SOCIAL MEDIA

Newsletter

PARTNER SITES
Select Language Select State

ಹಾಸನಾಂಬೆ ಹುಂಡಿಯಲ್ಲಿ ಸಿಕ್ತು ಬ್ಯಾನ್ ಆಗಿರೋ 1000 ಹಾಗೂ 500 ನೋಟು

Hasanamba offering box: ಶಕ್ತಿದೇವತೆ ಹಾಸನಾಂಬೆ ತಾಯಿಯ ದರ್ಶನೋತ್ಸವಕ್ಕೆ ನಿನ್ನೆ ತೆರೆ ಬಿದ್ದಿದೆ. ಈ ಬಾರಿ ತಾಯಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಹರಕೆ ತೀರಿಸಿದ್ದಾರೆ. ಇದೀಗ ಭಕ್ತರು ಹುಂಡಿಗೆ ಹಾಕಿರುವ ಹಣದ ಎಣಿಕೆ ಕಾರ್ಯ ಆರಂಭವಾಗಿದೆ. ಈಗಾಗಲೇ ಬರೋಬ್ಬರಿ 25.60 ಕೋಟಿ ರೂಪಾಯಿ ಹಣ ಸಂಗ್ರಹವಾಗಿದ್ದು, ಈ ಬಾರಿಯೂ ಹಾಸನಾಂಬೆ ದೇವಾಲಯ ದಾಖಲೆಯ ಆದಾಯ ಗಳಿಸಿದೆ.

Written By Ramya. R. Gowda
Published: Nov 12, 2026, 16:48 IST | Updated: Nov 12, 2026, 17:01 IST
Join

Hasanamba offering box: ಶಕ್ತಿದೇವತೆ ಹಾಸನಾಂಬೆ ತಾಯಿಯ ದರ್ಶನೋತ್ಸವಕ್ಕೆ ನಿನ್ನೆ ತೆರೆ ಬಿದ್ದಿದೆ. ಈ ಬಾರಿ ತಾಯಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿ ಹರಕೆ ತೀರಿಸಿದ್ದಾರೆ. ಇದೀಗ ಭಕ್ತರು ಹುಂಡಿಗೆ ಹಾಕಿರುವ ಹಣದ ಎಣಿಕೆ ಕಾರ್ಯ ಆರಂಭವಾಗಿದೆ. ಈಗಾಗಲೇ ಬರೋಬ್ಬರಿ 25.60 ಕೋಟಿ ರೂಪಾಯಿ ಹಣ ಸಂಗ್ರಹವಾಗಿದ್ದು, ಈ ಬಾರಿಯೂ ಹಾಸನಾಂಬೆ ದೇವಾಲಯ ದಾಖಲೆಯ ಆದಾಯ ಗಳಿಸಿದೆ.

ಶಕ್ತಿದೇವತೆ ಹಾಸನಾಂಬೆ ತಾಯಿಯ ದರ್ಶನೋತ್ಸವಕ್ಕೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ತಾಯಿಯ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ಆರಂಭವಾಗಿದೆ.ಹಾಸನ ನಗರದ ಥೇರಾ ಪಂಥ್ ಭವನದಲ್ಲಿ ಜಿಲ್ಲಾಡಳಿತದಿಂದ ಹಣ ಎಣಿಕೆ ಕಾರ್ಯ ನಡೆಯುತ್ತಿದ್ದು, ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ನೇತೃತ್ವದಲ್ಲಿ ಸಿಬ್ಬಂದಿ ಹಣದ ಲೆಕ್ಕಾಚಾರ ಮಾಡುತ್ತಿದ್ದಾರೆ.ಭಕ್ತರು ತಾಯಿಗೆ ಭಕ್ತಿಯಿಂದ ಸಮರ್ಪಿಸಿರುವ ಹಣ, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಎಣಿಕೆ ಮಾಡಲಾಗುತ್ತಿದೆ.

ವಿದೇಶಿ ಕರೆನ್ಸಿ, ಬ್ಯಾನ್ ಆಗಿದ್ದ 500-1000 ರೂಪಾಯಿ ನೋಟುಗಳು ಪತ್ತೆ

ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸುವಂತೆ ದೇವಿಯ ಮೊರೆ ಹೋಗಿದ್ದಾರೆ. ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿ ಮಾತ್ರವಲ್ಲದೆ ವಿದೇಶಿ ಕರೆನ್ಸಿ, ನಿಷೇಧಿತ ಹಳೆಯ ನೋಟುಗಳನ್ನೂ ಹುಂಡಿಗೆ ಹಾಕಿದ್ದಾರೆ. ಹುಂಡಿ ಎಣಿಕೆ ಕಾರ್ಯದ ವೇಳೆ ಹಲವು ದೇಶಗಳ ಕರೆನ್ಸಿ ಜೊತೆಗೆ ಬ್ಯಾನ್ ಆಗಿರುವ 500 ಮತ್ತು 1000 ರೂಪಾಯಿ ನೋಟುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ತಮ್ಮ ಬೇಡಿಕೆಗಳನ್ನು ಬರೆದು ಪತ್ರಗಳನ್ನೂ ಭಕ್ತರು ಹುಂಡಿಗೆ ಹಾಕಿದ್ದಾರೆ.

ಸದ್ಯ ಹಾಸನಾಂಬೆ ಮೇಲಿನ ಭಕ್ತರ ನಂಬಿಕೆ ಹುಂಡಿಯಲ್ಲಿ ವಿವಿಧ ರೂಪದಲ್ಲಿ ವ್ಯಕ್ತವಾಗಿದೆ. ವಿದೇಶಿ ಕರೆನ್ಸಿಯಿಂದ ಹಿಡಿದು ಚಿನ್ನ, ಬೆಳ್ಳಿ, ಹಳೆಯ ನೋಟುಗಳು ಹಾಗೂ ತಮ್ಮ ಬೇಡಿಕೆಗಳ ಪತ್ರಗಳವರೆಗೆ ಭಕ್ತರು ಸಮರ್ಪಣೆ ಮಾಡಿದ್ದಾರೆ. ಹುಂಡಿ ಎಣಿಕೆ ವೇಳೆ ಸಿಕ್ಕಿರುವ ಈ ವಸ್ತುಗಳು ಇದೀಗ ಕುತೂಹಲಕ್ಕೆ ಕಾರಣವಾಗಿವೆ.
 

ಶಕ್ತಿ ಸ್ವರೂಪಿಣಿ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಾಡಿನ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬೆ ತಾಯಿಯ ದರ್ಶನಕ್ಕೆ ಇಂದು ಕೊನೆಯ ದಿನ.. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ತಾಯಿಯ ಸನ್ನಿಧಿಯಲ್ಲಿ ಕಳೆದ ಹನ್ನೆರಡು ದಿನಗಳಿಂದ ಭಕ್ತಿ ಸಂಭ್ರಮ ಮನೆ ಮಾಡಿತ್ತು. ಲಕ್ಷಾಂತರ ಭಕ್ತರು ದೂರದ ಊರುಗಳಿಂದ ಆಗಮಿಸಿ, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಾಯಿಯ ದಿವ್ಯ ದರ್ಶನ ಪಡೆದು ಪುನೀತರಾದರು. ಭಕ್ತರ ಜೈಕಾರ, ಮಂಗಳವಾದ್ಯ, ಪೂಜಾ ಕೈಂಕರ್ಯಗಳೊಂದಿಗೆ ಕಂಗೊಳಿಸಿದ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಿನ್ನೆ ಮಧ್ಯಾಹ್ನ ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚಲಾಗಿದೆ

ಒಂದು ಕ್ಷಣವೂ ಬಿಡುವಿಲ್ಲದೆ ತಾಯಿಯ ದರ್ಶನಕ್ಕಾಗಿ ಹರಿದು ಬಂದ ಭಕ್ತಸಾಗರ.. ಹಗಲು-ರಾತ್ರಿ ಎನ್ನದೆ ಕಿಲೋಮೀಟರ್‌ಗಟ್ಟಲೆ ನಿಂತ ಸರತಿ ಸಾಲುಗಳು.. ಗಣ್ಯರಿಂದ ಹಿಡಿದು ಸಾಮಾನ್ಯ ಭಕ್ತರವರೆಗೆ ಎಲ್ಲರನ್ನೂ ತನ್ನತ್ತ ಸೆಳೆದ ಹಾಸನಾಂಬೆ ತಾಯಿ.. ಹೌದು, ಕಳೆದ 12 ದಿನಗಳಿಂದ ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ದರ್ಶನದ ಭಕ್ತಿಯ ಮಹಾಸಾಗರಕ್ಕೆ ಇಂದು ಸಂಜೆ ಅಧಿಕೃತವಾಗಿ ತೆರೆ ಬಿದ್ದಿದೆ. ಹಾಸನಾಂಬೆ ದರ್ಶನೋತ್ಸವದ ಕೊನೆಯ ದಿನವಾದ ಇಂದೂ ಕೂಡಾ ಭಕ್ತರ ಮಹಾಪೂರವೇ ಹರಿದು ಬಂದಿದೆ. ಕಡೆಯ ದಿನವಾದ ಇಂದು ಕೂಡ ಧರ್ಮದರ್ಶನ ಸೇರಿದಂತೆ ವಿಶೇಷ ದರ್ಶನದ ಸರತಿ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಮತ್ತೊಂದೆಡೆ, ಹಾಸನಾಂಬೆಯ ದರ್ಶನ ಪಡೆಯಲು ಗಣ್ಯರ ದಂಡೇ ಆಗಮಿಸಿತ್ತು. ಸಚಿವ ಪಿ. ರಘುಮೂರ್ತಿ, ಮಂಡ್ಯ ಶಾಸಕ ಗಣಿಗ ರವಿ, ಕುಣಿಗಲ್ ಶಾಸಕ ರಂಗನಾಥ್, ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹಾಗೂ ನಟಿ ಮಿಲನಾ ನಾಗರಾಜ್ ಸೇರಿದಂತೆ ಹಲವು ಗಣ್ಯರು ತಾಯಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಒಂದು ಕ್ಷಣವೂ ಬಿಡುವಿಲ್ಲದೆ ತಾಯಿಯ ದರ್ಶನಕ್ಕಾಗಿ ಹರಿದು ಬಂದ ಭಕ್ತಸಾಗರ.. ಹಗಲು-ರಾತ್ರಿ ಎನ್ನದೆ ಕಿಲೋಮೀಟರ್‌ಗಟ್ಟಲೆ ನಿಂತ ಸರತಿ ಸಾಲುಗಳು.. ಗಣ್ಯರಿಂದ ಹಿಡಿದು ಸಾಮಾನ್ಯ ಭಕ್ತರವರೆಗೆ ಎಲ್ಲರನ್ನೂ ತನ್ನತ್ತ ಸೆಳೆದ ಹಾಸನಾಂಬೆ ತಾಯಿ.. ಹೌದು, ಕಳೆದ 12 ದಿನಗಳಿಂದ ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ದರ್ಶನದ ಭಕ್ತಿಯ ಮಹಾಸಾಗರಕ್ಕೆ ಇಂದು ಸಂಜೆ ಅಧಿಕೃತವಾಗಿ ತೆರೆ ಬಿದ್ದಿದೆ. ಶಕ್ತಿದೇವತೆ ಹಾಸನಾಂಬೆ ತಾಯಿಯ ದರ್ಶನೋತ್ಸವಕ್ಕೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ತಾಯಿಯ ಹುಂಡಿಯಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ಆರಂಭವಾಗಿದೆ.

ಈಗಾಗಲೇ ಹುಂಡಿ ಕಾಣಿಕೆಯಿಂದ ಬರೋಬ್ಬರಿ 25.60 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇನ್ನು 1,000 ಹಾಗೂ 300 ರೂಪಾಯಿ ವಿಶೇಷ ದರ್ಶನ ಟಿಕೆಟ್ ಮತ್ತು ಲಾಡು ಪ್ರಸಾದ ಮಾರಾಟದಿಂದ 26.60 ಕೋಟಿ ರೂಪಾಯಿ ಆದಾಯ ಬಂದಿದೆ.ಒಟ್ಟಿನಲ್ಲಿ ಈ ಬಾರಿಯ ಹಾಸನಾಂಬೆ ದರ್ಶನೋತ್ಸವ ದೇವಾಲಯದ ಆದಾಯದ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಭಕ್ತರ ಭಕ್ತಿಯ ಕಾಣಿಕೆ ಕೋಟ್ಯಂತರ ರೂಪಾಯಿಗಳ ರೂಪದಲ್ಲಿ ತಾಯಿಯ ಖಜಾನೆ ಸೇರಿದೆ.

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES