SOCIAL MEDIA

Newsletter

PARTNER SITES
Select Language Select State

ರಿಯಲ್ ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ : ಭಾರತೀಯ ಪೈಲಟ್‌‌ಗೆ ಇಸ್ರೇಲ್‌ನಿಂದ ಅತ್ಯುನ್ನತ ಗೌರವ!

ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್‌ ನಡೆಸಿದ ಮಾರಣಾಂತಿಕ ದಾಳಿಯ ನಡುವೆಯೂ ಧೈರ್ಯಗುಂದದೆ ಫ್ಲೈ ದುಬೈ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿ 180 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸಕ್ಕೆ ಇಡೀ ಜಗತ್ತೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇದರ ನಡುವೆ ಇಸ್ರೇಲ್ ಅತ್ಯುನ್ನತ ಗೌರವ ನೀಡಿದೆ..

Reported By Krishna NK Written By Krishna NK
Published: Oct 04, 2026, 06:41 PM IST | Updated: Oct 04, 2026, 06:45 PM IST
Image Credit: Captain Smith Machar
Join

Captain Smith Machar : ಫ್ಲೈ ದುಬೈ ವಿಮಾನದಲ್ಲಿ ಕೋ- ಪೈಲೆಟ್‌ ದಾಳಿಗೆ ತುತ್ತಾದ, ಭಾರತದ ಪೈಲೆಟ್‌ ಕ್ಯಾಪ್ಟನ್‌ ಸ್ಮಿತ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.. ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಮಿತ್‌ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ಮೋದಿ ಹಾಗೂ ಸ್ಮಿತ್‌ ಅವರಿಗೆ ನೆತನ್ಯಾಹು ಅತ್ಯತ್ತಮ ಗೌರವ ಸಲ್ಲಿಸಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ...

ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌.. ಇಡೀ ವಿಶ್ವವೇ ಹೆಮ್ಮೆ ಪಡುವಂತೆ ಮಾಡಿದ ರಿಯಲ್‌ ಹೀರೋ.. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು 180 ಪ್ರಯಾಣಿಕರ ಪ್ರಾಣ ಉಳಿಸಿದ ಮಹಾ ಶೂರ.. ಕೋ- ಪೈಲೆಟ್‌ ದಾಳಿಗೆ ಕುಗ್ಗದೇ - ಫ್ಲೈ  ದುಬೈ ವಿಮಾನವನ್ನ ಸೇಫ್‌ ಲ್ಯಾಂಡಿಂಗ್‌ ಭಾರತದ ಖ್ಯಾತಿಯನ್ನ ಮತ್ತಷ್ಟು ಹೆಚ್ಚಿಸಿದ ಸಾಹಸಿ.. ಚಾಕು ಇರಿತಕ್ಕೆ ಒಳಗಾಗಿದ್ದ ಕ್ಯಾಪ್ಟನ್‌ ಸ್ಮಿತ್‌ ಸದ್ಯ ಸ್ಮಿತ್‌ ಸೌದಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಪ್ರಧಾನಿ ಮೋದಿ ಸ್ಮಿತ್‌ ಮಚ್ಚರ್‌ರಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ರು..ಇದೀಗ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಅತ್ಯುನ್ನತ ಗೌರವ ಒಲಿದು ಬಂದಿದೆ. ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಹಾಗೂ ಕ್ಯಾಪ್ಟನ್ ಸ್ಮಿತ್‌ ಅವರನ್ನ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಹ್ವಾನಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ಮಾಡಿದ್ದರು. ಶೀಘ್ರವೇ ಗುಣಮುಖರಾಗುವಂತೆ ಸ್ಮಿತ್‌ಗೆ ಹಾರೈಸಿದ ನೆತನ್ಯಾಹು, ಭಾರತ, ಇಸ್ರೇಲ್‌ ಪಾಲಿಗೆ ನೀವು ನಿಜವಾದ ಹೀರೋ ಅಂತ ಶ್ಲಾಘಿಸಿದ್ರು.. ಇದೇ ವೇಳೆ ಇಸ್ರೇಲ್‌ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಹಾಗೂ ಕ್ಯಾಪ್ಟನ್‌ ಸ್ಮಿತ್‌ ಅವರನ್ನ ನೆತನ್ಯಾಹು ಆಹ್ವಾನಿಸಿದ್ರು..2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಗೆ ಜ್ಯೋತಿ ಬೆಳಗಿಸಲು, ಮೋದಿ ಹಾಗೂ ಸ್ಮಿತ್‌ರನ್ನ ನೆತನ್ಯಾಹು ಅಧಿಕೃತವಾಗಿ ಆಹ್ವಾನಿಸಿದ್ದಾರೆ..

ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಜೊತೆ ಮಾತನಾಡುತ್ತಲೇ, ನೆತನ್ಯಾಹು ಅವರು ಫೈ ದುಬೈ ವಿಮಾನದಲ್ಲಾದ ಘಟನೆ ಬಗ್ಗೆ ಕೇಳಿದ್ರು.. ಕೋ- ಪೈಲೆಟ್‌ ನಿಮ್ಮ ಮೇಲೆ ಹೇಗೆ ದಾಳಿ ಮಾಡಿದೆ.. ಇದೆಲ್ಲ ಹೇಗೆ ಆರಂಭವಾಯ್ತು ಅಂತ, ನೆತನ್ಯಾಹು ಅವರು ಸ್ಮಿತ್‌ ಬಳಿ ಕೇಳಿದರು..ಇದಕ್ಕೆ ಉತ್ತರಿಸಿದ ಸ್ಮಿತ್‌ ಸುಮಾರು ನಾಲ್ಕೈದು ನಿಮಿಷಗಳ ಬಳಿಕ ಇದ್ದಕ್ಕಿದ್ದಂತೆ ನನ್ನ ತಲೆಯ ಹಿಂಭಾಗಕ್ಕೆ ಭಾರೀ ಹೊಡೆತ ಬಿತ್ತು. ಏನೋ ಸರಿಯಿಲ್ಲ ಎಂದು ಮೊದಲಿಗೆ ಭಾವಿಸಿದೆ. ನಂತರ ಒಂದರ ಹಿಂದೊಂದರಂತೆ ಹೊಡೆತಗಳು ನನ್ನ ಮೇಲೆ ಬಿದ್ದವು.. ಆಗ  ಕಾಕ್‌ಪಿಟ್‌ನಲ್ಲಿದ್ದ ವ್ಯಕ್ತಿಯೇ ನನ್ನ ಮೇಲೆ ದಾಳಿ ಮಾಡುತ್ತಿದ್ದಾನೆ ಎಂಬುದು ಅರಿವಾಯಿತು ಅಂತ ಸ್ಮಿತ್‌ ತಿಳಿಸಿದರು..

ಒಟ್ಟಾರೆ, ಕೋ-ಪೈಲೆಟ್‌ ದಾಳಿಗೆ ಒಳಗಾಗಿದ್ದ ಭಾರತೀಯ ಪೈಲೆಟ್‌ ಈಗ ಸೇಫ್‌ ಆಗಿದ್ದಾರೆ. ಆರೋಗ್ಯದಲ್ಲೂ ಚೇತರಿಕೆ ಕಂಡಿದೆ ಅಂತ ವೈದ್ಯರು ತಿಳಿಸಿದ್ದಾರೆ.. ಕ್ಯಾಪ್ಟನ್‌ ಸ್ಮಿತ್‌ ಸಾಹಸಕ್ಕೆ ಇದೀಗ ಇಸ್ರೇಲ್‌ನಿಂದ ಅತ್ಯುತ್ತಮ ಗೌರವ ಸಿಕ್ಕಿದೆ.. ಮತ್ತೊಂದ್ಕಡೆ ಕೋ- ಪೈಲೆಟ್‌ ಬಗ್ಗೆ ತೀವ್ರ ತನಿಖೆ ನಡೆಯುತ್ತಿದ್ದು,ಆದಷ್ಟು ಬೇಗ ಭಾರತೀಯ ಪೈಲೆಟ್‌ ಸ್ಮಿತ್‌ ಮಚ್ಚರ್‌ ಗುಣಮುಖರಾಗಿ ಬರಲಿ ಅನ್ನೋದೆ ತಮ್ಮ ಪ್ರಾರ್ಥನೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES