• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಶಿವಮೊಗ್ಗ
  • /ನೀರ್ಥಡಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ : 'ವಿಮೆ ಕಟ್ಟಿದ್ರೂ ಪರಿಹಾರ ಸಿಗಲಿಲ್ಲ' ಎಂದು ರೈತನ ಕಣ್ಣೀರು!

ನೀರ್ಥಡಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ : 'ವಿಮೆ ಕಟ್ಟಿದ್ರೂ ಪರಿಹಾರ ಸಿಗಲಿಲ್ಲ' ಎಂದು ರೈತನ ಕಣ್ಣೀರು!

ನೀರ್ಥಡಿ ಗ್ರಾಮಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿ, ಮಳೆ ಅಭಾವದಿಂದ ಒಣಗಿ ಹೋಗಿರುವ ಮೆಕ್ಕೆಜೋಳ ಬೆಳೆಯನ್ನು ಪರಿಶೀಲಿಸಿತು. ಈ ವೇಳೆ, ಎರಡು ಬಾರಿ ಬೆಳೆ ವಿಮೆ ಮಾಡಿಸಿದರೂ ಪರಿಹಾರ ಸಿಗದಿರುವ ಕುರಿತು ಸ್ಥಳೀಯ ರೈತ ವೀರಯ್ಯ ಅಧಿಕಾರಿಗಳ ಮುಂದೆ ತಮ್ಮ ಅಳಲು ತೋಡಿಕೊಂಡ ಘಟನೆ ನಡೆಯಿತು.. ಹೆಚ್ಚಿನ ಮಾಹಿತಿ ಇಲ್ಲಿದೆ..

Reported ByKrishna NKEdited ByKrishna NK
Published: Oct 04, 2026, 05:04 PM IST|Updated: Oct 04, 2026, 05:07 PM IST
joinshare
ನೀರ್ಥಡಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ : 'ವಿಮೆ ಕಟ್ಟಿದ್ರೂ ಪರಿಹಾರ ಸಿಗಲಿಲ್ಲ' ಎಂದು ರೈತನ ಕಣ್ಣೀರು!
Image Credit: Davangere News

About the Author

Krishna NK

Krishna NK

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

Trending

  • News
  • Photos
  • Videos
ಸಂಜು, ಶ್ರೇಯಸ್‌ ಅಯ್ಯರ್‌ ಅಲ್ಲ.. ವಿರಾಟ್‌ ಕೊಹ್ಲಿ 3ನೇ ಬ್ಯಾಟಿಂಗ್‌ ಸ್ಲಾಟ್‌ಗೆ ಬೆಸ್ಟ್ ಬ್ಯಾಟ್ಸ್‌ಮನ್‌‌ ಆಯ್ಕೆ

ಸಂಜು, ಶ್ರೇಯಸ್‌ ಅಯ್ಯರ್‌ ಅಲ್ಲ.. ವಿರಾಟ್‌ ಕೊಹ್ಲಿ 3ನೇ ಬ್ಯಾಟಿಂಗ್‌ ಸ್ಲಾಟ್‌ಗೆ ಬೆಸ್ಟ್ ಬ್ಯಾಟ್ಸ್‌ಮನ್‌‌ ಆಯ್ಕೆ

2

ನಕಲಿ ಮೆಡಿಸನ್ ಕಿಂಗ್ ಪಿನ್ ಪ್ರಶಾಂತನ ಕಳ್ಳಾಟ ಬಯಲು : ಟರ್ಕಿ ಭೇಟಿ ಸಿಕ್ರೇಟ್‌ ರಿವೀಲ್‌

3

ಎಚ್ಚರ.. ರಾಜ್ಯದ 12 ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ : ಮುಂದಿನ 3 ಗಂಟೆಗಳಲ್ಲಿ ಭಾರಿ ಮಳೆ ಸಾಧ್ಯತೆ

4

ಗ್ಯಾರಂಟಿ ಸೇವಾ ಕೇಂದ್ರ: ಇ-ಖಾತಾ, ಜನನ-ಮರಣ ಪ್ರಮಾಣಪತ್ರ ಸೇರಿ ನಾಗರಿಕ ಸೇವೆಗಳಿಗೆ ಒಂದೇ ಸೂರಿನಡಿ ಪರಿಹಾರ

5

ವಿದ್ಯುತ್ ತಂತಿಗಳ ಸ್ಪಾರ್ಕ್‌ನಿಂದ 20 ಎಕರೆ ಕಬ್ಬಿನ ಗದ್ದೆ ಬೆಂಕಿಗಾಹುತಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿ, ಬೆಳೆ ಹಾನಿ ವೀಕ್ಷಣೆ ನಡೆಸಿತು. ಅಧಿಕಾರಿಗಳಾದ ಅಜಿತ್ ಕುಮಾರ್ ಸಾಹು, ಚೇತ್‌ರಾಮ್ ಮೀನಾ, ಕರ್ನಲ್ ಅಮರೇಂದ್ರ ಸಿಂಗ್ ಹಾಗೂ ಜೆ. ಹರ್ಷಾ ಅವರನ್ನೊಳಗೊಂಡ ತಂಡವು ಸ್ಥಳೀಯ ರೈತ ವೀರಯ್ಯ ಅವರ ಜಮೀನಿಗೆ ಭೇಟಿ ನೀಡಿತು. ಮಳೆ ಅಭಾವದಿಂದ ಸಂಪೂರ್ಣ ಒಣಗಿ ಹೋಗಿದ್ದ ಮೆಕ್ಕೆಜೋಳ ಬೆಳೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಬೆಳೆ ಹಾನಿಯ ಕುರಿತು ರೈತನಿಂದ ನೇರವಾಗಿ ಮಾಹಿತಿ ಪಡೆದುಕೊಂಡರು.

ಈ ವೇಳೆ, "ಬೆಳೆ ವಿಮೆ ಏಕೆ ಮಾಡಿಸಿಲ್ಲ?" ಎಂದು ಅಧಿಕಾರಿಗಳು ಪ್ರಶ್ನಿಸಿದಾಗ, "ಎರಡು ಬಾರಿ ಬೆಳೆ ವಿಮೆ ಮಾಡಿಸಿದ್ದರೂ ನಮಗೆ ಯಾವುದೇ ಪರಿಹಾರ ಧನ ಬರಲಿಲ್ಲ" ಎಂದು ರೈತ ವೀರಯ್ಯ ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, "ಈ ಬಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರಿಂದ ಬೆಳೆ ವಿಮೆ ಮಾಡಿಸಲಾಗಿದೆ" ಎಂದು ನಿಯೋಗಕ್ಕೆ ತಿಳಿಸಿದರು. ಸ್ಥಳದಲ್ಲಿ ಮಾಹಿತಿ ಸಂಗ್ರಹಿಸಿ, ಛಾಯಾಚಿತ್ರಗಳನ್ನು ತೆಗೆದುಕೊಂಡ ಕೇಂದ್ರ ತಂಡವು ಕೇವಲ ಹತ್ತು ನಿಮಿಷಗಳಲ್ಲಿ ಬರ ಅಧ್ಯಯನ ಪ್ರಕ್ರಿಯೆ ಮುಗಿಸಿ ಅಲ್ಲಿಂದ ತೆರಳಿತು.

ಈ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸಾಹಿತ್ಯ ಆಲದಕಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಹಾಗೂ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.

 

 

Add Zee News as a Preferred Source
TAGS:
Kannada News