ಶಾಲಾ ವೇದಿಕೆಯಲ್ಲೇ ರಾಜಕೀಯ ಭಾಷಣ.. ಮಕ್ಕಳಿಗೆ ಕಾಂಗ್ರೆಸ್ ವಿರುದ್ಧ ಪಾಠ!
ಶಾಲೆ ಅಂದ್ರೆ ಅದು ಮಕ್ಕಳ ಭವಿಷ್ಯ ರೂಪಿಸುವ ಜಾಗ.. ರಾಜಕೀಯ ಪಕ್ಷಗಳ ಭಾಷಣಕ್ಕೆ ವೇದಿಕೆಯಾಗುವ ಜಾಗವಲ್ಲ. ಆದ್ರೆ ಬೆಳ್ತಂಗಡಿಯ ಪುಂಜಾಲಕಟ್ಟೆಯಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಶಾಲೆಯ ಸಭಾಭವನ ಉದ್ಘಾಟನೆ ವಿಚಾರದಲ್ಲಿ ಶುರುವಾದ ಜಟಾಪಟಿ, ಇದೀಗ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿವಾದಾತ್ಮಕ ಭಾಷಣದವರೆಗೆ ಬಂದು ನಿಂತಿದೆ. ಅದರಲ್ಲೂ ಶಾಲಾ ಮಕ್ಕಳ ಮುಂದೆಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಶಾಲಾ ಸಭಾಭವನಕ್ಕೆ ಮೋದಿ ಹೆಸರು
ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ಶಾಲೆಯ ನೂತನ ಸಭಾಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ನಾಮಕರಣ ಮಾಡಲಾಗಿದೆ. ಸರ್ಕಾರದ ಅನುಮತಿ ಪಡೆಯದೆ ಹೆಸರು ಇಟ್ಟಿದ್ದಕ್ಕೆ ಶಿಕ್ಷಣ ಇಲಾಖೆ ಆಕ್ಷೇಪ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆ ಸೂಚನೆ ಬೆನ್ನಲ್ಲೇ ಉದ್ಘಾಟನಾ ಕಾರ್ಯಕ್ರಮ ರದ್ದು ವಿಚಾರವಾಗಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ ಶಾಲಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಹರೀಶ್ ಪೂಂಜಾ, ಕಾಂಗ್ರೆಸ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನಂತಹ ದರಿದ್ರ ಪಕ್ಷದ ಹಿಂದೆ ನೀವು ಯಾವತ್ತೂ ಹೋಗಬೇಡಿ ಮಕ್ಕಳೇ ಎಂದು ಕರೆ ನೀಡಿದ್ದಾರೆ. ಇಂತಹ ಕೆಟ್ಟ ಪಕ್ಷವನ್ನು ನೆಚ್ಚಿಕೊಂಡು ಹೋಗಬೇಡಿ ಎಂದು ಮಕ್ಕಳಿಗೆ ರಾಜಕೀಯ ಸಂದೇಶ ನೀಡಿದ್ದಾರೆ.
ದುಷ್ಟ ಬುದ್ಧಿಗಳಿಗೆ ಮುಕ್ತಿ ಕೊಡು ಎಂದ ಶಾಸಕ
ಇಷ್ಟಕ್ಕೇ ನಿಲ್ಲದ ಹರೀಶ್ ಪೂಂಜಾ, ಬಸವೇಶ್ವರನಿಗೆ ಪ್ರಾರ್ಥನೆ ಮಾಡುವ ಮೂಲಕವೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂತಹ ದುಷ್ಟ ಬುದ್ಧಿಗಳಿಗೆ ಆದಷ್ಟು ಬೇಗ ಮುಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಶಾಲೆಯಲ್ಲಿ ರಾಜಕಾರಣ ಮಾಡಲು ಬರಬೇಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಹಾಗೆ ಮಾಡಿದರೆ ಬಸವೇಶ್ವರ ನಿಮ್ಮನ್ನು ಭಸ್ಮ ಮಾಡದೆ ಬಿಡನು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂಬಾಗಿಲು-ಹಿಂಬಾಗಿಲು ಸಮರ
ನಾವು ಯಾವತ್ತೂ ಮುಂಬಾಗಿಲಿನಿಂದ ಬರುವವರು, ಹಿಂಬಾಗಿಲಿನಿಂದ ಬರುವವರಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರೀಶ್ ಪೂಂಜಾ ವಾಗ್ದಾಳಿ ನಡೆಸಿದ್ದಾರೆ. ಶಾಲೆಯ ಸಭಾಭವನದ ಹೆಸರಿನ ವಿಚಾರವಾಗಿ ಆರಂಭವಾದ ವಿವಾದ, ಇದೀಗ ಮಕ್ಕಳ ಮುಂದಿನ ರಾಜಕೀಯ ಭಾಷಣದ ಆರೋಪದಿಂದ ಮತ್ತಷ್ಟು ಕಾವೇರಿದೆ. ಒಟ್ಟಿನಲ್ಲಿ, ಶಾಲೆಯ ಸಭಾಭವನಕ್ಕೆ ಮೋದಿ ಹೆಸರು ಇಡುವ ವಿಚಾರದಿಂದ ಶುರುವಾದ ವಿವಾದ ಈಗ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಮಕ್ಕಳ ಶೈಕ್ಷಣಿಕ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಎಷ್ಟು ಸರಿ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.