• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ದುರಂತಕ್ಕೆ ʼಸೋಮಣ್ಣʼ ಅಲ್ಲ... ಇವರೇ ಕಾರಣ..!

ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ದುರಂತಕ್ಕೆ ʼಸೋಮಣ್ಣʼ ಅಲ್ಲ... ಇವರೇ ಕಾರಣ..!

2026ರ ಶಿವಮೊಗ್ಗ ದಸರಾದಲ್ಲಿ ನಡೆದ ಘಟನೆ ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಅಚಾತುರ್ಯಕ್ಕೆ ನಿಜವಾಗಿಯೂ ಕಾರಣವಾಗಿದ್ದು ಏನು? ಇದಕ್ಕೆ ಕಾರಣ ಯಾರು? ಪ್ರಾಥಮಿಕ ತನಿಖೆ ಹೇಳೋದೇನು ಗೊತ್ತ?

Written ByYashaswini V
Published: Oct 23, 2026, 02:31 PM IST|Updated: Oct 23, 2026, 02:42 PM IST
joinshare
ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿ ದುರಂತಕ್ಕೆ ʼಸೋಮಣ್ಣʼ ಅಲ್ಲ... ಇವರೇ ಕಾರಣ..!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಾಕ್ಸ್‌ ಆಫೀಸ್‌ನಲ್ಲಿ ಪ್ರೇಮದ ಊರಲಿ ಅಬ್ಬರ: ನಾಲ್ಕನೇ ವಾರ ಗಳಿಸಿದ್ದೆಷ್ಟು ಗೊತ್ತಾ?

ಬಾಕ್ಸ್‌ ಆಫೀಸ್‌ನಲ್ಲಿ ಪ್ರೇಮದ ಊರಲಿ ಅಬ್ಬರ: ನಾಲ್ಕನೇ ವಾರ ಗಳಿಸಿದ್ದೆಷ್ಟು ಗೊತ್ತಾ?

2

ಅಡಿಕೆ ಬೆಳೆಗಾರರೇ ಗಮನಿಸಿ! ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

3

BBK 13 : ಡೈಮಂಡ್ ಹೈಸ್ಟ್ ಟಾಸ್ಕ್‌ನಲ್ಲಿ ಲೂಟಿಕೋರರ ಅಧಿಪತ್ಯ, ಕಾವಲುಗಾರರು ಕಂಗಾಲು

4

ಸ್ಟಿಂಗ್‌ ಆಪರೇಷನ್:‌ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷರು ಏನಂದ್ರು?

5

“ಡಿ.ಕೆ.ಶಿವಕುಮಾರ್‌ನನ್ನ ನಾನು ಸಿಎಂ ಎಂದು ಒಪ್ಪಲ್ಲ!”: ಎಚ್‌.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಶಿವಮೊಗ್ಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಸರಾ ಮೆರವಣಿಗೆಯಲ್ಲಿ ಅವಘಡ ಸಂಭವಿಸಿದೆ. ಅಂಬಾರಿ ಹೊತ್ತ ಸೋಮಣ್ಣ ಆನೆ ಏಕಾಏಕಿ ಕೆರಳಿದ ಪರಿಣಾಮ ಅಂಬಾರಿ ಕೆಳಕ್ಕೆ ಬಿದ್ದಿದೆ. ಸನಿಹದಲ್ಲಿದ್ದ ವಾಹನಗಳ ಮೇಲೆ ಎರಗಿದ್ದ ಪರಿಣಾಮ ಜಖಂ ಗೊಂಡಿದೆ. ಈ ಬಾರಿ ಅಂಬಾರಿ ಹೊರುವ ಆನೆ ಯಾವುದು ಎಂಬುದನ್ನು ಅರಣ್ಯ ಅಧಿಕಾರಿಗಳು ಗೌಪ್ಯವಾಗಿ ಇಟ್ಟಿದ್ದರು. ಸೋಮಣ್ಣ, ಬಹದ್ದೂರ್ ಸಾಗರ್ ಆನೆಗಳು ದಸರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂಬುದನ್ನು ಮಾತ್ರ ಹೇಳಲಾಗಿತ್ತು.

ಶಿವಮೊಗ್ಗ ದಸರಾದಲ್ಲಿ ಎಂದಿನಂತೆ ಸಾಗರ್ ಈ ಬಾರಿ ಅಂಬಾರಿ ಹೊರುತ್ತಾನೆ ಎಂದು ಜನರು ಭಾವಿಸಿದ್ದರು. ಸೋಷಿಯಲ್ ಮೀಡಿಯದಲ್ಲೂ ಸಾಗರ್ ಹೆಸರೇ ಹೆಚ್ಚು ಸದ್ದು ಮಾಡಿತ್ತು. ದಸರ ಹಬ್ಬ ಪ್ರಾರಂಭಕ್ಕೂ ನಾಲ್ಕು ದಿನ‌ ಮುಂಚೆ ಶಿವಮೊಗ್ಗಕ್ಕೆ ಬಂದ ಮೂರು ಆನೆಗಳಿಗೆ ಪ್ರತಿ ದಿನ ತಾಲೀಮು ನೀಡಲಾಗುತ್ತಿತ್ತು. ಸಾಗರ್ ಮುಂದೆ ಸೋಮಣ್ಣ ಮಧ್ಯ ಹಾಗು ಬಹದ್ದೂರ್ ಹಿಂದೆ ಸಾಗುವ ರೀತಿಯಲ್ಲಿ ತಾಲೀಮು ನೀಡಲಾಗಿತ್ತು.

ಸೋಮಣ್ಣನಿಗೆ ಭಾರದ ದಿಂಬು ಹೊರಿಸಿ ಮುಂದೆ ಬಿಟ್ಟಿಯೂ ತಾಲೀಮು ಮಾಡಲಾಗಿತ್ತು... ಸೋಮಣ್ಣನೇ ಅಂಬಾರಿ ಹೊರಲು ಯೋಗ್ಯ ಎಂದು ಅನುಭವಿ ಮಾವುತರು ನೀಡಿದ ಸಲಹೆ ಮೇರೆಗೆ ಹಿರಿಯ ಅಧಿಕಾರಿಗಳು ಸೋಮಣ್ಣನನ್ನೆ ಪಟ್ಟದ ಆನೆ ಎಂದು ತೀರ್ಮಾನಿಸಿದರು ಎನ್ನಲಾಗಿದೆ.

ಇದಾದ ಬಳಕ ಸೋಮಣ್ಣನಿಗೆ ಮುಂದೆ ಸಾರಥಿಯಾಗಿ ಸಾಗರ್ ಟೈಲ್ ಆಗಿ ಬಹದ್ದೂರ್ ಸಾಥ್ ನೀಡಿದವು. ಅದರಂತೆ ತಾಲೀಮು ಪ್ರಾರಂಭವಾಯಿತು. ಸೋಮಣ್ಣನಿಗೆ ತನ್ನ ಮುಂದೆ ಸಾಗರ್ ಇದೆ ಎಂಬ ಧೈರ್ಯವಿತ್ತು.

ಬದಲಾದ ತಾಲೀಮು.. ಗಾಬರಿಗೊಂಡ ಸೋಮಣ್ಣ!
ದಸರ ಹಬ್ಬದ ನಂದಿ ದ್ವಜ ಪೂಜೆಯ ಆರಂಭದ ಸಂದರ್ಭ ಎಲ್ಲವೂ ಚೆನ್ನಾಗಿಯೇ ಇತ್ತು. ತಾಲೀಮಿನಂತೆಯೇ ಮಧ್ಯದಲ್ಲಿ ಸೋಮಣ್ಣ ಅಂಬಾರಿ ಹೊತ್ತಿತ್ತು. ಮುಂದೆ ಸಾಗರ್ ಹಿಂದೆ ಬಹದ್ದೂರ್ ಮೆರವಣಿಗೆಯಲ್ಲಿ ಸಾಗುತ್ತಿದ್ದವು. ಸುಮಾರು ಎಂಟು ನೂರು ಮೀಟರ್ ಮೆರವಣಿಗೆಯಲ್ಲಿ ಎಲ್ಲವೂ ಚೆನ್ನಾಗಿತ್ತು... ಆದರೆ ಅಲ್ಲೊಬ್ಬರು ನೀಡಿದ ಸಲಹೆ ಅವಾಂತರಕ್ಕೆ ಕಾರಣವಾಯಿತು ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಪಟ್ಟದ ಆನೆ ಮುಂದೆ ಬಿಟ್ಟಿದ್ದೇ ಎಡವಟ್ಟಿಗೆ ಕಾರಣ!
ಪಟ್ಟದ ಆನೆ ಮುಂದೆ ಬಿಡಿ. ಸಾಗರ್ ಅನೆ ಹಿಂದೆ ಕಳಿಸಿ ಎಂದು ಮೂಡಿಬಂದ ಸಲಹೆಗೆ ಮಾವುತರು ಅಧಿಕಾರಿಗಳು ತಲೆಬಾಗಿದ್ದೆ ಇಲ್ಲಿ ಎಡವಟ್ಟಾಯಿತು ಎನ್ನಲಾಗಿದೆ. ಪಟ್ಟದ ಆನೆಯನ್ನು ಮುಂದೆ ಬಿಟ್ಟಿದ್ದರಿಂದ ಮೆರವಣಿಗೆ ಸ್ವರೂಪ ಬದಲಾಗಿದೆ. ಮುಂದೆ ಸಾಗುತ್ತಿದ್ದ ಸಾಗರ್ ಹಿಂದೆ ತರಲಾಯಿತು. ಅಂಬಾರಿ ಹೊತ್ತ ಸೋಮಣ್ಣ ಮುಂದಾದ... ಅಲ್ಲಿಯವರೆಗೂ ನನ್ನ ಮುಂದೆ ಸಾಗರ್ ಆನೆ ಇದೆ ಎಂದು ಧೈರ್ಯದಲ್ಲಿ ಸಾಗುತ್ತಿದ್ದ ಸೋಮಣ್ಣ ಆನೆಗೆ ಕ್ರಮೇಣವಾಗಿ ಭಯ ಕಾಡಲು ಆರಂಭಿಸಿದೆ. ಜನರ ಕೇಕೆ ಹರ್ಷೋದ್ಗಾರ, ವ್ಯಾದ್ಯಗಳ ಸದ್ದು. ಸೋಮಣ್ಣ ಆನೆ ಭೀತಿ ಹುಟ್ಟಿಸಿರಬಹುದು. ಬಹುಶಃ ಸಾಗರ್ ಆನೆ ಮುಂದಿದ್ದರೆ ಶಾಂತಿಯುತವಾಗಿ ಸೋಮಣ್ಣ ಮುಂದೆ ಹೆಜ್ಜೆ ಹಾಕುತ್ತಿತ್ತು. ಇಲ್ಲಿ ಮೆರವಣಿಗೆಯಲ್ಲಿ ಬದಲಾದ ವಿದ್ಯಮಾನ ಎಲ್ಲಾ ಅವಾಂತರ ಗಳಿಗೂ ಕಾರಣ ಎಂಬುದು ನಿರ್ವಿವಾದ.

ತನ್ನ ಎದುರಿದ್ದ ಆನೆ... ಕ್ಷಣಾರ್ಧದಲ್ಲಿ ಇಲ್ಲ ಎಂದಾದರೆ ಎಂತಹ ಆನೆಯೂ ಕ್ಷಣಕಾಲ ಗೊಂದಲಕ್ಕೆ ಈಡಾಗುತ್ತದೆ. ಅನಾಥ ಪ್ರಜ್ಞೆ ಕಾಡಿ ಗಾಬರಿಗೊಳಗಾಗುತ್ತದೆ. ದಸರಾ ದಿನ ನಡೆದ ಘಟನೆಯಲ್ಲೂ ಸೋಮಣ್ಣ ಗಾಂಬರಿಗೊಂಡು... ತನ್ನ ಎದುರು ಹೋಗುತ್ತಿದ್ದ ಸಾಗರ್ ಆನೆ ಇಲ್ಲದಾಗ ಗಾಂಬರಿಗೊಂಡಿದೆ. ತಾನು ಬಂದ ಸ್ಥಳಕ್ಕೆ ವಾಪಸು ಹೋಗಲು ತಿರುಗಿದೆ.. ಈ ಸಂದರ್ಭದಲ್ಲಿ ವಾಹನಗಳಿಗೆ ಗುದ್ದಿ ಅಂಬಾರಿ ಬೀಳಿಸಿದೆ ಎಂಬುದು ಪ್ರಾಥಮಿಕ ಲಭ್ಯ ಮಾಹಿತಿಯಿಂದ ಗೊತ್ತಾಗಿದೆ.
 

Add Zee News as a Preferred Source
TAGS:
Kannada News