• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /Mysuru Dasara 2026: ದಸರಾ ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್

Mysuru Dasara 2026: ದಸರಾ ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್

ಮೈಸೂರು ದಸರಾ 2026ರ ಪ್ರಮುಖ ಕಾರ್ಯಕ್ರಮಗಳ ವೇಳಾಪಟ್ಟಿ ಮತ್ತು ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್‌ 11ರಂದು ಬೆಳಗ್ಗೆ 11:50ರಿಂದ 12:13ರವರೆಗೆ ಗವಿಸಿದ್ದೇಶ್ವರ ಶ್ರೀಗಳಿಂದ ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್‌ 13ರಿಂದ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಅಕ್ಟೋಬರ್‌ 18 ಮತ್ತು 19ರಂದು ದಸರಾ ಕಂಬಳ ಆಯೋಜಿಸಲಾಗಿದೆ. ಅಕ್ಟೋಬರ್‌ 21ರಂದು ವಿಜಯದಶಮಿಯಂದು ನಂದಿ ಧ್ವಜ ಪೂಜೆ ಹಾಗೂ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಬಳಿಕ ಜಂಬೂ ಸವಾರಿ ನಡೆಯಲಿದೆ.

Written ByPuttaraj K Alur
Published: Oct 02, 2026, 12:16 PM IST|Updated: Oct 02, 2026, 12:33 PM IST
joinshare
Mysuru Dasara 2026: ದಸರಾ ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್
Image Credit: Mysuru Dasara 2026

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಪೊಲೀಸ್ ಇಲಾಖೆಯಲ್ಲಿ ಭರ್ಜರಿ ವರ್ಗಾವಣೆ: 18 ಡಿವೈಎಸ್ಪಿ, 49 ಇನ್‌ಸ್ಪೆಕ್ಟರ್ಸ್‌ ಟ್ರಾನ್ಸಫರ್‌

ಪೊಲೀಸ್ ಇಲಾಖೆಯಲ್ಲಿ ಭರ್ಜರಿ ವರ್ಗಾವಣೆ: 18 ಡಿವೈಎಸ್ಪಿ, 49 ಇನ್‌ಸ್ಪೆಕ್ಟರ್ಸ್‌ ಟ್ರಾನ್ಸಫರ್‌

2

Mysuru Dasara 2026: ದಸರಾ ಅಧಿಕೃತ ವೇಳಾಪಟ್ಟಿ ಪ್ರಕಟ; ಪ್ರಮುಖ ಕಾರ್ಯಕ್ರಮಗಳ ಮುಹೂರ್ತ ಫಿಕ್ಸ್

3

50 ಲಕ್ಷ ಮತದಾರರ ಷಡ್ಯಂತ್ರದ ಆರೋಪ ಸಾಬೀತುಪಡಿಸಿ ಇಲ್ಲ ರಾಜೀನಾಮೆ ನೀಡಿ: ಸಿಎಂಗೆ ವಿಜಯೇಂದ್ರ ಆಗ್ರಹ

4

ಉದ್ಯೋಗದಾತರು ನಿಮ್ಮ ವೇತನದಿಂದ PF ಕಡಿತಗೊಳಿಸಿದ್ದು, ಇನ್ನೂ ಇಪಿಎಫ್‌ಒ ಖಾತೆಗೆ ಹಣ ಜಮಾ ಆಗಿಲ್ವಾ? ಬಡ್ಡಿ ಮೇಲೆ ಏನು ಪರಿಣಾಮ?

5

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಪ್ರಮುಖ ಕಾರ್ಯಕ್ರಮಗಳ ವೇಳಾಪಟ್ಟಿ ಹಾಗೂ ಮುಹೂರ್ತ ನಿಗದಿಯಾಗಿದೆ. ಈ ಬಾರಿ ಅಕ್ಟೋಬರ್‌ 11ರಂದು ದಸರಾ ಉದ್ಘಾಟನೆಯಾಗಲಿದ್ದು, ಅಕ್ಟೋಬರ್‌ 21ರಂದು ವಿಜಯದಶಮಿಯ ಜಂಬೂ ಸವಾರಿ ನಡೆಯಲಿದೆ. ದಸರಾ ಉದ್ಘಾಟನೆಗೆ ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನ ಆಯ್ಕೆ ಮಾಡಲಾಗಿದೆ. ಸ್ವಾಮೀಜಿಯವರು ದಸರಾ ಉದ್ಘಾಟನೆಗೆ ಆಹ್ವಾನ ಸ್ವೀಕರಿಸಿರುವುದನ್ನ ವರದಿಗಳು ದೃಢಪಡಿಸಿವೆ.  

ಅಕ್ಟೋಬರ್‌ 11ರಂದು ಬೆಳಗ್ಗೆ 11:50ರಿಂದ ಮಧ್ಯಾಹ್ನ 12:13ರವರೆಗೆ ಇರುವ ಶುಭ ಧನುರ್‌ ಲಗ್ನದಲ್ಲಿ ಮೈಸೂರು ದಸರಾ ಉದ್ಘಾಟನೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ಶ್ರೀಗಳು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಳ್ಳಿ ರಥದ ಪಲ್ಲಕ್ಕಿಯಲ್ಲಿರುವ ಮಹಿಷಾಸುರ ಮರ್ದಿನಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಮೈಸೂರು ದಸರಾ 2026ರ ಹಬ್ಬದ ಸಂಭ್ರಮ ಅಕ್ಟೋಬರ್‌ 11ರಿಂದ ಆರಂಭವಾಗಿ ವಿಜಯದಶಮಿಯ ಜಂಬೂ ಸವಾರಿಯೊಂದಿಗೆ ಪ್ರಮುಖ ಹಂತ ತಲುಪಲಿದೆ. ಈ ಬಾರಿ ಒಟ್ಟು 11 ದಿನಗಳ ಕಾಲ ದಸರಾ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಭದ್ರತೆ, ಸಂಚಾರ, ಜನದಟ್ಟಣೆ ನಿಯಂತ್ರಣ ಸೇರಿದಂತೆ ಹಲವು ಸಿದ್ಧತೆಗಳನ್ನ ಕೈಗೊಳ್ಳಲಾಗುತ್ತಿದೆ. ಪೊಲೀಸ್‌ ಅಧಿಕಾರಿಗಳು ಪ್ರಮುಖ ಕಾರ್ಯಕ್ರಮ ನಡೆಯುವ ಸ್ಥಳಗಳನ್ನ ಪರಿಶೀಲಿಸಿ, ಹೆಚ್ಚುವರಿ ಸಿಬ್ಬಂದಿ ಹಾಗೂ ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡುವ ಕುರಿತು ಕ್ರಮ ಕೈಗೊಂಡಿದ್ದಾರೆ.  

ಅಕ್ಟೋಬರ್‌ 13ರಿಂದ ಯುವ ದಸರಾ

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಯುವ ದಸರಾ ಅಕ್ಟೋಬರ್‌ 13ರಿಂದ ಆರಂಭವಾಗಲಿದೆ. ಐದು ದಿನಗಳ ಕಾಲ ನಡೆಯಲಿರುವ ಯುವ ದಸರಾದಲ್ಲಿ ಸಂಗೀತ, ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಯುವ ದಸರಾವನ್ನ ನಟ ಹಾಗೂ ನೃತ್ಯ ನಿರ್ದೇಶಕ ಪ್ರಭುದೇವ ಉದ್ಘಾಟಿಸಲಿದ್ದಾರೆ ಎಂದು ವರದಿಯಾಗಿದೆ. ಇದೇ ಅವಧಿಯಲ್ಲಿ ದಸರಾ ಕವಿ ಗೋಷ್ಟಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳಿಗೂ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್‌ 13ರಿಂದ 17ರವರೆಗೆ ಐದು ದಿನಗಳ ಕಾಲ ಕವಿಗೋಷ್ಟಿ ನಡೆಯಲಿದ್ದು, ವಿವಿಧ ತಲೆಮಾರುಗಳ ಕವಿಗಳು ಮತ್ತು ಸಾಹಿತಿಗಳು ಭಾಗವಹಿಸಲಿದ್ದಾರೆ.  

ಅಕ್ಟೋಬರ್‌ 18ರಿಂದ ಮೈಸೂರು ದಸರಾ ಕಂಬಳ

ಈ ಬಾರಿಯ ಮೈಸೂರು ದಸರಾದ ವಿಶೇಷ ಆಕರ್ಷಣೆಯಾಗಿ ಕಂಬಳ ಸ್ಪರ್ಧೆ ಸೇರ್ಪಡೆಯಾಗಿದೆ. ಅಕ್ಟೋಬರ್‌ 18 ಮತ್ತು 19ರಂದು ಎರಡು ದಿನಗಳ ಕಾಲ ಮೈಸೂರಿನಲ್ಲಿ ದಸರಾ ಕಂಬಳ ನಡೆಯಲಿದೆ. ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕಂಬಳವನ್ನ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಆಯೋಜಿಸಲಾಗುತ್ತಿರುವುದು ವಿಶೇಷವಾಗಿದೆ. ಈಗಾಗಲೇ ಕಂಬಳದ ಕೆಸರು ಗದ್ದೆ ಸಿದ್ಧಪಡಿಸುವ ಕೆಲಸ ಸೇರಿದಂತೆ ವಿವಿಧ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಸುಮಾರು 160 ಕೋಣಗಳ ಜೋಡಿಗಳು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದೆ. ಕಂಬಳ ಸ್ಪರ್ಧೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಸ್ಪರ್ಧೆ ದಸರಾ ಪ್ರವಾಸಿಗರಿಗೆ ಹೊಸ ಅನುಭವ ನೀಡುವ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತಿದೆ.

ಅಕ್ಟೋಬರ್‌ 21ರಂದು ಜಂಬೂ ಸವಾರಿ

ದಸರಾ ಮಹೋತ್ಸವದ ಅಂತಿಮ ಹಾಗೂ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿಯ ಜಂಬೂ ಸವಾರಿ ಅಕ್ಟೋಬರ್‌ 21ರಂದು ನಡೆಯಲಿದೆ. ಮಧ್ಯಾಹ್ನ 1:36ರಿಂದ 1:56ರವರೆಗೆ ಇರುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಸಂಜೆ 4:10ರಿಂದ 4:30ರವರೆಗೆ ಇರುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ. 

ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಜಂಬೂ ಸವಾರಿಯ ಸಂದರ್ಭದಲ್ಲಿ ಈ ಬಾರಿ ವಿವಿಧ ಕ್ಷೇತ್ರಗಳ ಆಕರ್ಷಕ ಸ್ತಬ್ಧಚಿತ್ರಗಳು ಹಾಗೂ ವಿಶೇಷ ಕಾರ್ಯಕ್ರಮಗಳು ಇರಲಿವೆ. ಅಲ್ಲದೆ, ಮೊದಲ ಬಾರಿಗೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಬ್ಯಾಂಡ್‌ಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ.  

ಮೈಸೂರು ದಸರಾ 2026ಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅರಮನೆ, ಪ್ರಮುಖ ರಸ್ತೆಗಳು ಹಾಗೂ ದಸರಾ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಅಲಂಕಾರ ಮತ್ತು ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಾರಿ ಬೆಳಕಿನ ಅಲಂಕಾರಕ್ಕೆ ಹೊಸ ವಿನ್ಯಾಸಗಳನ್ನ ಅಳವಡಿಸುವುದರ ಜೊತೆಗೆ ಹಲವು ಸ್ಥಳಗಳಲ್ಲಿ ವಿಶೇಷ ಡ್ರೋನ್‌ ಪ್ರದರ್ಶನಗಳಿಗೂ ಯೋಜನೆ ರೂಪಿಸಲಾಗಿದೆ.  

ಹೀಗಾಗಿ ಮೈಸೂರು ದಸರಾ 2026ರಲ್ಲಿ ಸಾಂಪ್ರದಾಯಿಕ ಜಂಬೂ ಸವಾರಿ, ಯುವ ದಸರಾ, ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆಗೆ ಮೊದಲ ಬಾರಿಗೆ ದಸರಾ ಕಂಬಳವೂ ಪ್ರಮುಖ ಆಕರ್ಷಣೆಯಾಗಲಿದೆ. ಅಕ್ಟೋಬರ್‌ 11ರಿಂದ 21ರವರೆಗೆ ಮೈಸೂರು ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಲಿದೆ.

Add Zee News as a Preferred Source
TAGS:
Kannada News