜಾಬ್‌ಗಳನ್ನು ಸೃಷ್ಟಿ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಚೆನ್ನೈ ಮತ್ತು ತಿರುಚಿರಾಪಳ್ಳಿಯಲ್ಲಿ ತನ್ನ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ವಿಸ್ತರಿಸುವ ಸಲುವಾಗಿ ಸ್ವೀಡನ್ ಮೂಲದ ಸಿಗ್ಮಾ ಟೆಕ್ನಾಲಜಿ ಗ್ರೂಪ್‌ನೊಂದಿಗೆ ಮತ್ತೊಂದು ಮಹತ್ವದ ಒಪ್ಪಂದಕ್ಕೆ ಸಿಎಂ ವಿಜಯ್‌ ಅವರು ಸಹಿ ಹಾಕಿದ್ದಾರೆ. ಇದರಿಂದ ಚೆನ್ನೈ ಮತ್ತು ತಿರುಚಿರಾಪಳ್ಳಿಯಲ್ಲಿ ಸುಮಾರು 600 ಹೈ ಲೆವೆಲ್‌ ಜಾಬ್‌ಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಸಿಎಂ ವಿಜಯ್‌ ಅವರು ಇನ್ನೊಂದು ಪ್ರತಿಷ್ಠಿತ ಕಂಪನಿಯಾದ ವಿಲ್ಸನ್ ಪವರ್ ಸೊಲ್ಯೂಷನ್ಸ್ ಜೊತೆ ಸಹಿ ಹಾಕಿದ್ದಾರೆ. ಇದು ಸಿಎಂ ವಿಜಯ್‌ ಅವರು ಮಾಡಿಕೊಂಡ ನಾಲ್ಕನೇ ಒಪ್ಪಂದ ಆಗಿದೆ. ಇದು ಸುಮಾರು 300 ಕೋಟಿ ರೂಪಾಯಿಗಳ ಹೂಡಿಕೆಯಾಗಿದ್ದು ತಿರುವಲ್ಲೂರು ಜಿಲ್ಲೆಯಲ್ಲಿ ಸುಮಾರು 400 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯಮಂತ್ರಿ ವಿಜಯ್ ಅವರು ಯುನಿಟೆಡ್‌ ಕಿಂಗ್‌ಡಮ್‌ಗೆ ತೆರಳುವ ಮೊದಲೇ ತಮಿಳುನಾಡು ಸರ್ಕಾರ ರೂಪಿಸಿದ್ದ ಹೂಡಿಕೆ ಮಾರ್ಗಸೂಚಿಗೆ ಈ ಒಪ್ಪಂದಗಳು ಅನುಗುಣವಾಗಿವೆ.

ಸಿಎಂ ವಿಜಯ್‌ ಅವರು ತಮಿಳುನಾಡಿನಲ್ಲಿ ಹೊಸ ವೈಭವವನ್ನು ತರಲು ಮುಂದಾಗಿದ್ದಾರೆ ಎನ್ನಬಹುದು. ಸದ್ಯ ಮಾಡಿಕೊಂಡಿರುವ ಒಪ್ಪಂದಗಳು ರಾಜ್ಯದಲ್ಲಿ ಉತ್ಪಾದನೆ, ಆಟೋಮೊಬೈಲ್‌ಗಳು, ವಿದ್ಯುತ್ ವಾಹನಗಳು, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ. ಈ ಒಪ್ಪಂದಗಳಿಗೂ ಮೊದಲೇ ಅಂದರೆ ವಿಜಯ್‌ ಅವರು ಯುಕೆ ಪ್ರವಾಸ ಕೈಗೊಳ್ಳುವ ಮೊದಲೇ ಯುರೋಪಿಯನ್‌ ಕಂಪನಿಗಳು ತಮಿಳುನಾಡಿನಲ್ಲಿ 8,491 ಕೋಟಿ ರೂಪಾಯಿಗಳ ಹೂಡಿಕೆಗೆ ಪ್ರಸ್ತಾವನೆ ಸಲ್ಲಿಸಿ 5,690 ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ವಿಜಯ್‌ ಅವರ ಯುಕೆ ಪ್ರವಾಸವು ಹೊಸ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದರು. ಅದರಂತೆ ಈಗ ಆಗುತ್ತಿದೆ.

ಜುಲೈ 15 ರಂದು ಜಾರಿಗೆ ಬಂದ ಭಾರತ- ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ ನಂತರ ಈ ಭೇಟಿ ಮಾಡಲಾಯಿತು. ತಮಿಳುನಾಡು ಸರ್ಕಾರದ ಪ್ರಕಾರ ಈ ಒಪ್ಪಂದಗಳು ಜವಳಿ, ಚರ್ಮ, ಪಾದರಕ್ಷೆಗಳು, ಆಟೋ ಘಟಕಗಳು, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ. ಸಾರ್ವಜನಿಕರಿಗೂ ಇವು ಅತ್ಯಂತ ಸುಲಭವಾಗಿ ಕೈಗೆಟಕಲಿವೆ.

CM ವಿಜಯ್‌ ಅವರು ನಟ ಅಜಿತ್‌ ಕುಮಾರ್‌ ಅವರ ಕಾರು ರೇಸ್‌ ನೋಡಲು ಹೋಗಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಅಲ್ಲಿನ ಕಂಪನಿಗಳೊಂದಿಗೆ ಬಿಗ್‌ ಡೀಲ್‌ ಮಾಡಿಕೊಳ್ಳುತ್ತಿದ್ದಾರೆ. ತಮಿಳುನಾಡಿಗೆ ವಿದೇಶಿ ಕಂಪನಿಗಳನ್ನು ಆಹ್ವಾನ ಮಾಡುತ್ತಿದ್ದು ಜೊತೆಗೆ ತಮಿಳರಿಗೆ ಉದ್ಯೋಗ ಸೃಷ್ಟಿಯು ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ದಿನಗಳಲ್ಲಿ ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿಯೇ ಉದ್ಯೋಗಗಳು ಸೃಷ್ಟಿಯಾಗಲಿವೆ. ಇವು ರಾಜ್ಯದ ಆರ್ಥಿಕವಾಗಿ ಬಲಪಡಿಸಲಿದ್ದು ಹಣದ ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಆಗಲಿದೆ.

ಸಿಎಂ ವಿಜಯ್‌ ಅವರು ಒಂದು ವಾರದ ಕಾಲ ಅಂದರೆ ಸೆಪ್ಟೆಂಬರ್‌ 10 ರಿಂದ ಸೆಪ್ಟೆಂಬರ್‌ 16, 17ರವರೆಗೆ ಯುನಿಟೆಡ್‌ ಕಿಂಗ್‌ಡಮ್‌ನ ಪ್ರವಾಸದಲ್ಲಿ ಇರಲಿದ್ದಾರೆ. ಸೆಪ್ಟೆಂಬರ್‌ 10 ರಂದು ಚೆನ್ನೈ ವಿಮಾನ ನಿಲ್ದಾಣದಿಂದ ವಿಜಯ್‌ ಅವರು ಯುಕೆಗೆ ತೆರಳಿದ್ದರು. ಸಿಎಂ ವಿಜಯ್‌ ಅವರ ಮೊದಲ ಅಧಿಕೃತ ವಿದೇಶ ಪ್ರವಾಸ ಇದಾಗಿದೆ. ಈ ಮಹತ್ವದ ಪ್ರವಾಸದಲ್ಲಿ ಹೂಡಿಕೆ ಸಂಪರ್ಕ, ಉತ್ಪಾದನೆ ಮತ್ತು ಜಾಗತಿಕ ವ್ಯಾಪಾರಕ್ಕಾಗಿ ಉನ್ನತ ನಾಯಕರೊಂದಿಗೆ ಸಭೆಗಳನ್ನು ಏರ್ಪಡಿಸಲಾಗಿರುತ್ತದೆ. ಸಿಎಂ ವಿಜಯ್‌ ಅವರು ಇಂದು ರಾತ್ರಿ ಅಥವಾ ನಾಳೆ ತಮಿಳುನಾಡಿಗೆ ಆಗಮಿಸಲಿದ್ದಾರೆ.  

ಸಿಎಂ ವಿಜಯ್‌ ಅವರು ಲಂಡನ್‌ನಲ್ಲಿ ನಟ ಅಜಿತ್‌ ಕುಮಾರ್‌ ಅವರ ಕಾರು ರೇಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕೆಗಳನ್ನ ವ್ಯಕ್ತಪಡಿಸಿದ್ದವು. ವಿಜಯ್‌ ಅವರು ರಾಜ್ಯದ ಅಭಿವೃದ್ಧಿ ಬಿಟ್ಟು ಎಂಜಾಯ್‌ ಮಾಡಲು ವಿದೇಶಕ್ಕೆ ಹೋಗಿದ್ದಾರೆ. ಅವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES