• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ಬೆಲೆ ಏರಿಕೆ ವಿರುದ್ಧ ವಾಗ್ಧಾಳಿ: ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಅಯೋಮಯ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಲೆ ಏರಿಕೆ ವಿರುದ್ಧ ವಾಗ್ಧಾಳಿ: ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಅಯೋಮಯ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಲೆ ಏರಿಕೆ ವಿರುದ್ಧ ವಾಗ್ಧಾಳಿ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಸಾಮಾನ್ಯ ಜನ ಬದುಕಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Written ByYashaswini V
Published: Nov 05, 2026, 13:46 IST|Updated: Nov 05, 2026, 13:49 IST
joinshare
ಬೆಲೆ ಏರಿಕೆ ವಿರುದ್ಧ ವಾಗ್ಧಾಳಿ: ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಅಯೋಮಯ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಶಿವಮೊಗ್ಗ: ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ರಾಜ್ಯದಲ್ಲಿ ಜನ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. 135 ಸೀಟು ಗೆದ್ದು ಬಂದಾಗ, ಗ್ಯಾರಂಟಿ ಸ್ಕೀಮ್ ನೀಡಿದಾಗ ಈ ಸರ್ಕಾರ ಏನೋ ಮಾಡುತ್ತೆ ಅಂದುಕೊಂಡಿದ್ವಿ. ಆದರೆ ಈ ಸರ್ಕಾರ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ನೀಡಲು ಫೇಲ್ ಆಗಿದೆ. ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರ ಬದುಕು ಅಯೋಮಯವಾಗಿದೆ ಎಂದಿದ್ದಾರೆ.

ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಮಾತನಾಡುತ್ತಾ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್‌ ಸೇವೆ ಕೊಡ್ತಿವಿ ಅಂದ್ರು, ಇವತ್ತು ಬಸ್ ಗಳೇ ನಿಂತು ಹೋಗಿವೆ. ಕೆಎಸ್‌ಆರ್‌ಟಿಸಿ ಅವರು ಬಸ್‌ಗಳಿಗೆ ಡಿಸೇಲ್ ಹಾಕಲು ದುಡ್ಡಿಲ್ಲ ಅಂತಾ ಹೇಳುತ್ತಿದ್ದಾರೆ. ಬಸ್ ರಿಪೇರಿ ಮಾಡಲು ಕೂಡ ದುಡ್ಡಿಲ್ಲ ಅಂತಿದ್ದಾರೆ. ಗೃಹಲಕ್ಷ್ಮಿಯರ 5 ಸಾವಿರ ಕೋಟಿ ರೂ. ಹಣ ನಾಪತ್ತೆಯಾಗಿದೆ. ಇದು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಯ್ತು, ಆದರೆ ಇನ್ನೂ ಹಣ ಪತ್ತೆಯಾಗಿಲ್ಲ. ಸಂಧ್ಯಾ ಸುರಕ್ಷಾ, ವೃಧ್ಯಾಪ್ಯ, ವಿಧವಾ ವೇತನ, ಮಕ್ಕಳ ಸ್ಕಾಲರ್ ಶಿಪ್ ಕೊಡುತ್ತಿಲ್ಲ ಎಂದು ತೀವ್ರ ವಾಗ್ಧಾಳಿ ನಡೆಸಿದರು.

ಅಧಿಕಾರಕ್ಕೆ ಬಂದ ತಕ್ಷಣ ವಿದ್ಯುತ್ ದರ ಏರಿಸಿದ್ರು, 23 ರಲ್ಲಿ, 24 ರಲ್ಲಿ, 25 ರಲ್ಲಿ ಹಾಲಿನ ದರ ಏರಿಸಿದ್ದರು. ಈಗ ಒಂದೇ ಬಾರಿಗೆ 12 ರೂ. ನಿಂದ 14 ರೂ. ಏರಿಸಿದ್ದಾರೆ. ಮದ್ಯದ ದರ ಏರಿಸಿದ್ರು, ಬೆಂಗಳೂರಿನಲ್ಲಿ ಮೆಟ್ರೋ ದರ ಏರಿಸಿದ್ರು. ಇವರು ಯಾವುದನ್ನು ಬಿಟ್ಟಿದ್ದಾರೆ ನೀವೆ ಹೇಳಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಸಾಮಾನ್ಯ ಜನರು ಬದುಕಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರು 15-20 ಸಾವಿರ ರೂ. ಸಂಬಳಕ್ಕೆ ದುಡಿಯುತ್ತಿದ್ದಾರೋ, ಅವರು ಬದುಕಲು ಆಗುತ್ತಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ದರ ಹೆಚ್ಚಾಗುತ್ತಿದೆ, ಬೆಂಗಳೂರಿನಲ್ಲಿ ಕಸಕ್ಕೂ ದುಡ್ಡು ಹಾಕುತ್ತಿದ್ದಾರೆ. ಎಲ್ಲದರ ದರ ಏರಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಹೋರಾಟ ಮಾಡಿ ಸಿಎಂ ಆದ್ರು, ಏನೇನೋ ಷಡ್ಯಂತ್ರ ಮಾಡಿ ಸಿದ್ಧರಾಮಯ್ಯರನ್ನು ಕೆಳಗಿಳಿಸಿದ್ರು. ಇಡೀ ದೇಶದಲ್ಲಿ ಒಂದೇ ಬಾರಿಗೆ 14 ರೂ. ವರೆಗೆ ಹಾಲಿನ ದರ ಹೆಚ್ಚಿಸಿದ್ದು ಎಲ್ಲೂ ಇಲ್ಲ. ಇವರು ಸರಿಯಾಗಿ ಸರ್ಕಾರ ನಡೆಸದೇ, ಸರ್ಕಾರಿ ನೌಕರರಿಗೆ ಎರಡ್ಮೂರು ತಿಂಗಳು ಸಂಬಳ ನೀಡದೇ ಇರುವ ಸರ್ಕಾರ ಅಂದ್ರೆ ಅದು ಕರ್ನಾಟಕದ ಕಾಂಗ್ರೇಸ್ ಸರ್ಕಾರ‌ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಭೀಕರ ಬರಗಾಲ ಬಂದೊದಗಿದ್ದು ರೈತರಿಗೆ ಭಿಕ್ಷೆ ನೀಡಿದ ಹಾಗೆ ಸರ್ಕಾರ ಪರಿಹಾರ ನೀಡಿದೆ. ಎರಡುವರೆ ಸಾವಿರ ರೂ. ಪಡೆಯಲು 10-15 ಕಂಡಿಷನ್ ಹಾಕಿದ್ದಾರೆ. ರಾಜ್ಯದಲ್ಲಿ ಏನು ಮಾಡೋಕೆ ಹೊರಟಿದ್ದಿರಾ ನೀವು? ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ. ರಾಜ್ಯದಲ್ಲಿ ಡಿಸೇಲ್, ಪೆಟ್ರೋಲ್ ಗೂ ಮೊದಲ ಬಾರಿಗೆ ಬೆಲೆ ಏರಿಕೆ ಮಾಡಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿಯಾಗಿದೆ.

ಸಂಕಷ್ಟದಲ್ಲಿ ರಾಜ್ಯದ ಆರ್ಥಿಕ ಸ್ಥಿತಿ: 
ಇವರಿಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ಇವರು ಮುಂದಿನ ಒಂದುವರೆ ವರ್ಷ ಆಡಳಿತ ಮಾಡಲು ಆಗಲ್ಲ. ಇಡೀ ರಾಜ್ಯವನ್ನೇ ಬರ್ಬಾದ್ ಮಾಡಿ ಹೋಗ್ತಾರೆ, ಪೂರ್ತಿ ನಾಶ ಮಾಡಿ ಹೋಗ್ತಾರೆ. ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಯಾವುದೇ ಹೊಸ ಘೋಷಣೆ ಮಾಡದಂತೆ ಆರ್ಥಿಕ ಇಲಾಖೆ ಹೇಳಿದೆ. ಇದು ರಾಜ್ಯದ ಡಿ.ಕೆ. ಶಿವಕುಮಾರ್ ಆಡಳಿತದ ಸರ್ಕಾರದ ಪರಿಸ್ಥಿತಿ ಎಂದರು.

ಸ್ಟಿಂಗ್ ಆಪರೇಷನ್ ಸದ್ದು:
ಸ್ಟಿಂಗ್ ಆಪರೇಷನ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಬಹಳ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಖುರ್ಚಿಯಿಂದ ಇಳಿಸಿ, ತಾವು ಸಿಎಂ ಪಟ್ಟಕ್ಕೇರಲು ಸ್ಟಿಂಗ್ ಆಪರೇಷನ್ ನಡೆಸಿರಬಹುದು ಎಂಬುದು ಬಹಿರಂಗವಾಗಿದೆ. ಕರ್ನಾಟಕ ಎಂಬುದು ಐಟಿ ನಾಡು, ಕಲೆಗಳ ನಾಡು ಎಂಬ ಪ್ರಸಿದ್ಧಿ ಹೋಗಿ ಈಗ ಸ್ಟಿಂಗ್ ಆಪರೇಷನ್ ನಾಡಾಗಿದೆ. ಬೇರೆ ರಾಜ್ಯಗಳಿಗೆ ಹೋದರೆ ಇದನ್ನು ಕೇಳುವಂತಾಗಿದೆ. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ರಾಜ್ಯ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪ್ರಿಯಾಂಕ್ ಖರ್ಗೆ ಯಾರು ಯಾರನ್ನೂ ಜೈಲಿಗೆ ಕಳಿಸುತ್ತಾರೋ ನೋಡೋಣ ಎಂದು ಲೇವಣಿ ಮಾಡಿದ ಶೋಭಾ ಕರಂದ್ಲಾಜೆ, ಅದು ಯಾವ ಕೇಸು ಹಾಕ್ತಿರೋ ಹಾಕ್ರಪ್ಪ. 
ಅದ್ಯಾಕೆ ಪದೇ, ಪದೇ ಹೇಳಿ ಬ್ಲ್ಯಾಕ್ ಮೇಲ್ ಮಾಡ್ತಿರಾ? ಕೂಡಲೇ ಈ ಬ್ಲ್ಯಾಕ್ ಮೇಲ್ ರಾಜಕಾರಣ ನಿಲ್ಲಿಸಿ. ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಅಧಿಕಾರಿಗಳು ನಾಪತ್ತೆಯಾಗುತ್ತಿದ್ದಾರೆ, ಸು*ಸೈಡ್ ಮಾಡ್ಕೋತಿದ್ದಾರೆ. ಮೊದಲು ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಿ ಆಮೇಲೆ ಜೈಲಿಗೆ ಕಳಿಸುವುದರ ಬಗ್ಗೆ ಮಾತನಾಡಿ ಎಂದರು.

ಮೊಸರಿನ ಬೆಲೆ, ಹಾಲಿನ ಬೆಲೆ ಕಡಿಮೆ ಮಾಡಬೇಕು. ರೈತರಿಗೆ ಕೊಡುವುದಾದರೆ ಬೊಕ್ಕಸದಿಂದ ಕೊಡಿ. ಯಡಿಯೂರಪ್ಪ ಅವರು ಹಾಲಿಗೆ ಪ್ರೋತ್ಸಾಹ ಧನ ಕೊಟ್ಟಿದ್ರು, ಆದ್ರೆ ಅದನ್ನು ಗ್ರಾಹಕರ ಮೇಲೆ ಹೊರೆ ಹೊರಿಸಲಿಲ್ಲ ಎಂದು ಬಿಎಸ್‌ವೈ ಸರ್ಕಾರ ರೈತರಿಗಾಗಿ ಕೈಗೊಂಡ ಕ್ರಮದ ಬಗ್ಗೆ ಉಲ್ಲೇಖಿಸಿದರು.
 

Add Zee News as a Preferred Source
TAGS:
Karnataka Politics
D K Shivakumar
Kannada News
Price Hike