• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ವಿದ್ಯಾರ್ಥಿನಿ ಧಾರುಣ ಸಾ*ವು

ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ವಿದ್ಯಾರ್ಥಿನಿ ಧಾರುಣ ಸಾ*ವು

ನೋಟ್ಸ್‌ ತರುತ್ತೇನೆಂದು ಸ್ನೇಹಿತೆಯ ಜೊತೆಗೆ ಸ್ಕೂಟಿಯಲ್ಲಿ ಹೊರಟಿದ್ದ ಲಿಖಿತಾ ಎಂಬ ವಿದ್ಯಾರ್ಥಿನಿ ಮನೆಗೆ ಹಿಂದಿರುಗುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದ ಯುವತಿ ಧಾರಣ ಸಾ*ವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

Written ByYashaswini V
Published: Sep 30, 2026, 05:01 PM IST|Updated: Sep 30, 2026, 05:02 PM IST
joinshare
ಹಾಸನದಲ್ಲಿ ಭೀಕರ ರಸ್ತೆ ಅಪಘಾತ, ವಿದ್ಯಾರ್ಥಿನಿ ಧಾರುಣ ಸಾ*ವು

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಆಕೆ ಬಾಳಿ ಬದುಕಿ ಪೋಷಕರಿಗೆ ನೆರವಾಗಬೇಕಿದ್ದ ಪ್ರತಿಭಾವಂತ ವಿದ್ಯಾರ್ಥಿನಿ.. ತನಗೆ ಬೇಕಾದ ನೋಟ್ಸ್ ತಗೊಂಡು ಪೆಂಡಾಲ್‌ನಲ್ಲಿ ಇರೋ ಗಣಪತಿ ನೋಡ್ಕೊಂಡ್ ಬರ್ತೇನೆ ಎಂದು ಮನೆಯವರಿಗೆ ಹೇಳಿ ಸ್ನೇಹಿತೆ ಜೊತೆ ಸ್ಕೂಟಿಯಲ್ಲಿ ಹಾಸನ ಸಿಟಿಗೆ ಬಂದಿದ್ಲು.. ಬಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಆ ಸ್ನೇಹಿತೆಯರಿಗೆ ಜವರಾಯನಂತೆ ಬಂದ ಟ್ರಕ್ ಒಂದು ಗುದ್ದಿದೆ.. ಸ್ಕೂಟಿ ಓಡಿಸುತ್ತಿದ್ದ ಆ ಯುವತಿ ಭೀಕರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಆಕೆಯ ಸ್ನೇಹಿತೆ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಮಂಗಳವಾರ (ಸೆ. 29) ರಾತ್ರಿ ನಡೆದಿದೆ.

ಹೌದು, ಹಾಸನ ನಗರದ ಸಂಚಾರಿ ವ್ಯವಸ್ಥೆಯಿಂದ ಜನ ಬೇಸತ್ತು ಹೋಗಿದ್ದಾರೆ. ಕಳೆದ ತಿಂಗಳು ಗೌರಿ ಹಬ್ಬದ ಹಿಂದಿನ ದಿನವೇ ನವ ವಿವಾಹಿತ ಮಹಿಳೆಯೊಬ್ಬಳನ್ನ ಕಿಲ್ಲರ್ ಕೆಸ್‌ಎಸ್‌ಆರ್‌ಟಿ ಬಲಿ ಪಡೆದ ಪ್ರಕರಣದಿಂದ ಬೆಚ್ಚು ಬಿದ್ದಿದ್ದ ಹಾಸನದ ಜನತೆ ನಿನ್ನೆ (ಸೆ. 29) ರಾತ್ರಿ ನಡೆದ ಭೀಕರ ಅಪಘಾತಕ್ಕೆ ಮತ್ತಷ್ಟು ಭಯ ಪಡುವಂತಾಗಿದೆ.

ನಗರದ ಹೊರ ವಲಯದ ಹೊಸಕೊಪ್ಪಲು ಗ್ರಾಮದ ದ್ವಿತೀಯ ಪಿಯುಸಿ ಓದುತ್ತಿರೋ ಲಿಖಿತಾ(18) ಎಂಬ ವಿದ್ಯಾರ್ಥಿನಿ ಟ್ರಕ್ ಗುದ್ದಿ ಅಪಘಾತಕ್ಕೀಡಾಗಿ ದಾರುಣ ಅಂತ್ಯ ಕಂಡಿದ್ದಾಳೆ. ತನ್ನ ಮನೆಯಲ್ಲಿ ಓದೋದಕ್ಕೆ ನೋಟ್ಸ್ ತರಬೇಕು ಎಂದು ಮನೆಯಿಂದ ಹೊರಬಂದಿದ್ದ ಯುವತಿ, ಸ್ನೇಹಿತೆಯ ಬಳಿ ನೋಟ್ಸ್‌ ಪಡೆದುಕೊಂಡು ಹಾಗೆಯೇ ನಗರದ ಗಣಪತಿ ಪೆಂಡಾಲ್ ನಲ್ಲಿ ಇರೋ ಗಣೇಶನನ್ನ ನೋಡಿಕೊಂಡು ಸ್ನೇಹಿತೆ ಚಿನ್ಮಯಿ ಜೊತೆ ಮನೆಗೆ ವಾಪಾಸ್ ತೆರಳುತ್ತಿದ್ದ ವೇಳೆ ಹಾಸನ ತಾಲ್ಲೂಕು ಕಚೇರಿ ಬಳಿ ರೋಡ್ ಕ್ರಾಸ್ ಮಾಡುತ್ತಿದ್ದಾಗ ಎನ್.ಆರ್ ಸರ್ಕಲ್ ಕಡೆಯಿಂದ ಬಂದ ಹದಿನಾಲ್ಕು ಚಕ್ರದ ಬೃಹತ್ ಲಾರಿ ಚಾಲಕನ ಅಜಾಗರೂಕತೆಯಿಂದ ಸ್ಕೂಟರ್ ಗೆ ಡಿಕ್ಕಿಯಾಗಿದೆ.

ಲಾರಿ ಸ್ಕೂಟಿಗೆ ಡಿಕ್ಕಿ ಹೊಡೆದ ರಭಸಕ್ಕೆ ಲಿಖಿತಾ ಮತ್ತು ಚಿನ್ಮಯಿ ಇಬ್ಬರೂ ಕೆಳಗೆ ಬಿದ್ದಿದ್ದು ಲಾರಿ ಚಕ್ರಕ್ಕೆ ಸಿಲುಕಿದಾ ಲಿಖಿತಾ ಲಾರಿಯೊಂದಿಗೆಯೇ ಉಜ್ಜಿಕೊಂಡು ಹೋಗಿದ್ದಾಳೆ.  ಲಾರಿ ಹರಿದಿದ್ದರಿಂದ ಆಕೆಯ ಅರ್ಧದೇಹವೇ ನಜ್ಜುಗುಜ್ಜಾಗಿ ಹೋಗಿದ್ದು ಮಾಂಸದ ಮುದ್ದೆಯಂತೆ ರಸ್ತೆ ತುಂಬೆಲ್ಲಾ ಹರಡಿದೆ. ಹಿಂಬದಿ ಕುಳಿತಿದ್ದ ಚಿನ್ಮಯಿ ಕಾಲಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಈ ದೃಶ್ಯ ಕಂಡ ಸ್ಥಳೀಯರು ಗಾಸಿಕೊಂಡಿದ್ದು ಸ್ಥಳೀಯರ ದುರಾಡಳಿತವೇ ಇದಕ್ಕೆಲ್ಲಾ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೃಹತ್ ಲಾರಿಗಳನ್ನ ನಗರದ ಒಳಗಡೆ ಬಿಟ್ಟಿರುವುದರಿಂದಲೇ ಇದಕ್ಕೆಲ್ಲಾ ಕಾರಣ. ಹಾಸನ ನಗರದಲ್ಲಿ ಸಂಚಾರಿ ವ್ಯವಸ್ಥೆಯೇ ಸರಿಯಿಲ್ಲ. ಇದೇ ತಿಂಗಳು ಸಾರಿಗೆ ಬಸ್ ಗೆ ಒಬ್ಬ ನವ ವಿವಾಹಿತೆ ಬಲಿಯಾಗಿದ್ದಳು. ಇದೀಗ ಇಂದು ಮತ್ತೊಂದು ಬಲಿಯಾಗಿದೆ ಕೂಡಲೇ ಸ್ಥಳೀಯ ಆಡಳಿತ‌ ಎಚ್ಚೆತ್ತುಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಟ್ಟಾರೆ ತನ್ನ ಮಗಳು ಬೆಳೆದು ನಮಗೆ ಬೆಳಕಾಗುತ್ತಾಳೆ‌ ಎಂದು ಭರವಸೆ ಇಟ್ಟುಕೊಂಡಿದ್ದ ಲಿಖಿತಾ ಕುಟುಂಬ ಆಕೆಯನ್ನ ಕಳೆದುಕೊಂಡು ಕಂಗಾಲಿದ್ದು ಒಂದೇ ತಿಂಗಳಲ್ಲಿ ಎರಡು ಸಾವಿನಿಂದಲಾದರೂ ಹಾಸನ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು ಸಂಚಾರಿ ವ್ಯವಸ್ಥೆ ಸರಿಪಡಿಸಬೇಕು ಎಂದು ಸ್ಥಳೀಯರ ಆಗ್ರಹ ಕೂಡ ಆಗಿದೆ.
 

Add Zee News as a Preferred Source
TAGS:
Accident