ಕರೆಂಟ್ ವಾಟರ್ ಹೀಟರ್ ಅವಘಡಕ್ಕೆ 8 ವರ್ಷದ ಬಾಲಕ ಬಲಿ!
chikmangalore water heater corrent shock: ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಅಂತ ಕರೆಂಟ್ ವಾಟರ್ ಹೀಟರ್ ಬಳಸುವವರೇ ಎಚ್ಚರ..! ಮನೆಯ ಬಾತ್‌ರೂಮ್‌ನಲ್ಲಿ ನೀರು ಕಾಯಿಸಲು ಇಟ್ಟಿದ್ದ ವಾಟರ್ ಹೀಟರ್‌ನಿಂದ ವಿದ್ಯುತ್ ಅವಘಡ ಸಂಭವಿಸಿ 8 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಬಕೆಟ್‌ನಲ್ಲಿದ್ದ ಬಿಸಿ ನೀರಿಗೆ ಕೈ ಹಾಕಿದಾಗ ವಿದ್ಯುತ್ ಶಾಕ್ ಹೊಡೆದು ಬಾಲಕ ಮೃತಪಟ್ಟಿದ್ದಾನೆ. ಅಷ್ಟಕ್ಕೂ ನಡೆದಿದ್ದೇನು?
water heater corrent shockಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಅಂತ ಕರೆಂಟ್ ವಾಟರ್ ಹೀಟರ್ ಬಳಸುವವರೇ ಎಚ್ಚರ..! ಮನೆಯ ಬಾತ್‌ರೂಮ್‌ನಲ್ಲಿ ನೀರು ಕಾಯಿಸಲು ಇಟ್ಟಿದ್ದ ವಾಟರ್ ಹೀಟರ್‌ನಿಂದ ವಿದ್ಯುತ್ ಅವಘಡ ಸಂಭವಿಸಿ 8 ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಬಕೆಟ್‌ನಲ್ಲಿದ್ದ ಬಿಸಿ ನೀರಿಗೆ ಕೈ ಹಾಕಿದಾಗ ವಿದ್ಯುತ್ ಶಾಕ್ ಹೊಡೆದು ಬಾಲಕ ಮೃತಪಟ್ಟಿದ್ದಾನೆ. ಅಷ್ಟಕ್ಕೂ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಸ್ನಾನಕ್ಕೆ ನೀರು ಕಾಯಿಸುವ ವಾಟರ್ ಹೀಟರ್‌ನಿಂದ ವಿದ್ಯುತ್ ಶಾಕ್ ಹೊಡೆದು ಎಂಟು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರಡನೇ ತರಗತಿಯಲ್ಲಿ ಓದುತ್ತಿದ್ದ ಎಂಟನೇ ವಯಸ್ಸಿನ ನೀಲಾಂಶ್ ಎಂಬಾತ ಮನೆಯಲ್ಲಿ ಸ್ನಾನ ಮಾಡಲು ತೆರಳುವಾಗ ದುರ್ಘಟನೆ ಸಂಭವಿಸಿ ಮೃತಪಟ್ಟಿದ್ದಾನೆ. ಬಾತ್‌ರೂಮ್‌ನಲ್ಲಿ ನೀರು ಕಾಯಿಸಲು ಇಟ್ಟಿದ್ದ ಕರೆಂಟ್ ವಾಟರ್ ಹೀಟರ್ ಒಂದು ಪುಟ್ಟ ಜೀವವನ್ನೇ ಬಲಿ ಪಡೆದಿದೆ. ವಿದ್ಯುತ್ ಶಾಕ್‌ಗೆ 8 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಎರಡನೇ ತರಗತಿಯಲ್ಲಿ ಓದುತ್ತಿದ್ದ ಎಂಟನೇ ವಯಸ್ಸಿನ ನೀಲಾಂಶ್ ಎಂಬಾತ ಮನೆಯಲ್ಲಿ ಸ್ನಾನ ಮಾಡಲು ತೆರಳುವಾಗ ದುರ್ಘಟನೆ ಸಂಭವಿಸಿ ಮೃತಪಟ್ಟಿದ್ದಾನೆ. ಬಾತ್‌ರೂಮ್‌ನಲ್ಲಿ ನೀರು ಕಾಯಿಸಲು ಇಟ್ಟಿದ್ದ ಕರೆಂಟ್ ವಾಟರ್ ಹೀಟರ್ ಒಂದು ಪುಟ್ಟ ಜೀವವನ್ನೇ ಬಲಿ ಪಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ
ಮೃತ ಬಾಲಕನನ್ನು ನೀಲಾಂಶ್ (8) ಎಂದು ಗುರುತಿಸಲಾಗಿದೆ. ಈತ ಸ್ಥಳೀಯವಾಗಿ 2ನೇ ತರಗತಿಯಲ್ಲಿ ಓದುತ್ತಿದ್ದ. ಭಾನುವಾರ ರಜೆಯ ಹಿನ್ನೆಲೆ ಮನೆಯಲ್ಲೇ ಇದ್ದ ಬಾಲಕ ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದಾನೆ. ಈ ವೇಳೆ ನೀರು ಕಾಯಿಸಲು ಕರೆಂಟ್ ವಾಟರ್ ಹೀಟರ್ ಹಾಕಲಾಗಿತ್ತು. ಹೀಟರ್‌ಗೆ ಸಂಪರ್ಕ ಕಲ್ಪಿಸಿದ್ದ ಬಕೆಟ್‌ನಲ್ಲಿನ ನೀರಿಗೆ ಬಾಲಕ ಕೈ ಹಾಕಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನಿಗೆ ಶಾಕ್ ಹೊಡೆದಿದೆ ಎನ್ನಲಾಗಿದೆ.ವಿದ್ಯುತ್ ಶಾಕ್‌ನಿಂದ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ, ಕೊನೆಗೆ ಪ್ರಾಣ ಉಳಿಯಲಿಲ್ಲ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಮನೆಯಲ್ಲೇ ಬಳಸುವ ವಿದ್ಯುತ್ ಉಪಕರಣಗಳ ಬಗ್ಗೆ ನಿರ್ಲಕ್ಷ್ಯ ಬೇಡ. ವಾಟರ್ ಹೀಟರ್ ಬಳಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಿ. ಒಂದು ಕ್ಷಣದ ಎಚ್ಚರ ತಪ್ಪಿದರೂ ಇಂತಹ ದುರಂತ ಸಂಭವಿಸಬಹುದು.