SOCIAL MEDIA

Newsletter

PARTNER SITES
Select Language Select State

ಮೋದಿಯವರ 76ನೇ ಹುಟ್ಟುಹಬ್ಬ ಹಿನ್ನಲೆ ಶಿವಮೊಗ್ಗದಲ್ಲಿ ಸೇವಾ ಸಂಕಲ್ಪದ ಸೈಕಲ್ ಜಾಥಾ

ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭಾಗವಹಿಸಿದ್ದರು

Written By Ramya. R. Gowda
Published: Sep 27, 2026, 01:06 PM IST | Updated: Sep 27, 2026, 01:13 PM IST
Join

ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಸೇವಾ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ನಡೆದ ಸೈಕಲ್ ಜಾಥಾದಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭಾಗವಹಿಸಿದ್ದರು. ವಿಶೇಷ ಅಂದ್ರೆ, ಜಾಥಾದ ಆರಂಭದಿಂದ ಕೊನೆಯ ಘಟ್ಟದವರೆಗೂ ಸುರೇಶ್ ಕುಮಾರ್ ಸೈಕಲ್ ತುಳಿದು ಗಮನ ಸೆಳೆದರು. ಇದೇ ವೇಳೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬಗ್ಗೆ ಸರ್ಕಾರದ ಆದ್ಯತೆಗಳ ಕುರಿತು ಅವರು ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ 76ನೇ ಜನ್ಮ ದಿನಾಚರಣೆ ಹಿನ್ನೆಲೆ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡ ಪಾಲ್ಗೊಂಡರು. ಸೈಕಲ್ ಜಾಥಾದಲ್ಲಿ ಆರಂಭದಿಂದ ಕೊನೆಯ ಘಟ್ಟದವರೆಗೂ ಸೈಕಲ್ ತುಳಿದ ಸುರೇಶ್ ಕುಮಾರ್, ಸೈಕಲಿಂಗ್ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಅದು ನಮ್ಮ ಜೀವನದ ಒಂದು ಭಾಗವಾಗಬೇಕು ಎಂದು ಕರೆ ನೀಡಿದರು.

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುರೇಶ್ ಕುಮಾರ್ ಮಾತನಾಡಿದ್ದು, "ಸೈಕಲ್ ತುಳಿಯುವುದು ಒಂದು ಕಾರ್ಯಕ್ರಮವಾಗಬಾರದು.. ಜೀವನದ ಭಾಗವಾಗಬೇಕು. ಶಿವಮೊಗ್ಗ ನಗರ ಸೈಕಲಿಂಗ್‌ಗೆ ಯೋಗ್ಯವಾಗಿದೆ. ನಗರ ಉತ್ತಮ ರಸ್ತೆಗಳನ್ನು ಹೊಂದಿದೆ." ಇನ್ನು ಇದೇ ವೇಳೆ ರಾಜ್ಯದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಬಗ್ಗೆಯೂ ಸುರೇಶ್ ಕುಮಾರ್ ಹೇಳಿದರು.

ಸರ್ಕಾರ ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆದರೆ ಈ ಎರಡೂ ಕ್ಷೇತ್ರಗಳಿಗೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

"ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಕಾಣುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಳಪೆ ಮಟ್ಟದ ಶೂ ವಿತರಣೆ ಮಾಡಿರುವುದನ್ನೂ ಗಮನಿಸಿದ್ದೇನೆ."ಕೈಗೆಟುಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನೂ ಸುರೇಶ್ ಕುಮಾರ್ ನೀಡಿದ್ದಾರೆ. 

ಒಂದೆಡೆ ಆರೋಗ್ಯಕರ ಜೀವನಶೈಲಿಗೆ ಸೈಕಲಿಂಗ್‌ನಂತಹ ಚಟುವಟಿಕೆಗಳು ಅಗತ್ಯ. ಮತ್ತೊಂದೆಡೆ ಗುಣಮಟ್ಟದ ಶಿಕ್ಷಣವೂ ಅಷ್ಟೇ ಮುಖ್ಯ.ಹೀಗಾಗಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುರೇಶ್ ಕುಮಾರ್ ಮಾತನಾಡಿದ್ದು, "ಸೈಕಲ್ ತುಳಿಯುವುದು ಒಂದು ಕಾರ್ಯಕ್ರಮವಾಗಬಾರದು.. ಜೀವನದ ಭಾಗವಾಗಬೇಕು. ಶಿವಮೊಗ್ಗ ನಗರ ಸೈಕಲಿಂಗ್‌ಗೆ ಯೋಗ್ಯವಾಗಿದೆ. ನಗರ ಉತ್ತಮ ರಸ್ತೆಗಳನ್ನು ಹೊಂದಿದೆ." ಇನ್ನು ಇದೇ ವೇಳೆ ರಾಜ್ಯದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಬಗ್ಗೆಯೂ ಸುರೇಶ್ ಕುಮಾರ್ ಹೇಳಿದರು.

ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುರೇಶ್ ಕುಮಾರ್ ಮಾತನಾಡಿದ್ದು, "ಸೈಕಲ್ ತುಳಿಯುವುದು ಒಂದು ಕಾರ್ಯಕ್ರಮವಾಗಬಾರದು.. ಜೀವನದ ಭಾಗವಾಗಬೇಕು. ಶಿವಮೊಗ್ಗ ನಗರ ಸೈಕಲಿಂಗ್‌ಗೆ ಯೋಗ್ಯವಾಗಿದೆ. ನಗರ ಉತ್ತಮ ರಸ್ತೆಗಳನ್ನು ಹೊಂದಿದೆ." ಇನ್ನು ಇದೇ ವೇಳೆ ರಾಜ್ಯದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಬಗ್ಗೆಯೂ ಸುರೇಶ್ ಕುಮಾರ್ ಹೇಳಿದರು.

ಒಟ್ಟಿನಲ್ಲಿ, ಮೋದಿಯವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಸೇವಾ ಸಂಕಲ್ಪದ ಸೈಕಲ್ ಜಾಥಾ, ಸೈಕಲಿಂಗ್ ಜಾಗೃತಿಯ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಚರ್ಚೆಗೂ ವೇದಿಕೆಯಾಯಿತು.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES