ಜನರಿಗೆ ಶಾಕ್ ಮೇಲೆ ಶಾಕ್.. AC, TV, ವಾಷಿಂಗ್ ಮೆಷಿನ್, ಬ್ರಿಡ್ಜ್ ಬೆಲೆಯಲ್ಲಿ ಭಾರೀ ಏರಿಕೆ, ಕಾರಣವೇನು?
ಜನರಿಗೆ ಬಿಗ್ ಶಾಕ್ ನೀಡಲಾಗಿದ್ದು ಎಲೆಕ್ಟ್ರಾನಿಕ್ಸ್ ತಯಾರಕರು ಅಕ್ಟೋಬರ್ 1 ರಿಂದ ಎಸಿಗಳು, ಟಿವಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳ ಅಥವಾ ಬ್ರಿಡ್ಜ್‌ಗಳು ಬೆಲೆಗಳಲ್ಲಿ ಭಾರೀ ಏರಿಕೆ
AC, TV, washing machines and refrigerators Prices increase: ಭಾರತದಲ್ಲಿ ಹಬ್ಬದ ಸೀಸನ್‌ಗಳಲ್ಲಿ ವ್ಯಾಪಾರ ವ್ಯವಹಾರ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಅಂದಿನ ದಿನಗಳಲ್ಲಿ ಮನೆಗೆ ಏನಾದರೂ ಹೊಸ ವಸ್ತು ತರಬೇಕು ಎಂದು ಕುಟುಂಬದವರು ಯೋಜನೆ ಹಾಕಿಕೊಂಡಿರುತ್ತಾರೆ. ಆದರೆ ಇದೀಗ ಜನರಿಗೆ ಬಿಗ್ ಶಾಕ್ ನೀಡಲಾಗಿದ್ದು ಎಲೆಕ್ಟ್ರಾನಿಕ್ಸ್ ತಯಾರಕರು ಅಕ್ಟೋಬರ್ 1 ರಿಂದ ಎಸಿಗಳು, ಟಿವಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳ ಅಥವಾ ಬ್ರಿಡ್ಜ್‌ಗಳು ಬೆಲೆಗಳಲ್ಲಿ ಭಾರೀ ಏರಿಕೆ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಸಿಗಳ ಬೆಲೆ ಶೇಕಡಾ 5 ರಿಂದ 8 ರಷ್ಟು ಹೆಚ್ಚಾಗಬಹುದು. ಏಕೆಂದರೆ ತಾಮ್ರ, ಉಕ್ಕು ಮತ್ತು ಅಲ್ಯೂಮಿನಿಯಂ ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ ಬೆಲೆಗಳಲ್ಲಿನ ನಿರಂತರ ಏರಿಕೆ, ಕಚ್ಚಾ ತೈಲ ಆಧಾರಿತ ಉತ್ಪನ್ನಗಳ ಬೆಲೆಗಳಲ್ಲಿನ ಏರಿಕೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿನ ಏರಿಳಿತಗಳು ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೂರೈಕೆ ಸರಪಳಿ ಬಿಕ್ಕಟ್ಟಿನಿಂದಾಗಿ ಈ ವರ್ಷ ಒಂದು ಸುತ್ತಿನ ಬೆಲೆ ಏರಿಕೆಯ ನಂತರ ಮತ್ತಷ್ಟು ಬೆಲೆ ಏರಿಕೆ ಅನಿವಾರ್ಯ ಎಂದು ಉತ್ಪಾದಕರು ಹೇಳಿದ್ದಾರೆ.
ಪ್ರಮುಖ ಕಂಪನಿಯಾದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಅಕ್ಟೋಬರ್ 1 ರಿಂದ ತನ್ನ ಉತ್ಪಾದನೆಯ ಎಸಿಗಳ ಬೆಲೆಯನ್ನು ಶೇಕಡಾ 5 ರಿಂದ 7 ರಷ್ಟು ಹೆಚ್ಚಿಸುವುದಾಗಿ ತನ್ನ ವ್ಯಾಪಾರ ಪಾಲುದಾರರಿಗೆ ತಿಳಿಸಿದೆ. ಅದೇ ರೀತಿ, ಕಚ್ಚಾ ವಸ್ತುಗಳ ಬೆಲೆ ಸವಾಲುಗಳನ್ನು ಉಲ್ಲೇಖಿಸಿ ವೋಲ್ಟಾಸ್ ಕೂಡ ತನ್ನ ಎಸಿಗಳ ಬೆಲೆಯನ್ನು ಶೇಕಡಾ 5 ರಿಂದ 7 ರಷ್ಟು ಹೆಚ್ಚಿಸುತ್ತಿದೆ. ಬ್ಲೂ ಸ್ಟಾರ್ ವ್ಯವಸ್ಥಾಪಕ ನಿರ್ದೇಶಕ ಪಿ. ತ್ಯಾಗರಾಜನ್ ಕೂಡ ತಮ್ಮ ಕಂಪನಿಯು ತನ್ನ ಪ್ರಾಡಕ್ಟ್‌ಗಳಾದ ಎಸಿಗಳ ಬೆಲೆಯನ್ನು ಶೇಕಡಾ 5 ರಿಂದ 8 ರಷ್ಟು ಹೆಚ್ಚಿಸಲಿದೆ ಎಂದು ದೃಢಪಡಿಸಿದ್ದಾರೆ.
ಹಬ್ಬದ ಸೀಸನ್ ದೃಷ್ಟಿಯಿಂದ ಬೆಲೆ ಏರಿಕೆಯನ್ನು ಮುಂದೂಡುವ ಉದ್ದೇಶವಿದ್ದರೂ, ಕಚ್ಚಾ ವಸ್ತುಗಳು ಮತ್ತು ಕಚ್ಚಾ ತೈಲದ ಬೆಲೆಯಲ್ಲಿನ ತೀವ್ರ ಏರಿಕೆಯು ಎಸಿ ಬೆಲೆಯನ್ನು ಶೇಕಡಾ 5 ರಷ್ಟು ಮತ್ತು ಎಲ್‌ಇಡಿ ಟಿವಿಗಳು, ವಾಷಿಂಗ್ ಮೆಷಿನ್‌ಗಳು ಮತ್ತು ರೆಫ್ರಿಜರೇಟರ್‌ಗಳ ಬೆಲೆಯನ್ನು ಶೇಕಡಾ 3 ರಿಂದ 4 ರಷ್ಟು ಹೆಚ್ಚಿಸುವಂತೆ ಮಾಡಿದೆ ಎಂದು ಹೈಯರ್ ಅಪ್ಲೈಯನ್ಸ್ ಇಂಡಿಯಾ ಸಿಇಒ ಎನ್.ಎಸ್ ಸತೀಶ್ ಅವರು ಹೇಳಿದ್ದಾರೆ. ಹಿಂದಿನ ಬೆಲೆ ಏರಿಕೆಯಿಂದ ಕಚ್ಚಾ ವಸ್ತುಗಳ ಹಣದುಬ್ಬರವು ಇನ್ನೂ ಶೇಕಡಾ 8 ರಿಂದ 10 ರಷ್ಟು ಹೆಚ್ಚಿರುವುದರಿಂದ ವಲಯದಾದ್ಯಂತ ಶೇಕಡಾ 5 ರಿಂದ 7 ರಷ್ಟು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಗೋದ್ರೇಜ್ ಎಂಟರ್‌ಪ್ರೈಸಸ್ ಗ್ರೂಪ್‌ನ ವ್ಯವಹಾರ ಮುಖ್ಯಸ್ಥ ಕಮಲ್ ನಂದಿ ಅವರು ಹೇಳಿದ್ದಾರೆ.
ಇನ್ನು ಟಿವಿ ನಿರ್ಮಾಣದಲ್ಲಿ ಬಂದರೆ ಮೆಮೊರಿ ಚಿಪ್ ಬೆಲೆಗಳು ಮತ್ತು ಸರಕು ಸಾಗಣೆ ಶುಲ್ಕಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ, SPPL ಅಕ್ಟೋಬರ್‌ನಲ್ಲಿ ಟಿವಿಗಳ ಬೆಲೆಯನ್ನು ಶೇಕಡಾ 10 ರಷ್ಟು ಹೆಚ್ಚಿಸಲು ಯೋಜಿಸಿದೆ ಎಂದು ಅದರ ಸಿಇಒ ಅವನೀತ್ ಸಿಂಗ್ ಮಾರ್ವಾ ಅವರು ಹೇಳಿದ್ದಾರೆ. ವೀಡಿಯೊಡೆಕ್ಸ್‌ನ ನಿರ್ದೇಶಕ ಅರ್ಜುನ್ ಬಜಾಜ್, ಸಣ್ಣ ಪರದೆಯ LED ಟಿವಿಗಳ ಬೆಲೆಗಳು ಶೇಕಡಾ 20 ರಷ್ಟು ಮತ್ತು ದೊಡ್ಡ ಪರದೆಯ ಟಿವಿಗಳ ಬೆಲೆಗಳು ಶೇಕಡಾ 10 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೀಪಾವಳಿಯ ನಂತರ ಗ್ರಾಹಕರು ಎಲೆಕ್ಟ್ರಾನಿಕ್ಸ್‌ಗಳಿಗೆ ಹೊಸ ಮೂಲ ಬೆಲೆಯನ್ನು ನೀಡಿ ಖರೀದಿ ಮಾಡಬೇಕಾಗುತ್ತದೆ.
ಹಳೆಯ ಬೆಲೆಯಲ್ಲಿ ಖರೀದಿಸಲು ಅವಕಾಶ: ಅಕ್ಟೋಬರ್ 1 ರಿಂದ ಕಂಪನಿಗಳು ತಮ್ಮ ಪ್ರಾಡಕ್ಟ್‌ಗಳ ಬೆಲೆ ಹೆಚ್ಚಿಸಿದ್ದರೂ, ಚಿಲ್ಲರೆ ವ್ಯಾಪಾರಿಗಳು ಈಗಾಗಲೇ ಸುಮಾರು ಒಂದು ತಿಂಗಳ ಹಳೆಯ ದಾಸ್ತಾನುಗಳನ್ನು ಸ್ಟಾಕ್‌ನಲ್ಲಿ ಹೊಂದಿದ್ದಾರೆ. ಅಂದರೆ ಹಬ್ಬದ ಸೀಸನ್‌ನ ಆರಂಭದಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರು ಹಳೆಯ ಆಫರ್‌ಗೆ ಖರೀದಿ ಮಾಡಬಹುದು. ನವರಾತ್ರಿ, ದಸರಾ ಮತ್ತು ದೀಪಾವಳಿ ಹಬ್ಬಗಳು ಬರುವುದರಿಂದ ಕ್ರೆಡಿಟ್ ಕಾರ್ಡ್‌ಗಳು, ಕ್ಯಾಶ್‌ಬ್ಯಾಕ್ ಕೊಡುಗೆಗಳು ಮತ್ತು ಬಡ್ಡಿರಹಿತ ಮಾಸಿಕ ಕಂತು ಯೋಜನೆಗಳು ಈ ಬೆಲೆ ಏರಿಕೆಯ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಹೊಸ ಬೆಲೆ ಜಾರಿಗೆ ಬರುವ ಮೊದಲೇ ಗ್ರಾಹಕರು ತಾವು ಖರೀದಿ ಮಾಡುವ ವಸ್ತುಗಳ ಬಗ್ಗೆ ಪ್ಲಾನ್ ಮಾಡಿದರೆ ಹಣ ಉಳಿಸಬಹುದು.