ದೀಪಾವಳಿ ಹಬ್ಬ ಮುನ್ನ ಪಟಾಕಿ ಅಬ್ಬರ ಜೋರಾಗಿದೆ ಆದ್ರೆ ಇಲ್ಲಿ ಪಟಾಕಿ ಸಂಗ್ರಹಿಸಿಟ್ಟ ಜಾಗ ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ.. ಮಕ್ಕಳೇ ಓದೋ ಶಾಲಾ ಕಟ್ಟಡದ ಮೇಲ್ಭಾಗದಲ್ಲೇ ಭಾರೀ ಪ್ರಮಾಣದ ಪಟಾಕಿಗಳನ್ನ ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು.. ಶಿವಮೊಗ್ಗದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಈ ಅಕ್ರಮವನ್ನ ಬಯಲಿಗೆಳೆದಿದ್ದಾರೆ..ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಪಟಾಕಿಗಳ ರಾಶಿ.. ಎಲ್ಲೆಂದರಲ್ಲಿ ಪಟಾಕಿ ಬಾಕ್ಸ್‌ಗಳ ಸಂಗ್ರಹ.. ಇದು ಯಾವುದೋ ಅಧಿಕೃತ ಗೋದಾಮಿನ ದೃಶ್ಯವಲ್ಲ.. ಶಿವಮೊಗ್ಗದ ಜಯನಗರದ ಎರಡನೇ ಕ್ರಾಸ್‌ನಲ್ಲಿರುವ ಕಿಡ್ಸ್ ಶಾಲೆಯ ಕಟ್ಟಡದ ಮೇಲ್ಭಾಗದಲ್ಲಿ ಕಂಡುಬಂದಿದೆ.
ಅಮರ್ ಎಂಬುವವರು ಯಾವುದೇ ಅಗತ್ಯ ಅನುಮತಿ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಭಾರೀ ಪ್ರಮಾಣದ ಪಟಾಕಿಗಳನ್ನ ಇಲ್ಲಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸಿ ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ಪರಿಶೀಲನೆ ವೇಳೆ ಅಪಾರ ಪ್ರಮಾಣದ ಪಟಾಕಿಗಳು ಪತ್ತೆಯಾಗಿದ್ದು, ಎಲ್ಲವನ್ನೂ ಜಪ್ತಿ ಮಾಡಿದ್ದಾರೆ..ಸಾಮಾನ್ಯವಾಗಿ ಪಟಾಕಿ ದಾಸ್ತಾನು ಮಾಡಬೇಕಾದರೆ ಕಟ್ಟುನಿಟ್ಟಿನ ನಿಯಮಗಳನ್ನ ಪಾಲಿಸಬೇಕು.. ಅಗ್ನಿ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕು.. ಆದ್ರೆ ಮಕ್ಕಳೇ ವಿದ್ಯಾಭ್ಯಾಸ ಮಾಡುವ ಶಾಲಾ ಕಟ್ಟಡದ ಮೇಲ್ಭಾಗದಲ್ಲೇ ಈ ರೀತಿ ಪಟಾಕಿ ಸಂಗ್ರಹಿಸಿಟ್ಟಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.. ಒಂದು ಸಣ್ಣ ಕಿಡಿ ಹೊತ್ತಿಕೊಂಡಿದ್ರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆಯಿತ್ತು..
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಟಾಕಿ ಸಂಗ್ರಹಿಸಿದ್ದ ಅಮರ್, ಗೋದಾಮಿನಲ್ಲಿ ಜಾಗ ಇಲ್ಲದ ಕಾರಣ ತಾತ್ಕಾಲಿಕವಾಗಿ ಶಾಲಾ ಕಟ್ಟಡದಲ್ಲಿ ಪಟಾಕಿಗಳನ್ನ ಇಟ್ಟಿದ್ದೆವು.. ಬೆಳಗ್ಗೆ ತಂದಿದ್ದ ಪಟಾಕಿಗಳನ್ನ ಸಂಜೆಯೊಳಗೆ ಬೇರೆಡೆಗೆ ಸಾಗಿಸುವ ಯೋಜನೆಯಿತ್ತು.. ಆದ್ರೆ ಅಷ್ಟರಲ್ಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.. ನಮ್ಮಿಂದ ತಪ್ಪಾಗಿದೆ.. ಕಾನೂನು ಪ್ರಕಾರ ಅಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ..
ಒಟ್ಟಿನಲ್ಲಿ, ಮಕ್ಕಳ ಭವಿಷ್ಯ ರೂಪುಗೊಳ್ಳಬೇಕಾದ ಶಾಲಾ ಕಟ್ಟಡವನ್ನೇ ಅಕ್ರಮ ಪಟಾಕಿ ದಾಸ್ತಾನಿಗೆ ಬಳಸಿಕೊಂಡಿರುವುದು ಎಷ್ಟು ಅಪಾಯಕಾರಿ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸುವುದಕ್ಕೂ ಮುನ್ನ ಅಧಿಕಾರಿಗಳು ದಾಳಿ ನಡೆಸಿ ಪಟಾಕಿಗಳನ್ನ ವಶಪಡಿಸಿಕೊಂಡಿದ್ದಾರೆ..