• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ಜಗನ್ಮಾತೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಕ್ಲೋಸ್!... ಶಕ್ತಿ ಸ್ವರೂಪಿಣಿ ದೇವಿಗೆ ಭಕ್ತರಿಂದ ಬಂದ ಆದಾಯ ಎಷ್ಟು?

ಜಗನ್ಮಾತೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಕ್ಲೋಸ್!... ಶಕ್ತಿ ಸ್ವರೂಪಿಣಿ ದೇವಿಗೆ ಭಕ್ತರಿಂದ ಬಂದ ಆದಾಯ ಎಷ್ಟು?

Hasanamba temple door close : 14 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದಿವ್ಯ ದರ್ಶನ ಕರುಣಿಸಿದ್ದ ಜಗನ್ಮಾತೆ ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಮಂಗಳಮಯ ತೆರೆ ಬಿದ್ದಿದೆ.

Written ByRamya. R. Gowda
Published: Nov 11, 2026, 13:53 IST|Updated: Nov 11, 2026, 14:03 IST
joinshare
ಜಗನ್ಮಾತೆ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ಕ್ಲೋಸ್!... ಶಕ್ತಿ ಸ್ವರೂಪಿಣಿ ದೇವಿಗೆ ಭಕ್ತರಿಂದ ಬಂದ ಆದಾಯ ಎಷ್ಟು?

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Hasanamba temple door close: 14 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದಿವ್ಯ ದರ್ಶನ ಕರುಣಿಸಿದ್ದ ಜಗನ್ಮಾತೆ ಹಾಸನಾಂಬೆ ದರ್ಶನೋತ್ಸವಕ್ಕೆ ಇಂದು ಮಂಗಳಮಯ ತೆರೆ ಬಿದ್ದಿದೆ. ಮಧ್ಯಾಹ್ನ 1.37ಕ್ಕೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಪುರೋಹಿತರು ಗರ್ಭಗುಡಿಯ ಬಾಗಿಲು ಮುಚ್ಚಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಮುಂದಿನ ವರ್ಷದ ದರ್ಶನಕ್ಕಾಗಿ ಬಾಗಿಲು ಮುಚ್ಚಲಾಗಿದೆ. ಕೊನೆಯ ಕ್ಷಣದಲ್ಲೂ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿ ತಾಯಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

14 ದಿನಗಳ ಕಾಲ ಭಕ್ತಕೋಟಿಗೆ ದಿವ್ಯ ದರ್ಶನ ಕರುಣಿಸಿದ್ದ ಆದಿಶಕ್ತಿ ಹಾಸನಾಂಬೆ..ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿ, ಲೋಕಕಲ್ಯಾಣಕ್ಕಾಗಿ ಆಶೀರ್ವದಿಸಿದ ಜಗನ್ಮಾತೆಗೆ ಇಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಇದರೊಂದಿಗೆ ಈ ಬಾರಿಯ ಹಾಸನಾಂಬೆ ದರ್ಶನೋತ್ಸವಕ್ಕೆ ಮಂಗಳಮಯ ತೆರೆ ಎಳೆಯಲಾಗಿದೆ. ಮಧ್ಯಾಹ್ನ ಸರಿಯಾಗಿ 1.37ಕ್ಕೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಪುರೋಹಿತರಿಂದ ವಿಶೇಷ ಪೂಜೆ ಸಲ್ಲಿಸಿ ತಾಯಿಯ ಸನ್ನಿಧಿಯ ಬಾಗಿಲು ಮುಚ್ಚುವ ಕಾರ್ಯ ನಡೆಸಲಾಗಿದೆ.ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಅಪರೂಪದ ಕ್ಷಣಕ್ಕೆ ಸಚಿವ ಕೆ.ಎಂ. ಶಿವಲಿಂಗೇಗೌಡ, ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಸಂಸದ ಶ್ರೇಯಸ್ ಪಟೇಲ್ ಸಾಕ್ಷಿಯಾಗಿದ್ದಾರೆ..

ಕೊನೆಯ ಕ್ಷಣದವರೆಗೂ ತಾಯಿಯ ದರ್ಶನಕ್ಕಾಗಿ ಕಾದು ನಿಂತಿದ್ದ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಿ ಕೊಡಲಾಗಿದ್ದು, ತಾಯಿಯ ದಿವ್ಯ ದರ್ಶನ ಪಡೆದು ಲಕ್ಷಾಂತರ ಭಕ್ತರು ಪುನೀತರಾಗಿದ್ದಾರೆ. 
ಇನ್ನೇನು ಮುಂದಿನ ವರ್ಷದ ದರ್ಶನದವರೆಗೂ ಭಕ್ತರ ಮನೆ-ಮನಗಳಲ್ಲಿ ಹಾಸನಾಂಬೆ ತಾಯಿಯ ನಾಮಸ್ಮರಣೆ.. ಮತ್ತೆ ಮುಂದಿನ ದರ್ಶನೋತ್ಸವದಲ್ಲಿ ತಾಯಿಯ ದರ್ಶನ ಪಡೆಯುವ ನಿರೀಕ್ಷೆಯೊಂದಿಗೆ ಭಕ್ತರು ನಿರ್ಗಮಿಸಿದ್ದಾರೆ.

14 ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದ ಹಾಸನಾಂಬೆ ತಾಯಿ ಈಗ ಗರ್ಭಗುಡಿಯಲ್ಲಿ ವಿಶ್ರಾಂತಿ. ಮುಂದಿನ ವರ್ಷದ ದರ್ಶನೋತ್ಸವದವರೆಗೂ ಭಕ್ತರು ತಾಯಿಯ ಸ್ಮರಣೆಯಲ್ಲಿ ಕಳೆಯಲಿದ್ದಾರೆ. ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಿಪೂರ್ವಕ ವಿದಾಯ ಹೇಳಲಾಗಿದೆ..


29 ಲಕ್ಷ ಭಕ್ತರಿಂದ ದರ್ಶನ, 25 ಕೋಟಿ ಆದಾಯ

ಶಕ್ತಿ ಸ್ವರೂಪಿಣಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಾಡಿನ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬೆ ತಾಯಿಯ ದರ್ಶನಕ್ಕೆ ಇಂದು ಕೊನೆಯ ದಿನ.. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ತಾಯಿಯ ಸನ್ನಿಧಿಯಲ್ಲಿ ಕಳೆದ ಹನ್ನೆರಡು ದಿನಗಳಿಂದ ಭಕ್ತಿ ಸಂಭ್ರಮ ಮನೆ ಮಾಡಿತ್ತು. ಲಕ್ಷಾಂತರ ಭಕ್ತರು ದೂರದ ಊರುಗಳಿಂದ ಆಗಮಿಸಿ, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಾಯಿಯ ದಿವ್ಯ ದರ್ಶನ ಪಡೆದು ಪುನೀತರಾದರು. ಭಕ್ತರ ಜೈಕಾರ, ಮಂಗಳವಾದ್ಯ, ಪೂಜಾ ಕೈಂಕರ್ಯಗಳೊಂದಿಗೆ ಕಂಗೊಳಿಸಿದ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಇಂದು ಮಧ್ಯಾಹ್ನ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ. ಈಗಾಗಲೇ ಬರೋಬ್ಬರಿ 29 ಲಕ್ಷ ಭಕ್ತರು ತಾಯಿಯ ದರ್ಶನ ಪಡೆದಿದ್ದು, 25 ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹವಾಗಿದೆ

ಒಂದು ಕ್ಷಣವೂ ಬಿಡುವಿಲ್ಲದೆ ತಾಯಿಯ ದರ್ಶನಕ್ಕಾಗಿ ಹರಿದು ಬಂದ ಭಕ್ತಸಾಗರ.. ಹಗಲು-ರಾತ್ರಿ ಎನ್ನದೆ ಕಿಲೋಮೀಟರ್‌ಗಟ್ಟಲೆ ನಿಂತ ಸರತಿ ಸಾಲುಗಳು.. ಗಣ್ಯರಿಂದ ಹಿಡಿದು ಸಾಮಾನ್ಯ ಭಕ್ತರವರೆಗೆ ಎಲ್ಲರನ್ನೂ ತನ್ನತ್ತ ಸೆಳೆದ ಹಾಸನಾಂಬೆ ತಾಯಿ.. ಹೌದು, ಕಳೆದ 12 ದಿನಗಳಿಂದ ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ದರ್ಶನದ ಭಕ್ತಿಯ ಮಹಾಸಾಗರಕ್ಕೆ ಇಂದು ಸಂಜೆ ಅಧಿಕೃತವಾಗಿ ತೆರೆ ಬಿದ್ದಿದೆ. ಹಾಸನಾಂಬೆ ದರ್ಶನೋತ್ಸವದ ಕೊನೆಯ ದಿನವಾದ ಇಂದೂ ಕೂಡಾ ಭಕ್ತರ ಮಹಾಪೂರವೇ ಹರಿದು ಬಂದಿದೆ. ಕಡೆಯ ದಿನವಾದ ಇಂದು ಕೂಡ ಧರ್ಮದರ್ಶನ ಸೇರಿದಂತೆ ವಿಶೇಷ ದರ್ಶನದ ಸರತಿ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಮತ್ತೊಂದೆಡೆ, ಹಾಸನಾಂಬೆಯ ದರ್ಶನ ಪಡೆಯಲು ಗಣ್ಯರ ದಂಡೇ ಆಗಮಿಸಿತ್ತು. ಸಚಿವ ಪಿ. ರಘುಮೂರ್ತಿ, ಮಂಡ್ಯ ಶಾಸಕ ಗಣಿಗ ರವಿ, ಕುಣಿಗಲ್ ಶಾಸಕ ರಂಗನಾಥ್, ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹಾಗೂ ನಟಿ ಮಿಲನಾ ನಾಗರಾಜ್ ಸೇರಿದಂತೆ ಹಲವು ಗಣ್ಯರು ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಇನ್ನು ಈ ಬಾರಿಯ ಹಾಸನಾಂಬೆ ದರ್ಶನೋತ್ಸವ ಭಕ್ತರ ಸಂಖ್ಯೆಯಲ್ಲೂ, ಆದಾಯ ಸಂಗ್ರಹದಲ್ಲೂ ಹೊಸ ದಾಖಲೆ ಬರೆದಿದೆ. ಹಾಸನಾಂಬೆ ದೇವಾಲಯದ ಬಾಗಿಲು ತೆರೆದು 13 ದಿನಗಳಾಗಿದ್ದು, ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ 12 ದಿನಗಳಲ್ಲಿ ಬರೋಬ್ಬರಿ 29 ಲಕ್ಷ ಭಕ್ತರು ತಾಯಿಯ ದರ್ಶನ ಪಡೆದಿದ್ದಾರೆ. ಇನ್ನು ವಿವಿಧ ಮೂಲಗಳಿಂದ ಈವರೆಗೆ 25 ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹವಾಗಿದೆ.

14 ದಿನಗಳ ಕಾಲ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದ ಹಾಸನಾಂಬೆ ತಾಯಿ ಈಗ ಗರ್ಭಗುಡಿಯಲ್ಲಿ ವಿಶ್ರಾಂತಿ. ಮುಂದಿನ ವರ್ಷದ ದರ್ಶನೋತ್ಸವದವರೆಗೂ ಭಕ್ತರು ತಾಯಿಯ ಸ್ಮರಣೆಯಲ್ಲಿ ಕಳೆಯಲಿದ್ದಾರೆ. ಹಾಸನಾಂಬೆ ದರ್ಶನೋತ್ಸವಕ್ಕೆ ಭಕ್ತಿಪೂರ್ವಕ ವಿದಾಯ ಹೇಳಲಾಗಿದೆ..
 

Add Zee News as a Preferred Source
TAGS:
Kannada News