ಕೊಡ್ಲಿಗಿ ಪಟ್ಟಣ ಪಂಚಾಯತ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳಿ ದಿಢೀರ್ ಭೇಟಿ
ವಿಜಯನಗರ ಜಿಲ್ಲೆಯ ಕೊಡ್ಲಿಗಿ ಪಟ್ಟಣ ಪಂಚಾಯತ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳಿ ದಿಢೀರ್ ಭೇಟಿ ನೀಡಿದರು. ವಿಜಯನಗರ ಬಳ್ಳಾರಿ ವಿಭಾಗ ಲೋಕಾಯುಕ್ತ ಅಧಿಕಾರಿಗಳಿಗೆ ಆಡಳಿತ ವ್ಯವಸ್ಥೆ ಸರಿಯಾಗಿಲ್ಲ, ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಅನ್ನೋ ದೂರಿನ ಮೇಲೆ ಭೇಟಿ ನೀಡಿದರು. ಲೋಕಾಯುಕ್ತ ಒಬ್ಬ ಎಸ್ಪಿ, 2 Dysp ಇಬ್ಬರು, ಇಬ್ಬರು ಪಿಐಗಳು ಭೇಟಿ ಪರಿಶೀಲನೆ ನಾನಾ ದಾಖಲಾತಿಗಳು ಸೇರಿದಂತೆ ಅಧಿಕಾರಿಗಳಿಂದಲೂ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.
Kannada News LIVE : ರೇಷನ್ ಕಾರ್ಡ್ ಇ-ಕೆವೈಸಿ ದಿನಾಂಕ ವಿಸ್ತರಣೆ.. ನ್ಯಾಯಬೆಲೆ ಅಂಗಡಿಗಳ ವೇಳಾ ಪಟ್ಟಿ ಪರಿಷ್ಕರಣೆ
Kannada News LIVE Updates: ಕರ್ನಾಟಕದಲ್ಲಿ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಪರಿಷ್ಕರಣೆ ಟೆನ್ಷನ್ ಬಳಿಕ ಇದೀಗ ಪಡಿತರ ಚೀಟಿಯ ಇ-ಕೆವೈಸಿ ಟೆನ್ಷನ್ ಹೆಚ್ಚಿದ್ದು, ಬಿಪಿಎಲ್- ಎಪಿಎಲ್ ಕಾರ್ಡ್‌ದಾರರು ಇ-ಕೆವೈಸಿ ಮಾಡಿಸಲು ಬೆಳಗ್ಗೆಯಿಂದ ಸಂಜೆವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂನಿಂತರೂ ಕೆಲಸ ಅಗ್ತಿಲ್ಲ..ರೇಷನ್ ಕಾರ್ಡ್ ಕಳೆದುಕೊಳ್ಳುವ ಭಯದಲ್ಲಿದ್ದ ಜನರಿಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗುಡ್‌ನ್ಯೂಸ್ ನೀಡಿದೆ.
Kannada News LIVE Updates: ರಾಜ್ಯ ಸರ್ಕಾರ ಪಡಿತರ ಕಾರ್ಡ್‌ದಾರರಿಗರ ಬಿಗ್‌ಗುಡ್‌ನ್ಯೂಸ್ ಸಿಕ್ಕಿದೆ.. ನ್ಯಾಯಬೆಲೆ ಅಂಗಡಿಗಳಲ್ಲಿ ಎದುರಾಗುತ್ತಿರುವ ತೀವ್ರ ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿಗೆ ಅಡಚಣೆ ಉಂಟಾದ ಹಿನ್ನಲೆ ಪಡಿತರ ಇ-ಕೆವೈಸಿ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 30ರೊಳಗೆ ಇದ್ದ ಕೊನೆ ದಿನಾಂಕವನ್ನು ಇದೀಗ ಅಕ್ಟೋಬರ್ 20ರವರೆಗೆ ಅವಧಿ ವಿಸ್ತರಣೆ ಮಾಡಿ ಆಹಾರ ಮತ್ತು ನಾಗರೀಗ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಅಲ್ಲದೇ ಇದರ ಜೊತೆಗೆ ನ್ಯಾಯಬೆಲೆ ಅಂಗಡಿಗಳ ಸಮಯದಲ್ಲೂ ಬದಲಾವಣೆ ಮಾಡಿದೆ.
ಕಲ್ಯಾಣ ಕರ್ನಾಟಕ ಉತ್ಸವ
ಹೈದರಾಬಾದ್ ಕರ್ನಾಟಕ ಪ್ರದೇಶವು ರಾಜಸತ್ತೆಯಿಂದ ಪ್ರಜಾಸತ್ತೆಗೆ ಸೇರ್ಪಡೆಯಾದ ಸ್ಮರಣಾರ್ಥ ಆಚರಿಸಲಾಗುವ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರದ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಲ್ಯಾಣ ಅಭಿವೃದ್ಧಿಗೆ ಹತ್ತು ಅಂಶಗಳ ನೀಲನಕ್ಷೆ ಬಿಚ್ಚಿಟ್ಟರು.
ಬೆಂಗಳೂರು: ಪಕ್ಷಾತೀತ ಹಾಗೂ ಜನಪರ ಸುದ್ದಿ ಬಿತ್ತರದ ಮೂಲಕ ರಾಜ್ಯದ ಮನೆ ಮಾತಾಗಿರುವ ಜೀ ಕನ್ನಡ ನ್ಯೂಸ್ ಕೇವಲ ಸುದ್ದಿಗಷ್ಟೇ ಸೀಮಿತವಾಗದೇ, ಸಮಾಜದಲ್ಲಿ ಎಲೆಮರೆ ಕಾಯಂತೆ ತಮ್ಮದೇ ಆದ ಕ್ಷೇತ್ರಗಳಲ್ಲಿ ಅಭುತಪೂರ್ವ ಸಾಧನೆ ಮಾಡುತ್ತಿದ್ದಾರೆ. ಆ ಮೂಲಕ ಸಮಾಜ, ರಾಜ್ಯ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಿಮ್ಮ ನೆಚ್ಚಿನ ಜೀ ಕನ್ನಡ ನ್ಯೂಸ್ ಮಾಡುತ್ತಾ ಬರುತ್ತಿದೆ. ಈಗ ಮತ್ತೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡಿದೆ.
Kannada News LIVE Updates: ಎತ್ತಿನ ಹೊಳೆ ಯೋಜನೆ ವೀಕ್ಷಿಸಿದ ಸಚಿವ ಚೆಲುವರಾಯಸ್ವಾಮಿ
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿ ಬಳಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಸಚಿವ ಎನ್. ಚಲವರಾಯಸ್ವಾಮಿ ಪರಿಶೀಲನೆ ನಡೆಸಿದ್ದಾರೆ. ಪ್ಯಾಕೇಜ್ 11ಕಾಮಗಾರಿ ವೀಕ್ಷಿಸಿದ ಸಚಿವರು ಗ್ರಾವಿಟಿ ಕೆನಾಲ್ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಗಣ್ಯರಿಂದ ಶುಭಾಶಯಗಳು
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟುಹಬ್ಬವಾಗಿತ್ತು. ಸಿನಿಮಾರಂಗ ಗಣ್ಯರು ಸೇರಿದಂತೆ ಹಲವು ಮಂದಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕಲ್ಯಾಣ ಕರ್ನಾಟ ಭಾಗದ ಸಮಗ್ರ ಅಭಿವೃದ್ಧಿಗೆ ವಾರ್ಷಿಕ 5000 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಕೈಗಾರಿಕಾ ಬೆಳವಣಿಗೆ, ಹೊಸ ಉದ್ಯಮಗಳ ಸ್ಥಾಪನೆ ಪ್ರವಾಸೋದ್ಯಮ ಉತ್ತೇಜನ ಹಾಗೂ ರೈತರ ಅದಾಯ ಹೆಚ್ಚಿಸಲು ಒತ್ತು ನೀಡಲಾಗುವುದು. ಬಡವರಿಗೆ 50,000 ನಿವೇಶನ, ಉದ್ಯೋಗ ಸೃಷ್ಟಿಗೆ ರಿಯಾಯಿತಿ ದರದಲ್ಲಿ ಭೂಮಿ, ಕ್ರೀಡಾ ನಗರಿ ಮತ್ತು ಎಐ ಸಿಸಿಟಿವಿ ಅಳವಡಿಗೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ.
Kannada News LIVE Updates: ಎಂಟು ಲಕ್ಷ ರೂಪಾಯಿ ಪಡೆಯುತ್ತಿದ್ದ ಜಿಎಸ್‌ಟಿ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ
ಕಬ್ಬಿಣದ ಅಂಗಡಿ ಮಾಲೀಕನಿಂದ ಎಂಟು ಲಕ್ಷ ರೂಪಾಯಿ ಪಡೆಯುತ್ತಿದ್ದ ಜಿಎಸ್‌ಟಿ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂನಲ್ಲಿ ನಡೆದಿದೆ. ಅತಿ ಹೆಚ್ಚು ಆರೋಪಗಳು ಕೇಳಿಬಂದ ಹಿನ್ನಲೆ ಬನ್ನೇರುಘಟ್ಟ ಮತ್ತು ಮಂಟಪ ಪಂಚಾಯತ್ ಸಿಬ್ಬಂದಿಗೂ ಲೋಕಾಯುಕ್ತ ಶಾಕ್ ಕೊಟ್ಟಿದ್ದರೆ. ಮತ್ತೊಂದಡೆ ನಿನ್ನೆ ಐವತ್ತು ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದಿದ್ದ ಧಾರಾವಾಡ ತಹಶೀಲ್ದಾರ್ ಸಚ್ಚಿದಾನಂದರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಲೋಕಾಯುಕ್ತ ಕೋರ್ಟ್ ಆದೇಶ ನೀಡಿದೆ
ಕಲಬುರಗಿ ನಗರದ ಮೂಲಸೌಕರ್ಯ
ವೇಗವಾಗಿ ಬೆಳೆಯುತ್ತಿರುವ ಕಲಬರಗಿ ನಗರದಲ್ಲಿ ಸಂಚಾರಕ್ಕಾಗಿ ಸೇಡಂ ರಸ್ತೆಯ ರಿಂಗ್ ರೋಡ್‌ನಲ್ಲಿ ಮೇಲ್ಸೆತುವೆ ನಿರ್ಮಿಸಲಾಗುವುದು. ಹೊಸ ಪೆರಿಫರಲ್ ರಿಂಗ್ ರೋಡ್ ಕೂಡ ಯೋಜನೆಯಲ್ಲಿದ್ದು, ಅದರ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ಮೂವತ್ತು ಕೋಟಿ ವೆಚ್ಚದಲ್ಲಿ ನಗರಕ್ಕೆ ಪ್ರಮುಖ ಹಸಿರು ಮತ್ತು ಸಾರ್ವಜನಿಕ ವಿಹಾರ ತಾಣವಾಗಿ ಹೊಸ ಕೆರೆ ಮತ್ತು ಮನರಂಜನಾ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.